• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕೊಡಗಿನ ದಸರಾಗೆ ವಿದ್ಯುಕ್ತ ಚಾಲನೆ: ಇಂದಿನಿಂದ 10 ದಿನ ಕರಗೋತ್ಸವದೊಂದಿಗೆ ನಾಡಹಬ್ಬ ವೈಭವ

ಕೊಡಗಿನ ದಸರಾಗೆ ವಿದ್ಯುಕ್ತ ಚಾಲನೆ: ಇಂದಿನಿಂದ 10 ದಿನ ಕರಗೋತ್ಸವದೊಂದಿಗೆ ನಾಡಹಬ್ಬ ವೈಭವ

ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಇಂದು ಕರಗ ಹೊರುವ ಮೂಲಕ ಅದ್ಧೂರಿ ಚಾಲನೆ ದೊರೆತಿದ್ದು, ಮುಂದಿನ 10 ದಿನಗಳ ಕಾಲ ನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 11, 2026, 07:52 PM IST|Updated: Oct 11, 2026, 07:57 PM IST
joinshare
ಕೊಡಗಿನ ದಸರಾಗೆ ವಿದ್ಯುಕ್ತ ಚಾಲನೆ: ಇಂದಿನಿಂದ 10 ದಿನ ಕರಗೋತ್ಸವದೊಂದಿಗೆ ನಾಡಹಬ್ಬ ವೈಭವ
Image Credit: Kodagu Dasara 2026

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

2

ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

3

ಬಿಗ್‌ ಬಾಸ್‌ ಡಬಲ್‌ ಎಲಿಮಿನೇಷನ್‌ ಶಾಕ್‌... ಈ ವಾರ ಮತ್ತೊಬ್ಬ ಸ್ಪರ್ಧಿ ಔಟ್‌! ಅತಿಯಾದ ಮೌನವೇ ಮುಳುವಾಯ್ತಾ?

4

ಧ್ರುವ್ ರಾಠಿ ಕಿಡ್ನಾಪ್‌..! ಮನೆಗೆ ನುಗ್ಗಿ ತಾಯಿಯನ್ನು ದೂಡಿ ಅಪಹರಣ ಮಾಡಿದ್ರು ಎಂದ ಯೂಟ್ಯೂಬರ್‌

5

ಕೊಡಗಿನ ದಸರಾಗೆ ವಿದ್ಯುಕ್ತ ಚಾಲನೆ: ಇಂದಿನಿಂದ 10 ದಿನ ಕರಗೋತ್ಸವದೊಂದಿಗೆ ನಾಡಹಬ್ಬ ವೈಭವ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಡಿಕೇರಿ: ಐತಿಹಾಸಿಕ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರಸಿದ್ಧ ದಸರಾ ಉತ್ಸವಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ದಸರಾ ಪ್ರಯುಕ್ತ ಮಡಿಕೇರಿ ನಗರವು ನವವಧುವಿನಂತೆ ಶೃಂಗಾರಗೊಂಡಿದ್ದು, ಇಡೀ ನಗರ ಹೊಸ ಕಳೆಗಟ್ಟಿದೆ. ಮುಂದಿನ 10 ದಿನಗಳ ಕಾಲ ನಗರದಲ್ಲಿ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.

ಮಡಿಕೇರಿಯ ಪಂಪಿನ ಕೆರೆ ಬಳಿ ನಗರದ ಪ್ರಮುಖ ನಾಲ್ಕು ಶಕ್ತಿದೇವತೆಗಳ ಕರಗಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಸೇರಿದಂತೆ ಪ್ರಮುಖ ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕರಗೋತ್ಸವದ ಹಿನ್ನೆಲೆ ಮತ್ತು ವಿಶೇಷತೆ
ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತಧಾರಿಗಳು, ಹತ್ತು ದಿನಗಳ ಕಾಲ ನಗರದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.

ಕರಗೋತ್ಸವದ ಇತಿಹಾಸ
ಶತಮಾನಗಳ ಹಿಂದೆ ಮಡಿಕೇರಿಯಲ್ಲಿ ಭೀಕರ ಕಾಲರಾ ರೋಗ ಆವರಿಸಿದ್ದ ಸಂದರ್ಭದಲ್ಲಿ, ನಗರದ ದೇವತೆಗಳನ್ನು ಕರಗದ ಮೂಲಕ ಪ್ರದಕ್ಷಿಣೆ ಹಾಕಿ ಪೂಜಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಈ ಕರಗ ಉತ್ಸವವನ್ನು ನಡೆಸಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಕರಗಗಳು ಸಾಗುವ ವೇಳೆ ಭಕ್ತರು ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಿ, ನಾಡಿಗೆ ಶುಭವಾಗಲಿ ಎಂದು ಪ್ರಾರ್ಥಿಸುತ್ತಾರೆ.

ದಶಮಂಟಪಗಳ ಮೆರವಣಿಗೆಯ ನಿರೀಕ್ಷೆ
ಹತ್ತು ದಿನಗಳ ಕಾಲ ಶಕ್ತಿದೇವತೆಗಳ ಆರಾಧನೆ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು, ದಸರಾ ಮಹೋತ್ಸವದ ಕೊನೆಯ ದಿನ ಪ್ರದರ್ಶನಗೊಳ್ಳುವ ಪ್ರಸಿದ್ಧ ದಶಮಂಟಪಗಳ ಉತ್ಸವವು ಎಲ್ಲರನ್ನೂ ಬೆರಗುಗೊಳಿಸಲು ಈಗಿನಿಂದಲೇ ಸಜ್ಜಾಗುತ್ತಿದೆ.

Add Zee News as a Preferred Source
TAGS:
Kannada News