ಅನುಮಾನದ ಭೂತಕ್ಕೆ ಬ*ಲಿಯಾದ 3 ಮಕ್ಕಳ ತಾಯಿ: ಕಲಬುರಗಿಯಲ್ಲಿ ಭೀಕರ ಹ*ತ್ಯೆ
ಪತ್ನಿ ಮೇಲೆ ಪತಿಯ ಅನುಮಾನದಿಂದ ಒಂದು ಸುಂದರ ಸಂಸಾರವೇ ಅಂತ್ಯವಾಗಿದ್ದು, ಮೂರು ಮಕ್ಕಳ ತಾಯಿಯ ಬರ್ಬರ ಹ**ತ್ಯೆಯಾಗಿರುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಆಕೆ ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು.. ಪತಿ ಹಾಗೂ ಮೂವರು ಮಕ್ಕಳೊಂದಿಗೆ ಕೆಲ ವರ್ಷಗಳ ಕಾಲ ಸುಂದರ ಸಂಸಾರ ಕೂಡ ಮಾಡುತ್ತಿದ್ದಳು.. ಆದರೆ ಬರು ಬರುತ್ತಾ ಪತ್ನಿ ಮೇಲೆ ಪತಿ ಅನುಮಾನ ಪಡೋಕೆ ಶುರು ಮಾಡಿದ್ದಾನೆ. ಆ ಒಂದು ಅನುಮಾನದ ವಿಷ ಬೀಜ ಇದೀಗ ಪತ್ನಿಯ ಬರ್ಬರ ಹ*ತ್ಯೆಯಲ್ಲಿ ಕೊನೆಗೊಂಡಿದೆ. ಅಷ್ಟಕ್ಕೂ ಗಂಡನ ಮೆದುಳೇರಿದ್ದ ಅನುಮಾನದ ಭೂತವಾದರೂ ಏನು? ಈ ಸುಂದರ ಸಂಸಾರ ದುರಂತ ಅಂತ್ಯ ಕಾಣಲು ಕಾರಣವಾಗಿದ್ದು ಏನು ಎಂಬ ಮಾಹಿತಿ ಇಲ್ಲಿದೆ.
ಒಂದೆಡೆ ಬರ್ಬರವಾಗಿ ಹ*ತ್ಯೆಯಾಗಿ ಬಿದ್ದಿರೋ ಮಹಿಳೆ.. ಇನ್ನೊಂದೆಡೆ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಮತ್ತೊಂದೆಡೆ ಪೊಲೀಸರಿಂದ ಸ್ಥಳ ಪರಿಶೀಲನೆ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿಯಲ್ಲಿ.. ಕೇವಲ 32 ವರ್ಷ ವಯಸ್ಸಿನ ನೀಲಾಬಾಯಿ ರಾಠೋಡ್ ಪತಿಯ ಅನುಮಾನದ ಭೂತಕ್ಕೆ ಮಸಣ ಸೇರಿದ ಮೃತ ದುರ್ದೈವಿ. ಆಕೆಗಿನ್ನು ಕೇವಲ 32 ವರ್ಷ ವಯಸ್ಸು.
ಕಳೆದ ಒಂಭತ್ತು ವರ್ಷಗಳ ಹಿಂದೆ ಮದುವೆ ಆಗಿದ್ದ ದಂಪತಿ:
ನೀಲಾಬಾಯಿ ರಾಠೋಡ್ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದವರು. ಕಲಬುರಗಿ ತಾಲೂಕಿನ ಬಸವನ ತಾಂಡಾದ ನಾಮದೇವ ರಾಠೋಡ್ ಜೊತೆ ಕಳೆದ ಒಂಭತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.. ಮದುವೆ ನಂತರ ಸಂಸಾರದ ನೌಕೆ ಸಾಗಿಸಲು ನಗರದ ರಾಮ ಮಂದಿರ ವೃತ್ತದಲ್ಲಿ ತರಕಾರಿ ವ್ಯಾಪಾರ ಮಾಡ್ತಿದ್ದ ನೀಲಾಬಾಯಿ ಮೂವರು ಮಕ್ಕಳು ಹಾಗೂ ಪತಿ ನಾಮದೇವ ರಾಠೋಡ್ ಜೊತೆ ಜೀವನ ಸಾಗಿಸುತ್ತಿದ್ದಳು. ಆದರೆ ಕೆಲ ದಿನಗಳಿಂದ ಪತ್ನಿ ಮೇಲೆ ಪತಿ ಅನುಮಾನ ಪಡಲು ಶುರು ಮಾಡಿದ್ದ.. ನೀನು ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದೀಯಾ.. ಬಸ್ ಫುಲ್ ಇದ್ರು ನೀನು ಯಾಕೆ ಬರ್ತಿಯಾ ಅಂತಾ ಪೀಡಿಸತೊಡಗಿದ್ದಾನೆ.. ಅಲ್ಲದೇ ಆಕೆಯ ಮೊಬೈಲ್‌ಗೆ ಯಾರದ್ದದಾದರೂ ಕಾಲ್ ಅಥವಾ ಮೆಸೇಜ್ ಬಂದರೆ ಅನುಮಾನ ದೃಷ್ಟಿಯಿಂದ ನೋಡ್ತಾ ಇದ್ನಂತೆ. ಇದೇ ವಿಚಾರಕ್ಕೆ ನಿನ್ನೆ ಮನೆಯಲ್ಲಿ ಪತಿ- ಪತ್ನಿ ನಡುವೆ ದೊಡ್ಡಮಟ್ಟದ ಜಗಳವಾಗಿದೆ.. ಬಳಿಕ ಮನೆಯಲ್ಲಿ ಮಲಗಿದ್ದ ಪತ್ನಿ ನೀಲಾಬಾಯಿಯನ್ನ ಪತಿ ನಾಮದೇವ ರಾಠೋಡ್ ಕೊಡಲಿಯಿಂದ ಕೊ*ಚ್ಚಿ ಕೊ*ಚ್ಚಿ ಬರ್ಬರವಾಗಿ ಹ**ತ್ಯೆ ಮಾಡಿ ಪರಾರಿಯಾಗಿದ್ದಾನೆ.
