ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನ ಟ್ರೋಲ್ ಮಾಡೋದೇ ಕೆಲವರಿಗೆ ಕೆಲಸ ಆಗ್ಬಿಟ್ಟಿದೆ.. ಅದರಲ್ಲೂ ರೂಪ, ಬಣ್ಣದ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡೋ ಕಿಡಿಗೇಡಿಗಳಿಗೆ ಲೆಕ್ಕವೇ ಇಲ್ಲ. ಇದೀಗ ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ, ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಗೌಡ ಅವರ ಪತ್ನಿ ಕೃತಿ ಗೌಡ ಅವರಿಗೂ ಇಂತಹದ್ದೇ ಟ್ರೋಲ್ ಕಾಟ ಎದುರಾಗಿದೆ. ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಕೃತಿಗೆ ನೆಟ್ಟಿಗನೊಬ್ಬ ʻಕರಿ ಇಡ್ಲಿʼ ಎಂದು ಕೀಳು ಮಟ್ಟದ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಸುಮ್ಮನಿರದ ಕೃತಿ ಗೌಡ, ಟ್ರೋಲಿಗನಿಗೆ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ಹಾಗಾದ್ರೆ ಕೃತಿ ಕೊಟ್ಟ ಉತ್ತರವೇನು? ಇಲ್ಲಿದೆ ಸಂಪೂರ್ಣ ಸ್ಟೋರಿ.
ಸೋಷಿಯಲ್ ಮೀಡಿಯಾ ಅಂದ್ರೆ ಬರೀ ಲೈಕ್ಸ್, ಕಾಮೆಂಟ್ಸ್ ಅಷ್ಟೇ ಅಲ್ಲ..! ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಟ್ರೋಲಿಗರ ಕಾಟವೂ ತಪ್ಪಿದ್ದಲ್ಲ. ಅದರಲ್ಲೂ ರೂಪ, ಬಣ್ಣವನ್ನೇ ಗುರಿಯಾಗಿಸಿಕೊಂಡು ಕೀಳು ಮಟ್ಟದ ಕಾಮೆಂಟ್ ಮಾಡೋದು ಇತ್ತೀಚೆಗೆ ಹೆಚ್ಚಾಗ್ತಿದೆ. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 13ರ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಶಾಂತ್ ಗೌಡ ಹಾಗೂ ಅವರ ಪತ್ನಿ ಕೃತಿ ಗೌಡ ಅವರಿಗೂ ಇಂತಹದ್ದೇ ಅನುಭವವಾಗಿದೆ.
ʻಗಿಚ್ಚಿ ಗಿಲಿಗಿಲಿʼ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಪ್ರಶಾಂತ್ ಗೌಡ, ಪತ್ನಿ ಕೃತಿ ಗೌಡ ಜೊತೆಗಿನ ಫೋಟೋಗಳನ್ನ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಆದ್ರೆ ಈ ಜೋಡಿ ಮದುವೆಗೂ ಮುಂಚಿನಿಂದಲೂ ರೂಪ ಮತ್ತು ಬಣ್ಣದ ವಿಚಾರವಾಗಿ ಟ್ರೋಲ್‌ಗಳಿಗೆ ಗುರಿಯಾಗ್ತಿದೆ. ಇದೀಗ ಕೃತಿ ಗೌಡ ಹಂಚಿಕೊಂಡಿದ್ದ ಫೋಟೋಗೆ ನೆಟ್ಟಿಗನೊಬ್ಬ ʻಕರಿ ಇಡ್ಲಿʼ ಎಂದು ಕಾಮೆಂಟ್ ಮಾಡಿದ್ದಾನೆ. ಪ್ರಶಾಂತ್ ಅವರ ಮೈಬಣ್ಣವನ್ನು ಗುರಿಯಾಗಿಸಿಕೊಂಡು ಮಾಡಿದ ಈ ಕಾಮೆಂಟ್‌ಗೆ ಕೃತಿ ಗೌಡ ಖಡಕ್ ಉತ್ತರ ನೀಡಿದ್ದಾರೆ.
ತಮ್ಮ ಪತಿಯ ಬಗ್ಗೆ ಕೀಳು ಮಟ್ಟದ ಕಾಮೆಂಟ್ ಮಾಡಿದ್ದನ್ನು ಕಂಡ ಕೃತಿ ಗೌಡ ಸುಮ್ಮನೆ ಕೂರಲಿಲ್ಲ. ಕಾಮೆಂಟ್ ಮಾಡಿದ ವ್ಯಕ್ತಿಗೆ, “ಅಣ್ಣ, ನೀವು ತುಂಬಾನೇ ಬೆಳ್ಳಗೇ ಇದ್ದೀರಿ ಬಿಡಿ..” ಎಂದು ವ್ಯಂಗ್ಯವಾಗಿಯೇ ತಿರುಗೇಟು ನೀಡಿದ್ದಾರೆ. ಈ ಮೂಲಕ ಬೇರೆಯವರ ಬಣ್ಣದ ಬಗ್ಗೆ ಮಾತನಾಡುವವರ ಮನಸ್ಥಿತಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಇನ್ನು ಪ್ರಶಾಂತ್ ಗೌಡ ಮತ್ತು ಕೃತಿ ಗೌಡ ಅವರ ನಿಶ್ಚಿತಾರ್ಥದ ಸಮಯದಲ್ಲೂ ಈ ಜೋಡಿಯ ಬಗ್ಗೆ ಕೆಲವರು ಕೀಳು ಮಟ್ಟದ ಕಾಮೆಂಟ್ ಮಾಡಿದ್ದರು. ಆಗ ನಿರೂಪಕಿ ಅನುಪಮಾ ಗೌಡ ಕೂಡ ಇಂತಹ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದರು. ಬಣ್ಣ, ಸೌಂದರ್ಯ ಶಾಶ್ವತವಲ್ಲ. ವಯಸ್ಸಾದಂತೆ ಎಲ್ಲರ ಮುಖದಲ್ಲೂ ಸುಕ್ಕುಗಳು ಬರುತ್ತವೆ. ಸೌಂದರ್ಯಕ್ಕಿಂತ ವ್ಯಕ್ತಿಯ ಗುಣ ಮುಖ್ಯ ಎಂದು ಹೇಳುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.
ಒಟ್ನಲ್ಲಿ, ಒಬ್ಬರ ರೂಪ, ಬಣ್ಣದ ಬಗ್ಗೆ ಕಾಮೆಂಟ್ ಮಾಡೋದು ತಮಾಷೆಯಲ್ಲ, ಅದು ಅವರ ಮನಸ್ಸಿಗೆ ನೋವುಂಟು ಮಾಡಬಹುದು. ಸೆಲೆಬ್ರಿಟಿಗಳಾಗಲಿ, ಸಾಮಾನ್ಯ ವ್ಯಕ್ತಿಗಳಾಗಲಿ ಗೌರವದಿಂದ ಕಾಣೋದು ಮುಖ್ಯ. ಇದೀಗ ಪ್ರಶಾಂತ್ ಗೌಡ ಪತ್ನಿ ಕೃತಿ ಗೌಡ ನೀಡಿರುವ ಖಡಕ್ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.