• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೈಕ್ ಟ್ಯಾಕ್ಸಿ vs ಆಟೋ: ಯಾವುದು ಅಗ್ಗ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕಾಚಾರ

ಬೈಕ್ ಟ್ಯಾಕ್ಸಿ vs ಆಟೋ: ಯಾವುದು ಅಗ್ಗ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕಾಚಾರ

ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸೇವೆ ನಿರಾಳವಾಗಿದ್ದು, ಬೆಂಗಳೂರಿನಂತಹ ಟ್ರಾಫಿಕ್ ನಗರಗಳಲ್ಲಿ ಸಮಯ ಉಳಿಸಲು ಇದು ಬೆಸ್ಟ್ ಆಯ್ಕೆಯಾಗಿದೆ. ಹಾಗಾದ್ರೆ ಆಟೋಗಿಂತ ಬೈಕ್‌ ಟ್ಯಾಕ್ಸಿ ಕಡಿಮೆ ಹಣನಾ ಇವೆರಡರಲ್ಲಿ ಯಾವುದು ಬಜೆಟ್‌ ಫ್ರೆಂಡ್ಲಿ ಇಲ್ಲಿದೆ ಮಾಹಿತಿ

Written ByChetana Devarmani
Published: Nov 25, 2026, 16:48 IST|Updated: Nov 25, 2026, 16:56 IST
joinshare
ಬೈಕ್ ಟ್ಯಾಕ್ಸಿ vs ಆಟೋ: ಯಾವುದು ಅಗ್ಗ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕಾಚಾರ

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಸಿಎಂ ಭರವಸೆಗೆ ಮಣಿಯದ ಆಶಾ ಕಾರ್ಯಕರ್ತೆಯರು: ನಾಳೆ ವಿನೂತನ ಪ್ರತಿಭಟನೆಗೆ ಕರೆ

ಸಿಎಂ ಭರವಸೆಗೆ ಮಣಿಯದ ಆಶಾ ಕಾರ್ಯಕರ್ತೆಯರು: ನಾಳೆ ವಿನೂತನ ಪ್ರತಿಭಟನೆಗೆ ಕರೆ

2

ಬೈಕ್ ಟ್ಯಾಕ್ಸಿ vs ಆಟೋ: ಯಾವುದು ಅಗ್ಗ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕಾಚಾರ

3

ಇತಿಹಾಸ ಸೃಷ್ಟಿಸಿದ ಪೋರ್ಟೊ ರಿಕೊ ಸುಂದರಿ: 2026ರ ‘ಮಿಸ್ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡ 7 ವರ್ಷದ ಮಗುವಿನ ತಾಯಿ

4

ಹೊಸ ದಾಖಲೆ ಬರೆದ ಜೆನ್ನಿಫರ್‌ ಬ್ಯಾರೆಟ್ಟೊ : 2026ರ ಮಿಸ್ ಯೂನಿವರ್ಸ್ ಆದ ಒಂದು ಮಗುವಿನ ತಾಯಿ

5

ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಅಂತಿಮ! 4,681 ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ; ಯಾವ ವರ್ಗಕ್ಕೆ ಎಷ್ಟು ಕ್ಷೇತ್ರ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ನಗರ ಪ್ರದೇಶಗಳಲ್ಲಿ ದಿನನಿತ್ಯ ಆಫೀಸ್, ಕಾಲೇಜು ಅಥವಾ ಮೆಟ್ರೋ ಸ್ಟೇಷನ್‌ಗೆ ಹೋಗಿ ಬರೋರಿಗೆ ಈಗ ಒಂದೇ ಪ್ರಶ್ನೆ. ಬೈಕ್ ಟ್ಯಾಕ್ಸಿ ಬೆಸ್ಟಾ ಅಥವಾ ಆಟೋ ಬೆಸ್ಟಾ? ಇತ್ತೀಚೆಗಷ್ಟೇ (ನವೆಂಬರ್ 20ರಂದು) ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಓಲಾ, ಉಬರ್ ಮತ್ತು ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವಿಚಾರಣೆ ವೇಳೆ ಸ್ವತಃ ನ್ಯಾಯಾಲಯವೇ ಬೈಕ್ ಟ್ಯಾಕ್ಸಿ ದರ ಆಟೋಗಿಂತ ಐದು ಪಟ್ಟು ಅಗ್ಗವಾಗಿದ್ದು, ಲಕ್ಷಾಂತರ ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದೆ.

