• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮಂಗಳೂರು
  • /ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

ಕಂಡು ಕೇಳರಿಯದ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ರೈತರು ನೊಂದಿರುವ ಈ ಸಮಯದಲ್ಲಿ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ʼಪರಿಸರಕ್ಕಾಗಿ ನಾವುʼ ಸಂಘಟನೆ ಆಗ್ರಹಿಸಿದೆ.

Written ByYashaswini V
Published: Oct 12, 2026, 02:32 PM IST|Updated: Oct 12, 2026, 02:55 PM IST
joinshare
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ವಿಕ್ರಂ ವೇದಾಂತ್ ಸಿನಿಮಾ ಮುಹೂರ್ತದಲ್ಲೇ ಗಲಾಟೆ; ನಿರ್ದೇಶಕ ನವೀನ್ ಶಕ್ತಿಗೆ ಪತ್ನಿ, ಪುತ್ರನಿಂದ ಚಪ್ಪಲಿ ಏಟು

ವಿಕ್ರಂ ವೇದಾಂತ್ ಸಿನಿಮಾ ಮುಹೂರ್ತದಲ್ಲೇ ಗಲಾಟೆ; ನಿರ್ದೇಶಕ ನವೀನ್ ಶಕ್ತಿಗೆ ಪತ್ನಿ, ಪುತ್ರನಿಂದ ಚಪ್ಪಲಿ ಏಟು

2

ಇನ್ಮುಂದೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಸರ್ಕಾರದ ಮಹತ್ವದ ಆದೇಶ

3

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

4

ಬಿಗ್‌ಬಾಸ್‌ ಪ್ರಶಾಂತ್‌ಗೆ "ಕರಿ ಇಡ್ಲಿ" ಎಂದ ನೆಟ್ಟಿಗನಿಗೆ ಪತ್ನಿ ಕೃತಿ ಏನಂದ್ರು ಗೊತ್ತಾ?

5

ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ನಡೆಸಬೇಡಿ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಹಾಗೂ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳೂರಿನ ಖಾಸಗಿ ಹೊಟೇಲ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ʼಪರಿಸರಕ್ಕಾಗಿ ನಾವುʼ ಸಂಘಟನೆ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಕರಾವಳಿಯ ಗ್ರಾಮೀಣ ಕ್ರೀಡೆಯಾದ ಕಂಬಳದ ಬಗ್ಗೆ ನಮಗೆಲ್ಲ ಅಪಾರ ಗೌರವದ ಜೊತೆಗೆ ಅಭಿಮಾನವಿದೆ.

