• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಮ್ಯೂಸಿಕ್‌ ಮಾಂತ್ರಿಕ ಎ. ಆರ್.‌ ರೆಹಮಾನ್..‌ ವಿಡಿಯೋ ವೈರಲ್

ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಮ್ಯೂಸಿಕ್‌ ಮಾಂತ್ರಿಕ ಎ. ಆರ್.‌ ರೆಹಮಾನ್..‌ ವಿಡಿಯೋ ವೈರಲ್

ಆಸ್ಕರ್ ಪ್ರಶಸ್ತಿ ವಿಜೇತ, ಮೂಸಿಕ್‌ ಮಾಂತ್ರಿಕ ಎ.ಆರ್. ರೆಹಮಾನ್ ಅವರು ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Written ByYashaswini V
Published: Oct 05, 2026, 08:38 AM IST|Updated: Oct 05, 2026, 08:43 AM IST
joinshare
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಮ್ಯೂಸಿಕ್‌ ಮಾಂತ್ರಿಕ ಎ. ಆರ್.‌ ರೆಹಮಾನ್..‌ ವಿಡಿಯೋ ವೈರಲ್

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ದಿನ ಭವಿಷ್ಯ 05-10-2026: ಸೋಮವಾರದಂದು ಶಿವ ಯೋಗ.. ಈ ರಾಶಿಯವರಿಗೆ ಪರಮೇಶ್ವರನ ಕೃಪೆ

ದಿನ ಭವಿಷ್ಯ 05-10-2026: ಸೋಮವಾರದಂದು ಶಿವ ಯೋಗ.. ಈ ರಾಶಿಯವರಿಗೆ ಪರಮೇಶ್ವರನ ಕೃಪೆ

2

ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಮ್ಯೂಸಿಕ್‌ ಮಾಂತ್ರಿಕ ಎ. ಆರ್.‌ ರೆಹಮಾನ್..‌ ವಿಡಿಯೋ ವೈರಲ್

3

ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

4

KPSC ನೇಮಕಾತಿ ಅಕ್ರಮ ತನಿಖೆ: ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲು

5

ಆರ್ಯನ್ ಖಾನ್ ಡೇಟಿಂಗ್ ಮಾಡ್ತಿರೋ ಈ ಬ್ರೆಜಿಲ್ ಸುಂದರಿ ಯಾರು ಗೊತ್ತೇ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಐಟಿ ಬಿಟಿ ಹಬ್...‌ ಸಿಲಿಕಾನ್‌ ಸಿಟಿ... ಗಾರ್ಡನ್‌ ಸಿಟಿ ಎಂದು ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುವ ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರು ಇಡೀ ದೇಶದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಇಲ್ಲಿನ ಟ್ರಾಫಿಕ್‌ ಸಮಸ್ಯೆಗೆ ಹೆಸರುವಾಗಿ ಆಗಿದೆ. ರಸ್ತೆ ತುಂಬಾ ವಾಹನ, ಹಾರ್ನ್​ ಸದ್ದು, ನಿಧಾನವಾಗಿ ಚಲಿಸುವ ಬೈಕ್​, ಕಾರುಗಳು ಈ ಎಲ್ಲವೂ ಬೆಂಗಳೂರು ಟ್ರಾಫಿಕ್ (Bengaluru Traffic) ಹೆಸರು ಕೇಳಿದರೆ ಅಬ್ಬಬ್ಬಾ... ಉಸಿರುಗಟ್ಟಿಸುವಂತೆ ಮಾಡುತ್ತವೆ. ಇದೀದಗ ಈ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಮ್ಯೂಸಿಕ್ ಮಾಂತ್ರಿಕ ಎ. ಆರ್.‌ ರೆಹಮಾನ್‌ ಕೂಡ ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ಟ್ರಾಫಿಕ್​ ಮುಗಿಯದ ಅಧ್ಯಯನವಾಗಿದ್ದು, ಇದೀಗ ಈ ಟ್ರಾಫಿಕ್​ನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಸಿಲುಕಿಕೊಂಡಿರೋ ಪ್ರಸಂಗ ನಡೆದಿದೆ. ಮ್ಯೂಸಿಕ್‌ ಮಾಂತ್ರಿಕ ಎ. ಆರ್.​ ರೆಹಮಾನ್​ ಅವರು ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿರುವ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ನಗರದ ವೈಟ್‌ಫೀಲ್ಡ್‌ ಪ್ರದೇಶದಲ್ಲಿರುವ KTPO ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ 'ದಿ ವಂಡರ್‌ಮೆಂಟ್ ಟೂರ್' (The Wonderment Tour) ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಎ. ಆರ್.​ ರೆಹಮಾನ್​​ ಅವರ ಮ್ಯೂಸಿಕ್​ ಕಾನ್ಸರ್ಟ್​ ಮುಗಿಸಿ ವಾಪಸ್​ ತೆರಳುವಾಗ ಬೆಂಗಳೂರು ಟ್ರಾಫಿಕ್​ ಬಿಸಿಯನ್ನು ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.

ಎ. ಆರ್.​ ರೆಹಮಾನ್​ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುತ್ತಿರುವ ದೃಶ್ಯದ ತುಣುಕುಗಳು ಕೂಡ ಸದ್ಯ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಎಆರ್​ ರೆಹಮಾನ್​ ಅವರನ್ನು ಅಭಿಮಾನಿಗಳು ಗುರುತಿಸಿದ್ದಾರೆ.

