• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /MG ವಿಂಡ್ಸರ್ ಇಂಡಲ್ಜ್ EV ಲಾಂಚ್‌! 332 ಕಿ.ಮೀ ರೇಂಜ್, ಐಷಾರಾಮಿ ಫೀಚರ್ಸ್‌ಗೆ ಮನಸೋತ ಗ್ರಾಹಕರು

MG ವಿಂಡ್ಸರ್ ಇಂಡಲ್ಜ್ EV ಲಾಂಚ್‌! 332 ಕಿ.ಮೀ ರೇಂಜ್, ಐಷಾರಾಮಿ ಫೀಚರ್ಸ್‌ಗೆ ಮನಸೋತ ಗ್ರಾಹಕರು

JSW ಎಂಜಿ ಮೋಟಾರ್ ಇಂಡಿಯಾ ಬೆಂಗಳೂರಿನಲ್ಲಿ ಐಷಾರಾಮಿ MG ವಿಂಡ್ಸರ್ ಇಂಡಲ್ಜ್ ಎಡಿಷನ್ ಎಲೆಕ್ಟ್ರಿಕ್ ಕಾರನ್ನ ಬಿಡುಗಡೆ ಮಾಡಿದೆ. ₹17,99,800 ಎಕ್ಸ್‌ಶೋರೂಂ ಬೆಲೆಯ ಈ ಕಾರು 38kWh ಬ್ಯಾಟರಿ ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 332 ಕಿ.ಮೀ ರೇಂಜ್ ನೀಡುತ್ತದೆ. 136 ಪಿಎಸ್ ಪವರ್, 200Nm ಟಾರ್ಕ್, 135 ಡಿಗ್ರಿವರೆಗೆ ಒರಗುವ ಏರೋ ಲೌಂಜ್ ಆಸನಗಳು, 15.6 ಇಂಚಿನ ಟಚ್‌ಸ್ಕ್ರೀನ್ ಹಾಗೂ ಹಿಂಬದಿ ಪ್ರಯಾಣಿಕರಿಗೆ ಪ್ರೈವ್ ಸ್ಕ್ರೀನ್ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಶ್ಯಾಡೋ ಗೋಲ್ಡ್ ಬಾಡಿ ಮತ್ತು ಕಪ್ಪು ರೂಫ್‌ನ ಡ್ಯುಯಲ್‌-ಟೋನ್ ವಿನ್ಯಾಸ ಕಾರಿನ ಆಕರ್ಷಣೆಯನ್ನ ಹೆಚ್ಚಿಸಿದೆ.

Written ByPuttaraj K Alur
Published: Oct 31, 2026, 05:13 PM IST|Updated: Oct 31, 2026, 05:24 PM IST
joinshare
MG ವಿಂಡ್ಸರ್ ಇಂಡಲ್ಜ್ EV ಲಾಂಚ್‌! 332 ಕಿ.ಮೀ ರೇಂಜ್, ಐಷಾರಾಮಿ ಫೀಚರ್ಸ್‌ಗೆ ಮನಸೋತ ಗ್ರಾಹಕರು
Image Credit: MG Windsor EV

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ : ಪ್ರತಿ ಟನ್‌ಗೆ 5,500 ರೂ.ಗೆ ಆಗ್ರಹ

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ : ಪ್ರತಿ ಟನ್‌ಗೆ 5,500 ರೂ.ಗೆ ಆಗ್ರಹ

2

ರೈಲ್ವೆ ಇಲಾಖೆಯಲ್ಲಿ 1,215 ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ! ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ

3

ಬೆಂಗಳೂರಿಗರ ಗಮನಕ್ಕೆ..! ದೀಪಾವಳಿ ಹಬ್ಬಕ್ಕೆ ಕಟ್ಟನಿಟ್ಟಿನ ಮಾರ್ಗಸೂಚಿ ಬಿಡುಗಡೆ

4

ಯಶಸ್ ಜೊತೆ ಫಿಕ್ಸ್ ಗೇಮ್ ಸೌಂದರ್ಯ ಅಸಲಿ ಬಣ್ಣ ಬಯಲು ಮಾಡಿದ್ರಾ ಕಿಚ್ಚ?

