SOCIAL MEDIA

Newsletter

PARTNER SITES
Select Language Select State

ಮೈಸೂರು ದಸರಾ 2026: ದಸರಾ ಆನೆಗಳು & ಕುದುರೆಗಳಿಗೆ ಯಶಸ್ವಿಯಾಗಿ ಮುಕ್ತಾಯಗೊಂಡ 3ನೇ ಹಂತದ ಕುಶಾಲತೋಪು ತಾಲೀಮು

ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಹಾಗೂ ಕುದುರೆಗಳಿಗೆ ಮೂರನೇ ಹಂತದ ಫಿರಂಗಿ ಸದ್ದು/ ಕುಶಾಲತೋಪು ತಾಲೀಮು ಯಶಸ್ವಿ ಆಗಿದೆ.

Written By Yashaswini V
Published: Oct 12, 2026, 12:51 PM IST | Updated: Oct 12, 2026, 12:53 PM IST
Join

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಗಜಪಡೆಯ ಸಮ್ಮುಖದಲ್ಲಿ ಕುಶಾಲತೋಪುಗಳನ್ನು ಸಿಡಿಸುವ 3ನೇ ಹಂತದ ತಾಲೀಮು ಇಂದು ಯಶಸ್ವಿ ಆಗಿದೆ.

ಏನಿದು ಕುಶಾಲತೋಪು ತಾಲೀಮು?
ಫಿರಂಗಿಗಳ ಮುಖಾಂತರ ಹೊರ ಬರುವ ಭಾರೀ ಶಬ್ದದ ಅಬ್ಬರಕ್ಕೆ ಆನೆಗಳು ಹಾಗೂ ಕುದುರೆಗಳು ಹೆದರದಂತೆ ಅಭ್ಯಾಸಿಸಲು ದಸರಾ ಮಹೋತ್ಸವಕ್ಕೂ ಮುನ್ನವೇ ಗಜಪಡೆ ಹಾಗೂ ಅಶ್ವದಳಕ್ಕೆ ನಡೆಸಲಾಗುವ ಅಭ್ಯಾಸವೇ ಕುಶಾಲತೋಪು ತಾಲೀಮು.

ದಸರಾ ಆನೆಗಳು, ಕುದುರೆಗಳಿಗೆ ಕುಶಾಲತೋಪು ತಾಲೀಮು ಏಕೆ ಮುಖ್ಯ?
ಕುಶಾಲತೋಪು ಎಂದರೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಜಂಬೂಸವಾರಿ ಮೆರವಣಿಗೆಯ ದಿನ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡುತ್ತಾರೆ. ಬಳಿಕ ರಾಷ್ಟ್ರಗೀತೆ ನುಡಿಸಲಾಗುತ್ತದೆ. ರಾಷ್ಟ್ರಗೀತೆ ಮುಗಿಯುವುದರ ಒಳಗೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಫಿರಂಗಿಗಳಿಂದ ಭಾರೀ ಶಬ್ಧ ಹೊರಹೊಮ್ಮುತ್ತದೆ. ಆ ಬಳಿಕ ಚಿನ್ನದ ಅಂಬಾರಿ ಹೊತ್ತ ಆನೆ ಮೆರವಣಿಗೆ ಮಾರ್ಗದತ್ತ ಸಾಗುತ್ತದೆ. ಈ ಹಿನ್ನಲೆಯಲ್ಲಿ ಜಂಬೂಸವಾರಿ ದಿನ ಸಂಪ್ರದಾಯದಂತೆ ಸಿಡಿಸಲಾಗುವ ಫಿರಂಗಿ ಸದ್ದಿಗೆ ಗಜಪಡೆ ಹಾಗೂ ಅಶ್ವಾರೋಹಿ ದಳ ಅಂಜದಂತೆ ಸಿದ್ದಪಡಿಲು ಕುಶಾಲತೋಪಿನ ಪೂರ್ವಾಭ್ಯಾಸ ಮಾಡಿಸಲಾಗುತ್ತದೆ.  

ಜಂಬೂಸವಾರಿ ಸಂದರ್ಭದಲ್ಲಿ ಕುಶಾಲತೋಪಿನ ಅಬ್ಬರಕ್ಕೆ ದಸರಾದಲ್ಲಿ ಪಾಲ್ಗೊಳುವ ಗಜಪಡೆ ಹಾಗೂ ಅಶ್ವಾರೋಹಿ ದಳದ ಕುದುರೆಗಳು ಬೆದರದಂತೆ ಈ ರೀತಿ ವಿಶೇಷ ತಾಲೀಮು ನಡೆಸಲಾಗುತ್ತದೆ. ಇದರ ಭಾಗವಾಗಿ, ದಸರಾ ಗಜಪಡೆಯ ಸಮ್ಮುಖದಲ್ಲಿ ಈ ದಿನ ನಡೆಸಲಾದ ಕುಶಾಲತೋಪುಗಳನ್ನು ಸಿಡಿಸುವ 3ನೇ ಹಂತದ ತಾಲೀಮು ಯಶಸ್ವಿ ಆಗಿದೆ.

