• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನವರಾತ್ರಿಯಲ್ಲಿ ಬುಧಾದಿತ್ಯ ರಾಜಯೋಗ: 3 ರಾಶಿಯವರಿಗೆ ಸ್ವಂತ ಮನೆ, ವಾಹನ ಖರೀದಿ ಯೋಗ

ನವರಾತ್ರಿಯಲ್ಲಿ ಬುಧಾದಿತ್ಯ ರಾಜಯೋಗ: 3 ರಾಶಿಯವರಿಗೆ ಸ್ವಂತ ಮನೆ, ವಾಹನ ಖರೀದಿ ಯೋಗ

Written ByYashaswini V
Published: Oct 17, 2026, 09:31 AM IST|Updated: Oct 17, 2026, 09:34 AM IST
joinshare

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಬುಧ ಗ್ರಹಗಳು ಒಟ್ಟಿಗೆ ಸೇರಿದಾಗ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ.

Budhaditya Rajayoga Effect1/6

ಸೂರ್ಯ ಸಂಚಾರ

ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್‌ 17, 2026ರಂದು ಆತ್ಮಕಾರಕ ಸೂರ್ಯ ತುಲಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರೊಂದಿಗೆ ತುಲಾ ರಾಶಿಯಲ್ಲಿ ಈಗಾಗಲೇ ವಿರಾಜಮಾನನಾಗಿರುವ ಬುದ್ದಿ, ತರ್ಕ, ವೃತ್ತಿ- ವ್ಯವಹಾರದ ಅಂಶನಾದ ಬುಧನೊಂದಿಗೆ ಸಂಯೋಗ ಹೊಂದಿದ್ದಾನೆ.
Budhaditya Rajayoga Effect2/6

ಬುಧ ಸೂರ್ಯ ಯುತಿ

ತುಲಾ ರಾಶಿಯಲ್ಲಿ ಬುಧ ಸೂರ್ಯ ಸಂಯೋಗದಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಅದರಲ್ಲೂ ನವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ರೂಪುಗೊಂಡಿರುವ ಬುಧಾದಿತ್ಯ ರಾಜಯೋಗ ಕೆಲವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ ಎನ್ನಲಾಗುತ್ತಿದೆ.
Budhaditya Rajayoga Effect3/6

ಬುಧಾದಿತ್ಯ ರಾಜಯೋಗ ಪ್ರಭಾವ

ನವರಾತ್ರಿಯಲ್ಲಿ ನಿರ್ಮಾಣವಾಗಿರುವ ಬುಧಾದಿತ್ಯ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ. ಆದರೂ, ಈ ಅವಧಿಯಲ್ಲಿ ಮೂರು ರಾಶಿಯ ಜನರಿಗೆ ಭಾಗ್ಯೋದಯದ ಸಮಯ ಎನ್ನಲಾಗುತ್ತಿದ್ದು ಅವರಿಗೆ ಸ್ವಂತ ಮನೆ, ಐಷಾರಾಮಿ ವಾಹನ ಖರೀದಿಸುವ ಯೋಗವಿದೆ ಎನ್ನಲಾಗುತ್ತಿದೆ.
Budhaditya Rajayoga Effect4/6

ಮೇಷ ರಾಶಿ

ಬುಧಾದಿತ್ಯ ರಾಜಯೋಗವು ಮೇಷ ರಾಶಿಯ ಜನರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವ್ಯವಹಾರದಲ್ಲಿ ಅಪೇಕ್ಷಿತ ಶುಭ ಸಮಾಚಾರಗಳನ್ನು ಕೇಳುವ ಸೂಚನೆಗಳಿವೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದ್ದು ಸ್ವಂತ ಮನೆ ಖರೀದಿಸುವ ಸುಯೋಗವಿದೆ.
Budhaditya Rajayoga Effect5/6

ಕರ್ಕಾಟಕ ರಾಶಿ

ಬುಧಾದಿತ್ಯ ರಾಜಯೋಗವು ಕರ್ಕಾಟಕ ರಾಶಿಯ ಜನರಿಗೆ ವೃತ್ತಿಯಲ್ಲಿ ಹೊಸ ಎತ್ತರಕ್ಕೆ ಏರುವ ಸೂಚನೆಗಳಿವೆ. ದೀರ್ಘ ಸಮಯದಿಂದ ಕೆಲಸದಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಭವಿಷ್ಯಕ್ಕಾಗಿ ಕುಟುಂಬ ಸದಸ್ಯರೊಂದಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರಿಯಾದ ಸಮಯ. ವಿದೇಶ ವ್ಯವಹಾರಗಳಲ್ಲಿ ಅಧಿಕ ಲಾಭಾಂಶವನ್ನು ನಿರೀಕ್ಷಿಸಬಹುದು.
Budhaditya Rajayoga Effect6/6

ಕನ್ಯಾ ರಾಶಿ

ಬುಧಾದಿತ್ಯ ರಾಜಯೋಗದ ಪ್ರಭಾವದಿಂದ ಕನ್ಯಾ ರಾಶಿಯ ಜನರಿಗೆ ಫಲಪ್ರದವಾಗಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದ್ದು, ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಾಧಿಸುವಿರಿ. ಹಣದ ಹರಿವು ಉತ್ತಮವಾಗಿರಲಿದ್ದು ಸ್ವಂತ ಮನೆ ಅಥವಾ ವಾಹನ ಖರೀದಿಸಲು ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ. ನಿಮ್ಮ ಭವಿಷ್ಯದ ದೃಷ್ಟಿಯಿಂದಲೂ ಹಣ ಉಳಿತಾಯದತ್ತ ಗಮನಹರಿಸುವುದು ಒಳ್ಳೆಯದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Rajayoga
Grah Gochar

Trending

  • News
  • Photos
  • Videos
"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

2

ಹಬ್ಬದ ಸೀಸನ್‌ನಲ್ಲಿ ಟೊಯೋಟಾ ಅಗ್ಗದ ಕಾರು ಬಿಡುಗಡೆ! ಸುರಕ್ಷತಾ ಫೀಚರ್ಸ್‌ ಮಾತ್ರ ಸೂಪರ್!

3

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

4

SBIಯಲ್ಲಿ 180 ದಿನಗಳ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ಎಷ್ಟು ಲಾಭ!

5

ಕಾವ್ಯ ಮಾರನ್‌ - ಅನಿರುದ್ಧ್​ ಮದುವೆ.. ಇಬ್ಬರ ಆಸ್ತಿ ಲೆಕ್ಕಚಾರ ಕೇಳಿದ್ರೆ ನಿಮ್ಮ ತಲೆ ಗಿರ್‌ ಅನ್ನುತ್ತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.