• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ರಾಮಾಯಣ ಟೀಂ.. ಪೈರಸಿಗೆ ಹೈಕೋರ್ಟ್ ಬ್ರೇಕ್!

ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ರಾಮಾಯಣ ಟೀಂ.. ಪೈರಸಿಗೆ ಹೈಕೋರ್ಟ್ ಬ್ರೇಕ್!

Ramayana Movie piracy issue make court order: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ.. ಸಿನಿಮಾ ರಿಲೀಸ್‌ಗೂ ಮುನ್ನವೇ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ.

Written ByRamya. R. Gowda
Published: Nov 03, 2026, 03:51 PM IST|Updated: Nov 03, 2026, 04:06 PM IST
joinshare
ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ರಾಮಾಯಣ ಟೀಂ.. ಪೈರಸಿಗೆ ಹೈಕೋರ್ಟ್ ಬ್ರೇಕ್!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಒಟಿಟಿಯಲ್ಲಿ 'ಅಯ್ಯನ ಮನೆ 2' ಅಬ್ಬರ: ಜೀ5ನಲ್ಲಿ ಹೊಸ ದಾಖಲೆ

ಒಟಿಟಿಯಲ್ಲಿ 'ಅಯ್ಯನ ಮನೆ 2' ಅಬ್ಬರ: ಜೀ5ನಲ್ಲಿ ಹೊಸ ದಾಖಲೆ

2

ನೋಡೋಕೆ ಅಮಾಯಕರು.. ಆದ್ರೆ ಕಿರಾತಕರು..! ಹಣ ಡಬ್ಲಿಂಗ್‌ ಆಸೆ ತೋರಿಸಿ ಜೀವ ತೆಗೆದ ಕೀಚಕರು

3

ಗೃಹಜ್ಯೋತಿ ಶಾಕ್‌ : 1.70 ಲಕ್ಷ ಮಂದಿಗೆ ಫ್ರೀ ಕರೆಂಟ್‌ ಬಂದ್‌!

4

ಮಹಿಳೆ ಕೈ-ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಕಳ್ಳತನ.. ಕುತ್ತಿಗೆಗೆ ಚಾಕು ಇಟ್ಟು ಎಸ್ಕೇಪ್ ಆಗಲು ಯತ್ನ!

5

ದರ್ಶನ್‌ಗಾಗಿ ದೇವರ ಮೊರೆ ಹೋದ ವಿಜಯಲಕ್ಷ್ಮಿ.. ಬೆನ್ನು ನೋವು ನಿವಾರಣೆಗೆ ಕರಿಕಲ್ಲಮ್ಮಗೆ ವಿಶೇಷ ಪೂಜೆ! ಈ ದೇವಿಯ ವಿಶೇಷತೆ ಏನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ramayana Movie piracy issue make court order: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ.. ಸಿನಿಮಾ ರಿಲೀಸ್‌ಗೂ ಮುನ್ನವೇ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿರುವ ಸಿನಿಮಾ ಪೈರಸಿಯಾಗದಂತೆ ತಡೆಯಲು ನಿರ್ಮಾಪಕರು ಕಾನೂನು ಸಮರಕ್ಕೆ ಇಳಿದಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಹಾಗಾದ್ರೆ ಅಷ್ಟಕ್ಕೂ ಚಿತ್ರತಂಡ ಕೋರ್ಟ್ ಮೊರೆ ಹೋಗಿದ್ದೇಕೆ? ಕೋರ್ಟ್ ನೀಡಿರುವ ಆದೇಶವೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.


ರಾಮಾಯಣ.. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ. ದಂಗಲ್ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದ ಮೇಲೆ ದೇಶಾದ್ಯಂತ ಭಾರೀ ನಿರೀಕ್ಷೆ ಇದೆ. ಆದ್ರೆ ಸಿನಿಮಾ ಬಿಡುಗಡೆಯಾಗುವ ಮೊದಲೇ ಪೈರಸಿ ಭೀತಿ ಚಿತ್ರತಂಡವನ್ನು ಕಾಡಿದೆ.

ಹೀಗಾಗಿ ಚಿತ್ರದ ನಿರ್ಮಾಣ ಕಂಪನಿಗಳಲ್ಲಿ ಒಂದಾದ ಗಾಡ್‌ಪವರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್, ಆನ್‌ಲೈನ್ ಪೈರಸಿಯಿಂದ ಸಿನಿಮಾವನ್ನು ರಕ್ಷಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಚಿತ್ರದ ಪೈರಸಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.

ಇನ್ಮುಂದೆ ರಾಮಾಯಣ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡುವಂತಿಲ್ಲ. ಅನುಮತಿಯಿಲ್ಲದೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತಿಲ್ಲ. ಅಷ್ಟೇ ಅಲ್ಲ, ಅನಧಿಕೃತವಾಗಿ ಸ್ಟ್ರೀಮಿಂಗ್ ಮಾಡುವುದಕ್ಕೂ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಈ ಮೂಲಕ ಸಿನಿಮಾ ಪೈರಸಿ ಮಾಡುವವರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.