ಇಂದು ಮೈಸೂರು ವಸ್ತುಪ್ರದರ್ಶನದ ಆವರಣದಲ್ಲಿ ಅರಣ್ಯ ಇಲಾಖೆಯ ಸಿಎಫ್ ರವಿಶಂಕರ್, ಡಿಸಿಎಫ್ ಪ್ರಭುಗೌಡ, ಸಿಎಆರ್ ಡಿಸಿಪಿ ಸಿದ್ದ‌ನಗೌಡ ವೈ ಪಾಟೀಲ್ ಸಮ್ಮುಖದಲ್ಲಿ ನಡೆದ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ ಆಗಿದ್ದು, ಈ ತಾಲೀಮಿನಲ್ಲಿ ದಸರಾ ಗಜಪಡೆಯ 11 ಆನೆಗಳು, ಅಶ್ವಾರೋಹಿ ದಳದ 43 ಕುದುರೆಗಳು, ನಗರ ಸಶಸ್ತ್ರ ಮೀಸಲು ಪಡೆಯ 35 ಮಂದಿ ಸಿಬ್ಬಂದಿಗಳು ಭಾಗಿ ಆಗಿದ್ದರು ಎನ್ನಲಾಗಿದೆ.

ಕುಶಾಲತೋಪು ತಾಲೀಮಿಗೆ ಶ್ರೀಕಂಠ, ಏಕಲವ್ಯ ಗೈರು!
ರಾಜಮನೆತನದ ಖಾಸಗಿ ದಸರಾದಲ್ಲಿ ಶ್ರೀಕಂಠ, ಏಕಲವ್ಯ ಆನೆಗಳು ಭಾಗಿಯಾದ ಹಿನ್ನೆಲೆಯಲ್ಲಿ ಇಂದು ನಡೆದ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮಿಗೆ ಶ್ರೀಕಂಠ ಹಾಗೂ ಏಕಲವ್ಯ ಆನೆಗಳು ಗೈರಾಗಿದ್ದವು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸಿಎಆರ್ ಸಿಬ್ಬಂದಿ ಏಳು ಫಿರಂಗಿ ಗಾಡಿಗಳಿಂದ ತಲಾ ಮೂರು ಬಾರಿಯಂತೆ 21 ಕುಶಾಲತೋಪು ಸಿಡಿಸಿದ್ದು, ಕುಶಾಲತೋಪಿನ ಶಬ್ದಕ್ಕೆ ಗಜಪಡೆ ಹಾಗೂ ಅಶ್ವಾರೋಹಿ ದಳ ಅಳುಕದೇ ಧೈರ್ಯ ಪ್ರದರ್ಶಿಸಿದವು ಎನ್ನಲಾಗಿದೆ.

ದಸರಾ ಗಜಪಡೆ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, 3ನೇ ಹಂತದ ಕುಶಾಲತೋಪು ತಾಲಿಮು ಯಶಸ್ವಿಯಾಗಿದೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ, ಲಕ್ಷ್ಮಿ, ರೂಪ ಆನೆಗಳು ಭಾಗಿಯಾಗ್ತವೆ. ಅಂಬಾರಿ ಹೊರುವ ಆನೆಯನ್ನ ಮೂರು ದಿನ ಇರುವಾಗಲೇ ಆಯ್ಕೆ ಮಾಡ್ತೇವೆ ಎಂದರು.

ಪ್ರಶಾಂತ, ಸುಗ್ರೀವಾ, ಧನಂಜಯ ಆನೆಗಳಲ್ಲಿ ಒಂದು ಫೈನಲ್ ಆಗಬಹುದು
ಏಕಲವ್ಯ ಕೂಡ ಸಮರ್ಥನಿದ್ದಾನೆ. ಈ ನಾಲ್ಕು ಆನೆಯ ಪೈಕಿ ಏಕಲವ್ಯ ಕಿರಿಯ ಆನೆಯಾಗಿದ್ದಾನೆ. ಆನೆಗಳ ನಡಿಗೆ, ತಾಲಿಮಿನ ಸಮಯ, ಮಾವುತನ ಕಮಾಂಡ್ ಆನೆ ಹೇಗೆ ಸ್ವೀಕರಿಸುತ್ತದೆ ಅನ್ನೋದನ ಗಮನಿಸುತ್ತೇವೆ. ಯಶಸ್ವಿ ಜಂಬುಸವಾರಿಗೆ ನಮ್ಮ ಇಲಾಖೆ ಹಾಗೂ ಆನೆಗಳು ಸನ್ನದ್ದವಾಗಿದೆ ಎಂದವರು ತಿಳಿಸಿದ್ದಾರೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES