Ramyana review:ರಾಮಾಯಣ.. ಭಾರತೀಯ ಸಂಸ್ಕೃತಿ ಮತ್ತು ಪುರಾಣ ಪರಂಪರೆಯ ಹೆಮ್ಮೆಯ ಮಹಾಕಾವ್ಯ. ಈ ಮಹಾಕಾವ್ಯವನ್ನು ಬೆಳ್ಳಿತೆರೆ ಮೇಲೆ ಅದ್ಧೂರಿಯಾಗಿ ಕಟ್ಟಿಕೊಡುವ ಪ್ರಯತ್ನಕ್ಕೆ ನಿರ್ದೇಶಕ ನಿತೇಶ್ ತಿವಾರಿ ಕೈಹಾಕಿದ್ದಾರೆ. ಚಿತ್ರದ ಮೊದಲ ನೋಟ ಬಿಡುಗಡೆಯಾದ ದಿನದಿಂದಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಪಾತ್ರಗಳ ವಿನ್ಯಾಸ, ಅದ್ಧೂರಿ ಸೆಟ್‌ಗಳು, ಬೃಹತ್ ತಾರಾಗಣ ಹಾಗೂ ನಿರ್ಮಾಣದ ಪ್ರಮಾಣ.. ಹೀಗೆ ಪ್ರತಿಯೊಂದು ವಿಚಾರವೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಈಗಾಗಲೇ ಸಾಕಷ್ಟು ಮಂದಿ ಸಿನಿಮಾವನ್ನೂ ನೋಡಿದ್ದು, ರಾಮಾಯಣ ಸಿನಿಮಾದ ದೃಶ್ಯ ವೈಭವ ಹಾಗೂ ರಣಬೀರ್ ಕಪೂರ್ ನಟನೆ ಬಗ್ಗೆ ಟೀಕೆ ಮಾಡಿದವರೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅದರಲ್ಲೂ ಯಶ್ ನಟನೆಯ ರಾವಣನ ಪಾತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಇದೀಗ ಸಿನಿಮಾದ ಕೆಲವು ರೋಚಕ ಸಂಗತಿಗಳು ಗಮನ ಸೆಳೆಯುತ್ತಿವೆ. ರಾಮನಿಗಿಂತ ಮೊದಲೇ ರಾವಣನ ಪಾತ್ರವನ್ನು ಪರಿಚಯಿಸಿರುವುದು ಯಶ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ. ಸಿನಿಮಾದ ಆರಂಭದಲ್ಲೇ ರಾವಣನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಾಮನ ಪಾತ್ರ ಪರಿಚಯಕ್ಕೂ ಮೊದಲೇ ರಾವಣನ ಎಂಟ್ರಿ ಆಗಿರುವುದು ವಿಶೇಷ. ಯಶ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸ್ಪೆಷಲ್ ಟ್ರೀಟ್. ಇನ್ನು ರಣಬೀರ್ ಕಪೂರ್ ನಿರ್ವಹಿಸಿರುವ ರಾಮನ ಪಾತ್ರದ ಪರಿಚಯವನ್ನೂ ನಿರ್ದೇಶಕರು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ.
ಇನ್ನು ಸೀತಾ ಸ್ವಯಂವರದ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ರಾಮ ಮತ್ತು ಪರಶುರಾಮನ ಮುಖಾಮುಖಿ ಸನ್ನಿವೇಶಗಳು ಸಿನಿಮಾದ ರೋಚಕತೆಯನ್ನು ಹೆಚ್ಚಿಸಿವೆ. ಕೇವಲ ಅದ್ಧೂರಿ ದೃಶ್ಯಗಳು ಮಾತ್ರವಲ್ಲ, ಭಾವುಕ ಸನ್ನಿವೇಶಗಳಿಗೂ ನಿರ್ದೇಶಕರು ಅಷ್ಟೇ ಮಹತ್ವ ನೀಡಿದ್ದಾರೆ. ತಂದೆಯ ಆಜ್ಞೆಯನ್ನು ಪಾಲಿಸುವ ಸಲುವಾಗಿ ಶ್ರೀರಾಮ ವನವಾಸಕ್ಕೆ ತೆರಳುವ ಹೃದಯಸ್ಪರ್ಶಿ ದೃಶ್ಯದೊಂದಿಗೆ ಮೊದಲಾರ್ಧಕ್ಕೆ ಮಧ್ಯಂತರದ ತೆರೆ ಬೀಳುತ್ತದೆ. ಆದರೆ ಮಧ್ಯಂತರದ ಬಳಿಕ ಮತ್ತೆ ರಾವಣನ ಆರ್ಭಟ ಶುರುವಾಗುತ್ತದೆ. ಹೀಗೆ ಮೊದಲಾರ್ಧದಲ್ಲಿ ರಾಮನ ಆದರ್ಶ, ರಾವಣನ ವೈಭವ ಹಾಗೂ ಭಾವನಾತ್ಮಕ ಸನ್ನಿವೇಶಗಳ ಸಮ್ಮಿಶ್ರಣ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಮಾತ್ರವಲ್ಲದೇ ಅಮೆರಿಕಾದಲ್ಲಿ ಇದುವರೆಗಿನ ಅತಿ ಹೆಚ್ಚು ಬಿಡುಗಡೆಯಾದ ಚಿತ್ರಗಳ ಪೈಕಿ ರಾಮಾಯಣ ಸಿನಿಮಾಗೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಒಟ್ಟಿನಲ್ಲಿ ರಾಮಾಯಣದ ಮೊದಲಾರ್ಧದಲ್ಲಿ ರಾವಣನ ಪಾತ್ರಕ್ಕೆ ಸಿಕ್ಕಿರುವ ಪ್ರಾಮುಖ್ಯತೆ ಯಶ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಮುಂದಿನ ಭಾಗದಲ್ಲಿ ರಾವಣನ ಅಬ್ಬರ ಯಾವ ರೀತಿ ಇರಲಿದೆ ಅನ್ನೋದೇ ಈಗ ಕುತೂಹಲ!
