• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

Famous actress quits social media: ಸೋಷಿಯಲ್ ಮೀಡಿಯಾ ಅಂದ್ರೆ ಸೆಲೆಬ್ರಿಟಿಗಳಿಗೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರೋ ವೇದಿಕೆ. ಆದ್ರೆ, ಅದೇ ಸೋಷಿಯಲ್ ಮೀಡಿಯಾ ಈಗ ನಟಿಯರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆಯಾ? ಸದ್ಯ ಖ್ಯಾತ ನಟಿಯೊಬ್ಬರು ಸೋಶಿಯಲ್‌ ಮೀಡಿಯಾದಿಂದ ದೂರ ಸರಿದಿದ್ದಾರೆ.

Written ByRamya. R. Gowda
Published: Oct 12, 2026, 01:42 PM IST|Updated: Oct 12, 2026, 01:50 PM IST
joinshare
ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಮೈಸೂರು ದಸರಾದಲ್ಲಿ ಕಂಬಳ ನಡೆಸದಂತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹ

2

ಬಿಗ್‌ಬಾಸ್‌ ಪ್ರಶಾಂತ್‌ಗೆ "ಕರಿ ಇಡ್ಲಿ" ಎಂದ ನೆಟ್ಟಿಗನಿಗೆ ಪತ್ನಿ ಕೃತಿ ಏನಂದ್ರು ಗೊತ್ತಾ?

3

ಸೋಶಿಯಲ್ ಮೀಡಿಯಾ ತೊರೆದ ಖ್ಯಾತ ನಟಿ; ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

4

ಮೈಸೂರು ದಸರಾ 2026: ದಸರಾ ಆನೆಗಳು & ಕುದುರೆಗಳಿಗೆ ಯಶಸ್ವಿಯಾಗಿ ಮುಕ್ತಾಯಗೊಂಡ 3ನೇ ಹಂತದ ಕುಶಾಲತೋಪು ತಾಲೀಮು

5

ನವರಾತ್ರಿಯಲ್ಲಿ ಅಪರೂಪದ ಯೋಗ..! ಶನಿ-ಮಂಗಳನ ಕೃಪೆಯಿಂದ ಈ 3 ರಾಶಿಯವರಿಗೆ ಭರ್ಜರಿ ಲಕ್‌!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸೋಷಿಯಲ್ ಮೀಡಿಯಾ ಅಂದ್ರೆ ಸೆಲೆಬ್ರಿಟಿಗಳಿಗೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರೋ ವೇದಿಕೆ. ಆದ್ರೆ, ಅದೇ ಸೋಷಿಯಲ್ ಮೀಡಿಯಾ ಈಗ ನಟಿಯರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆಯಾ? ಎಐ ತಂತ್ರಜ್ಞಾನ ಬಳಸಿ ನಟಿಯರ ಫೋಟೋಗಳನ್ನೇ ಅಸಭ್ಯವಾಗಿ ತಿರುಚಿ, ನಕಲಿ ಫೋಟೋ ಮತ್ತು ವಿಡಿಯೋಗಳನ್ನ ಸೃಷ್ಟಿಸಲಾಗ್ತಿದೆ. ಇದೇ ವಿಚಾರಕ್ಕೆ ಬೇಸತ್ತು ಜನಪ್ರಿಯ ನಟಿ ಐಶ್ವರ್ಯ ಲಕ್ಷ್ಮಿಇನ್‌ಸ್ಟಾಗ್ರಾಮ್‌ನಿಂದ ದೂರ ಉಳಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರೋದಕ್ಕಿಂತ ಮಾನಸಿಕ ನೆಮ್ಮದಿಯೇ ಮುಖ್ಯ ಅಂತ ನಟಿ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಐಶ್ವರ್ಯ ಲಕ್ಷ್ಮಿ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಎಐ ತಂತ್ರಜ್ಞಾನದಿಂದ ಫೋಟೋ ದುರುಪಯೋಗ!
ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗವೂ ಹೆಚ್ಚಾಗ್ತಿದೆ. ಅದರಲ್ಲೂ ಎಐ ಬಳಸಿ ಸೆಲೆಬ್ರಿಟಿಗಳ ಫೋಟೋಗಳನ್ನ ತಿರುಚಿ, ಅಸಭ್ಯ ಚಿತ್ರಗಳು ಮತ್ತು ನಕಲಿ ವಿಡಿಯೋಗಳನ್ನ ಸೃಷ್ಟಿಸುವ ಪ್ರಕರಣಗಳು ಆತಂಕ ಮೂಡಿಸಿವೆ. ಇದೀಗ ನಟಿ ಐಶ್ವರ್ಯ ಲಕ್ಷ್ಮಿ ಕೂಡ ಇದೇ ಸಮಸ್ಯೆಯಿಂದ ಬೇಸತ್ತಿದ್ದಾರೆ. ತಮ್ಮ ಅನುಮತಿಯಿಲ್ಲದೆ ಫೋಟೋಗಳನ್ನ ಬದಲಾಯಿಸಿ ಅಸಭ್ಯವಾಗಿ ಬಳಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಗಳನ್ನ ನೋಡೋದೇ ಕಷ್ಟವಾಗಿರುವುದರಿಂದ ಇನ್‌ಸ್ಟಾಗ್ರಾಮ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ದೂರ!
ಐಶ್ವರ್ಯ ಲಕ್ಷ್ಮಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿಲ್ಲ ಎನ್ನಲಾಗಿದೆ. ನಟಿಯನ್ನ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕರೆತರಲು ಅವರ ನಿರ್ವಹಣಾ ತಂಡ ಪ್ರಯತ್ನಿಸಿದರೂ, ಅವರು ತಮ್ಮ ನಿರ್ಧಾರ ಬದಲಿಸಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಕಾಣಿಸಿಕೊಳ್ಳಬೇಕು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಅನ್ನೋ ಒತ್ತಡಕ್ಕಿಂತ ನೆಮ್ಮದಿಯಿಂದ ಬದುಕೋದು ಮುಖ್ಯ ಅನ್ನೋದು ನಟಿಯ ನಿಲುವು.

