2026ರ ದೀಪಾವಳಿ ಸಮಯದಲ್ಲಿ ತುಲಾ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣವಾಗಲಿದ್ದು ಕೆಲವರ ಅದೃಷ್ಟವೇ ಬದಲಾಗಲಿದೆ.
1/6
ಚತುರ್ಗ್ರಹಿ ಯೋಗ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ದೀಪಾವಳಿ ಸಮಯದಲ್ಲಿ ತುಲಾ ರಾಶಿಯಲ್ಲಿ ಸೂರ್ಯ, ಚಂದ್ರ, ಶುಕ್ರ, ಬುಧ ಗ್ರಹಗಳ ಸಂಯೋಗದಿಂದ ಶುಭ ಚತುರ್ಗ್ರಹಿ ಯೋಗ ರೂಪುಗೊಳ್ಳಲಿದೆ. ಇದರೊಂದಿಗೆ ಒಂದೇ ರಾಶಿಯಲ್ಲಿ ಬುಧ-ಸೂರ್ಯ ಯುತಿ, ಶುಕ್ರ ಬುಧ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗವೂ ರೂಪುಗೊಳ್ಳಲಿದೆ. ಇದರ ಪ್ರಭಾವದಿಂದ ಐದು ರಾಶಿಯವರಿಗೆ ಕುಬೇರನ ಸಂಪತ್ತೇ ಕೈ ಸೇರಲಿದೆ ಎನ್ನಲಾಗುತ್ತಿದೆ.
2/6
ಮೇಷ ರಾಶಿ
ದೀಪಾವಳಿ ಸಮಯದಲ್ಲಿ ನಿರ್ಮಾಣವಾಗಲಿರುವ ಚತುರ್ಗ್ರಹಿ ಯೋಗವು ಮೇಷ ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಕೆಲಸದಲ್ಲಿ ಅಪೇಕ್ಷಿತ ಫಲಿತಾಂಶಗಳು ನಿಮ್ಮ ಮನಸ್ಸಿನ ಸಂತೋಷವನ್ನು ಹೆಚ್ಚಿಸಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಹೊಸ ಮನೆ, ಐಷಾರಾಮಿ ವಾಹನ ಖರೀದಿಸುವ ಯೋಗವಿದೆ.
3/6
ಮಿಥುನ ರಾಶಿ
ಚತುರ್ಗ್ರಹಿ ಯೋಗ ಪ್ರಭಾವದಿಂದ ಮಿಥುನ ರಾಶಿಯವರಿಗೆ ದೀಪಾವಳಿ ಬಳಿಕ ಭಾಗ್ಯೋದಯದ ಸಮಯ ಎನ್ನಲಾಗುತ್ತದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಪ್ರಗತಿಯ ಅವಕಾಶಗಳಿವೆ. ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿದ ಲಾಭ ನಿರೀಕ್ಷೆ ಇದೆ. ಹಣಕಾಸಿನ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ.
4/6
ತುಲಾ ರಾಶಿ
ಚತುರ್ಗ್ರಹಿ ಯೋಗದ ಪರಿಣಾಮವಾಗಿ ತುಲಾ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಕ್ಕಳ ವಿಚಾರವಾಗಿ ನಿಮ್ಮ ಪ್ರಯತ್ನಕ್ಕೆ ಶುಭ ಫಲಗಳನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಿಗಲಿದೆ. ಕುಟುಂಬದೊಂದಿಗೆ ಸಂತೋಷದ ವಾತಾವರಣ ಇರಲಿದೆ.
5/6
ವೃಶ್ಚಿಕ ರಾಶಿ
ದೀಪಾವಳಿ ವೇಳೆ ಚತುರ್ಗ್ರಹಿ ಯೋಗವು ವೃಶ್ಚಿಕ ರಾಶಿಯ ಜನರಿಗೆ ಎಲ್ಲಾ ಆಯಾಮಗಳಿಂದಲೂ ಶುಭ ಫಲಗಳನ್ನು ನೀಡಲಿದೆ. ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆಗಳಿದ್ದು ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಬುಧಾದಿತ್ಯ ಯೋಗವು
ಹಣ ಸಂಪಾದಿಸುವ ನಿಮ್ಮ ಪ್ರಯತ್ನಗಳಿಗೆ ಅದೃಷ್ಟದ ಬೆಂಬಲವನ್ನು ನೀಡಲಿದ್ದು ಕುಬೇರನ ಸಂಪತ್ತೇ ನಿಮ್ಮ ಕೈ ಸೇರಲಿದೆ.
6/6
ಮಕರ ರಾಶಿ
ಚತುರ್ಗ್ರಹಿ ಯೋಗವು ಮಕರ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು, ಮಾಡುವ ಕೆಲಸಗಳಲ್ಲಿ ಉತ್ತಮ ಫಲವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಮದುವೆ ಮಾತುಕತೆಗಳಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ. ವ್ಯವಹಾರ ವಿಸ್ತರಣೆಗೆ ಪ್ರಯತ್ನಿಸುತ್ತಿರುವವರಿಗೆ ಅನುಕೂಕರ ಸಮಯ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.