• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಮಹಾಕಾಣಿಕೆ! ಬರೋಬ್ಬರಿ ₹160 ಕೋಟಿ ಮೌಲ್ಯದ ಆಭರಣ ಸಮರ್ಪಣೆ

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಮಹಾಕಾಣಿಕೆ! ಬರೋಬ್ಬರಿ ₹160 ಕೋಟಿ ಮೌಲ್ಯದ ಆಭರಣ ಸಮರ್ಪಣೆ

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ತೂಕದ ಚಿನ್ನದ ಆಭರಣಗಳನ್ನ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಸುಮಾರು ₹160 ಕೋಟಿ ಮೌಲ್ಯದ ಈ ಆಭರಣಗಳಲ್ಲಿ ಕಿರೀಟ, ಪದ್ಮಪಾದಗಳು, ಸೊಂಟದ ಆಭರಣ ಸೇರಿದಂತೆ ಒಟ್ಟು 45 ಆಭರಣಗಳಿವೆ. ನವೆಂಬರ್ 26ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಕಾಣಿಕೆ ಹಸ್ತಾಂತರಿಸಲಾಗಿದೆ. ಶುಕ್ರವಾರದ ಅಭಿಷೇಕದ ಬಳಿಕ ಸ್ವಾಮಿಗೆ ಈ ಹೊಸ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ ಎಂದು ವರದಿಯಾಗಿದೆ.

Written ByPuttaraj K Alur
Published: Nov 26, 2026, 16:34 IST|Updated: Nov 26, 2026, 16:46 IST
joinshare
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಮಹಾಕಾಣಿಕೆ! ಬರೋಬ್ಬರಿ ₹160 ಕೋಟಿ ಮೌಲ್ಯದ ಆಭರಣ ಸಮರ್ಪಣೆ
Image Credit: Tirumala Temple

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಮಹಾಕಾಣಿಕೆ! ಬರೋಬ್ಬರಿ ₹160 ಕೋಟಿ ಮೌಲ್ಯದ ಆಭರಣ ಸಮರ್ಪಣೆ

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಮಹಾಕಾಣಿಕೆ! ಬರೋಬ್ಬರಿ ₹160 ಕೋಟಿ ಮೌಲ್ಯದ ಆಭರಣ ಸಮರ್ಪಣೆ

2

ವಾರ್ಷಿಕ ವೇತನ ಶೇ.6 ಹೆಚ್ಚಳ, OPS ಮರುಜಾರಿ ಸೇರಿ 8ನೇ ವೇತನ ಆಯೋಗದ ಮುಂದೆ 13 ಪ್ರಮುಖ ಬೇಡಿಕೆ!

3

ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

4

ಗೆಳೆಯನ ಸಾ*ವು, 500 ರೂ. ನೋಟಿನಲ್ಲಿ ಡೆ*ತ್‌ ರಹಸ್ಯ..! ಗಗನ್‌ ಕಥೆ ಕೇಳಿ ಸ್ಪರ್ಧಿಗಳು ಭಾವುಕ

5

IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

121 Kg Gold Donation: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ತೂಕದ ಚಿನ್ನದ ಆಭರಣಗಳನ್ನ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಸುಮಾರು ₹160 ಕೋಟಿ ಮೌಲ್ಯದ ಈ ಬೃಹತ್ ಕಾಣಿಕೆ ತಿರುಮಲ ತಿರುಪತಿ ದೇವಸ್ಥಾನಗಳ (TTD) ಇತಿಹಾಸದಲ್ಲೇ ಭಕ್ತರೊಬ್ಬರಿಂದ ವೈಯಕ್ತಿಕವಾಗಿ ಬಂದ ಅತಿದೊಡ್ಡ ಕಾಣಿಕೆಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ನವೆಂಬರ್ 26ರಂದು ಈ ಚಿನ್ನಾಭರಣಗಳನ್ನ ದೇವಸ್ಥಾನದ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಈ ಚಿನ್ನದ ಕಾಣಿಕೆ ದೇಶದಾದ್ಯಂತ ಗಮನ ಸೆಳೆದಿದೆ. ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಕುಟುಂಬದೊಂದಿಗೆ ಈ ಕಾಣಿಕೆಯನ್ನ ಸಮರ್ಪಿಸಿದ್ದಾರೆ ಎಂದು ವರದಿಯಾಗಿದೆ.  

