SOCIAL MEDIA

Newsletter

PARTNER SITES
Select Language Select State

ಶಾಲೆಗೆ ನುಗ್ಗಿ ವಿದ್ಯಾರ್ಥಿನಿ ಮುಖವನ್ನೇ ಕ*ತ್ತರಿಸಿದ ಕ್ರೂರಿ..! ಕೊನೆಗೂ ಬಯಲಾಯ್ತು ಘಟನೆಯ ರಹಸ್ಯ.. ಆಗಿದ್ದೇನು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಇಡೀ ಸಮಾಜವೇ ತಲೆತಗ್ಗಿಸುವ ಹಾಗೂ ಬೆಚ್ಚಿಬೀಳಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಪ್ರೇಮ ನಿರಾಕರಿಸಿದನೆಂಬ ಕಾರಣಕ್ಕೆ ಪಾಪಿ ಯುವಕನೊಬ್ಬ ನೇರವಾಗಿ ಶಾಲಾ ತರಗತಿ ಕೊಠಡಿಯೊಳಗೆ ನುಗ್ಗಿ, 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮರ ಕತ್ತರಿಸುವ ವಿದ್ಯುತ್ ಚೈನ್‌ಸಾದಿಂದ (Chainsaw) ಮನಬಂದಂತೆ ದಾಳಿ ನಡೆಸಿ ರಕ್ತಪಾತ ಸೃಷ್ಟಿಸಿದ್ದಾನೆ.

Written By Krishna NK
Published: Oct 31, 2026, 03:20 PM IST | Updated: Oct 31, 2026, 03:24 PM IST
Image Credit: Crime News
Join

Anantapur School girl case : ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲ ಕೇಂದ್ರದಲ್ಲಿರುವ 'ಜಿಲ್ಲಾ ಪರಿಷತ್ ಪ್ರೌಢಶಾಲೆ'ಯಲ್ಲಿ (ZP High School) ಶುಕ್ರವಾರ ಈ ದುರ್ಘಟನೆ ಸಂಭವಿಸಿದೆ. ದಾಳಿಗೊಳಗಾದ ಬಾಲಕಿಯನ್ನು 10ನೇ ತರಗತಿಯ ವಿದ್ಯಾರ್ಥಿನಿ ಗೋಪಿಕಾ ಎಂದು ಗುರುತಿಸಲಾಗಿದ್ದು, ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಆರೋಪಿಯನ್ನು ಬಾಲಕಿಯ ದೂರದ ಸೋದರ ಸಂಬಂಧಿ ಹೇಮಂತ್ ಎಂದು ಪೊಲೀಸರು ತಿಳಿಸಿದ್ದು, ಈಗಾಗಲೇ ಆತನನ್ನು ಬಂಧಿಸಲಾಗಿದೆ.

ತರಗತಿಯಲ್ಲೇ ನುಗ್ಗಿ ದುಷ್ಕೃತ್ಯ
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೈಯಲ್ಲಿ ಮರ ಕತ್ತರಿಸುವ ಅತ್ಯಂತ ಅಪಾಯಕಾರಿ ಚೈನ್‌ಸಾ ಹಿಡಿದು ಶಾಲೆಗೆ ಬಂದ ಆರೋಪಿ ಹೇಮಂತ್, ನೇರವಾಗಿ ಗೋಪಿಕಾ ಕುಳಿತಿದ್ದ ತರಗತಿ ಕೊಠಡಿಗೆ ನುಗ್ಗಿದ್ದಾನೆ. ಒಳಗೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೋಡನೋಡುತ್ತಿದ್ದಂತೆ ಆತ ತನ್ನ ವಿಕೃತಿ ಮೆರೆದಿದ್ದಾನೆ. ಕೈಯಲ್ಲಿದ್ದ ಚೈನ್‌ನಿಂದ ಗೋಪಿಕಾಳ ಮುಖ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಈ ಭೀಕರ ದಾಳಿಯಿಂದಾಗಿ ಬಾಲಕಿಯ ಮುಖ ಭಾಗ ಗಂಭೀರವಾಗಿ ಹಾನಿಯಾಗಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಕೊಠಡಿಯಲ್ಲೇ ಕುಸಿದುಬಿದ್ದಿದ್ದಾಳೆ. ಈ ವೇಳೆ ಹೇಮಂತ್‌ನನ್ನು ತಡೆಯಲು ಮುಂದಾದ ಮತ್ತೊಬ್ಬ ಸಹಪಾಠಿ ವಿದ್ಯಾರ್ಥಿನಿ ಲಕ್ಷ್ಮಿ ಎಂಬವರಿಗೂ ಗಾಯಗಳಾಗಿವೆ. ವಿದ್ಯಾರ್ಥಿಗಳ ಚೀರಾಟ ಕೇಳಿ ಶಿಕ್ಷಕರು ಓಡಿಬರುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಪ್ರಸ್ತುತ ಆತನನ್ನು ಧರ್ಮಾವರಂನಲ್ಲಿ ಬಂಧಿಸಲಾಗಿದೆ.

ಪ್ರೇಮದ ಕಿರುಕುಳಕ್ಕೆ ಬಲಿಯಾದ ಬಾಲಕಿ
ಆರೋಪಿ ಹೇಮಂತ್ ಸಂತ್ರಸ್ತೆ ಗೋಪಿಕಾಳ ದೂರದ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ಸಮಯದಿಂದ ಆಕೆಗೆ 'ಒನ್‌ಸೈಡ್‌ ಲವ್‌' ಹೆಸರಿನಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಆತನ ಈ ವರ್ತನೆಯಿಂದ ರೋಸಿಹೋದ ಗೋಪಿಕಾ, ತನ್ನಿಂದ ದೂರವಿರುವಂತೆ ಹಾಗೂ ಇಲ್ಲದಿದ್ದರೆ ಮನೆಯಲ್ಲಿ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಹೇಮಂತ್, ಹೇಗಾದರೂ ಮಾಡಿ ಆಕೆಯನ್ನು ಮುಗಿಸಬೇಕೆಂದುಕೊಂಡು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆ ನಡೆದ ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗೋಪಿಕಾ ಮತ್ತು ಗಾಯಗೊಂಡ ಲಕ್ಷ್ಮಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಗೋಪಿಕಾ ಅವರ ಆರೋಗ್ಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳ ಮೂಲಕ ತಲಾಶ್ ನಡೆಸಿದ್ದರು. ಅಂತಿಮವಾಗಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಬಳಿ ತಲೆಮರೆಸಿಕೊಂಡಿದ್ದ ನರರೂಪ ರಾಕ್ಷಸ ಹೇಮಂತ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಲೆಯ ಆವರಣದಲ್ಲೇ ನಡೆದ ಈ ಹೈಡ್ರಾಮಾ ಘಟನೆಯಿಂದಾಗಿ ಆ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡಿದ್ದಾರೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ
ಶಾಲಾ ಕೊಠಡಿಯಲ್ಲೇ ಬಾಲಕಿ ಮೇಲೆ ನಡೆದಿರುವ ಈ ಅಮಾನವೀಯ ದಾಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಘಾತ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿರುವ ಸಿಎಂ, ಗಾಯಾಳು ವಿದ್ಯಾರ್ಥಿನಿಗೆ ಅತ್ಯುನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಆರೋಪಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES