• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ನೇಪಾಳದಲ್ಲಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಭೀಕರ ಅಪಘಾತ!.. ಓರ್ವ ಭಾರತೀಯ ಸಾ*ವು

ನೇಪಾಳದಲ್ಲಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಭೀಕರ ಅಪಘಾತ!.. ಓರ್ವ ಭಾರತೀಯ ಸಾ*ವು

Nepala helicopters during landing accident :ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನೋಡಲು ಹೋಗಿದ್ದ ಪ್ರವಾಸಿಗರಿಗೆ ಭೀಕರ ಆಘಾತ ಎದುರಾಗಿದೆ. ನೇಪಾಳದ ಎವರೆಸ್ಟ್ ಪರ್ವತದ ಸಮೀಪ ಎರಡು ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಭೀಕರ ಅಪಘಾತದಲ್ಲಿ ಭಾರತೀಯ ಪ್ರವಾಸಿಗರೊಬ್ಬರು ಮೃತಪಟ್ಟಿದ್ದಾರೆ.

Written ByRamya. R. Gowda
Published: Nov 03, 2026, 02:59 PM IST|Updated: Nov 03, 2026, 03:27 PM IST
joinshare
ನೇಪಾಳದಲ್ಲಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಭೀಕರ ಅಪಘಾತ!.. ಓರ್ವ ಭಾರತೀಯ ಸಾ*ವು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ರಾಮಾಯಣ ಟೀಂ.. ಪೈರಸಿಗೆ ಹೈಕೋರ್ಟ್ ಬ್ರೇಕ್!

ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ರಾಮಾಯಣ ಟೀಂ.. ಪೈರಸಿಗೆ ಹೈಕೋರ್ಟ್ ಬ್ರೇಕ್!

2

ನೇಪಾಳದಲ್ಲಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಭೀಕರ ಅಪಘಾತ!.. ಓರ್ವ ಭಾರತೀಯ ಸಾ*ವು

3

ಅನುಮಾನದ ಭೂತಕ್ಕೆ ಬ*ಲಿಯಾದ 3 ಮಕ್ಕಳ ತಾಯಿ: ಕಲಬುರಗಿಯಲ್ಲಿ ಭೀಕರ ಹ*ತ್ಯೆ

4

ಹಾಸನಾಂಬೆ ದರ್ಶನ ಪಡೆದ ಗಣ್ಯರು.. ವಿಶೇಷ ಪೂಜೆ ಸಲ್ಲಿಸಿದ ರಾಜಕೀಯ ನಾಯಕರು, ನಟಿಯರು!

5

"ಸುಳ್ಳು ಆರೋಪ ಕಾಂಗ್ರೆಸ್ಸಿಗರು ಬಹಿರಂಗವಾಗಿ ಕ್ಷಮೆ ಕೇಳಬೇಕು"

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Two nepala helicopters during landing accident : ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನೋಡಲು ಹೋಗಿದ್ದ ಪ್ರವಾಸಿಗರಿಗೆ ಭೀಕರ ಆಘಾತ ಎದುರಾಗಿದೆ. ನೇಪಾಳದ ಎವರೆಸ್ಟ್ ಪರ್ವತದ ಸಮೀಪ ಎರಡು ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಭೀಕರ ಅಪಘಾತದಲ್ಲಿ ಭಾರತೀಯ ಪ್ರವಾಸಿಗರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆ ಗಾಯಗೊಂಡಿದ್ದಾರೆ. ಇಬ್ಬರು ಪೈಲಟ್‌ಗಳಿಗೂ ಗಾಯಗಳಾಗಿವೆ. ಅಷ್ಟಕ್ಕೂ ನಡೆದಿದ್ದೇನು? ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.


ನೇಪಾಳದ ಪರ್ವತ ಪ್ರದೇಶದಲ್ಲಿ ಮತ್ತೊಂದು ಭೀಕರ ಹೆಲಿಕಾಪ್ಟರ್ ದುರಂತ ಸಂಭವಿಸಿದೆ.ಎವರೆಸ್ಟ್ ಪರ್ವತದ ಸಮೀಪವಿರುವ ಸೋಲುಖುಂಬು ಜಿಲ್ಲೆಯ ಫೆರಿಶೆ ಹೆಲಿಪ್ಯಾಡ್‌ನಲ್ಲಿ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ.ಫೈವ್‌ಟೈಲ್ ಏರ್ ಮತ್ತು ಡೈನಾಸ್ಟಿ ಏರ್ ಸಂಸ್ಥೆಗಳಿಗೆ ಸೇರಿದ ಹೆಲಿಕಾಪ್ಟರ್‌ಗಳು ಏಕಕಾಲದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ಈ ಅವಘಡ ಸಂಭವಿಸಿದೆ.ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ಎರಡೂ ಹೆಲಿಕಾಪ್ಟರ್‌ಗಳ ರೋಟರ್ ಬ್ಲೇಡ್‌ಗಳು ಪರಸ್ಪರ ಡಿಕ್ಕಿಯಾಗಿವೆ. ಪರಿಣಾಮ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿವೆ.