45 ಚಿನ್ನದ ಆಭರಣಗಳ ವಿಶೇಷ ಸಂಗ್ರಹ

ಈ ಬೃಹತ್ ಕಾಣಿಕೆಯಲ್ಲಿ ಒಟ್ಟು 45 ಚಿನ್ನದ ಆಭರಣಗಳಿದ್ದು, ಅವುಗಳನ್ನ ಒಂಬತ್ತು ಪ್ರತ್ಯೇಕ ಸೆಟ್‌ಗಳಾಗಿ ಸಿದ್ಧಪಡಿಸಲಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ಅಲಂಕರಿಸಲು ಅನುಕೂಲವಾಗುವಂತೆ ವಿಶೇಷ ವಿನ್ಯಾಸದಲ್ಲಿ ಈ ಆಭರಣಗಳನ್ನ ತಯಾರಿಸಲಾಗಿದೆ. ದೇವರನ್ನ ಶಿರದಿಂದ ಪಾದದವರೆಗೆ ಅಲಂಕರಿಸುವ ಉದ್ದೇಶದಿಂದ ಆಭರಣಗಳನ್ನ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗ್ರಹದಲ್ಲಿ ಶ್ರೀವಾರಿ ಕಿರೀಟ, ಪದ್ಮಪಾದಗಳು, ಸೊಂಟದ ಆಭರಣ, ಭುಜದ ಆಭರಣಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಆಭರಣಗಳು ಸೇರಿವೆ. ಶಂಖ ಮತ್ತು ಚಕ್ರದ ಆಕೃತಿಯ ಆಭರಣಗಳು ಹಾಗೂ ಅಭಯ ಹಸ್ತದ ಅಲಂಕಾರಗಳೂ ಈ ಸಂಗ್ರಹದಲ್ಲಿವೆ. ಆಗಮ ಶಾಸ್ತ್ರದ ಸಂಪ್ರದಾಯಗಳು ಮತ್ತು ಟಿಟಿಡಿಯ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಇವುಗಳನ್ನ ವಿನ್ಯಾಸಗೊಳಿಸಲಾಗಿದೆ. ಚೆನ್ನೈ ಮೂಲದ ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ ಈ ಚಿನ್ನಾಭರಣಗಳನ್ನ ವಿಶೇಷವಾಗಿ ತಯಾರಿಸಲಾಗಿದೆ. ಬಳಿಕ ಬಿಗಿ ಭದ್ರತೆಯೊಂದಿಗೆ ಅವುಗಳನ್ನ ತಿರುಮಲಕ್ಕೆ ಸಾಗಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನಾಭರಣಗಳನ್ನ ಸುರಕ್ಷಿತವಾಗಿ ದೇವಸ್ಥಾನಕ್ಕೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.

ರಂಗನಾಯಕುಳ ಮಂಟಪದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ

ಚಿನ್ನದ ಆಭರಣಗಳನ್ನ ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ತಿರುಮಲದ ರಂಗನಾಯಕುಳ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲು ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷವಾಗಿ ಪ್ಲೈವುಡ್ ಪ್ರದರ್ಶನ ರ‍್ಯಾಕ್‌ಗಳನ್ನ ನಿರ್ಮಿಸಲಾಗಿದೆ. ನಿಗದಿತ ಕಾರ್ಯಕ್ರಮದ ಪ್ರಕಾರ, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ನವೆಂಬರ್ 26ರಂದು ತಿರುಪತಿಗೆ ಆಗಮಿಸಿ, ಬಳಿಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ನಂತರ ನಡೆದ ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದಾನಿಯು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಚಿನ್ನಾಭರಣಗಳನ್ನ ಅಧಿಕೃತವಾಗಿ ಹಸ್ತಾಂತರಿಸಿದರು.

ಶುಕ್ರವಾರ ಸ್ವಾಮಿಗೆ ಹೊಸ ಆಭರಣಗಳ ಅಲಂಕಾರ

 

121 KILOS OF GOLD. 160 CRORE. ONE DEVOTEE’S OFFERING TO LORD VENKATESWARA! The mystery donor behind the staggering offering at Tirumala is Chennai-based industrialist Vardhaman Jain, Co-founder and Vice Chairman of Access Healthcare. A Loyola College alumnus and University of Texas graduate, Jain has built a global business while pursuing philanthropy. He also serves as Managing Trustee of Kanchi Kamakoti CHILDS Trust Hospital, supporting healthcare for underprivileged children. A remarkable gesture of faith and gratitude.

— Rahul Shivshankar (@RShivshankar) November 26, 2026

 ವರದಿಯ ಪ್ರಕಾರ, ಶುಕ್ರವಾರ ನಡೆಯಲಿರುವ ಅಭಿಷೇಕದ ಬಳಿಕ ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ಹೊಸ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ದೇವರ ದೈನಂದಿನ ಪೂಜೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವ ಉದ್ದೇಶದಿಂದ ಆಭರಣಗಳನ್ನ ಸಿದ್ಧಪಡಿಸಲಾಗಿದೆ. ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನವು ದೇಶದ ಪ್ರಮುಖ ಹಿಂದೂ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ವರ್ಷಪೂರ್ತಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

 

RS 206-Crore Gold Offering to #LordVenkateswara! #Chennai-based Jain couple Vardhaman and Radhika Jain donated 121 kg of gold ornaments, studded with precious diamonds and valued at Rs 206 crore, to Lord Venkateswara at #Tirumala. The donation includes gold jewellery studded with valuable diamonds. CM #ChandrababuNaidu witnessed the donation and announced TTD’s support for 5,000 temples across #AndhraPradesh, alongside initiatives in annadanam, healthcare, education and environmental conservation. #AndhraPradesh

— Ashish (@KP_Aashish) November 26, 2026

 ಭಕ್ತರು ತಮ್ಮ ಹರಕೆ ಮತ್ತು ಭಕ್ತಿಯ ಭಾಗವಾಗಿ ನಗದು, ಚಿನ್ನ, ಆಭರಣ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನ ಕಾಣಿಕೆಯಾಗಿ ಅರ್ಪಿಸುತ್ತಾರೆ. ಇಂತಹ ಕಾಣಿಕೆಗಳನ್ನ ಸ್ವೀಕರಿಸಿ ನಿರ್ವಹಿಸುವ ಜವಾಬ್ದಾರಿಯನ್ನ ಟಿಟಿಡಿ ಹೊಂದಿದೆ. ಒಟ್ನಲ್ಲಿ 121 ಕೆಜಿ ಚಿನ್ನದ ಆಭರಣಗಳ ಈ ಬೃಹತ್ ಕಾಣಿಕೆ ತಿರುಮಲ ದೇವಸ್ಥಾನದ ಗಮನಾರ್ಹ ದೇಣಿಗೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಿರೀಟದಿಂದ ಹಿಡಿದು ಪಾದದ ಆಭರಣಗಳವರೆಗೆ ವಿವಿಧ ವಿನ್ಯಾಸಗಳಲ್ಲಿ ಸಿದ್ಧಪಡಿಸಿರುವ ಈ ಚಿನ್ನದ ಸಂಗ್ರಹ ಇದೀಗ ಭಕ್ತರ ಗಮನ ಸೆಳೆದಿದೆ.

 

Add Zee News as a Preferred Source
TAGS:
Kannada News