• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಮೈಸೂರು ದಸರಾ ಗಜಪಡೆಗೆ ಕುಶಾಲತೋಪಿನ ತಾಲೀಮು

ಮೈಸೂರು ದಸರಾ ಗಜಪಡೆಗೆ ಕುಶಾಲತೋಪಿನ ತಾಲೀಮು

ಮೈಸೂರು ದಸರಾ ಜಂಬೂ ಸವಾರಿಗೆ ಗಜಪಡೆ ಹಾಗೂ ಅಶ್ವದಳ ಸಜ್ಜಾಗುತ್ತಿದ್ದು, ಕುಶಾಲತೋಪಿನ ಸದ್ದಿಗೂ ಬೆದರದಂತೆ ವಿಶೇಷ ತಾಲೀಮು ನೀಡಲಾಗುತ್ತಿದೆ.

Written ByChetana Devarmani
Published: Oct 07, 2026, 08:40 PM IST|Updated: Oct 07, 2026, 08:42 PM IST
joinshare
ಮೈಸೂರು ದಸರಾ ಗಜಪಡೆಗೆ ಕುಶಾಲತೋಪಿನ ತಾಲೀಮು

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಮೈಸೂರು ದಸರಾ ಗಜಪಡೆಗೆ ಕುಶಾಲತೋಪಿನ ತಾಲೀಮು

ಮೈಸೂರು ದಸರಾ ಗಜಪಡೆಗೆ ಕುಶಾಲತೋಪಿನ ತಾಲೀಮು

2

ಮೈಸೂರು ದಸರಾಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್‌ನ್ಯೂಸ್‌! ವಿಶೇಷ ರೈಲುಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

3

ಬಡ ಕುಟುಂಬದ ಮೇಲೆ ಡೆಡ್ಲಿ ಅಟ್ಯಾಕ್.. ಇನ್‌ಸ್ಪೆಕ್ಟರ್‌, ಕಾಂಗ್ರೆಸ್‌ ಮುಖಂಡನ ವಿರುದ್ಧ FIR

4

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಏಕೆ ಮಾಡಬಾರದು? ಧರ್ಮಶಾಸ್ತ್ರದಲ್ಲಿದೆ ಈ ಕಾರಣ!

5

ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಝೀರೋ: ಸ್ಟಿಂಗ್ ಆಪರೇಷನ್‌ ಹಿಂದೆ ಯಾರಿದ್ದಾರೆ? ಹೆಚ್‌ಡಿಕೆ ಪ್ರಶ್ನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದಸರಾ ಜಂಬೂ ಸವಾರಿಯ ಹಿನ್ನೆಲೆಯಲ್ಲಿ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಒಂದು ಕಡೆ ಸಿಡಿಮದ್ದಿನ ಸದ್ದು. ಮತ್ತೊಂದು ಕಡೆ ಜಗ್ಗದೆ ನಿಂತ ಗಜಪಡೆ & ಅಶ್ವಗಳು. ಹೌದು ಈ ದೃಶ್ಯ ಕಂಡು ಬಂದದ್ದು, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ. ಮೈಸೂರು ನಗರದ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಇಂದು 7 ಪಿರಂಗಿ ಗಾಡಿಗಳ ಮೂಲಕ ಒಟ್ಟು 21 ಭಾರೀ ಕುಶಾಲತೋಪುಗಳನ್ನು ಸಿಡಿಸಿ ಅಭ್ಯಾಸ ಮಾಡಲಾಯಿತು. ತಾಲೀಮಿನಲ್ಲಿ ದಸರಾ ಗಜಪಡೆಯ 13 ಆನೆಗಳು ಹಾಗೂ ಅಶ್ವದಳದ 45 ಕುದುರೆಗಳು ಭಾಗವಹಿಸಿದ್ದವು.

ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪ ಹಾಗೂ ಶ್ರೀಕಂಠ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಕುಶಾಲತೋಪಿನ ಭಾರೀ ಸದ್ದಿಗೂ ಆನೆಗಳು ಹಾಗೂ ಅಶ್ವಗಳು ಯಾವುದೇ ಆತಂಕಕ್ಕೆ ಒಳಗಾಗದೆ ಶಾಂತವಾಗಿ ನಿಂತು ತಾಲೀಮು ಪೂರ್ಣಗೊಳಿಸಿದವು. ದಸರಾ ಜಂಬೂ ಸವಾರಿಯ ವೇಳೆ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಉಂಟಾಗುವ ಭಾರೀ ಶಬ್ದಕ್ಕೆ ಆನೆಗಳು ಮತ್ತು ಅಶ್ವಗಳು ಬೆದರದಂತೆ ಮುನ್ನೆಚ್ಚರಿಕಾ ತಾಲೀಮು ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕುಶಾಲತೋಪಿನ ಸದ್ದಿಗೆ ಗಜಪಡೆ ಮತ್ತು ಅಶ್ವದಳವನ್ನು ಒಗ್ಗೂಡಿಸಲಾಗುತ್ತಿದೆ. ಇನ್ನು ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಗಜಪಡೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಆನೆಗಳಿಗೆ ತಂಪಾದ ಆಹಾರ ನೀಡಲಾಗುತ್ತಿದ್ದು, ದೈನಂದಿನ ಆಹಾರದಲ್ಲಿ ಅವಲಕ್ಕಿಯನ್ನೂ ಸೇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತಾಲೀಮಿನಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಸುಂದರರಾಜ್, ಹರ್ಷಂ ಪ್ರಿಯವದಾ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಕುಶಾಲತೋಪು ಸಿಡಿಸುವ ಪ್ರಕ್ರಿಯೆಯ ಅಭ್ಯಾಸ ನಡೆಸಿದರು. ಇಂದು ಮೊದಲ ಹಂತದ ತಾಲೀಮು ನಡೆಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿ ಇದಕ್ಕಾಗಿ ತರಬೇತಿ ಪಡೆದು ಇಂದು ತಾಲೀಮು ಮಾಡಿದ್ದಾರೆ. ಇನ್ನೂ ಎರಡು ಹಂತದ ತಾಲೀಮು ನಡೆಯಲಿದೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ವೇಳೆ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ

ಒಟ್ಟಿನಲ್ಲಿ ಮೈಸೂರು ದಸರಾ ಜಂಬೂ ಸವಾರಿಗೆ ಗಜಪಡೆ ಹಾಗೂ ಅಶ್ವದಳ ಸಜ್ಜಾಗುತ್ತಿದ್ದು, ಕುಶಾಲತೋಪಿನ ಸದ್ದಿಗೂ ಬೆದರದಂತೆ ವಿಶೇಷ ತಾಲೀಮು ನೀಡಲಾಗುತ್ತಿದೆ. ಈ ಮೂಲಕ ದಸರಾ ವೈಭವ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದಂತು ಸುಳ್ಳಲ್ಲ.

 

Add Zee News as a Preferred Source
TAGS:
Kannada News