• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

ಆ ಪೋಷಕರು ಪಕ್ಕದ ರಾಜ್ಯದಲ್ಲಿ ಸರಕಾರಿ ನೌಕರರಾಗಿದ್ದು, ತನ್ನಂತೆಯೇ ಮಗಳು ಕೂಡ ಚೆನ್ನಾಗಿ ಓದಿ ಸರಕಾರಿ ಕೆಲಸಕ್ಕೆ ಸೇರಲಿ ಎಂದು, ರಾಜ್ಯ ಬಿಟ್ಟು ರಾಜ್ಯಕ್ಕೆ ಓದಲು ಕಳಿಸಿದ್ದರು. ಆದರೆ ಆಕೆಗೆ ಅದೇನಾಯ್ತೋ ಏನೋ ರಾತ್ರಿ ಏಕಾಏಕಿ ಬಹಮಹಡಿ ಕಟ್ಟಡದಿಂದ ಹಾರಿ ಜೀವ ಕಳೆದುಕೊಂಡಿದ್ದಾಳೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 17, 2026, 06:16 PM IST|Updated: Oct 17, 2026, 06:18 PM IST
joinshare
"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ
Image Credit: bengaluru Crime News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸಿಎಂ ಡಿಕೆ ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್‌ನ ಬಲಿಪಶು : ಹೆಚ್‌ಡಿಕೆ ಗಂಭೀರ ಹೇಳಿಕೆ

ಸಿಎಂ ಡಿಕೆ ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್‌ನ ಬಲಿಪಶು : ಹೆಚ್‌ಡಿಕೆ ಗಂಭೀರ ಹೇಳಿಕೆ

2

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

3

ಹಬ್ಬದ ಸೀಸನ್‌ನಲ್ಲಿ ಟೊಯೋಟಾ ಅಗ್ಗದ ಕಾರು ಬಿಡುಗಡೆ! ಸುರಕ್ಷತಾ ಫೀಚರ್ಸ್‌ ಮಾತ್ರ ಸೂಪರ್!

4

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

5

SBIಯಲ್ಲಿ 180 ದಿನಗಳ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ಎಷ್ಟು ಲಾಭ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದೊಡ್ಡಬಳ್ಳಾಪುರ : ಹೀಗೆ ಪೋಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕುತ್ತಿರುವ ಪೋಷಕರು, ಸ್ಥಳ‌ಮಹಜರು ಮಾಡುತ್ತಿರುವ ಪೋಲೀಸರು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 
ದೊಡ್ಡಬಳ್ಳಾಪುರ ತಾಲೂಕಿನ ನಾಗದೇವನಹಳ್ಳಿಯ ಸಮೀಪವಿರುವ ಪ್ರತಿಷ್ಠಿತ ಗೀತಮ್ ಯೂನಿವರ್ಸಿಟಿಯಲ್ಲಿ.

ವರ್ಷತಾ (20) ಮೃತ ವಿಧ್ಯಾರ್ಥಿನಿ. ಮೂರನೇ ವರ್ಷದ ಬಿಟೆಕ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದಳು. ಆದರೆ ರಾತ್ರಿ ಏಕಾಏಕಿ ಬಹುಮಹಡಿಯಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾಳೆ. ಆಂಧ್ರಪ್ರದೇಶದ ಗುಂಟಕಲ್ ಮೂಲದ ಈ ಪ್ರತಿಭಾವಂತ ಯುವತಿ, ತಾಂತ್ರಿಕ ಶಿಕ್ಷಣಕ್ಕಾಗಿ ದೊಡ್ಡಬಳ್ಳಾಪುರದ ಹತ್ತಿರ ಇರುವ ಗೀತಮ್ ಯೂನಿವೆರ್ಸಿಟಿಗೆ ಬಂದಿದ್ದಳು. ಮೂರನೇ ವರ್ಷಕ್ಕೂ ಹೆಜ್ಜೆಯಟ್ಟಿದಳು, ಆದರೆ ಕಳೆದ ರಾತ್ರಿ ನಡೆದ ಈ ಸಾವು ಆಕಸ್ಮಿಕವೇ ಅಥವಾ ವ್ಯವಸ್ಥಿತ ನಿರ್ಲಕ್ಷ್ಯದ ಬಲಿಗೆ ಸಿಲುಕಿದ ಜೀವವೇ ಎಂಬುದು ಗೊತ್ತಾಗಬೇಕಿದೆ.

ಇನ್ನೂ ತನಿಖೆಯಿಂದ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಮೃತ ವರ್ಷಿತಾಳ ಹಿನ್ನೆಲೆಯನ್ನು ಕೆದಕಿದಾಗ, ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ, ಕಳೆದ ಎರಡು-ಮೂರು ದಿನಗಳಿಂದ ಆಕೆ ಹಾಸ್ಟೆಲ್ ಕ್ಯಾಂಟೀನ್‌ಗೂ ಊಟಕ್ಕೆ ತೆರಳಿರಲಿಲ್ಲ ಎನ್ನಲಾಗಿದೆ. ಮಾನಸಿಕವಾಗಿ ಕುಗ್ಗಿಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಕ್ಯಾಂಪಸ್‌ನಲ್ಲಿ ಅಷ್ಟು ದಿನ ಏಕಾಂಗಿಯಾಗದರೂ ಕಾಲೇಜಿನ ಕೌನ್ಸೆಲಿಂಗ್ ವಿಭಾಗ ಅಥವಾ ವಾರ್ಡನ್‌ಗಳು ಇದನ್ನು ಗಮನಿಸದೆ ಇದ್ದದ್ದು ಯಾಕೆ..? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಇಲ್ಲಿ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನೂ ಮೀರಿಸುವ ದಾರುಣ ಸನ್ನಿವೇಶವಿದೆ.

