• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /‘ಸರ್ದಾರ್ ಪಟೇಲರ ಮತ ಕದ್ದು ನೆಹರೂ ಪ್ರಧಾನಿಯಾದರು’: ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!

‘ಸರ್ದಾರ್ ಪಟೇಲರ ಮತ ಕದ್ದು ನೆಹರೂ ಪ್ರಧಾನಿಯಾದರು’: ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!

ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತೀವ್ರ ತಿರುಗೇಟು ನೀಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ದೊರೆತಿದ್ದ ಬೆಂಬಲವನ್ನ ಕಡೆಗಣಿಸಿ ಜವಾಹರಲಾಲ್ ನೆಹರೂ ಪ್ರಧಾನಿಯಾದರು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸಿದ ಸಾಂಕೇತಿಕ ಜನ ಮಹಾಭಿಯೋಗ ಕಾರ್ಯಕ್ರಮವನ್ನೂ ಅವರು ಟೀಕಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನ ಸಮರ್ಥಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ನ ಮತಗಳ್ಳತನ ಆರೋಪಗಳನ್ನ ತಳ್ಳಿಹಾಕಿದೆ.

Written ByPuttaraj K Alur
Published: Oct 31, 2026, 10:23 PM IST|Updated: Oct 31, 2026, 10:36 PM IST
joinshare
‘ಸರ್ದಾರ್ ಪಟೇಲರ ಮತ ಕದ್ದು ನೆಹರೂ ಪ್ರಧಾನಿಯಾದರು’: ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!
Image Credit: BJP vs Congress

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
‘ಸರ್ದಾರ್ ಪಟೇಲರ ಮತ ಕದ್ದು ನೆಹರೂ ಪ್ರಧಾನಿಯಾದರು’: ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!

‘ಸರ್ದಾರ್ ಪಟೇಲರ ಮತ ಕದ್ದು ನೆಹರೂ ಪ್ರಧಾನಿಯಾದರು’: ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!

2

ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

3

SBI FD: 444 ದಿನಗಳ ಎಫ್‌ಡಿಯಲ್ಲಿ ₹2.50 ಲಕ್ಷ ಹೂಡಿಕೆ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ?

4

ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ

5

ರೈತರ ಕಲ್ಯಾಣಕ್ಕಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ : ಸಚಿವ ರಘುಮೂರ್ತಿ ಸಮರ್ಥನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

BJP vs Congress: ದೇಶದಲ್ಲಿ ಮತಗಳ್ಳತನ ನಡೆಯುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ದೊರೆಯಬೇಕಿದ್ದ ಪ್ರಧಾನಿ ಹುದ್ದೆಯನ್ನ ಕಸಿದುಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಸದ ಹಾಗೂ ವಕ್ತಾರ ಸಂಬಿತ್ ಪಾತ್ರ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದು, ಸ್ವತಂತ್ರ ಭಾರತದ ಮೊದಲ ಮತಗಳ್ಳತನ ನಡೆದಿದ್ದೇ ನೆಹರೂ ಅವರ ಕಾಲದಲ್ಲಿ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಬಿಜೆಪಿ ಪ್ರತಿದಾಳಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ದೆಹಲಿಯಲ್ಲಿ ಸಾಂಕೇತಿಕ ‘ಜನ ಮಹಾಭಿಯೋಗ’ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಆರೋಪಗಳನ್ನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಬಿತ್ ಪಾತ್ರ, ಕಾಂಗ್ರೆಸ್ ಮಾಡುತ್ತಿರುವ ಮತಗಳ್ಳತನದ ಆರೋಪಗಳಿಗೆ ತಿರುಗೇಟು ನೀಡಿದರು. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸಂದರ್ಭವನ್ನ ಉಲ್ಲೇಖಿಸಿದ ಅವರು, ದೇಶದ ಇತಿಹಾಸದಲ್ಲಿ ಮೊದಲ ಮತಗಳ್ಳತನ ನಡೆಸಿದ್ದು ನೆಹರೂ ಎಂದು ಆರೋಪಿಸಿದರು.

