• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಜೆ.ಪಿ. ನಗರ - ಗೊಟ್ಟಿಗೆರೆ ಮಾರ್ಗದಲ್ಲಿ ಶೇ. 34 ರಷ್ಟು ಬೀದಿ ದೀಪಗಳು ಬಂದ್: ಸಚಿವರ ಸಮೀಕ್ಷೆಯಲ್ಲಿ ಬಯಲು

ಜೆ.ಪಿ. ನಗರ - ಗೊಟ್ಟಿಗೆರೆ ಮಾರ್ಗದಲ್ಲಿ ಶೇ. 34 ರಷ್ಟು ಬೀದಿ ದೀಪಗಳು ಬಂದ್: ಸಚಿವರ ಸಮೀಕ್ಷೆಯಲ್ಲಿ ಬಯಲು

ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ದಿಢೀರ್ ರಾತ್ರಿ ರೌಂಡ್ಸ್ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಬೀದಿ ದೀಪ ದುರಸ್ತಿ, ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಅರ್ಧಂಬರ್ಧ ಫುಟ್‌ಪಾತ್ ಕಾಮಗಾರಿ, ತೆರೆದ ಚರಂಡಿ ಮುಚ್ಚದ ಎಂಜಿನಿಯರ್‌ಗಳ ವಿರುದ್ಧ ಗರಂ ಆದ ಸಚಿವರು ಬನ್ನೇರುಘಟ್ಟ ರಸ್ತೆಯ ಪೂರ್ಣ ಸ್ಟ್ರೆಚ್ ವೈಟ್ ಟಾಪಿಂಗ್‌ಗೆ ಸೂಚಿಸಿದರು. ಪಾದಚಾರಿ ಮಾರ್ಗಗಳ ಮರು ಒತ್ತುವರಿ ತಡೆಗೆ ಜಿಬಿಎ-ಪೊಲೀಸ್ ‘ಜಂಟಿ ಟಾಸ್ಕ್ ಫೋರ್ಸ್’ ರಚನೆಗೂ ಸೂಚಿಸಲಾಯಿತು.

Written ByYashaswini V
Published: Sep 19, 2026, 08:08 AM IST|Updated: Sep 19, 2026, 08:11 AM IST
joinshare
ಜೆ.ಪಿ. ನಗರ - ಗೊಟ್ಟಿಗೆರೆ ಮಾರ್ಗದಲ್ಲಿ ಶೇ. 34 ರಷ್ಟು ಬೀದಿ ದೀಪಗಳು ಬಂದ್: ಸಚಿವರ ಸಮೀಕ್ಷೆಯಲ್ಲಿ ಬಯಲು

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆ, ಸುಗಮ ಸಂಚಾರ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಯ ವಾಸ್ತವ ಸ್ಥಿತಿಗತಿ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ ಎನ್ ರಮೇಶ್ ರವರು ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್‌ವರಗೆ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದರು.

ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಫೀಲ್ಡ್ ಇನ್‌ಸ್ಪೆಕ್ಷನ್‌ನಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್, ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು (AEE) ಹಾಗೂ ವಿದ್ಯುತ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಸಚಿವರ ಕ್ಲಾಸ್:
ಪರಿಶೀಲನೆಯುದ್ದಕ್ಕೂ ಬೀದಿ ದೀಪಗಳ ವೈಫಲ್ಯ, ಪಾದಚಾರಿ ಮಾರ್ಗಗಳ (ಫುಟ್‌ಪಾತ್) ದುಃಸ್ಥಿತಿ, ತೆರೆದ ಚರಂಡಿಗಳು ಮತ್ತು ಎಂಜಿನಿಯರ್‌ಗಳ ಹೊಣೆಗೇಡಿತನಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲೇ ಸಂಬಂಧಿತ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಶೇ. 34 ರಷ್ಟು ಬೀದಿ ದೀಪಗಳು ಆಫ್: ‌
ಅಧಿಕಾರಿಗಳು, ಗುತ್ತಿಗೆದಾರರಿಗೆ ಕಡಕ್ ವಾರ್ನಿಂಗ್ ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಗೊಟ್ಟಿಗೆರೆವರೆಗಿನ ಈ ಪ್ರಮುಖ ಮಾರ್ಗದಲ್ಲಿ ಒಟ್ಟು 1,540 ಬೀದಿ ದೀಪಗಳಿದ್ದು, ಇದರಲ್ಲಿ 1,010 ದೀಪಗಳು ಮಾತ್ರ ಉರಿಯುತ್ತಿವೆ. ಬರೋಬ್ಬರಿ 530 ದೀಪಗಳು, ಅಂದರೆ ಶೇಕಡಾ 34ರಷ್ಟು ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟುಹೋಗಿವೆ ಎಂದು ಸಚಿವರು ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದರು.

ಕಳೆದ ಸೆಪ್ಟೆಂಬರ್ 7 ಮತ್ತು 15 ರಂದು ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ರಾತ್ರಿ ವೇಳೆ ಸಮೀಕ್ಷೆ ನಡೆಸಲಾಗಿದ್ದು, ಸತತ 11 ದಿನಗಳಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಜುಲೈ 3 ಮತ್ತು ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿ, ಈಗಾಗಲೇ ಒಬ್ಬ ಎಂಜಿನಿಯರ್ ಅನ್ನು ಅಮಾನತು ಮಾಡಿದ್ದರೂ ಸಹ ಗ್ರೌಂಡ್ ಲೆವೆಲ್‌ನಲ್ಲಿ ಯಾವುದೇ ಸುಧಾರಣೆ ಕಾಣದಿರುವುದನ್ನು ಸಚಿವರು ಗಂಭೀರವಾಗಿ ಆಕ್ಷೇಪಿಸಿದರು.

ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಹಿಂಜರಿಯಬೇಡಿ:
ಎಲ್‌ಇಡಿ ಲೈಟ್ ಅಳವಡಿಕೆ ಗುತ್ತಿಗೆ ಅವಧಿ ಕಳೆದ ಫೆಬ್ರವರಿಗೆ ಮುಕ್ತಾಯವಾಗಿದ್ದರೂ, ವಿಸ್ತರಿತ ಅವಧಿಯಲ್ಲೂ ಗುತ್ತಿಗೆದಾರರು ಕಾಮಗಾರಿ ಮುಗಿಸಿಲ್ಲ. ರಸ್ತೆಯ ಅಗಲಕ್ಕೆ ತಕ್ಕಂತೆ 120 ವ್ಯಾಟ್ಸ್ ದೀಪಗಳನ್ನು ಅಳವಡಿಸದೆ, 90 ವ್ಯಾಟ್ಸ್ ಹಳೆಯ ದೀಪಗಳನ್ನೇ ಮುಂದುವರಿಸಲಾಗಿದೆ. ಹೈ-ಡೆನ್ಸಿಟಿ ಲೈಟ್‌ಗಳು ಮತ್ತು ಮೀಡಿಯನ್ ದೀಪಗಳು ಉರಿಯುತ್ತಿಲ್ಲ. ಹುಳಿಮಾವು ರಸ್ತೆಯಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿ ಹಾಗೂ ಪ್ರಸಿದ್ಧ ಮೆಗಾ ಸಿಟಿ ಮಾಲ್‌ ರಸ್ತೆ ಉದ್ದಕ್ಕೂ ಸಂಪೂರ್ಣ ಕತ್ತಲು ಆವರಿಸಿರುವುದನ್ನು ಅಧಿಕಾರಿಗಳಿಗೆ ತೋರಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ, ಏನ್‌ ರಾತ್ರಿ ವೇಳೆ ಸಂಬಂಧಿತ ಎಲೆಕ್ಟ್ರಿಕ್‌ ಇಂಜಿನಿಯರ್‌ಗಳು ಸಿಟಿ ರೌಂಡ್ಸ್‌ ಮಾಡ್ತಾ ಇದ್ದಾರೋ/ಇಲ್ವೋ? ಎಂದು ಪ್ರಶ್ನಿಸಿದರಲ್ಲದೆ, ಕಚೇರಿಯಲ್ಲಿ ಸುಳ್ಳು ರಿಪೋರ್ಟ್‌ ಮಾಡ್ತಾ ಇದ್ದಾರಾ ಅಂತ ಖಾರವಾಗಿ ನುಡಿದರು. ಕೆಲಸ ಮಾಡದ ಗುತ್ತಿಗೆದಾರರ ದುಪ್ಪಟ್ಟು ದಂಡ ವಿಧಿಸಿ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಹಿಂಜರಿಯಬೇಡಿ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾದಚಾರಿ ಮಾರ್ಗಗಳ ದುಃಸ್ಥಿತಿ: ಕಾಮನ್ ಸೆನ್ಸ್ ಇಲ್ಲವೇ ಎಂದು ಎಂಜಿನಿಯರ್‌ಗಳಿಗೆ ತರಾಟೆ: 
ಪಾದಚಾರಿ ಮಾರ್ಗಗಳ ಶೋಚನೀಯ ಸ್ಥಿತಿಯನ್ನು ಕಂಡು ಕೆಂಡಾಮಂಡಲರಾದ ಸಚಿವರು, ವೇಗಾ ಸಿಟಿ ಮಾಲ್ ಜಂಕ್ಷನ್, ನಾಗಾರ್ಜುನ ಹೋಟೆಲ್ ಎದುರು ಮತ್ತು ಎಂಪೈರ್ ಹೋಟೆಲ್ ಬಳಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಫುಟ್‌ಪಾತ್ ಮೇಲೆ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಗುಡ್ಡೆ ಹಾಕಲಾಗಿದೆ. ಮತ್ತೊಂದೆಡೆ ಚರಂಡಿಗಳು ತೆರೆದುಕೊಂಡಿದ್ದು, ಮಳೆ ಬಂದರೆ ಪಾದಚಾರಿಗಳು ಅಥವಾ ಬೈಕ್ ಸವಾರರು ಬಿದ್ದು ಪ್ರಾಣಾಪಾಯವಾಗುವ ಸ್ಥಿತಿಯಿದೆ. "ಸ್ಲ್ಯಾಬ್‌ಗಳು ಪಕ್ಕದಲ್ಲೇ ಬಿದ್ದಿವೆ, ಅದನ್ನು ತಂದು ಚರಂಡಿಗೆ ಮುಚ್ಚಲು ಎಂಜಿನಿಯರ್‌ಗಳಿಗೆ ಸಾಮಾನ್ಯ ಜ್ಞಾನ ಬೇಡವೇ? ಇದಕ್ಕೆಲ್ಲ ಮಂತ್ರಿಗಳೇ ಬಂದು ತೋರಿಸಬೇಕೆ? ಸರ್ಕಾರದ ಹಣವಿದೆ, ಎಸ್ಟಿಮೇಟ್‌ನಲ್ಲಿದೆ, ಆದರೂ ಕೆಲಸದಲ್ಲಿ ಶ್ರದ್ಧೆ ಇಲ್ಲದಿದ್ದರೆ ಹೇಗೆ? ನನ್ನ ಕಣ್ಣಿಗೆ ಕಾಣುವ ಸಮಸ್ಯೆಗಳು ಎಂಜಿನಿಯರ್‌ಗಳಿಗೆ ಏಕೆ ಕಾಣುತ್ತಿಲ್ಲ?" ಎಂದು ಸಂಬಂಧಿತ ಎಂಜಿನಿಯರ್‌ಗೆ ಸಚಿವರು ಸ್ಥಳದಲ್ಲೇ ಚಳಿ ಬಿಡಿಸಿದರು.