ಕಂಬಳ ತುಳು ನಾಡಿನ ಹೆಮ್ಮೆಯ ಕ್ರೀಡೆ ಆಗಿದೆ. ಕಂಬಳವನ್ನು ನಾವು ವಿರೋಧ ಮಾಡಿಲ್ಲ.. ಆದರೆ, ಈ ಸಂದರ್ಭದಲ್ಲಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಕಂಬಳ ಮಾಡಬೇಡಿ ಎಂಬುದಷ್ಟೇ ನಮ್ಮ ವಿನಂತಿ. ದಯವಿಟ್ಟು ನಿಮ್ಮ ನಿರ್ಧಾರವನ್ನು ಮರು ಪರಿಶೀಲಿಸಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯನ್ನು ರದ್ದುಪಡಿಸುವಂತೆ ನಾವು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಹಲವಾರು ಸಂದರ್ಭಗಳಲ್ಲಿ ಜನಗಳ ಭಾವನೆಗಳಿಗೆ ನಾವು ಯಾವಾಗಲೂ ತೊಂದರೆ ಮಾಡಲ್ಲ. ನಾನು ಇದನ್ನ ಪ್ರತಿಷ್ಠೆ ಆಗಿ ತೆಗೆದುಕೊಂಡಿಲ್ಲ ಮರು ಪರಿಶೀಲನೆ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಮಾತಾಡುತ್ತೇನೆ ಎಂದು ಹೇಳಿರುವುದು ವರದಿಯಾಗಿದೆ. ಈ ಸಂಬಂಧ ನಮ್ಮ ನಿಯೋಗ ಅವರನ್ನು ಭೇಟಿ ಆದಾಗಲೂ ಅವರು ಇದೇ ಮಾತುಗಳನ್ನು ಹೇಳಿದ್ದರು. ಅವರು ಮೇಲೆ ಒಂದು ಮಾತು ಹೇಳಿ, ಒಳಗಡೆ ಸಿದ್ಧತೆಗಳನ್ನು ಮಾಡುತ್ತಾ ಈಗ ಕಂಬಳ ಮಾಡಲೇಬೇಕು ಎಂಬ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯಿಂದ ನಮಗೆ ಈಗ ಬೇರೆ ದಾರಿಯೇ ಇಲ್ಲದಂತಾಗಿದ್ದು ನಮ್ಮ ತುಳುನಾಡಿನ ಜನತೆಗೆ, ಕರಾವಳಿಯ ಜನರಿಗೇ ಈ ಬಗ್ಗೆ ಮನವರಿಕೆ ಮಾಡುವ ಸಲುವಾಗಿ ನಾವು ಮಂಗಳೂರಿಗೆ ಬಂದಿದ್ದೇವೆ. ಕೋಣಗಳ ಮಾಲೀಕರಿಗೂ ಕೂಡ ಈ ಬಾರಿಯ ದಸರಾದಲ್ಲಿ ಕಂಬಳಕ್ಕೆ ಹೋಗದಂತೆ ಮನವಿ ಮಾಡಿದ್ದೇವೆ. ಸಹೋದರ ಭಾವನೆಯಿಂದ ನಿಮ್ಮ ಬಳಿ ವಿನಂತಿಸಲು ಬಂದಿದ್ದೇವೆ. ನಾವೆಲ್ಲಾ ಒಂದು ರಾಜ್ಯದ ಅಣ್ಣ-ತಮ್ಮಂದಿರು. ದಯಮಾಡಿ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದರು.

ನಿಮ್ಮ ಕ್ರೀಡೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ಬೇರೆ ಸಂದರ್ಭದಲ್ಲಿ ನೀವು ಮಾಡಬಹುದು. ವೈಯಕ್ತಿಕವಾಗಿ ನಮಗೇನೂ ಇಲ್ಲ. ನಾವು ʼಪರಿಸರಕ್ಕಾಗಿ ನಾವುʼ ಸಂಘಟನೆಯವರು. ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಹಣ ಖರ್ಚು ಮಾಡಿಕೊಂಡು ಪರಿಸರ ಉಳಿದರಷ್ಟೇ ನಾವು ಉಳಿಯುವುದು ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಭಾವನೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಕೋಣಗಳ ಮಾಲೀಕರು ಈ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ತುಳು ನಾಡಿನ ಬಾಂಧವರಿಗೆ ಮನವಿ ಮಾಡಿದ್ದಾರೆ.

