• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಮಹಿಳೆ ಕೈ-ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಕಳ್ಳತನ.. ಕುತ್ತಿಗೆಗೆ ಚಾಕು ಇಟ್ಟು ಎಸ್ಕೇಪ್ ಆಗಲು ಯತ್ನ!

ಮಹಿಳೆ ಕೈ-ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಕಳ್ಳತನ.. ಕುತ್ತಿಗೆಗೆ ಚಾಕು ಇಟ್ಟು ಎಸ್ಕೇಪ್ ಆಗಲು ಯತ್ನ!

ಈ ಸಿಸಿಟಿವಿ‌ ದೃಶ್ಯವನ್ನೊಮ್ಮೆ ನೋಡಿ ಡೊಮಿನೊಸ್ ಡಿಲಿವೆರೆ ಬಾಯ್ ಡ್ರೆಸ್ ಹಾಕಿಕೊಂಡೊರೊ ಆಸಾಮಿ ಕೈಗೆ ಗ್ಲೌಸ್,ತಲೆಗೆ ಹೆಲ್ಮೆಟ್ ಹಾಕಿಕೊಂಡು ರಸ್ತೆ ಬದಿಯಲ್ಲಿದ್ದ ಅಂಗಡಿಯೊಳಗೆ ನುಗ್ಗಿದ್ದ.

Written ByChetana Devarmani
Published: Nov 03, 2026, 04:46 PM IST|Updated: Nov 03, 2026, 04:48 PM IST
joinshare
ಮಹಿಳೆ ಕೈ-ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಕಳ್ಳತನ.. ಕುತ್ತಿಗೆಗೆ ಚಾಕು ಇಟ್ಟು ಎಸ್ಕೇಪ್ ಆಗಲು ಯತ್ನ!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಕೆಂಪು ಅಕ್ಕಿಯಲ್ಲಿದೆ ಆರೋಗ್ಯದ ಗುಟ್ಟು.. ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯೇ ಬೆಸ್ಟ್ ಯಾಕೆ?

ಕೆಂಪು ಅಕ್ಕಿಯಲ್ಲಿದೆ ಆರೋಗ್ಯದ ಗುಟ್ಟು.. ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯೇ ಬೆಸ್ಟ್ ಯಾಕೆ?

2

ಜಿಬಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

3

ಬಾಕ್ಸ್‌ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ ಶುರು : ಮುಂಗಡ ಬುಕಿಂಗ್‌ನಲ್ಲೇ 73 ಕೋಟಿ ಗಳಿಕೆ

4

ಒಟಿಟಿಯಲ್ಲಿ 'ಅಯ್ಯನ ಮನೆ 2' ಅಬ್ಬರ: ಜೀ5ನಲ್ಲಿ ಹೊಸ ದಾಖಲೆ

5

ನೋಡೋಕೆ ಅಮಾಯಕರು.. ಆದ್ರೆ ಕಿರಾತಕರು..! ಹಣ ಡಬ್ಲಿಂಗ್‌ ಆಸೆ ತೋರಿಸಿ ಜೀವ ತೆಗೆದ ಕೀಚಕರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಅದು ಸಿನಿಮಾ ಶೂಟಿಂಗ್ ಅನ್ನೇ ಮೀರಿಸುವಂತಹ ದೃಶ್ಯ.ನೋಡಿದ್ರೆ ಎಂತವರಾದ್ರು ಒಂದು ಕ್ಷಣ ಬೆಚ್ಚಿ ಬೀಳ್ತಾರೆ.ಎದೆ ಝಲ್ಲೆನ್ನುತ್ತೆ.ಮಹಿಳೆಯರಂತು ನಡುಗಿ ಹೋಗ್ತಾರೆ.ಮೈಮೇಲೆ ಚಿನ್ನಾಭರಣ ಹಾಕಿಕೊಳ್ಳೋಕು ಮುಂಚೆ ಒಂದು ಕ್ಷಣ ಯೋಚಿಸ್ತಾರೆ.ಯಾಕಂದ್ರೆ ಆಸಾಮಿಯೊಬ್ಬ ಮೆರೆದ ಅಟ್ಟಹಾಸ ಆ ರೀತಿಯಾಗಿದೆ.ಹಾಗಾದ್ರೆ ಅಂಥದ್ದೇನಾಯ್ತು ಅಂತಾ ತೋರಿಸ್ತೀವಿ ನೋಡಿ.