ಹಾಗಾದರೆ ನಿಜವಾಗಿಯೂ ಬೈಕ್ ಟ್ಯಾಕ್ಸಿ ಮತ್ತು ಆಟೋ ದರಗಳ ನಡುವೆ ಎಷ್ಟು ವ್ಯತ್ಯಾಸವಿದೆ? ದಿನನಿತ್ಯ ಓಡಾಡುವ ಒಬ್ಬ ಸಾಮಾನ್ಯ ಪ್ರಯಾಣಿಕನ ತಿಂಗಳ ಬಜೆಟ್ ಮೇಲೆ ಇದು ಹೇಗೆ ಪರಿಣಾಮ ಬೀರುತ್ತೆ? ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾಚಾರ.

ಕಿಲೋಮೀಟರ್ ಲೆಕ್ಕಾಚಾರ

ಸರ್ಕಾರ ನಿಗದಿಪಡಿಸಿರುವ ಅಧಿಕೃತ ಮೀಟರ್ ದರದ ಪ್ರಕಾರ, ಬೆಂಗಳೂರಿನಲ್ಲಿ ಆಟೋ ಹತ್ತಿದ್ರೆ ಮೊದಲ 2 ಕಿ.ಮೀ.ಗೆ ಕನಿಷ್ಠ ₹36 ಮತ್ತು ನಂತರದ ಪ್ರತಿ ಕಿ.ಮೀ.ಗೆ ₹18 ಕೊಡಬೇಕು. ಆದರೆ ವಾಸ್ತವದಲ್ಲಿ ಆ್ಯಪ್‌ಗಳ ಮೂಲಕ ಬುಕ್ ಮಾಡಿದ್ರೆ ಅಥವಾ ಪೀಕ್ ಅವರ್‌ಗಳಲ್ಲಿ ಮಿನಿಮಮ್ ದರವೇ ₹50 ರಿಂದ ₹70 ದಾಟುತ್ತೆ. ಕೆಲವೊಮ್ಮೆ ಚಾಲಕರು ಆ್ಯಪ್ ದರಕ್ಕಿಂತ ₹20-₹30 ಹೆಚ್ಚುವರಿ ಕೇಳುವುದು ಸಾಮಾನ್ಯವಾಗಿದೆ.

ಇದಕ್ಕೆ ವಿರುದ್ಧವಾಗಿ, ಬೈಕ್ ಟ್ಯಾಕ್ಸಿಗಳಲ್ಲಿ ಕನಿಷ್ಠ ದರ ಕೇವಲ ₹15 ರಿಂದ ₹25 ರೊಳಗೆ ಶುರುವಾಗುತ್ತೆ.
3 ಕಿ.ಮೀ ಪ್ರಯಾಣಕ್ಕೆ (ಉದಾ: ಮನೆಯಿಂದ ಮೆಟ್ರೋ ಸ್ಟೇಷನ್): ಆಟೋದಲ್ಲಿ ₹60 ರಿಂದ ₹80 ಖರ್ಚಾದ್ರೆ, ಬೈಕ್ ಟ್ಯಾಕ್ಸಿಯಲ್ಲಿ ಕೇವಲ ₹25 ರಿಂದ ₹35 ರೊಳಗೆ ಮುಗಿಯುತ್ತೆ. 6 ಕಿ.ಮೀ ಪ್ರಯಾಣಕ್ಕೆ: ಆಟೋದಲ್ಲಿ ₹110 ರಿಂದ ₹140 ತಗುಲಿದರೆ, ಬೈಕ್ ಟ್ಯಾಕ್ಸಿಯಲ್ಲಿ ₹50 ರಿಂದ ₹65 ಮಾತ್ರ ಆಗುತ್ತೆ.

ತಿಂಗಳ ಬಜೆಟ್ ಲೆಕ್ಕ: ತಿಂಗಳಿಗೆ ₹3,000 ಉಳಿತಾಯ!

