• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

ಮಾಧ್ಯಮದವರಂತೆ ನಟಿಸಿ ಸಲೂನ್‌ಗೆ ನುಗ್ಗಿ, ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಐನಾತಿ ಲೇಡಿ ಗ್ಯಾಂಗ್‌ವೊಂದನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ..

Written ByKrishna NK
Published: Oct 17, 2026, 05:46 PM IST|Updated: Oct 17, 2026, 05:48 PM IST
joinshare
ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!
Image Credit: Today Bengaluru crime News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

2

ಹಬ್ಬದ ಸೀಸನ್‌ನಲ್ಲಿ ಟೊಯೋಟಾ ಅಗ್ಗದ ಕಾರು ಬಿಡುಗಡೆ! ಸುರಕ್ಷತಾ ಫೀಚರ್ಸ್‌ ಮಾತ್ರ ಸೂಪರ್!

3

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

4

SBIಯಲ್ಲಿ 180 ದಿನಗಳ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ಎಷ್ಟು ಲಾಭ!

5

ಕಾವ್ಯ ಮಾರನ್‌ - ಅನಿರುದ್ಧ್​ ಮದುವೆ.. ಇಬ್ಬರ ಆಸ್ತಿ ಲೆಕ್ಕಚಾರ ಕೇಳಿದ್ರೆ ನಿಮ್ಮ ತಲೆ ಗಿರ್‌ ಅನ್ನುತ್ತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಅದು ಐನಾತಿ ಲೇಡಿ ಗ್ಯಾಂಗ್. ವಸೂಲಿ ಮಾಡೋದೆ ಅವರ ಕೆಲಸ. ಮಾಧ್ಯಮದವರ ಹೆಸರು ಹೇಳಿಕೊಂಡು ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆ ಸ್ಪಾಗೆ ನುಗ್ಗಿದವರು ದೊಡ್ಡ ಹೈಡ್ರಾಮಾ ಮಾಡಿ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು.. ಯಾರು ಲಾಕ್ ಯಾರು..? ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ

ಯೆಸ್, ಈ ಸಿಸಿಟಿವಿ ದೃಶ್ಯಗಳನ್ನು ನೋಡಿ ಬಿಡಿ. ಯಾವ ಮಟ್ಟಕ್ಕೆ ಹವಾಳಿ ಇಟ್ಟಿದ್ದಾರೆ ಅಂತಾ.‌ಹೌದು ಅವತ್ತು ರಾತ್ರಿ ಏಕಾಏಕಿ ಸಲೂನ್‌ಗೆ ನುಗ್ಗಿದ್ದ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ತಾವು ಮಾಧ್ಯಮದವರು ಎಂದು ಹೇಳಿಕೊಂಡು ಐಡಿ ಕಾರ್ಡ್ ಮತ್ತು ಕ್ಯಾಮೆರಾ ತೋರಿಸಿದ್ದರು. ಸಾಮ್ರಾಟ್ ಹಾಗೂ ನ್ಯೂಸ್ 24 ಹೆಸರಿನ ಯೂಟ್ಯೂಬ್ ಚಾನೆಲ್‌ಗಳ ಐಡಿ ಕಾರ್ಡ್‌ಗಳನ್ನು ಹೊಂದಿದ್ದ ಆರೋಪಿಗಳು, ಸಲೂನ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಗಲಾಟೆ ಮಾಡಿದ್ದರು.

ಸಲೂನ್‌ನಲ್ಲಿನ ದೃಶ್ಯಗಳನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಬಳಿಕ ಐದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.. ಈ ಪೈಕಿ ಒಂದು ಲಕ್ಷ ರೂಪಾಯಿಯನ್ನು ಸ್ಥಳದಲ್ಲೇ ಪಡೆದಿದ್ದು, ಉಳಿದ ನಾಲ್ಕು ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದರು. ಘಟನೆಯಿಂದ ಆತಂಕಗೊಂಡ ಸಲೂನ್‌ನವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು..

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಪೊಲೀಸರು, ಲಕ್ಷ್ಮಿ, ಮಮತ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಹಾಗೂ ಆಸೀಫ್ ಎಂಬ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂಪಾಯಿ ನಗದು, ಒಂದು ಕಾರು, ಒಂದು ಬೈಕ್, ಏಳು ಮೊಬೈಲ್ ಫೋನ್‌ಗಳು ಹಾಗೂ ಕೆಲವು ಐಡಿ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾಧ್ಯಮದ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪದಡಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅದೆನೇ ಹೇಳಿ. ಮಾಧ್ಯಮದ ಹೆಸರು ಹೇಳಿಕೊಂಡು ಸುಲಿಗೆಗೆ ಯತ್ನಿಸುವವರು ಕಂಬಿ ಎಣಿಸುವ ಬಂದಿದೆ. ಮುಂದೆ ಈ ರೀತಿ ಕೃತ್ಯ ಎಸುಗುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.

Add Zee News as a Preferred Source
TAGS:
Crime