ಈ ಸಿಸಿಟಿವಿ‌ ದೃಶ್ಯವನ್ನೊಮ್ಮೆ ನೋಡಿ ಡೊಮಿನೊಸ್ ಡಿಲಿವೆರೆ ಬಾಯ್ ಡ್ರೆಸ್ ಹಾಕಿಕೊಂಡೊರೊ ಆಸಾಮಿ ಕೈಗೆ ಗ್ಲೌಸ್,ತಲೆಗೆ ಹೆಲ್ಮೆಟ್ ಹಾಕಿಕೊಂಡು ರಸ್ತೆ ಬದಿಯಲ್ಲಿದ್ದ ಅಂಗಡಿಯೊಳಗೆ ನುಗ್ಗಿದ್ದ. ಹೀಗೆ ಹೋದವನು ಮಹಿಳೆಯ ಕೈ ಕಾಲು‌ ಕಟ್ಟಿ ಹಾಕಿ ಎಸ್ಕೇಪ್ ಆಗಲು ಹೈಡ್ರಾಮಾವನ್ನೇ ಮಾಡಿದ್ದಾನೆ.ಸಿನಿಮಾ ಸ್ಟೈಲ್ ನಲ್ಲಿ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಆದ್ರೆ ಕೊನೆಗೂ ಸಾರ್ವಜನಿಕರ ಕೈಗೆ ಸಿಕ್ಕಾಕಿಕೊಂಡು.ಹಣ್ಣುಗಾಯಿ ನೀರುಗಾಯಿ ಆಗಿದ್ದ.ಆದ್ರೆ ಆತನ ಕೃತ್ಯ ಮಾತ್ರ ನಿಜಕ್ಕೂ ಬೆಚ್ಚಿ ಬೀಳುವಂತಿದೆ.

ಈತನ ಹೆಸರು ಪ್ರಭುರಾಜ್..ಈತನ ಅಟ್ಟಹಾಸಕ್ಕೆ ಜಯಶ್ರೀ ಎಂಬ 23 ವರ್ಷದ ಮಹಿಳೆ ನಲುಗಿ ಹೋಗಿದ್ದಾಳೆ.ಅಷ್ಟಕ್ಕೂ ಆಗಿದ್ದೇನು ಅಂದ್ರೆ,ಇಂದಿರಾನಗರ 100 ಫೀಟ್ ರಸ್ತೆಯಲ್ಲಿರುವ ಪ್ರೀಮಿಯಂ ಶೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಬೆಳಗ್ಗೆ 10 ಗಂಟೆಗೆ ಬಂದು ಎಂದಿನಂತೆ ಅಂಗಡಿ ಓಪನ್ ಮಾಡಿದ್ದಾಳೆ.11.45 ರ ಸುಮಾರಿಗೆ ಹೆಲ್ಮೆಟ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ಬಂದ ಪ್ರಭುರಾಜ್ ಯಾರೋ ನನ್ನನ್ನು ಸಾಯಿಸಲು ಬರ್ತಿದ್ದಾರೆ ಕಿರುಚಬೇಡಿ ಎಂದು ಕೇಳಿಕೊಂಡಿದ್ದ.ಒಂದೇ ಕ್ಷಣದಲ್ಲಿ ಮಹಿಳೆ ಕುಳಿತಿದ್ದ ರಿಸೆಪ್ಷನಿಸ್ಟ್ ಕೌಂಟರ್‌ಗೆ ಜಂಪ್ ಮಾಡಿದ್ದ. ಭಯಗೊಂಡ ಮಹಿಳೆ ತಮ್ಮ ಮಾಲೀಕರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾಳೆ.ಅಷ್ಟರಲ್ಲಾಗಲೇ ಆಕೆಯನ್ನ ಕೆಳಗೆ ಕೂರಿಸಿ,ಬಾಯಿಯನ್ನು ಕೈಗಳಿಂದ ಮುಚ್ಚಿ ಆತನ ಬ್ಯಾಗಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇಟ್ಟು,ಕಿರುಚಾಡಿದ್ರೆ ಇಲ್ಲಿಯೇ ಸಾಯಿಸಿ ಬಿಡುತ್ತೇನೆಂದು ಹೆದರಿಸಿದ್ದಾನೆ.