ಬರಗಾಲದ ಪರಿಸ್ಥಿತಿಯಲ್ಲಿ ಕಂಬಳ.. ಮುಂದಿನ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ!
ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತರು ಮತ್ತು ಇತರ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರ್ಜಲ ಪಾತಾಳ ಮುಟ್ಟಿದೆ. ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದೆ. ದನಕರು ಆಡುಕುರಿಗಳಿಗೆ ನೀರು ಮತ್ತು ಮೇವಿನ ಅಭಾವ ಉಂಟಾಗಿದೆ. ಅಕ್ಟೋಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರೂ ಆಗಿರುವ ಎ.ಟಿ.ರಾಮಸ್ವಾಮಿ ಅವರು, ಈ ವರ್ಷದ ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮಂಗಳೂರಿಗೆ ಬಂದಿದ್ದೇವೆ. ಸುಮಾರು 140 ವರ್ಷಗಳಿಂದಲೂ ಕಂಡು ಕೇಳರಿಯದ ಭೀಕರ ಬರಗಾಲವಿದೆ. ಮಳೆ ಇಲ್ಲ, ಬೆಳೆ ಇಲ್ಲ, ಕುಡಿಯುವ ನೀರಿಗೂ ಬರಗಾಲವಿದೆ. ಈ ಹಿಂದೆ ಇಷ್ಟು ಬರಗಾಲ ಇಲ್ಲದಿದ್ದಾಗ್ಯೂ, ಸರಳ ದಸರಾ ನಡೆಸಿದ್ದನ್ನು ನಾವು ಗಮನಿಸಿದ್ದೇವೆ. ಈ ವರ್ಷ ಅಪಾಯಕಾರಿ ಬರಗಾಲ ಇದೆ. ಈ ಸಂದರ್ಭದಲ್ಲಿ ಇನ್ನೂ ಸರಳವಾಗಿ ದಸರಾ ಆಯೋಜಿಸುವುದರ ಜೊತೆಗೆ ಪರಿಸರ ದಸರಾ ನಡೆಸಬೇಕಿತ್ತು. ಅದರ ಬದಲಿಗೆ ಅದ್ಧೂರಿ ದಸರಾ ಬೇಕಿತ್ತಾ ಎಂಬುದು ನಮ್ಮ ನೋವು ಎಂದರು.

ಕೆಲವು ಕಂಬಳದ ಕ್ರೀಡೆ ಪ್ರಚಾರ ಆಗಬೇಕು. ಅದನ್ನೂ ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಹೇಳುತ್ತಾರೆ. ನಮಗೂ ಈ ಬಗ್ಗೆ ಎರಡು ಮಾತಿಲ್ಲ. ಆದರೆ, ಇದು ಸಕಾಲವಲ್ಲ.  ಆ ದೃಷ್ಟಿಯಿಂದ ನಾವಿಲ್ಲಿ ಮನವಿ ಮಾಡಲು ಬಂದಿದ್ದೇವೆ. ರಾಜವಂಶಸ್ಥರೂ ಸಹ ದಸರಾದಲ್ಲಿ ಕಂಬಳ ಆಯೋಜಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಬುದ್ದಿಜೀವಿಗಳು, ಈ ಬಗ್ಗೆ ಜ್ಞಾನ ಇರುವವರು ಈ ಸಂದರ್ಭದಲ್ಲಿ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಬಾರದು ಎಂದು ಅಭಿಪ್ರಾಯ ಪಟ್ಟಿದ್ದರೂ, ಅವರ ಮಾತನ್ನು ಧಿಕ್ಕರಿಸುತ್ತಿರುವುದು ಸರಿಯಲ್ಲ ಎಂದವರು ತಿಳಿಸಿದರು.

ಬರ ಪರಿಹಾರ: ಇದು ಸರ್ಕಾರ ರೈತರಿಗೆ ಮಾಡಿರುವ ಅವಮಾನ:
ಸೂಪರ್ ಎಲ್ ನಿನೋ ಪರಿಣಾಮ ಭಯಾನಕವಾಗಿರುತ್ತದೆ ಎಂಬ ವರದಿಗಳಿವೆ. ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬೆಳೆ ನಷ್ಟಕ್ಕೆ ಕೇವಲ 2500 ರೂ. ಬರ ಪರಿಹಾರ ಘೋಷಿಸುವ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಇದು ಸರ್ಕಾರ ತಮಗೆ ಮಾಡಿರುವ ಅವಮಾನ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಈ ಹಣ ಬಂದ ಕೂಡಲೇ ಆ ಮೊತ್ತಕ್ಕೆ ಒಂದು ರೂ. ಸೇರಿಸಿ 2501 ರೂಗಳನ್ನು ಮುಖ್ಯ ಮಂತ್ರಿಗಳ ನಿಧಿಗೆ ಕೊಡುವ ತೀರ್ಮಾನವನ್ನು ರಾಜ್ಯದ ರೈತರು ಮಾಡಿದ್ದಾರೆ ಎಂದರು.
 

Add Zee News as a Preferred Source
TAGS:
Kannada News
D K Shivakumar