ಈ ದುರಂತದಲ್ಲಿ ಭಾರತೀಯ ಪ್ರವಾಸಿಗ ವಸಂತ್ ಕುಮಾರ್ ಬಲರಂಬರಮಡು (47) ಮೃತಪಟ್ಟಿದ್ದಾರೆ.ಇನ್ನು ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆ ಶೈಲೇಶ್ ಕಿಶನ್ ಪಟೇಲ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡೂ ಹೆಲಿಕಾಪ್ಟರ್‌ಗಳ ಪೈಲಟ್‌ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಪೈಲಟ್‌ಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ಕರೆದೊಯ್ಯಲಾಗಿದೆ.ಅಪಘಾತದ ದೃಶ್ಯಗಳು ಬಿಡುಗಡೆಯಾಗಿದ್ದು, ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ವೇಳೆ ಡಿಕ್ಕಿಯಾಗಿರುವ ಭೀಕರತೆ ದೃಶ್ಯಗಳಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

BREAKING: Two helicopters operated by Fishtail Air and Dynasty Air collided while landing at Pheriche helipad in Solukhumbu. Authorities said the helicopters’ rotor blades struck each other during the landing process. Further details about the incident are awaited. Video ©: Webcam Nepal.

— Everest Today (@EverestToday) November 3, 2026

 ಅಷ್ಟಕ್ಕೂ ನೇಪಾಳದ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಹಾರಾಟ ಅಷ್ಟು ಸುಲಭವಲ್ಲ.ನೇಪಾಳದಲ್ಲಿ ವಿಶ್ವದ 14 ಅತಿ ಎತ್ತರದ ಪರ್ವತಗಳ ಪೈಕಿ ಎಂಟು ಪರ್ವತಗಳಿವೆ. ಅದರಲ್ಲೂ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಇರುವುದರಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಮತ್ತು ಪರ್ವತಾರೋಹಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.ಪ್ರವಾಸಿಗರು ಮತ್ತು ಪರ್ವತಾರೋಹಿಗಳ ಸಂಚಾರಕ್ಕೆ ಹೆಲಿಕಾಪ್ಟರ್‌ಗಳೇ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಆದ್ರೆ ಎತ್ತರದ ಪ್ರದೇಶಗಳಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುತ್ತದೆ.

 

 

