ಮಧುಮೇಹ ಇಂದು ಜಗತ್ತಿನಾದ್ಯಂತ ಅನೇಕರನ್ನು ಕಾಡುತ್ತಿರುವ ಗಂಭಿರ ಆರೋಗ್ಯ ಸಮಸ್ಯೆಯಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ಯುವಕರು, ವೃದ್ಧರು ಮಧುಮೇಹ ಎಂಬ ಮಾರಿಗೆ ತುತ್ತಾಗುತ್ತಿದ್ದಾರೆ. ಮಧುಮೇಹ ಜೀವನಶೈಲಿಗೆ ಸಂಬಧಿಸಿದ ಆರೋಗ್ಯ ಸಮಸ್ಯೆ ಆಗಿರುವುದರಿಂದ ಇದನ್ನು ಆಹಾರದ ಮೂಲಕ ಸುಲಭವಾಗಿ ನಿಯಂತ್ರಿಸಬಹುದಾಗಿದೆ.
1/5
ಶುಗರ್ ಕಂಟ್ರೋಲ್
ಕೆಲವು ಮನೆಮದ್ದುಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಿಬಹುದು. ಬ್ಲಡ್ ಶುಗರ್ ನಾರ್ಮಲ್ ಆಗಿರಬೇಕೆಂದರೆ ಈ ಮನೆಮದ್ದನ್ನು ನೀವು ಸಹ ಬಳಸಿ ನೋಡಬಹುದು.
2/5
ಮಧುಮೇಹಕ್ಕೆ ಮನೆಮದ್ದು
ಲವಂಗದಲ್ಲಿ 'ಯುಜೆನಾಲ್' ಎಂಬ ಆಂಟಿಆಕ್ಸಿಡೆಂಟ್ ಇರುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳನ್ನು ಜೀರ್ಣಿಸುವ ಕಿಣ್ವಗಳ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ, ಆ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
3/5
ಬ್ಲಡ್ ಶುಗರ್ ನಿಯಂತ್ರಣಕ್ಕೆ ಲವಂಗ
ಲವಂಗದಲ್ಲಿ ಕಂಡುಬರುವ 'ನೈಜೆರಿಸಿನ್' ನಂತಹ ಸಂಯುಕ್ತಗಳು ದೇಹದ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇದು ಮೇದೋಜೀರಕ ಗ್ರಂಥಿಯ ಜೀವಕೋಶಗಳ ಆರೋಗ್ಯವನ್ನು ಕಾಪಾಡಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4/5
ಲವಂಗ ನೀರು
ಒಂದು ಲೋಟ ನೀರಿಗೆ 3 ರಿಂದ 4 ಲವಂಗಗಳನ್ನು ಹಾಕಿ ರಾತ್ರಿಯಿಡೀ ನೆನೆಯಲು ಬಿಡಿ, ಅಥವಾ ಲವಂಗವನ್ನು ನೀರಿನಲ್ಲಿ ಕುದಿಸಿ. ಬೆಳಿಗ್ಗೆ ಆ ನೀರನ್ನು ಸೋಸಿ, ಸ್ವಲ್ಪ ಬಿಸಿ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಶುಗರ್ ಕಂಪ್ಲೀಟ್ ಕಂಟ್ರೋಲ್‌ನಲ್ಲಿರುತ್ತದೆ.
5/5
ಬ್ಲಡ್ ಶುಗರ್ ಕಂಟ್ರೋಲ್ ಟಿಪ್ಸ್
ಸೂಚನೆ : ಇವೆಲ್ಲವೂ ಸಾಮಾನ್ಯ ಮತ್ತು ಮನೆಮದ್ದುಗಳ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.ಇದಕ್ಕೆ ಜೀ ಕನ್ನಡ ನ್ಯೂಸ್ ಹೊಣೆಯಲ್ಲ.