5

MG ವಿಂಡ್ಸರ್ ಇಂಡಲ್ಜ್ EV ಲಾಂಚ್‌! 332 ಕಿ.ಮೀ ರೇಂಜ್, ಐಷಾರಾಮಿ ಫೀಚರ್ಸ್‌ಗೆ ಮನಸೋತ ಗ್ರಾಹಕರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

MG Windsor EV: JSW ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ವಿಂಡ್ಸರ್‌ನ ಐಷಾರಾಮಿ ಆವೃತ್ತಿಯಾದ MG Windsor Indulge Edition EVಯನ್ನ ಬಿಡುಗಡೆ ಮಾಡಿದೆ. ಬಿಸಿನೆಸ್‌ ಕ್ಲಾಸ್‌ ಪ್ರಯಾಣದ ಆರಾಮವನ್ನ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ವಿಶೇಷ ಆವೃತ್ತಿಯು ಆಕರ್ಷಕ ವಿನ್ಯಾಸ, ಪ್ರೀಮಿಯಂ ಒಳಾಂಗಣ ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಆದ್ಯತೆ ನೀಡುವ ಹಲವು ವೈಶಿಷ್ಟ್ಯಗಳನ್ನ ಹೊಂದಿದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 332 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಈ ಕಾರಿನ ಎಕ್ಸ್‌ಶೋರೂಂ ಬೆಲೆ ₹17,99,800 ಎಂದು ತಿಳಿಸಲಾಗಿದೆ.

332 ಕಿ.ಮೀ ರೇಂಜ್ ನೀಡುವ ಎಲೆಕ್ಟ್ರಿಕ್ ಕಾರು

ಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್‌ನಲ್ಲಿ 38kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಇದು 100kW ಪವರ್, ಅಂದರೆ 136 ಪಿಎಸ್ ಶಕ್ತಿ ಹಾಗೂ 200Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಕಾರು ಪೂರ್ಣ ಚಾರ್ಜ್‌ನಲ್ಲಿ 332 ಕಿಲೋಮೀಟರ್‌ಗಳವರೆಗೆ ಸಂಚರಿಸಬಹುದು. ನಗರದ ದೈನಂದಿನ ಪ್ರಯಾಣದ ಜೊತೆಗೆ ದೂರದ ಪ್ರಯಾಣಕ್ಕೂ ಅನುಕೂಲವಾಗುವಂತೆ ಈ ಕಾರನ್ನ ರೂಪಿಸಲಾಗಿದೆ. ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಂಜಿ ಮೋಟಾರ್ ಈ ವಿಶೇಷ ಆವೃತ್ತಿಯನ್ನ ಪರಿಚಯಿಸಿದೆ.

ಎರಡು ಬಣ್ಣಗಳ ಸಂಯೋಜನೆಯ ಆಕರ್ಷಕ ವಿನ್ಯಾಸ 

MG Windsor Indulge Edition ಹೊರಭಾಗದಲ್ಲಿ ವಿಶಿಷ್ಟವಾದ ಡ್ಯುಯಲ್‌-ಟೋನ್ ಬಣ್ಣಗಳ ವಿನ್ಯಾಸವನ್ನ ಹೊಂದಿದೆ. ಶ್ಯಾಡೋ ಗೋಲ್ಡ್ ಬಣ್ಣದ ಬಾಡಿ ಮತ್ತು ಕಪ್ಪು ಬಣ್ಣದ ರೂಫ್ ಕಾರಿಗೆ ವಿಭಿನ್ನ ನೋಟ ನೀಡುತ್ತವೆ. ಇದರ ಜೊತೆಗೆ ಕಪ್ಪು ಬಣ್ಣದ ORVMಗಳು, R18 ಗಾತ್ರದ ಕಪ್ಪು ಅಲಾಯ್ ವೀಲ್‌ಗಳು ಹಾಗೂ C-ಪಿಲ್ಲರ್ ಮೇಲಿನ ವಿಶೇಷ ‘INDULGE’ ಬ್ಯಾಡ್ಜ್ ಕಾರಿನ ಪ್ರೀಮಿಯಂ ವಿನ್ಯಾಸವನ್ನ ಮತ್ತಷ್ಟು ಎತ್ತಿ ತೋರಿಸುತ್ತವೆ. ಸಾಮಾನ್ಯ ವಿಂಡ್ಸರ್ ಮಾದರಿಗಿಂತ ವಿಭಿನ್ನ ಗುರುತನ್ನ ನೀಡುವ ಉದ್ದೇಶದಿಂದ ಈ ಆವೃತ್ತಿಯಲ್ಲಿ ವಿಶೇಷ ವಿನ್ಯಾಸದ ಅಂಶಗಳನ್ನ ಅಳವಡಿಸಲಾಗಿದೆ.

ಕ್ಯಾಬಿನ್‌ನಲ್ಲಿ ಐಷಾರಾಮಿ ಅನುಭವ

ಕಾರಿನ ಒಳಾಂಗಣದಲ್ಲಿ ಅರ್ಬನ್ ಟ್ಯಾನ್ ಮತ್ತು ಬ್ಲ್ಯಾಕ್ ಬಣ್ಣಗಳ ಅಪ್‌ಹೋಲ್ಸ್ಟರಿ ವಿನ್ಯಾಸ ನೀಡಲಾಗಿದೆ. ಇದು ಕ್ಯಾಬಿನ್‌ಗೆ ಆಧುನಿಕ ಹಾಗೂ ಪ್ರೀಮಿಯಂ ನೋಟವನ್ನ ಒದಗಿಸುತ್ತದೆ. ಮುಂಭಾಗದ ಸೀಟುಗಳ ಹೆಡ್‌ರೆಸ್ಟ್‌ಗಳಲ್ಲಿ ವಿಶೇಷ ‘INDULGE’ ಎಂಬ್ರಾಯ್ಡರಿ ನೀಡಲಾಗಿದ್ದು, ಈ ಆವೃತ್ತಿಯ ವಿಶಿಷ್ಟತೆಯನ್ನ ಎತ್ತಿ ತೋರಿಸುತ್ತದೆ. ಹಿಂಬದಿ ಸೀಟಿನಲ್ಲಿ ಪ್ರಯಾಣಿಸುವವರ ಅನುಕೂಲಕ್ಕೂ ವಿಶೇಷ ಗಮನ ನೀಡಲಾಗಿದೆ. 
ಎರಡನೇ ಸಾಲಿನ ಪ್ರಯಾಣಿಕರಿಗೆ ‘ಪ್ರೈವ್ ಸ್ಕ್ರೀನ್’ ಅನ್ನ ಪ್ರಮಾಣಿತ ವೈಶಿಷ್ಟ್ಯವಾಗಿ ಒದಗಿಸಲಾಗಿದೆ. ಇದು ಹಿಂಬದಿ ಪ್ರಯಾಣಿಕರಿಗೆ ಹೆಚ್ಚುವರಿ ಗೌಪ್ಯತೆ ಹಾಗೂ ಮನರಂಜನೆಯ ಅನುಭವ ನೀಡುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಇಂಡಲ್ಜ್ ಥೀಮ್‌ಗೆ ಹೊಂದುವ ಕುಶನ್‌ಗಳು ಮತ್ತು ಕುತ್ತಿಗೆಯ ದಿಂಬುಗಳನ್ನ ನೀಡಲಾಗಿದೆ. ಇವು ಪ್ರಯಾಣದ ವೇಳೆ ಹೆಚ್ಚುವರಿ ಆರಾಮ ಒದಗಿಸುವುದರ ಜೊತೆಗೆ ಕ್ಯಾಬಿನ್‌ನ ಐಷಾರಾಮಿ ಅನುಭವವನ್ನ ಹೆಚ್ಚಿಸುತ್ತವೆ.

135 ಡಿಗ್ರಿ ಒರಗುವ ಆಸನಗಳು, 15.6 ಇಂಚಿನ ಟಚ್‌ಸ್ಕ್ರೀನ್

MG Windsor ಕಾರಿನ ಪ್ರಮುಖ ಆಕರ್ಷಣೆಗಳಲ್ಲಿ ವಿಶಾಲವಾದ ಒಳಾಂಗಣ ಮತ್ತು ಆರಾಮದಾಯಕ ಆಸನ ವ್ಯವಸ್ಥೆ ಸೇರಿವೆ. ಸೆಡಾನ್‌ನ ವಿಶಾಲತೆ ಮತ್ತು ಸೌಕರ್ಯವನ್ನ SUV ಮಾದರಿಯ ಬಹುಮುಖತೆಯೊಂದಿಗೆ ಸಂಯೋಜಿಸುವ ವಿನ್ಯಾಸ ತತ್ವವನ್ನ ಈ ಕಾರು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಇದರ ಏರೋ ಲೌಂಜ್ ಆಸನಗಳನ್ನ 135 ಡಿಗ್ರಿಗಳವರೆಗೆ ಒರಗಿಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕವಾಗಿ ಕುಳಿತುಕೊಳ್ಳಲು ಅನುಕೂಲವಾಗುತ್ತದೆ.

ಕ್ಯಾಬಿನ್‌ನಲ್ಲಿ 15.6 ಇಂಚಿನ ಗ್ರ್ಯಾಂಡ್ ವ್ಯೂ ಟಚ್‌ಸ್ಕ್ರೀನ್ ಡಿಸ್‌ಪ್ಲೇ ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿ ಸಂಯೋಜಿಸಿರುವ ಈ ದೊಡ್ಡ ಪರದೆಯು ವಾಹನದ ಒಳಾಂಗಣದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಆಸನಗಳ ವಿನ್ಯಾಸದಿಂದ ಹಿಡಿದು ಡಿಸ್‌ಪ್ಲೇ ವ್ಯವಸ್ಥೆಯವರೆಗೆ ಪ್ರಯಾಣಿಕರ ಅನುಭವಕ್ಕೆ ಆದ್ಯತೆ ನೀಡಲಾಗಿದೆ.

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮತ್ತೊಂದು ಹೆಜ್ಜೆ

JSW ಎಂಜಿ ಮೋಟಾರ್ ಇಂಡಿಯಾದ ವಾಣಿಜ್ಯ ಅಧಿಕಾರಿ ವಿನಯ್ ರೈನಾ ಅವರ ಪ್ರಕಾರ, ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನ ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವ ಬಗ್ಗೆ ಆರಂಭದಲ್ಲಿ ಹಿಂಜರಿಕೆ ಹೊಂದಿದ್ದ ಗ್ರಾಹಕರಿಗೂ ಇದು ಹೊಸ ಆಯ್ಕೆಯನ್ನ ಒದಗಿಸಿದೆ ಎಂದು ಅವರು ಹೇಳಿದ್ದಾರೆ. ವಿಂಡ್ಸರ್ ಈಗಾಗಲೇ ಸಾಧಿಸಿರುವ ಯಶಸ್ಸಿನ ಹಿನ್ನೆಲೆಯಲ್ಲಿ, ವಿಶೇಷ ವಿನ್ಯಾಸ ಮತ್ತು ಸುಧಾರಿತ ಕ್ಯಾಬಿನ್ ಅನುಭವದೊಂದಿಗೆ ಇಂಡಲ್ಜ್ ಆವೃತ್ತಿಯನ್ನ ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Add Zee News as a Preferred Source
TAGS:
Tech
Kannada News