ಒಬ್ಬ ಉದ್ಯೋಗಿ ಅಥವಾ ವಿದ್ಯಾರ್ಥಿ ದಿನಕ್ಕೆ ಹೋಗಿ ಬರಲು ಒಟ್ಟು 10 ಕಿ.ಮೀ. ಪ್ರಯಾಣಿಸುತ್ತಾರೆ ಅಂದುಕೊಳ್ಳೋಣ:

ಆಟೋದಲ್ಲಿ ಓಡಾಡಿದ್ರೆ ದಿನಕ್ಕೆ ಕನಿಷ್ಠ ₹180 ರಿಂದ ₹200 ಖರ್ಚಾಗುತ್ತೆ. ತಿಂಗಳಿಗೆ 22 ದಿನ ಅಂದ್ರೆ ಬರೋಬ್ಬರಿ ₹4,000 ದಿಂದ ₹4,400 ಬರೀ ಪ್ರಯಾಣಕ್ಕೇ ಹೋಗುತ್ತೆ.

ಬೈಕ್ ಟ್ಯಾಕ್ಸಿಯಲ್ಲಿ ಓಡಾಡಿದ್ರೆ ದಿನಕ್ಕೆ ₹80 ರಿಂದ ₹100 ರೊಳಗೆ ಮುಗಿಯುತ್ತೆ. ತಿಂಗಳಿಗೆ ಹೆಚ್ಚೆಂದರೆ ₹1,800 ರಿಂದ ₹2,200 ಖರ್ಚಾಗುತ್ತೆ. ಅಂದರೆ ಒಬ್ಬ ಸಾಮಾನ್ಯ ಪ್ರಯಾಣಿಕನಿಗೆ ತಿಂಗಳಿಗೆ ಕನಿಷ್ಠ ₹2,000 ದಿಂದ ₹3,000 ಉಳಿತಾಯವಾಗುತ್ತೆ! ಜೊತೆಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕದೆ ಸಮಯವೂ ಉಳಿಯುತ್ತೆ.

ಮುಂದೆ ಬೈಕ್ ಟ್ಯಾಕ್ಸಿ ದರ ಏರಿಕೆಯಾಗುತ್ತಾ?

ಸುಪ್ರೀಂ ಕೋರ್ಟ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ ಬೆನ್ನಲ್ಲೇ, ರಾಜ್ಯ ಸಾರಿಗೆ ಇಲಾಖೆ ಈಗ ಹೊಸ ನಿಯಮಗಳನ್ನು ತರಲು ಸಿದ್ಧತೆ ನಡೆಸಿದೆ. ವೈಟ್ ಬೋರ್ಡ್ (ಖಾಸಗಿ) ಬೈಕ್‌ಗಳ ಬದಲು ಕಮರ್ಷಿಯಲ್ ಹಳದಿ ಬೋರ್ಡ್, ಪ್ರಯಾಣಿಕರ ವಿಮೆ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ನಿಯಮಗಳು ಜಾರಿಯಾದ್ರೆ, ಬೈಕ್ ಸವಾರರಿಗೆ ಪರವಾನಿಗೆ ಮತ್ತು ವಿಮೆ ಖರ್ಚು ಹೆಚ್ಚಾಗುವುದರಿಂದ ಬೈಕ್ ಟ್ಯಾಕ್ಸಿ ದರವೂ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.

ನೀವು ಒಬ್ಬರೇ ಆಫೀಸ್ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಲಗೇಜ್ ಇಲ್ಲದಿದ್ದರೆ ಮತ್ತು ಹಣ ಹಾಗೂ ಸಮಯ ಉಳಿಸಬೇಕೆಂದರೆ ಬೈಕ್ ಟ್ಯಾಕ್ಸಿ ಅತ್ಯುತ್ತಮ ಆಯ್ಕೆ. ಆದರೆ ನಿಮ್ಮ ಜೊತೆ ಇಬ್ಬರು-ಮೂವರು ಇದ್ದರೆ, ಮಳೆ ಬರುತ್ತಿದ್ದರೆ, ವಯಸ್ಸಾದವರು ಅಥವಾ ಲಗೇಜ್ ಇದ್ದರೆ ಆಟೋ ಸುರಕ್ಷಿತ ಮತ್ತು ಆರಾಮದಾಯಕ.
 

Add Zee News as a Preferred Source
TAGS:
Kannada News