‘ಪಟೇಲ್ ಪರವಾಗಿದ್ದ ಮತಗಳನ್ನ ಕಸಿದುಕೊಳ್ಳಲಾಯಿತು’

ಕಾಂಗ್ರೆಸ್‌ನ ಹಿರಿಯ ನಾಯಕರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನ ಬೆಂಬಲಿಸಿ ಮತ ಚಲಾಯಿಸಿದ್ದರು. ಆದರೆ ಆ ಮತಗಳನ್ನ ಕಸಿದುಕೊಳ್ಳುವ ಮೂಲಕ ನೆಹರೂ ಪ್ರಧಾನಿ ಹುದ್ದೆಗೇರಿದರು ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಪಟೇಲ್ ಅವರಿಗೆ ದೊರೆತಿದ್ದ ಬೆಂಬಲವನ್ನ ಕಡೆಗಣಿಸಿ ನೆಹರೂ ಪ್ರಧಾನಿಯಾದರು ಎಂಬುದು ಬಿಜೆಪಿ ನಾಯಕನ ವಾದವಾಗಿದೆ. ನೆಹರೂ ಅವರನ್ನ ಜನರಿಂದ ಆಯ್ಕೆಯಾಗದ ಪ್ರಧಾನಿ ಎಂದು ಸಂಬಿತ್ ಪಾತ್ರ ಟೀಕಿಸಿದ್ದಾರೆ. ಇವು ಬಿಜೆಪಿ ನಾಯಕರು ಮಾಡಿರುವ ರಾಜಕೀಯ ಆರೋಪಗಳಾಗಿದ್ದು, ಐತಿಹಾಸಿಕವಾಗಿ ಸಾಬೀತಾದ ಮತಗಳ್ಳತನದ ಘಟನೆ ಎಂದು ಪರಿಗಣಿಸಬಾರದು.

ಇಂಡಿಯಾ ಮೈತ್ರಿಕೂಟದ ಜನ ಮಹಾಭಿಯೋಗಕ್ಕೆ ಟೀಕೆ

ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಸಿದ ಸಾಂಕೇತಿಕ ಜನ ಮಹಾಭಿಯೋಗ ಕಾರ್ಯಕ್ರಮವನ್ನೂ ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸಂಸತ್ತಿನ ಮಾದರಿಯಲ್ಲಿ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಸಂಸದೀಯ ವ್ಯವಸ್ಥೆಯನ್ನ ಅಪಹಾಸ್ಯ ಮಾಡುತ್ತಿವೆ ಅಂತಾ ಸಂಬಿತ್ ಪಾತ್ರ ಆರೋಪಿಸಿದರು. ಖರ್ಗೆ ಅವರ ನಿವಾಸದಲ್ಲಿ ನಡೆದ ಸಾಂಕೇತಿಕ ಜನ ಸಂಸತ್ ಕಾರ್ಯಕ್ರಮವನ್ನ ರಾಜಕೀಯ ನಾಟಕ ಎಂದು ಕರೆದ ಅವರು, ನೈಜ ಸಂಸತ್ತಿನ ಕಾರ್ಯವಿಧಾನವನ್ನ ಗೌರವಿಸುವ ಬದಲು ಇಂತಹ ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ವಿರುದ್ಧವೂ ಬಿಜೆಪಿ ವಾಗ್ದಾಳಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಬಿಜೆಪಿ ಟೀಕೆಗೆ ಗುರಿಪಡಿಸಿದೆ. ವಿರೋಧ ಪಕ್ಷಗಳು ಅಣಕು ಸಂಸತ್ ನಡೆಸುವುದಾದರೆ ರಾಹುಲ್ ಗಾಂಧಿ ಅವರನ್ನ ಅಣಕು ಪ್ರಧಾನಿಯನ್ನಾಗಿ ಘೋಷಿಸಿಕೊಳ್ಳಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ. ಚುನಾವಣೆಗಳಲ್ಲಿ ಎದುರಾಗುತ್ತಿರುವ ಸೋಲುಗಳಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