ಇಂದಿನ ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾದ ಫಾಲೋವರ್ಸ್ ಮತ್ತು ಜನಪ್ರಿಯತೆ ಜಾಹೀರಾತು, ಬ್ರ್ಯಾಂಡ್ ಪ್ರಚಾರದ ಅವಕಾಶಗಳ ಮೇಲೂ ಪ್ರಭಾವ ಬೀರುತ್ತವೆ. ಇನ್‌ಸ್ಟಾಗ್ರಾಮ್‌ನಿಂದ ದೂರ ಉಳಿದರೆ ಇಂತಹ ಕೆಲವು ಅವಕಾಶಗಳು ಕೈತಪ್ಪಬಹುದು. ಆದರೂ, ಅವಕಾಶಗಳಿಗಾಗಿ ಮಾನಸಿಕ ನೆಮ್ಮದಿಯನ್ನ ಬಲಿ ಕೊಡಲು ನಟಿ ಸಿದ್ಧರಿಲ್ಲ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿರುವುದು ತಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ ಎಂಬುದು ಅವರ ಅಭಿಪ್ರಾಯ.

ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಬದುಕು ಸುಂದರವಾಗಿದೆ ಅನ್ನೋ ರೀತಿಯಲ್ಲಿ ಪೋಸ್ಟ್‌ಗಳನ್ನ ಹಂಚಿಕೊಳ್ಳುತ್ತಾರೆ. ಆದರೆ, ನಿಜ ಜೀವನದಲ್ಲಿ ಸಮಸ್ಯೆಗಳಿದ್ದರೂ ಎಲ್ಲವೂ ಚೆನ್ನಾಗಿದೆ ಅನ್ನೋ ಮುಖವಾಡ ಹಾಕಿಕೊಳ್ಳಬೇಕಾದ ಒತ್ತಡ ಇರುತ್ತದೆ. ಇಂತಹ ಒತ್ತಡದಿಂದ ದೂರ ಉಳಿಯಲು ಐಶ್ವರ್ಯ ಲಕ್ಷ್ಮಿ ಬಯಸಿದ್ದಾರೆ. ಇತರರು ಏನು ಮಾಡುತ್ತಿದ್ದಾರೆ ಅನ್ನೋದನ್ನ ನೋಡಿ ತಾವೂ ಅದೇ ರೀತಿ ಬದುಕಬೇಕಿಲ್ಲ. ತಮ್ಮ ನೈಜ ಬದುಕಿಗೆ ವಿರುದ್ಧವಾಗಿ ಸೋಷಿಯಲ್ ಮೀಡಿಯಾದಲ್ಲಿ ನಟಿಸುವುದಕ್ಕೆ ಇಷ್ಟವಿಲ್ಲ ಅನ್ನೋದು ನಟಿಯ ನಿಲುವು.

ಒಟ್ಟಿನಲ್ಲಿ, ಎಐ ತಂತ್ರಜ್ಞಾನದ ದುರುಪಯೋಗದಿಂದ ವ್ಯಕ್ತಿಯ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆಯಾಗುತ್ತಿರುವುದು ಗಂಭೀರ ವಿಚಾರ. ಅನುಮತಿಯಿಲ್ಲದೆ ಫೋಟೋಗಳನ್ನ ತಿರುಚಿ ಅಸಭ್ಯವಾಗಿ ಬಳಸುವುದು ಕೇವಲ ತಂತ್ರಜ್ಞಾನದ ದುರುಪಯೋಗವಲ್ಲ, ವ್ಯಕ್ತಿಯ ಘನತೆಗೆ ಮಾಡುವ ಅಪಮಾನವೂ ಹೌದು. ಸೋಷಿಯಲ್ ಮೀಡಿಯಾದ ಜನಪ್ರಿಯತೆಗಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿರುವ ಐಶ್ವರ್ಯ ಲಕ್ಷ್ಮಿ ಅವರ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

 

Add Zee News as a Preferred Source
TAGS:
Cinema