ತಾನು ಸಾವಿಗೆ ಶರಣಾಗುವ ಮುನ್ನ ವರ್ಷಿತಾ ತನ್ನ ತಂದೆ-ತಾಯಿಗೆ ಕೊನೆಯದಾಗಿ ಮೊಬೈಲ್ ಮೂಲಕ "I love you dad, i love you mom" ಎಂದು ಮೆಸೇಜ್ ಕಳುಹಿಸಿದ್ದಾಳೆ. ಹೆತ್ತವರ ನೆನಪು ಬಂದ ಮರುಕ್ಷಣವೇ ಆಕೆ ಹಾಸ್ಟೆಲ್‌ನ 6ನೇ ಮಹಡಿಗೆ ತೆರಳಿ ಮೇಲಿಂದ ಕೆಳಗೆ ಹಾರಿದ್ದಾಳೆ. ಕೊನೆಯ ಕ್ಷಣದಲ್ಲಿ ಆಕೆಯನ್ನು ಉಳಿಸಲು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಆದರೆ ಇಷ್ಟೆಲ್ಲಾ ದೊಡ್ಡ ದುರಂತ ನಡೆದರೂ, ಗೀತಮ್ ಕಾಲೇಜು ಆಡಳಿತ ಮಂಡಳಿ ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಜವಾಬ್ದಾರಿಯ ದುರ್ಬಳಕೆಯನ್ನು ತೋರಿಸುತ್ತದೆ.

ಇನ್ನು ಆಡಳಿತ ಮಂಡಳಿಯ ಬೇಜವಾಬ್ದಾರಿ ಇಲ್ಲಿಗೆ ನಿಲ್ಲುವುದಿಲ್ಲ. ಗೀತಮ್ ಕಾಲೇಜಿನಲ್ಲಿ ಇಂತಹ ದುರ್ಮರಣಗಳು ನಡೆಯುತ್ತಿರುವುದು ಇದೇನು ಮೊದಲೇನಲ್ಲ. ಈ ಹಿಂದೆಯೂ ಕೂಡ ಈ ಕಾಲೇಜು ಕ್ಯಾಂಪಸ್‌ನಲ್ಲಿ ಇಂತಹದ್ದೇ ಅನುಮಾನಾಸ್ಪದ ಸಾವುಗಳು ಸಂಭವಿಸಿವೆ. ವಿದ್ಯಾರ್ಥಿಗಳ ಸುರಕ್ಷತೆಗೆ ಕೋಟ್ಯಂತರ ರೂ. ಫೀಸ್ ವಸೂಲಿ ಮಾಡುವ ಮಂಡಳಿಗಳು, ಕ್ಯಾಂಪಸ್ ಒಳಗೆ ಸೂಕ್ತ ಭದ್ರತೆ ಮತ್ತು ಮಾನಸಿಕ ಆರೋಗ್ಯ ಬೆಂಬಲ ನೀಡುವಲ್ಲಿ ವಿಫಲವಾಗುತ್ತಿರುವುದೇಕೆ..? ಕೇವಲ ವ್ಯಾಪಾರೀಕರಣಗೊಂಡ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಜೀವದ ಬೆಲೆ ಸಿಗುವುದಿಲ್ಲವೇ..? ಇತ್ತ ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವರ್ಷಿತಾಳ ತಂದೆ-ತಾಯಿ ಅಕ್ಷರಶಃ ಕುಸಿದು ಬಿದ್ದಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಹೆಣ್ಣುಮಗಳು, ಶವವಾಗಿ ಮರಳುತ್ತಾಳೆ ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ. ಹೆತ್ತವರ ಆಕ್ರಂದನ ನೋಡಿದವರ ಕರುಳು ಚುರುಕು ಎನ್ನುವಂತಿತ್ತು. ಉನ್ನತ ಶಿಕ್ಷಣ ಕೊಡಿಸಿ ದೊಡ್ಡ ಅಧಿಕಾರಿ ಮಾಡಬೇಕಿದ್ದ ಮಗಳು, ಕಾಲೇಜು ಹಾಸ್ಟೆಲ್‌ನ ನಾಲ್ಕು ಗೋಡೆಗಳ ನಡುವೆ ಅಸುನೀಗಿರುವುದು ಆ ಕುಟುಂಬಕ್ಕೆ ಎಂದೂ ಆರದ ಗಾಯವಾಗಿದೆ.  

ಒಟ್ಟಾರೆಯಾಗಿ, ಗೀತಮ್ ಯೂನಿವರ್ಸಿಟಿಯ ನಿರ್ಲಕ್ಷ್ಯ ಧೋರಣೆ ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿದೆ. ಇದಷ್ಟೆ ಅಲ್ಲ ಹಲವಾರು ಸಾವು-ನೋವುಗಳಾದರೂ ನಮಗೆ ಗೊತ್ತಿಲ್ಲ, ನಮ್ಮ ಜವಾಬ್ದಾರಿಯಲ್ಲ ಎಂದು ಜಾರಿಕೊಳ್ಳುವ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಕೇವಲ ಒಂದು ಆತ್ಯಹತ್ಯೆಯಲ್ಲ, ವ್ಯವಸ್ಥಿತ ನಿರ್ಲಕ್ಷ್ಯದಿಂದ ನಡೆದ ಸಾವು. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಉನ್ನತ ಶಿಕ್ಷಣ ಮಂಡಳಿ ಈ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ತನಿಖೆ ನಡೆಸಬೇಕುಎಂಬುದು ಸ್ಥಳೀಯರ ಆಕ್ರೋಶದ  ಒತ್ತಾಯವಾಗಿದೆ.

Add Zee News as a Preferred Source
TAGS:
Crime