Guruvara 05th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಗುರುವಾರದ ಈ ದಿನ ಉತ್ತರಾ ನಕ್ಷತ್ರ, ಐಂದ್ರ ಯೋಗ, ಕೌಲವ ಕರಣ ಇರಲಿದೆ.
ಮೇಷ ರಾಶಿ:
ಐಂದ್ರ ಯೋಗವು ಮೇಷ ರಾಶಿಯ ಜನರಿಗೆ ಇಂದು ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಕುಟುಂಬದಲ್ಲಿ ಇಂದು ಕೆಲವು ಶುಭ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಲಿವೆ. ವ್ಯವಹಾರಸ್ಥರಿಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶಗಳು ಸಿಗಬಹುದು.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಇಂದು ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಮಾಡುವ ಕೆಲಸಗಳಲ್ಲಿ ಉತ್ತಮ ಪ್ರತಿಫಲವನ್ನು ಪಡೆಯುವ ಸೂಚನೆಗಳಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.
ಮಿಥುನ ರಾಶಿ:
ಐಂದ್ರ ಯೋಗವು ಮಿಥುನ ರಾಶಿಯವರಿಗೆ ಇಂದು ಮಿಶ್ರ ಫಲಗಳನ್ನು ತರಲಿದೆ. ಇಂದಿನ ದಿನ ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ನಿಮ್ಮ ಬಹುದಿನಗಳ ಆಸೆಗಳು ಕೈಗೂಡುವ ಸಮಯ ಇದಾಗಿದೆ. ಪ್ರಮುಖ ಕೆಲಸಗಳಲ್ಲಿ ಪ್ರೀತಿಪಾತ್ರರಿಂದ ಬೆಂಬಲ ಸಹಕಾರ ಸಿಗಲಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲವನ್ನು ಪಡೆಯಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೂಡಿಕೆ ಮಾಡಲು ಅನುಕೂಲಕರ ಸಮಯ. ಕುಟುಂಬ ಜೀವನದಲ್ಲಿ ವಾತಾವರಣ ಸಂತೋಷದಿಂದ ಕೂಡಿರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಐಂದ್ರ ಯೋಗವು ಶುಭ ದಿನ ಎಂದು ಸಾಬೀತುಪಡಿಸಲಿದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ವ್ಯವಹಾರಗಳಲ್ಲಿ ಆತುರತೆಯನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶಗಳು ಸಿಗಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಪ್ರತಿ ಹೆಜ್ಜೆಗೂ ಶುಭ ಫಲಗಳು ಸಿಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ಸಂತೋಷ ಇಮ್ಮಡಿಗೊಳ್ಳಲಿದೆ. ಉನ್ನತ ವಿದ್ಯಾಭ್ಯಾಸದ ಬಗ್ಗೆ ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ಹಠಾತ್ ಧನ ಲಾಭದ ಸಾಧ್ಯತೆಯು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ದಿನವು ಉತ್ತಮ ಲಾಭವನ್ನು ತರಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿದಯಲಿದೆ. ವೈಯಕ್ತಿಕ ಜೀವನದಲ್ಲಿ ಸುಧಾರಣೆಯನ್ನು ಕಾಣುವ ಸೂಚನೆಗಳಿವೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ:
ಗುರುವಾರದಂದು ಐಂದ್ರ ಯೋಗವು ಇಂದು ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ನಿಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರಿಂದ ಲಾಭಾಂಶಗಳು ಅಧಿಕಗೊಳ್ಳಲಿವೆ. ಹಿಂದೆ ನೀಡಿರುವ ಹಣವನ್ನು ಮರಳಿ ಪಡೆಯುವ ಸೂಚನೆಗಳಿವೆ. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲವನ್ನು ಪಡೆಯುವ ಸೂಚನೆಗಳಿವೆ.
ಧನು ರಾಶಿ:
ಧನು ರಾಶಿಯವರು ಇಂದು ಐಂದ್ರ ಯೋಗದ ಪ್ರಭಾವದಿಂದ ಉತ್ಸಾಹಭರಿತರಾಗಿರಬಹುದು. ಉದ್ಯೋಗಿಗಳು ಹೊಸ ಯೋಜನೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಬಹುದು. ನಿಮ್ಮ ಒಳ್ಳೆಯ ಆಲೋಚನೆಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಆರೋಗ್ಯವೂ ಉತ್ತಮವಾಗಿರುತ್ತದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ಅದೃಷ್ಟ ಕೈ ಹಿಡಿಯಲಿದೆ. ಉದ್ಯೋಗಿಗಳಿಗೆ ಅನುಕೂಲಕರ ಸಮಯ. ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲವನ್ನು ಪಡೆಯುವಿರಿ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಲಿದೆ. ಹೊಸ ಜನರನ್ನು ಭೇಟಿ ಆಗುವ ನಿರೀಕ್ಷೆ ಇದ್ದು, ಭವಿಷ್ಯದಲ್ಲಿ ಇವರಿಂದ ಲಾಭವಾಗಲಿದೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ಪ್ರತಿ ಹೆಜ್ಜೆಯಲ್ಲೂ ಅದೃಷ್ಟ ಕೈ ಹಿಡಿಯಲಿದೆ. ಕೆಲಸದಲ್ಲಿ ಅದ್ಭುತ ಪ್ರಯೋಜನಗಳು ಸಿಗಬಹುದು. ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಕಚೇರಿಯಲ್ಲಿ ಸಂತೋಷದ ವಾತಾವರಣ ಇರಲಿದೆ. ಹಠಾತ್ ಧನ ಲಾಭದ ಸೂಚನೆಗಳಿವೆ.
ಮೀನ ರಾಶಿ:
ಐಂದ್ರ ಯೋಗವು ಮೀನ ರಾಶಿಯ ಜನರಿಗೆ ವಿಶೇಷ ಲಾಭಗಳನ್ನು ತರಲಿದೆ. ಮಾಡುವ ಕೆಲಸಗಳಲ್ಲಿ ಸಕಾರಾತ್ಮಕ ಫಲಗಳು ನಿಮ್ಮ ಮನಸ್ಸಿನ ಖುಷಿಯನ್ನು ಹೆಚ್ಚಿಸಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಉದ್ಯಮಿಗಳು ದೊಡ್ಡ ಆರ್ಡರ್ ಪಡೆಯುವ ಸೂಚನೆಗಳಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.