ಇನ್ನು ವಿಚಾರಣೆ ವೇಳೆ ನಿರ್ಮಾಪಕರು ಚಿತ್ರದ ಬಜೆಟ್ ಬಗ್ಗೆಯೂ ಮಹತ್ವದ ಮಾಹಿತಿ ನೀಡಿದ್ದಾರೆ. ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇನ್ನು ಎರಡೂ ಭಾಗಗಳ ಒಟ್ಟು ಬಜೆಟ್ ಸುಮಾರು 4 ಸಾವಿರ ಕೋಟಿ ರೂಪಾಯಿ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇಷ್ಟೊಂದು ಬೃಹತ್ ಮೊತ್ತ ಹೂಡಿಕೆ ಮಾಡಿರುವ ಸಿನಿಮಾದಲ್ಲಿ ಪೈರಸಿ ನಡೆದರೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಪ್ರೀಮಿಯರ್ ಶೋ ವೇಳೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಹಾಗೂ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಆದರೂ ಕೆಲವರು ಮೊಬೈಲ್‌ನಲ್ಲಿ ಎರಡು ಟ್ರೇಲರ್‌ಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಮಾಡಿದ್ದರು. ಹೀಗಾಗಿ ಸಿನಿಮಾ ಬಿಡುಗಡೆಯಾದ ಬಳಿಕವೂ ಇದೇ ರೀತಿಯ ಘಟನೆಗಳು ಮರುಕಳಿಸುವ ಸಾಧ್ಯತೆಯಿದೆ. ಇದರಿಂದ ಚಿತ್ರತಂಡಕ್ಕೆ ಭಾರೀ ನಷ್ಟವಾಗಬಹುದು ಎಂದು ನಿರ್ಮಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ರಾಮಾಯಣ ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ಚಿತ್ರತಂಡಕ್ಕೆ ಬಾಂಬೆ ಹೈಕೋರ್ಟ್ ಆದೇಶ ದೊಡ್ಡ ರಿಲೀಫ್ ನೀಡಿದೆ. ಈಗ ಸಿನಿಮಾದ ಅಧಿಕೃತ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್‌ ಫೈರಸಿ ಬಳಿಕ ಎಚ್ಚೇತ ರಾಮಾಯಣ ತಂಡ
ಈ ಹಿಂದೆ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಟಾಕ್ಸಿಕ್‌ ಸಿನಿಮಾ ಪೈರಸಿ ಆಗಿತ್ತು ಇದರಿಂದ ಯಶ್‌ ಅವರು ಭಾರೀ ಬೇಸರ ವ್ಯಕ್ತಪಡಿಸಿದರು. ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾ ಕ್ಲಿಪ್ಸ್‌ಗಳನ್ನು ಪೈರಸಿ ಮಾಡಿ ಹಂಚಿಕೊಳ್ಳಲಾಗಿದೆ ಇದರಿಂದ ಟಾಕ್ಸಿಕ್‌ ಸಿನಿಮಾಗೆ ಹಿನ್ನಡೆ ಆಗಿತ್ತು ಇದೀಗ ರಾಮಯಾಣ ಸಿನಿಮಾ ರಿಲೀಸ್‌ಗೂ ಮುನ್ನವೇ ಪೈರಸಿ ಕಾಟಕ್ಕೆ ಬ್ರೇಕ್ ಹಾಕಲು ಚಿತ್ರತಂಡ ಅಲರ್ಟ್ ಆಗಿದೆ. ಸಿನಿಮಾ ಸೋರಿಕೆ, ಅಕ್ರಮ ಡೌನ್‌ಲೋಡ್ ಹಾಗೂ ಆನ್‌ಲೈನ್‌ನಲ್ಲಿ ಅನಧಿಕೃತವಾಗಿ ಪ್ರಸಾರ ಮಾಡುವುದನ್ನು ತಡೆಯಲು ಕಾನೂನಿನ ಮೊರೆ ಹೋಗಿದೆ.

ಬಿಗ್ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದ ಪ್ರತಿಯೊಂದು ಅಪ್‌ಡೇಟ್‌ಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಸಿನಿಮಾ ಪೈರಸಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಲು ಚಿತ್ರತಂಡ ಮುಂದಾಗಿದೆ.ರಾಮಾಯಣ ಸಿನಿಮಾ ರಿಲೀಸ್‌ಗೂ ಮುನ್ನವೇ ಪೈರಸಿ ವಿರುದ್ಧ ಸಮರ ಸಾರಿರುವ ಚಿತ್ರತಂಡ, ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾದ ಯಾವುದೇ ದೃಶ್ಯ, ಹಾಡು ಅಥವಾ ಕಂಟೆಂಟ್ ಅಕ್ರಮವಾಗಿ ಹರಿದಾಡದಂತೆ ತಡೆಯಲು ಕ್ರಮ ಕೈಗೊಂಡಿದೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಕೋರ್ಟ್ ಮೊರೆ ಹೋಗಿದೆ.

 

 

Add Zee News as a Preferred Source
TAGS:
Sandalwood