ಇದರಿಂದ ಹೆಲಿಕಾಪ್ಟರ್‌ಗಳ ರೋಟರ್ ಬ್ಲೇಡ್‌ಗಳಿಗೆ ಅಗತ್ಯವಾದ ಲಿಫ್ಟ್ ಸಿಗುವುದು ಕಷ್ಟವಾಗುತ್ತದೆ. ಎಂಜಿನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವೇಳೆ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿರುತ್ತದೆ.ಇನ್ನು ಇತ್ತೀಚೆಗಷ್ಟೇ ಭಾರತದ ಉತ್ತರಾಖಂಡ್‌ನ ಬದರಿನಾಥ್ ಸಮೀಪವೂ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು.ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಕನ್ನಡಿಗರು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತದಲ್ಲಿ ಪೈಲಟ್ ಕೂಡ ಸಾವನ್ನಪ್ಪಿದ್ದರು.ಇದೀಗ ನೇಪಾಳದ ಎವರೆಸ್ಟ್ ಸಮೀಪ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿರುವುದು ಪರ್ವತ ಪ್ರದೇಶಗಳಲ್ಲಿನ ವೈಮಾನಿಕ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಕಠ್ಮಂಡುವಿನಿಂದ 250 ಕಿ.ಮೀ ದೂರದಲ್ಲಿರುವ ಸೋಲುಖುಂಬುವಿನ ಹೆಲಿಪ್ಯಾಡ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಫೈವ್‌ಟೈಲ್ ಏರ್ ಮತ್ತು ಡೈನಾಸ್ಟಿ ಏರ್‌ನಿಂದ ನಿರ್ವಹಿಸಲ್ಪಡುವ ಹೆಲಿಕಾಪ್ಟರ್‌ಗಳು ಫೆರಿಶೆ ಹೆಲಿಪ್ಯಾಡ್‌ನಲ್ಲಿ ಡಿಕ್ಕಿ ಹೊಡೆದವು.ಎರಡು ಹೆಲಿಕಾಪ್ಟರ್‌ಗಳು ಏಕಕಾಲದಲ್ಲಿ ಹೆಲಿಪ್ಯಾಡ್‌ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎರಡೂ ಹೆಲಿಕಾಪ್ಟರ್‌ಗಳ ಮೇಲಿನ ರೋಟರ್ ಬ್ಲೇಡ್‌ಗಳು ಇಳಿಯುವ ಸ್ವಲ್ಪ ಮೊದಲು ಪರಸ್ಪರ ಡಿಕ್ಕಿ ಹೊಡೆದವು. ಡಿಕ್ಕಿಯ ಸಮಯದಲ್ಲಿ ಎರಡು ಹೆಲಿಕಾಪ್ಟರ್‌ಗಳಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ಇನ್ನೂ ದೃಢಪಟ್ಟಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದರಿಂದ ಹೆಲಿಕಾಪ್ಟರ್‌ಗಳ ರೋಟರ್ ಬ್ಲೇಡ್‌ಗಳಿಗೆ ಅಗತ್ಯವಾದ ಲಿಫ್ಟ್ ಸಿಗುವುದು ಕಷ್ಟವಾಗುತ್ತದೆ. ಎಂಜಿನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವೇಳೆ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿರುತ್ತದೆ.ಇನ್ನು ಇತ್ತೀಚೆಗಷ್ಟೇ ಭಾರತದ ಉತ್ತರಾಖಂಡ್‌ನ ಬದರಿನಾಥ್ ಸಮೀಪವೂ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು.ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಕನ್ನಡಿಗರು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತದಲ್ಲಿ ಪೈಲಟ್ ಕೂಡ ಸಾವನ್ನಪ್ಪಿದ್ದರು.ಇದೀಗ ನೇಪಾಳದ ಎವರೆಸ್ಟ್ ಸಮೀಪ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿರುವುದು ಪರ್ವತ ಪ್ರದೇಶಗಳಲ್ಲಿನ ವೈಮಾನಿಕ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.


ಈ ಸಣ್ಣ ಹೆಲಿಕಾಪ್ಟರ್‌ಗಳನ್ನು ಸಾಮಾನ್ಯವಾಗಿ ನೇಪಾಳದಲ್ಲಿ ಪ್ರವಾಸಿಗರು ಮತ್ತು ಪರ್ವತಾರೋಹಿಗಳನ್ನು ಸಾಗಿಸಲು ಬಳಸಲಾಗುತ್ತದೆ, ಆದರೆ ಸವಾಲಿನ ಭೂಪ್ರದೇಶ ಮತ್ತು ವೇಗವಾಗಿ ಬದಲಾಗುತ್ತಿರುವ ಹವಾಮಾನವು ವಾಯುಯಾನ ಕಾರ್ಯಾಚರಣೆಗಳನ್ನು ಅಪಾಯಕಾರಿಯನ್ನಾಗಿ ಮಾಡುತ್ತದೆ.ವಿಶ್ವದ 14 ಅತಿ ಎತ್ತರದ ಪರ್ವತಗಳಲ್ಲಿ ಎಂಟು ಪರ್ವತಗಳು ನೇಪಾಳದಲ್ಲಿವೆ, ಪ್ರತಿ ವರ್ಷ ಸಾವಿರಾರು ವಿದೇಶಿ ಪರ್ವತಾರೋಹಿಗಳು ಮತ್ತು ಚಾರಣಿಗರನ್ನು ಆಕರ್ಷಿಸುತ್ತವೆ.


ಒಟ್ಟಿನಲ್ಲಿ ಪ್ರವಾಸಿಗರ ಜೀವನಾಡಿಯಾಗಿರುವ ಹೆಲಿಕಾಪ್ಟರ್‌ಗಳೇ ಪರ್ವತ ಪ್ರದೇಶಗಳಲ್ಲಿ ಅಪಾಯಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ದುರ್ಘಟನೆಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ.
 

Add Zee News as a Preferred Source
TAGS:
World News