13.2 ಕೋಟಿ ಮತದಾರರ ಹೆಸರುಗಳ ವಿಚಾರದಲ್ಲಿ ವಾಗ್ವಾದ

ಮತದಾರರ ಪಟ್ಟಿಯಿಂದ ಸುಮಾರು 13.2 ಕೋಟಿ ಹೆಸರುಗಳನ್ನ ತೆಗೆದುಹಾಕಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನೂ ಸಂಬಿತ್ ಪಾತ್ರ ತಳ್ಳಿಹಾಕಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ (SIR) ಕುರಿತು ಮಾತನಾಡಿದ ಅವರು, ಪಟ್ಟಿಯಲ್ಲಿ ಹೆಸರುಗಳು ಇಲ್ಲದಿರುವುದನ್ನ ನೇರವಾಗಿ ಮತಗಳ್ಳತನವೆಂದು ಕರೆಯಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದರು. ಚುನಾವಣಾ ಆಯೋಗದ ಪರಿಶೀಲನಾ ಪ್ರಕ್ರಿಯೆಯಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ನೋಂದಣಿಗಳಂತಹ ಅಂಶಗಳನ್ನ ಪರಿಶೀಲಿಸಲಾಗುತ್ತದೆ ಎಂದು ವಿವರಿಸಿದರು.

ASDD ಸೂತ್ರದ ಬಗ್ಗೆ ಸಂಬಿತ್ ಪಾತ್ರ ವಿವರಣೆ

ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಬಳಸಲಾಗುವ ASDD ವಿಧಾನವನ್ನ ಉಲ್ಲೇಖಿಸಿದ ಸಂಬಿತ್ ಪಾತ್ರ, ‘A’ ಎಂದರೆ ಗೈರುಹಾಜರಿ (Absent) ಎಂದು ತಿಳಿಸಿದರು. ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ಮೂರು ಬಾರಿ ಭೇಟಿ ನೀಡುತ್ತಾರೆ. ಆ ಸಂದರ್ಭಗಳಲ್ಲಿ ಮತದಾರರು ಲಭ್ಯವಾಗದಿದ್ದರೆ ಅವರನ್ನ ಗೈರುಹಾಜರಾದವರ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ ಎಂದು ಹೇಳಿದರು. ಅದೇ ರೀತಿ, ‘S’ ಎಂದರೆ ಸ್ಥಳಾಂತರಗೊಂಡವರು (Shifted) ಎಂಬ ಅರ್ಥ ಹೊಂದಿದೆ. ಶಾಶ್ವತವಾಗಿ ಬೇರೆಡೆಗೆ ವಾಸಸ್ಥಳ ಬದಲಾಯಿಸಿದವರ ವಿವರಗಳನ್ನ ನಿಯಮಾನುಸಾರ ಪರಿಶೀಲಿಸಲಾಗುತ್ತದೆ ಎಂದು ವಿವರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಸಮರ್ಥನೆ

ಎಸ್‌ಐಆರ್ ಪ್ರಕ್ರಿಯೆಯನ್ನ ಸಮರ್ಥಿಸಿಕೊಂಡ ಸಂಬಿತ್ ಪಾತ್ರ, ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಈ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ಕೋಟ್ಯಂತರ ಮತದಾರರ ಹೆಸರುಗಳನ್ನ ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಆಧಾರವೇನು ಎಂದು ಪ್ರಶ್ನಿಸಿದ ಅವರು, ಅಷ್ಟೊಂದು ಮತದಾರರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದ್ದರೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದವು ಎಂದು ವಾದಿಸಿದರು. ಮತದಾರರ ಪಟ್ಟಿ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಗಳನ್ನ ಮಾಡುತ್ತಿವೆ ಎಂದು ಬಿಜೆಪಿ ಟೀಕಿಸಿದೆ.

ಒಟ್ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸಿದ ಸಾಂಕೇತಿಕ ಜನ ಮಹಾಭಿಯೋಗ ಕಾರ್ಯಕ್ರಮದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತಗಳ್ಳತನದ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ಅವರ ನಾಯಕತ್ವದ ವಿಚಾರವನ್ನ ಪ್ರಸ್ತಾಪಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದೆ.

Add Zee News as a Preferred Source
TAGS:
Kannada News