• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?

ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?

ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎಂದು ಹೇಳಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರೇ ಈ ಮಾತು ಎಷ್ಟು ಸತ್ಯ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್. ಬಹಿರಂಗ ಪತ್ರದ ಮೂಲಕ ಪ್ರಶ್ನಿಸಿದ್ದಾರೆ.

Written ByYashaswini V
Published: Oct 12, 2026, 11:06 AM IST|Updated: Oct 12, 2026, 11:09 AM IST
joinshare
ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಕೇಂದ್ರ ಸಚಿವ ವಿ.ಸೋಮಣ್ಣನಿಗೆ ಶಿವಮೊಗ್ಗದಲ್ಲಿ ಪ್ರತಿಭಟನೆ ಬಿಸಿ

ಕೇಂದ್ರ ಸಚಿವ ವಿ.ಸೋಮಣ್ಣನಿಗೆ ಶಿವಮೊಗ್ಗದಲ್ಲಿ ಪ್ರತಿಭಟನೆ ಬಿಸಿ

2

ಮಂಡ್ಯದ ಕೆನ್ನಾಳು ಸರ್ಕಾರಿ ಶಾಲೆಯಲ್ಲಿ ಅಗ್ನಿ ಅವಘಡ, ಪೀಠೋಪಕರಣಗಳು ಸುಟ್ಟು ಭಸ್ಮ!

3

ದಸರಾ ಸಂಭ್ರಮದ ನಡುವೆ ಪರೀಕ್ಷೆ ಕಿರಿಕ್‌.. ನವರಾತ್ರಿ ಹೊತ್ತಲ್ಲಿ ಪರೀಕ್ಷೆ ಆಯೋಜನೆಗೆ ವಿದ್ಯಾರ್ಥಿಗಳ ಆಕ್ರೋಶ

4

ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?