ಪಾದಚಾರಿ ಮಾರ್ಗಗಳಲ್ಲಿ ಹತ್ತುವ-ಇಳಿಯುವ ಜಾಗಗಳಲ್ಲಿ ವೃದ್ಧರಿಗೆ ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಕಾಂಕ್ರೀಟ್ ಸ್ಲೋಪ್‌ಗಳನ್ನು (ಇಳಿಜಾರು) ನಿರ್ಮಿಸಬೇಕು. ವಾಹನಗಳು ಫುಟ್‌ಪಾತ್ ಮೇಲೆ ನುಗ್ಗದಂತೆ ಪ್ರೆಸ್ಡ್ ಕಾಂಕ್ರೀಟ್ ಬೊಲಾರ್ಡ್‌ಗಳನ್ನು ಅಳವಡಿಸಬೇಕು ಹಾಗೂ ಬ್ರಷ್ಡ್ ಕಾಂಕ್ರೀಟ್ ಮೂಲಕ ಫುಟ್‌ಪಾತ್‌ಗಳನ್ನು ಸಮತಟ್ಟಾಗಿಸಬೇಕು ಎಂದು ಸೂಚಿಸಿದರು.

ಅನಧಿಕೃತ ಜಾಹೀರಾತು, ತ್ಯಾಜ್ಯ ಮತ್ತು ಬೆಸ್ಕಾಂ ಕೇಬಲ್‌ಗಳ ತೆರವಿಗೆ ತಾಕೀತು
ಮಹೀಂದ್ರಾ ಶೋರೂಂ ಸೇರಿದಂತೆ ಇತರೆ ಕಂಪನಿಗಳ ಜಾಹೀರಾತು ಫಲಕಗಳು ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ರಸ್ತೆ ಜಾಗದಲ್ಲಿ ಅಕ್ರಮವಾಗಿ ನಿಲ್ಲಿಸಿರುವ ಬೃಹತ್ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸೂಚಿಸಿದರು. ಫುಟ್‌ಪಾತ್ ಮೇಲೆ ಅಪಾಯಕಾರಿಯಾಗಿ ಬಿದ್ದಿರುವ ಬೆಸ್ಕಾಂ (BESCOM) ವಿದ್ಯುತ್ ತಂತಿಗಳು ಹಾಗೂ ಪೈಪ್‌ಗಳ ತೆರವಿಗೆ ಪಾಲಿಕೆ ಅಧಿಕಾರಿಗಳು ಬೆಸ್ಕಾಂ ಜೊತೆ ಕೂಡಲೇ ಜಂಟಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಿದರು.

ವೇಗಾ ಸಿಟಿ ಮಾಲ್ ಮುಂಭಾಗದ ಖುಷಿ ಫರ್ಟಿಲಿಟಿ ಸೆಂಟರ್ ಬಳಿ ರಸ್ತೆ ಗುಂಡಿಗಳು ಬಿದ್ದಿರುವುದು, ರಸ್ತೆಯಲ್ಲೇ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಸುರಿದಿರುವುದು ಹಾಗೂ ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣದ ಬಳಿಯ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. 'ಫ್ರೀಡಂ ಫ್ರಂ ವೇಸ್ಟ್' ಅಡಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಅವಶೇಷಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹುಳಿಮಾವು ಮಾರುತಿ ಪಬ್ಲಿಕ್ ಸ್ಕೂಲ್ ಎದುರು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಸರಿಯಾಗಿ ಕೆಲಸ ಮಾಡದೆ ಕಸ ಉಳಿದಿರುವುದನ್ನು ಆಕ್ಷೇಪಿಸಿ, ರಸ್ತೆ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಸೂಚಿಸಿದರು.

ಬನ್ನೇರುಘಟ್ಟ ನೈಸ್ ರಸ್ತೆ ಜಂಕ್ಷನ್: ರಸ್ತೆ ಕರ್ವ್ ಹಾಗೂ ಡಾಂಬರೀಕರಣ ಲೋಪಗಳನ್ನು ಸರಿಪಡಿಸಿ
ಬನ್ನೇರುಘಟ್ಟ ನೈಸ್ ರಸ್ತೆ - ಗೊಟ್ಟಿಗೆರೆ ಜಂಕ್ಷನ್ ಭಾಗದಲ್ಲಿ ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣದಲ್ಲಿ ಆಗಿರುವ ಲೋಪಗಳನ್ನು ಸಚಿವರು ಸ್ಥಳದಲ್ಲೇ ಪತ್ತೆಹಚ್ಚಿದರು. ಇದು ನಗರದ ಪ್ರಮುಖ ಹೆಬ್ಬಾಗಿಲಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಜಂಕ್ಷನ್ ಆಗಿದೆ. ಇಲ್ಲಿ ರಸ್ತೆಗೆ ಟಾರ್ ಹಾಕದೆ ಬಿಟ್ಟಿರುವುದು ಮತ್ತು ಡ್ರೈನ್ ಅನ್ನು ತಿರುವು (ಕರ್ವ್) ಮಾಡಿ ರಸ್ತೆಯನ್ನು ಅನಗತ್ಯವಾಗಿ ಕಿರಿದುಗೊಳಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಯಾವ ದಾಖಲೆಗಳ ಆಧಾರದ ಮೇಲೆ ಹೀಗೆ ಮಾಡಲಾಗಿದೆ ಎಂದು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಬದಿಯ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ, ಡಾಂಬರೀಕರಣ ಪೂರ್ಣಗೊಳಿಸಿ ಟ್ರಾಫಿಕ್ ಸರಾಗಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬನ್ನೇರುಘಟ್ಟ ರಸ್ತೆ ಪೂರ್ಣ ವೈಟ್ ಟಾಪಿಂಗ್
ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ರವರು, ಮೆಟ್ರೋ ಕಾಮಗಾರಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಪೈಪ್‌ಲೈನ್ ಅಳವಡಿಕೆಯಿಂದಾಗಿ ಬನ್ನೇರುಘಟ್ಟ ರಸ್ತೆ ಸಂಪೂರ್ಣ ಹಾನಿಗೊಳಗಾಗಿದೆ. ತಾತ್ಕಾಲಿಕವಾಗಿ ಡಾಂಬರು ಹಾಕಲಾಗುತ್ತಿದ್ದರೂ ಹೆವಿ ಟ್ರಾಫಿಕ್‌ನಿಂದಾಗಿ ರಸ್ತೆ ಹಾಳಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಇಡೀ ಬನ್ನೇರುಘಟ್ಟ ರಸ್ತೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ‘ವೈಟ್ ಟಾಪಿಂಗ್’ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿದ ನಂತರ ಮತ್ತೆ ವ್ಯಾಪಾರಿಗಳು ಅಥವಾ ಖಾಸಗಿಯವರು ಒತ್ತುವರಿ ಮಾಡಿಕೊಳ್ಳದಂತೆ ತಡೆಯಲು ಜಿಬಿಎ ಮತ್ತು ನಗರ ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ಶೀಘ್ರವೇ ‘ಜಂಟಿ ಟಾಸ್ಕ್ ಫೋರ್ಸ್’ ರಚಿಸಲಾಗುವುದು ಎಂದು ತಿಳಿಸಿದರು. ಬೀದಿ ದೀಪ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಫುಟ್‌ಪಾತ್ ನಿರ್ವಹಣೆಯಂತಹ ಕನಿಷ್ಠ ಮೂಲಸೌಕರ್ಯಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಬೇಕು, ಇಲ್ಲವಾದಲ್ಲಿ ಕೆಳಹಂತದಿಂದ ಹಿರಿಯ ಅಧಿಕಾರಿಗಳವರೆಗೂ ಕಠಿಣ ಶಿಸ್ತುಕ್ರಮ ಜರಗಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜೆ.ಪಿ. ನಗರ - ಗೊಟ್ಟಿಗೆರೆ ಮಾರ್ಗದ ರಿಯಾಲಿಟಿ ಚೆಕ್ ವಿವರ:
* ಒಟ್ಟು ಬೀದಿ ದೀಪಗಳು: 1,540 ಕಂಬಗಳು
* ಕಾರ್ಯನಿರ್ವಹಿಸುತ್ತಿರುವ ದೀಪಗಳು: 1,010
* ಕೆಟ್ಟುಹೋಗಿರುವ ದೀಪಗಳು: 530 (ಶೇ. 34 ರಷ್ಟು ವೈಫಲ್ಯ)
* ಸಮೀಕ್ಷೆ ನಡೆದ ದಿನಾಂಕಗಳು: ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 15
* ಪ್ರಮುಖ ಕತ್ತಲೆ ವಲಯಗಳು: ಹುಳಿಮಾವು ಕ್ರೈಸ್ಟ್ ಯೂನಿವರ್ಸಿಟಿ ಮುಂಭಾಗ, ಮೀನಾಕ್ಷಿ ಮಾಲ್ ಜಂಕ್ಷನ್, ಜೆ.ಪಿ. ನಗರ 4ನೇ ಹಂತದ ಮೆಟ್ರೋ ಸುತ್ತಮುತ್ತ
* ಪ್ರಮುಖ ಕಾಮಗಾರಿ ನಿರ್ದೇಶನಗಳು:
  * 90 ವ್ಯಾಟ್ಸ್ ಬದಲಿಗೆ ರಸ್ತೆ ಅಗಲಕ್ಕೆ ತಕ್ಕಂತೆ 120 ವ್ಯಾಟ್ಸ್ ಎಲ್‌ಇಡಿ ದೀಪಗಳ ಅಳವಡಿಕೆ
  * ತೆರೆದ ಚರಂಡಿಗಳಿಗೆ ಕಾಂಕ್ರೀಟ್ ಸ್ಲ್ಯಾಬ್ ಮುಚ್ಚುವುದು
  * ವೃದ್ಧರು ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಫುಟ್‌ಪಾತ್‌ಗಳಲ್ಲಿ ಸ್ಲೋಪ್ ನಿರ್ಮಾಣ
  * ಬನ್ನೇರುಘಟ್ಟ ನೈಸ್ ರಸ್ತೆ ಜಂಕ್ಷನ್‌ನಲ್ಲಿ ತಕ್ಷಣ ಡಾಂಬರೀಕರಣ ಹಾಗೂ ಗಿಡಗಂಟಿಗಳ ತೆರವು
 

Add Zee News as a Preferred Source
TAGS:
Krishna Byre Gowda
Kannada News