ಅಲ್ಲದೇ ಟ್ರಾಫಿಕ್‌ನಲ್ಲಿ ಸಿಲುಕಿದ್ದರೂ ಈ ವೇಳೆ ಕಿಟಕಿಯ ಮೂಲಕ ಎ. ಆರ್.​ ರೆಹಮಾನ್​ ನಗುತ್ತಾ ಅಭಿಮಾನಿಗಳತ್ತ ಕೈ ಬೀಸುವುದನ್ನು ಈ ವೈರಲ್‌ ವಿಡಿಯೋದಲ್ಲಿ ನೋಡಬಹುದಾಗಿದೆ.

 

 

 

 

 

View this post on Instagram

 

 

 

 

 

 

 

 

 

 

 

A post shared by manoj kumar (@roger_manoj)

 ಎ.ಆರ್.​ ರೆಹಮಾನ್​ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಸಂಗೀತ ಮಾಂತ್ರಿಕನನ್ನು ತಮ್ಮ ಮೊಬೈಲ್‌ ಕ್ಯಾಮರಾದಲ್ಲಿ ಕ್ಯಾಪ್ಚರ್‌ ಮಾಡುವ ಅವಕಾಶ ಸಿಕ್ಕ ನೀವೇ ಅದೃಷ್ಟವಂತರು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನೀವು ಅದೃಷ್ಟವಂತರು, ನಿಮ್ಮ ಫೋನ್‌ನಲ್ಲಿ ಮ್ಯೂಸಿಕ್‌ ಮಾಂತ್ರಿಕನನ್ನು ಸೆರೆಹಿಡಿದಿದ್ದೀರಿ, ಇಂತಹ ಅದೃಷ್ಟ ಎಲ್ಲರಿಗೂ ಇರಬೇಕಲ್ಲ ಎಂದು ಬರೆದಿದ್ದಾರೆ.

ಇನ್ನು ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಯೊಬ್ಬರು, ಈ ವೈರಲ್‌ ವಿಡಿಯೋದಲ್ಲಿ ಕಾಮೆಂಟ್‌ ಮಾಡಿದ್ದು, ಎಆರ್‌ಆರ್ (ARR) ಸಮಯಕ್ಕೆ ಸರಿಯಾಗಿ ಆಗಮಿಸಿ ನಮಗೆ ಅದ್ಭುತ ಅನುಭವವನ್ನು ನೀಡಿದರು. ಟ್ರಾಫಿಕ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕಿಂತ 20 ನಿಮಿಷ ಮುಂಚಿತವಾಗಿಯೇ ಕಾರ್ಯಕ್ರಮವನ್ನು ಆರಂಭಿಸಿದರು... ಎಲ್ಲಿಯೂ ಕಿಂಚಿತ್ತೂ ದೂರು ನೀಡಲಿಲ್ಲ... ನಿಜವಾದ ದಿಗ್ಗಜ ಅವರು... ಅದರಲ್ಲೂ, ಆ ಟ್ರಾಫಿಕ್ ದಟ್ಟಣೆ ಅವರ ಕಾರ್ಯಕ್ರಮಕ್ಕಾಗಿಯೇ ಉಂಟಾಗಿದ್ದು! ನಾವು ಸಂಜೆ 5:40ಕ್ಕೆ ತಲುಪಿದರೂ, ನಮ್ಮನ್ನು ವಿಐಪಿ (VIP) ಆಸನಗಳಿದ್ದರೂ ಅತ್ಯಂತ ಹಿಂಭಾಗದಲ್ಲಿ ಕೂರಿಸಲಾಗಿತ್ತು; ಅಂದರೆ, ಎಆರ್‌ಆರ್‌ಗಾಗಿ ಬೆಂಗಳೂರೇ ಅಲ್ಲಿಗೆ ಹರಿದುಬಂದಿತ್ತು ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಈ ರೀತಿ ಬರೆದಿದ್ದಾರೆ.. ಟ್ರಾಫಿಕ್‌ ಇದ್ದರೂ ಅವರು ಸಮಯಪಾಲನೆಯಲ್ಲಿ ಅಷ್ಟು ನಿಷ್ಠರಾಗಿದ್ದರು; ಕಾರ್ಯಕ್ರಮವನ್ನು ನಿಗದಿತ ಸಮಯಕ್ಕಿಂತ ಮುಂಚೆಯೇ ಆರಂಭಿಸಿ, ನಿಗದಿತ ಸಮಯದ ನಂತರ ಮುಕ್ತಾಯಗೊಳಿಸಿದರು. ನಿಜವಾದ ಲೆಜೆಂಡ್

ಇನ್ನೋರ್ವ ನೆಟ್ಟಿಗರು ಈ ರೀತಿ ಬರೆದಿದ್ದಾರೆ:- ಬೆಂಗಳೂರನ್ನು ಪ್ರೀತಿಸಲು ಇದೊಂದು ಉತ್ತಮ ಕಾರಣ. ಇಲ್ಲಿ ಎಲ್ಲರಿಗೂ ಸಮಾನವಾದ ನಡೆ-ನುಡಿ. ಉಳಿದಂತೆ ಈ ನಗರವು ಅತ್ಯದ್ಭುತವಾಗಿದೆ. ಹಾಗಾಗಿ, ಟ್ರಾಫಿಕ್ ಬಗ್ಗೆ ದೂರುವುದರಲ್ಲಿ ಅರ್ಥವಿಲ್ಲ; ಅದನ್ನು ಹಾಗೆಯೇ ಸ್ವೀಕರಿಸಿಬಿಡಿ! ಎಂದಿದ್ದಾರೆ. 
 

Add Zee News as a Preferred Source
TAGS:
Viral
Cinema