ರಾಮನ ಪಾತ್ರ ಅಂದ್ರೆ ಅದಕ್ಕೆ ಗಾಂಭೀರ್ಯ, ತಾಳ್ಮೆ, ಶಾಂತ ಸ್ವಭಾವ ಮತ್ತು ಧರ್ಮದ ಹಾದಿಯಲ್ಲಿ ನಡೆಯುವ ವ್ಯಕ್ತಿತ್ವದ ಅಗತ್ಯವಿದೆ. ಇಂತಹ ಸವಾಲಿನ ಪಾತ್ರಕ್ಕೆ ರಣಬೀರ್ ಹೇಗೆ ಜೀವ ತುಂಬಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇತ್ತು ಆದರೆ ರಣವೀರ್ ತಮ್ಮ ಅದ್ಭುತವಾದ ಅಭಿನಯದ ಮೂಲಕ ಅಭಿಮಾನಿಗಳಗೆ ಶಾಕ್ ಕೊಟ್ಟಿದ್ದಾರೆ.. ನೈಜವಾದ ರಾಮನ ರೀತಿಯಲ್ಲಿ ರಣವೀರ್ ಕಪೂರ್ ನಟಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ.
ಟೀಕೆಗಳು, ಚರ್ಚೆಗಳು, ವಿವಾದಗಳ ನಡುವೆಯ ಬಾಲಿವುಡ್ ನಟ ರಣಬೀರ್ ಕಪೂರ್ ರಾಮನ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳುವ ಸಲುವಾಗಿ ರಣಬೀರ್, ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು ಈಗ ಇದಕ್ಕೆ ತಕ್ಕ ಪ್ರತಿಕ್ರಿಯೆ ಲಭಿಸಿದೆ.
ಆರಂಭದಲ್ಲಿ ರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯಾಗಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅವರ ಹಿಂದಿನ ಸಿನಿಮಾಗಳು, ವೈಯಕ್ತಿಕ ಜೀವನ ಹಾಗೂ ನಟನೆಯ ಶೈಲಿಯನ್ನು ಮುಂದಿಟ್ಟುಕೊಂಡು ಟೀಕೆಗಳನ್ನೂ ಮಾಡಿದ್ದರು. ಆದರೆ ಈ ಎಲ್ಲ ಟೀಕೆಗಳಿಗೆ ಸೆಡ್ಡು ಹೊಡೆದು, ರಾಮನ ಪಾತ್ರವನ್ನು ಸವಾಲಾಗಿ ಸ್ವೀಕರಿಸಿದ್ದಾರೆ ರಣಬೀರ್. ಪಾತ್ರಕ್ಕಾಗಿ ತಮ್ಮ ಲುಕ್, ದೇಹಭಾಷೆ ಹಾಗೂ ಅಭಿನಯದಲ್ಲಿ ಬದಲಾವಣೆ ಮಾಡಿಕೊಂಡಿರುವ ರಣಬೀರ್, ಪ್ರೇಕ್ಷಕರ ಮನಗೆದ್ದಿದ್ದಾರೆ. ಸದ್ಯಕ್ಕಂತು ರಾಮನಿಗೆ ಪ್ರೇಕ್ಷಕರು ವಾರೇ ವಾ ಅನ್ನುತ್ತಿದ್ದಾರೆ.
ಬಿಡುಗಡೆಗೂ ಮುನ್ನವೇ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದ ರಾಮಾಯಣ ಇದೀಗ ಪ್ರೇಕ್ಷಕರ ಮುಂದೆ ಬಂದಿದೆ. ರಾಮನ ಕಥೆ, ಭಾರತೀಯ ಪರಂಪರೆ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಅದ್ಧೂರಿ ದೃಶ್ಯಗಳ ಮೂಲಕ ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಡೆದಿದೆ.
ಒಟ್ಟಾರೆಯಾಗಿ ಒಂದೆಡೆ ರಾವಣನಾಗಿ ನಮ್ಮ ಕನ್ನಡದ ಹೆಮ್ಮೆಯ ನಟ ಯಶ್ ನಟಿಸಿದರೆ ಮತ್ತೊಂದೆಡೆ ರಾಮನಾಗಿ ಬಾಲಿವುಡ್ ನಟ ರಣಬೀರ್ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಗಮಸೆಳೆದಿದ್ದಾರೆ.