ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
BIG BREAKING NEWS- Noida International Airport in Jewar has been renamed Narendra Modi International Airport. Uttar Pradesh cabinet approved this name change. https://t.co/T6cVfLBr5b
— News Arena India (@NewsArenaIndia) October 9, 2026
ಈ ಕುರಿತಂತೆ ಅಕ್ಟೋಬರ್ 09 (ಶುಕ್ರವಾರ) ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜೆವಾರ್‌ನಲ್ಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು "ರಾಜ್ಯಕ್ಕೆ ಉಡುಗೊರೆಯಾಗಿ" ನೀಡಿದ್ದಕ್ಕಾಗಿ ಯುಪಿ ಕ್ಯಾನಿನೆಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ʼ ನೋಯ್ಡಾ-ಜೆವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣʼ ಎಂದು ಮರು ನಾಮಕರಣ ಮಾಡಲಾಗುವುದು. ಈ ನಿಲ್ದಾಣವು ಭವಿಷ್ಯದಲ್ಲಿ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಲು ಸಜ್ಜಾಗಿದೆ ಎಂದು ಹೇಳಿದರು.
"ಉತ್ತರ ಪ್ರದೇಶ ಸಚಿವ ಸಂಪುಟವು ರಾಜ್ಯಕ್ಕೆ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಜೆವಾರ್)ವನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತದೆ; ಇದು ಉತ್ತರ ಪ್ರದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದ್ದು, ಭವಿಷ್ಯದಲ್ಲಿ ದೇಶದ ಅತಿದೊಡ್ಡ ವಾಯುಯಾನ ಕೇಂದ್ರವಾಗಲಿದೆ. ಪರಿಣಾಮವಾಗಿ, ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು - ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನೋಯ್ಡಾ-ಜೆವಾರ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ ಹೇಳಿದರು.
#WATCH | Lucknow: UP CM Yogi Adityanath says, "...The Uttar Pradesh Council of Ministers is grateful to the Prime Minister for gifting the state the Noida International Airport (Jewar); this is set to become Uttar Pradesh's largest airport and, in the future, the country's largest aviation hub. Consequently, the Council of Ministers has also passed a proposal to rename the Noida International Airport as the 'Narendra Modi International Airport, Noida-Jewar'..."
— ANI (@ANI) October 9, 2026
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಪ್ರಮುಖ ವಾಯುಯಾನ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಈ ವಿಮಾನ ನಿಲ್ದಾಣವನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಜ್ಯೂರಿಚ್ ವಿಮಾನ ನಿಲ್ದಾಣದ ಅಂಗಸಂಸ್ಥೆಯು ಅಭಿವೃದ್ಧಿಪಡಿಸಿದೆ. ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ನಿರ್ಮಿಸಲಾಗಿದೆ ಎಂಬುದು ಗಮನಾರ್ಹವಾಗಿದೆ.
2026ರ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡಿದ್ದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ:
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ 1 ಅನ್ನು ಮಾರ್ಚ್ 28, 2026 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಉದ್ಘಾಟಿಸಿದ್ದರು. ಆದಾಗ್ಯೂ, ಜೂನ್ 15, 2026 ರಿಂದ ಈ ಏರ್‌ಪೋರ್ಟ್‌ನಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆ ಆರಂಭಗೊಂಡಿತು.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ YEIDA ನಗರದ ಜೇವರ್ ಬಳಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಹಂತ 1 ರಲ್ಲಿ ಸುಮಾರು 12 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ವರದಿಯಾಗಿದೆ. ಇದಲ್ಲದೆ, ಮುಂದಿನ 25 ವರ್ಷಗಳಲ್ಲಿ ಇದರ ಸಾಮರ್ಥ್ಯವು 60-120 ಮಿಲಿಯನ್ ಪ್ರಯಾಣಿಕರಿಗೆ ಬೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ವಿಮಾನ ನಿಲ್ದಾಣವನ್ನು ಅಪರಾಧ ತಡೆಗಟ್ಟುವಿಕೆ ಮೂಲಕ ಪರಿಸರ ವಿನ್ಯಾಸ (CPTED) ತತ್ವಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಈ ಏರ್‌ಪೋರ್ಟ್ 350 ಕ್ಕೂ ಹೆಚ್ಚು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳು, ವಿದ್ಯುತ್ ಬೇಲಿಗಳು ಮತ್ತು 24/7 ಕಣ್ಗಾವಲು ಹೊಂದಿರುವ ಏಕೀಕೃತ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ಕೂಡ ಒಳಗೊಂಡಿದೆ ಎಂಬುದು ವಿಶೇಷ.