ಬಳಿಕ ಆತನ ಬಳಿಯಿದ್ದ ಪೆವಿಕ್ವಿಕ್‌ನಿಂದ ಮಹಿಳೆ ಎರಡು ಕೈಗಳಿಗೆ ಹಚ್ಚಿ ಡೆಸ್ಕ್‌ಗೆ ಅಂಟಿಸಿದ್ದಾನೆ.‌ಡೆಸ್ಕ್ ಮೇಲಿದ್ದ ಬಟ್ಟೆಯನ್ನ ತೆಗೆದುಕೊಂಡು ಬಾಯಿಗೆ ತುರುಕಿ, ಮತ್ತೆ ಚಾಕುವನ್ನು ಕುತ್ತಿಗೆಗೆ ಇಟ್ಟಿದ್ದ.‌ ಕುತ್ತಿಗೆ ಹಾಗೂ ಕೈಗೆ ಚಾಕುವಿನಿಂದ ಹಲ್ಲೆ ಮಾಡಿ,ಮಹಿಳೆಯ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ,ಕಿತ್ತುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ..

ಮಹಿಳೆ  ಕೈಗಳನ್ನು ಫೆವಿಕ್ವಿಕ್‌ನಿಂದ ಬಿಡಿಸಿಕೊಂಡು,ಜೋರಾಗಿ ಕಿರುಚಾಡಿದಾಗ ಸಾರ್ವಜನಿಕರು ಅಂಗಡಿ ಬಳಿ ಬಂದಿದ್ದಾರೆ.ಈ ವೇಳೆ ಆತ ಮತ್ತೆ ಮಹಿಳೆ ಕೂದಲನ್ನು ಹಿಡಿದು ಅಂಗಡಿ ಒಳಗೆ ಎಳೆದುಕೊಂಡು ಹೋಗಿ,ಅಲ್ಲಿದ್ದ ಸಾರ್ವಜನಿಕರಿಗೆ ತನ್ನನ್ನು ಯಾರು ತಡೆಯಬೇಡಿ.ಯಾರಾದ್ರು ಮುಂದೆ ಬಂದ್ರೆ ಈಕೆಯ ಕತ್ತು ಕೊಯ್ದುಬಿಡೋದಾಗಿ ಹೆದರಿಸಿದ್ದು,ಜನರು ಕೂಡ ಮಹಿಳೆಯನ್ನ ಬಿಟ್ಟು ಆಟೋದಲ್ಲಿ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ.ಆದ್ರು ಜನರ ಮಾತನ್ನು ನಂಬದ ಆಸಾಮಿ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು. ಆಟೋವರೆಗೆ ಎಳೆದುಕೊಂಡೇ ಹೋಗಿದ್ದಾನೆ.ಈ‌ ದೃಶ್ಯ ಮಾತ್ರ ಸಿನಿಮಾ ಕ್ರೈಂ ಸೀನ್ ಅನ್ನೇ ಮೀರಿಸುವಂತಿತ್ತು.
ಅಷ್ಟರಲ್ಲಾಗಲೇ ಹತ್ತಿರ ಬಂದ ಸ್ಥಳೀಯರು ಆತನನ್ನ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ..

ಸದ್ಯ ಆರೋಪಿಯನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು,ಆತನ ಹಿನ್ನೆಲೆ ಕಲೆ ಹಾಕುತ್ತಿದ್ದಾರೆ.ಮೇಲ್ನೋಟಕ್ಕೆ ಪ್ರಭುರಾಜ್ ಮಾನಸಿಕ ಅಸ್ವಸ್ಥನ ರೀತಿ ಕಾಣ್ತಿದ್ದಾನೆ ಎಂದು ಪೊಲೀಸ್ ಮೂಲ ತಿಳಿಸಿದೆ.ಆತ ಯಾರು.. ಯಾಕಾಗಿ ಈ ಕೆಲಸ ಮಾಡಿದ್ದ ಅನ್ನೋದು‌ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
 

Add Zee News as a Preferred Source