• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಧ್ರುವ್ ರಾಠಿ ಕಿಡ್ನಾಪ್‌..! ಮನೆಗೆ ನುಗ್ಗಿ ತಾಯಿಯನ್ನು ದೂಡಿ ಅಪಹರಣ ಮಾಡಿದ್ರು ಎಂದ ಯೂಟ್ಯೂಬರ್‌

ಧ್ರುವ್ ರಾಠಿ ಕಿಡ್ನಾಪ್‌..! ಮನೆಗೆ ನುಗ್ಗಿ ತಾಯಿಯನ್ನು ದೂಡಿ ಅಪಹರಣ ಮಾಡಿದ್ರು ಎಂದ ಯೂಟ್ಯೂಬರ್‌

ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೂ ಮುನ್ನ ದೆಹಲಿ ಪೊಲೀಸರು ನಿವಾಸದಿಂದ ಬಲವಂತವಾಗಿ ವಶಕ್ಕೆ ಪಡೆದು, ಶನಿವಾರ ತಡರಾತ್ರಿ ಬಿಡುಗಡೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಧ್ರುವ್‌ ನೀಡಿರುವ ಹೇಳಿಕೆ ಒಂದು ಸಂಚಲನ ಸೃಷ್ಟಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 11, 2026, 08:21 PM IST|Updated: Oct 11, 2026, 08:25 PM IST
joinshare
ಧ್ರುವ್ ರಾಠಿ ಕಿಡ್ನಾಪ್‌..! ಮನೆಗೆ ನುಗ್ಗಿ ತಾಯಿಯನ್ನು ದೂಡಿ ಅಪಹರಣ ಮಾಡಿದ್ರು ಎಂದ ಯೂಟ್ಯೂಬರ್‌
Image Credit: Dhruv Rathee arrest news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

2

ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

3

ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್‌ : ವೆಸ್ಟ್ ಇಂಡೀಸ್‌ಗೆ 223 ರನ್‌ಗಳ ಬೃಹತ್ ಗುರಿ ನೀಡಿದ ಟಿಂ ಇಂಡಿಯಾ

4

ಬಿಗ್‌ಬಾಸ್ ಮನೆಯಿಂದ ಸಂಗೀತಾ ಭಟ್ ಔಟ್‌ : ಕೇವಲ 5 ವಾರಗಳ ಆಟಕ್ಕೆ ನಟಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೆ?

5

ಭಾರತೀಯ ಕ್ರೂಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು : ಐಷಾರಾಮಿ 'ಕಾರ್ಡೆಲಿಯಾ ಸ್ಕೈ' ಲೋಕಾರ್ಪಣೆ.. ವಿಶೇಷತೆ ಏನ್‌ ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವದೆಹಲಿ: ಖ್ಯಾತ ಯೂಟ್ಯೂಬರ್ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ನಿವಾಸದಿಂದ ಬಲವಂತವಾಗಿ ವಶಕ್ಕೆ ಪಡೆದು, ಶನಿವಾರ ತಡರಾತ್ರಿ ಬಿಡುಗಡೆಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಚರ್ಚೆಗೆ ಹಾಗೂ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೂ ಮುನ್ನ ಈ ನಾಟಕೀಯ ಬೆಳವಣಿಗೆ ನಡೆದಿದೆ.

ಮನೆಗೆ ನುಗ್ಗಿ ಎಳೆದಾಡಿದ ಪೊಲೀಸರು - ರಾಠಿ ಗಂಭೀರ ಆರೋಪ
ತಮ್ಮ ಬಂಧನದ ಬಗ್ಗೆ ಸ್ವತಃ ಧ್ರುವ್ ರಾಠಿ ವಿಡಿಯೋ ಬಿಡುಗಡೆ ಮಾಡಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ಬದಲಿಗೆ ಅಪಹರಿಸಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.

"ಬೆಳಗ್ಗಿನ ಜಾವ ಸುಮಾರು 7 ಗಂಟೆಗೆ ನಾನು ಬೆಡ್‌ರೂಂನಲ್ಲಿ ಮಲಗಿದ್ದೆ. ನಾಗರಿಕ ಉಡುಪಿನಲ್ಲಿದ್ದ ಸುಮಾರು 20 ಮಂದಿ ಗೂಂಡಾಗಳಂತೆ ಮನೆಗೆ ನುಗ್ಗಿ, ಬಾಗಿಲು ತೆರೆದ ನನ್ನ ತಾಯಿಯನ್ನು ದೂಡಿದರು. ಯಾವುದೇ ಪೂರ್ವಸೂಚನೆ ಅಥವಾ ಸಮರ್ಪಕ ಕಾರಣ ನೀಡದೆ ನನ್ನನ್ನು ಬಲವಂತವಾಗಿ ಎಳೆದಾಡಿಕೊಂಡು ಹೋದರು. ಪ್ರತಿಭಟನಾ ಸ್ಥಳದಲ್ಲಿ ವಶಕ್ಕೆ ಪಡೆದಿದ್ದರೆ ಅದನ್ನು ಬಂಧನ ಎನ್ನಬಹುದಿತ್ತು, ಆದರೆ ಮಲಗಿದ್ದ ನನ್ನನ್ನು ಮನೆಯಿಂದ ಹಠಾತ್ತನೆ ಕರೆದೊಯ್ದಿರುವುದು ಸ್ಪಷ್ಟ ಅಪಹರಣ" ಎಂದು ಅವರು ಕಿಡಿಕಾರಿದ್ದಾರೆ. ಗುರುಗ್ರಾಮ್‌ನ ಸೆಕ್ಟರ್ 56ರಲ್ಲಿರುವ ಅವರ ನಿವಾಸದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಪೌರತ್ವದ ಬಗ್ಗೆ ಸುಳ್ಳು ವದಂತಿ
ತಮ್ಮ ಪೌರತ್ವದ ಕುರಿತು ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ರಾಠಿ, ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಪ್ರದರ್ಶಿಸಿದ್ದಾರೆ. "ನಾನು ಅಂದೂ ಭಾರತೀಯ ಪ್ರಜೆ, ಇಂದೂ ಭಾರತೀಯ, ಮುಂದೆಯೂ ಭಾರತೀಯನಾಗಿಯೇ ಇರುತ್ತೇನೆ. ಆದರೆ ಕೆಲವರು ನನ್ನ ನಾಗರಿಕತೆಯ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ತಡೆಯಲು ವ್ಯಾಪಕ ಬಂದೋಬಸ್ತ್
ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಕ್ಷ' (ಸಿಜೆಪಿ) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಧ್ರುವ್ ರಾಠಿ ಭಾಗವಹಿಸುವುದನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನಾ ಸ್ಥಳಕ್ಕೆ ತೆರಳಲು ಯತ್ನಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿಯ ವಿವಿಧೆಡೆಗಳಲ್ಲಿ ಒಟ್ಟು 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

Add Zee News as a Preferred Source
TAGS:
India