ಇನ್ನೂ ಕೃಷಿ ಕೂಲಿ ಕೆಲಸ ಮಾಡ್ತಿದ್ದ ನಾಮದೇವ ನಿತ್ಯ ಕುಡಿದು ಬಂದು ಪತ್ನಿ ಮೇಲೆ ಅನುಮಾನ ಪಟ್ಟು ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದನು. ಇದೇ ವಿಚಾರಕ್ಕೆ ಕೆಲ ದಿನಗಳ ಹಿಂದಷ್ಟೇ ಪತಿಯ ಚಿತ್ರಹಿಂಸೆ ತಾಳಲಾರದೆ ಪತ್ನಿ ನೀಲಾಬಾಯಿ ರಾಠೋಡ್, ಮೂವರು ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಬಳಿಕ ತಾಂಡಾ ಹಿರಿಯರ ಸಮ್ಮುಖದಲ್ಲಿ ಪತಿ ನಾಮದೇವ ರಾಠೋಡ್ ಮತ್ತು ಕುಟುಂಬಸ್ಥರ ಜೊತೆ ಸಂಧಾನ ಮಾಡಿ ಪುನಃ ನೀಲಾಬಾಯಿಯನ್ನ ಗಂಡನ ಮನೆಗೆ ಕಳಿಸಿದ್ದರು.
ಬೇಡ ನಾ ಹೋಗಲ್ಲ.. ಎಂದು ಪರಿಪರಿಯಾಗಿ ಬೇಡಿಕೊಂಡರೂ ಪುನಃ ಗಂಡನ ಮನೆಗೆ ಕಳುಹಿಸಿದ್ದ ಹೆತ್ತವರು:
ಗಂಡ ಅನುಮಾನ ಪಡ್ತಾನೆ.. ಬೇಡ ನಾ ಹೋಗಲ್ಲ.. ಬಹಳ ಹಿಂಸೆ ಕೊಡ್ತಿದಾರೆ ಅಂತಾ ನೀಲಾಬಾಯಿ ಪರಿಪರಿಯಾಗಿ ಬೇಡಿಕೊಂಡರು ಸಹ ಹೆತ್ತವರು, ಮೊಮ್ಮಕ್ಕಳ ಹಿತದೃಷ್ಟಿಯಿಂದ ಮಗಳನ್ನ ಪುನಃ ಗಂಡನ ಮನೆಗೆ ಕಳಿಸಿದ್ದರು.
ಇಷ್ಟಾದರೂ ಸಹ ಗಂಡ ನಾಮದೇವ ರಾಠೋಡ್‌ನ ಪತ್ನಿ ಮೇಲಿನ ಅನುಮಾನ ಕಮ್ಮಿಯಾಗಿರಲಿಲ್ಲ.. ಇತ್ತ ಪತಿ ಸರಿಯಾಗಿ ದುಡಿದು ಕುಟುಂಬವನ್ನ ನೋಡಿಕೊಳ್ತಿರಲಿಲ್ಲ.. ಹೀಗಾಗಿ ಸಂಸಾರ ನೌಕೆಯನ್ನ ಸಾಗಿಸಲು ಇತ್ತ ಪತ್ನಿ ನೀಲಾಬಾಯಿ, ತಾಂಡಾದಿಂದ ಕಲಬುರಗಿ ನಗರಕ್ಕೆ ಬಂದು ತರಕಾರಿ ಮಾರಾಟ ಮಾಡಿ ಮಕ್ಕಳನ್ನ ಸಾಕುತ್ತಿದ್ದಳು.. ಇಷ್ಟು ದೊಡ್ಡ ಜವಾಬ್ದಾರಿ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದರು ಸಹ ಪತ್ನಿ ಮೇಲೆ ಸದಾ ಅನುಮಾನಪಡ್ತಿದ್ದ ಪತಿ ನಾಮದೇವ ಮಗಳಿಗೆ ಮಸಣದ ಹಾದಿ ತೋರಿಸಿದ್ದಾನೆ. ಅವನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸದ್ಯ ಈ ಬಗ್ಗೆ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಕೊ*ಲೆ ಮಾಡಿ ಪರಾರಿಯಾಗಿರೋ ಪತಿ ನಾಮದೇವ ರಾಠೋಡ್ ಬಂಧನಕ್ಕೆ ಬಲೆ ಬೀಸಲಾಗಿದೆ..
ಅದೆನೇ ಇರಲಿ ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತಾರೇ.. ಆದರೆ ಇಲ್ಲಿ ಸಪ್ತಪದಿ ತುಳಿದ ಪತ್ನಿಯ ಕೊ**ಲೆಯಲ್ಲಿ ಅಂತ್ಯವಾಗಿದ್ದು ನಿಜಕ್ಕೂ ದುರಂತವೇ ಸರಿ.. ಇತ್ತ ಏನು ಅರಿಯದ ಮೂವರು ಮಕ್ಕಳು ಅನಾಥರಾಗಿದ್ದು, ಯಾರು ನೋಡಿಕೊಳ್ತಾರೆ ಅನ್ನೊದು ಪ್ರಶ್ನೆಯಾಗಿದೆ.