5

ಅಮಿರ್ ಖಾನ್ ಸೊಸೆಯ ಮೇಲೆ ಹಲ್ಲೆ ನಡೆದಿತ್ತಾ? ಬಿಡುಗಡೆಯಾದ ಬೆನ್ನಲ್ಲೇ ವಿಡಿಯೋ ಹಂಚಿಕೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯ ರಾಜಕಾರಣದಲ್ಲಿ ಸದ್ಯ ಆಕ್ಟೀವ್‌ ಮಿನಿಸ್ಟರ್‌ ಎಂತಲೇ ಖ್ಯಾತಿ ಪಡೆದಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್. ಬಹಿರಂಗ ಪತ್ರ ಬರೆಯುವ ಮೂಲಕ ಗಂಭೀರ ಆರೋಪ ಮಾಡಿದ್ದು, ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎಂದು ಹೇಳಿಕೊಳ್ಳುವ ನೀವು ಸುಮಾರು 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳಿಗೆ ಸಂಬಂಧಿಸಿದ 80ಕ್ಕೂ ಅಧಿಕ ಫೈಲ್‌ಗಳನ್ನು ಕಳೆದೆರಡು ತಿಂಗಳಿನಿಂದ ನಿಮ್ಮ ಬಳಿಯೇ ಇರಿಸಿಕೊಂಡಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿರುವ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ರಮೇಶ್ ಎನ್.ಆರ್., 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ 80ಕ್ಕೂ ಹೆಚ್ಚು ಕಡತಗಳು ಸಚಿವರ ಕಚೇರಿಯಲ್ಲಿ ಬಾಕಿ ಉಳಿದಿವೆ. ಟೆಂಡರ್ ಪ್ರಕ್ರಿಯೆಯ ಕಡತಗಳಿಗೆ ಸಚಿವರ ಅನುಮೋದನೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರಿಗೆ ಉತ್ತರ ನೀಡುವಂತೆ ಆಗ್ರಹ:
ಸ್ವಚ್ಛ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಸಚಿವರು ಕಡತಗಳ ವಿಳಂಬದ ಬಗ್ಗೆ ಸಾರ್ವಜನಿಕರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿರುವ  ರಮೇಶ್ ಎನ್.ಆರ್.,  ರಾಜ್ಯ ರಾಜಧಾನಿ ಬೆಂಗಳೂರಿನ ಬರೋಬ್ಬರಿ 27 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಕಾಮಗಾರಿ ಟೆಂಡರ್‌ ಫೈಲ್‌ಗಳು ತಿಂಗಳುಗಳಿಂದ ಬೆಂಗಳೂರು ಅಭಿವೃದ್ಧಿ ಸಚಿವರ ಸಹಿಗಾಗಿ ಕಾದು ಕುಳಿತಿವೆ ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದಾರೆ. ಇದರೊಂದಿಗೆ, ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಂದ ಮುಖ್ಯ ಅಭಿಯಂತರರು, ಅಪರ ಆಯುಕ್ತರಿಂದ ಹಿಡಿದು ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳವರೆಗೆ ಐದು ಹಂತಗಳ ಅನುಮೋದನೆ ಪಡೆದ ಬಳಿಕ ಕಡತಗಳು ಸಚಿವ ಕೃಷ್ಣ ಬೈರೇಗೌಡರ ಸಹಿಗಾಗಿ ಬಾಕಿ ಉಳಿದಿವೆ. ಸಚಿವರ ಆಪ್ತ ಕಾರ್ಯದರ್ಶಿ ಸೇರಿದಂತೆ ಕಚೇರಿ ಸಿಬ್ಬಂದಿ ಮೂಲಕ ಟೆಂಡರ್ ಕಡತಗಳ ಅನುಮೋದನೆಗೆ ಶೇ.5ರಷ್ಟು ಕಮಿಷನ್ ಕೇಳಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರತಿಯೊಂದು ಕಡತಕ್ಕೆ ಶೇ.5ರಷ್ಟು ಕಮಿಷನ್!
ಐದು ನಗರ ಪಾಲಿಕೆಗಳ ಮುಖ್ಯ ಅಭಿಯಂತರರ ಮೂಲಕ ಪ್ರತಿಯೊಂದು ಕಡತಕ್ಕೆ ಶೇ.5ರಷ್ಟು ಕಮಿಷನ್ ಹಣ ತಲುಪಿಸುವಂತೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರನ್ನು ಕೇಳಲಾಗುತ್ತಿದೆ ಎಂದು ಆರೋಪಿಸಿರುವ ರಮೇಶ್ ಎನ್.ಆರ್. , ತಮ್ಮ ಹೆಸರಿನಲ್ಲಿ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪ ಸಚಿವರ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಮಾಡಿರುವುದರ ಜೊತೆಗೆ, ಆರೋಪಗಳು ನಿಜವಾಗಿದ್ದರೆ ಸಂಬಂಧಪಟ್ಟ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಚಿವರು ಸಿದ್ಧರಿದ್ದಾರೆಯೇ ಎಂದು ಬಹಿರಂಗ ಪತ್ರದಲ್ಲಿ ಕೇಳಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲೂ ಸಚಿವರಿಗೆ ಪ್ರಶ್ನೆ:
* ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿದೆ ಎಂದು ರಮೇಶ್ ಎನ್.ಆರ್. ಆರೋಪ ಮಾಡಿದ್ದು, ಸರ್ಕಾರಿ ಆಸ್ತಿ ಕಬಳಿಕೆ ಪ್ರಕರಣಗಳನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಕೊಡಗಲಹಟ್ಟಿ ಗ್ರಾಮದಲ್ಲಿ ಸುಮಾರು 22.30 ಎಕರೆ ಸರ್ಕಾರಿ ಆಸ್ತಿಯನ್ನು ಕಬಳಿಸಿದ ಆರೋಪದ ಪ್ರಕರಣವನ್ನೂ ಪ್ರಸ್ತಾಪಿಸಿರುವ ಅವರು, ಸದರಿ ಆಸ್ತಿಯ ಮೌಲ್ಯ ₹600 ಕೋಟಿಗೂ ಹೆಚ್ಚು ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ ದಾಖಲೆ ಆಧಾರಿತ ದೂರಿನ ಬಳಿಕ 2016ರಲ್ಲೇ ಜಿಲ್ಲಾಡಳಿತ ಆಸ್ತಿಯನ್ನು ವಶಕ್ಕೆ ಪಡೆದಿತ್ತು ಎಂದು ರಮೇಶ್ ಎನ್.ಆರ್. ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸರ್ಕಾರಿ ಆಸ್ತಿ ಕಬಳಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಆಸ್ತಿಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲು ಸಚಿವರು ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿರುವ ಅವರು ಕೆಳಗಿನ ಪ್ರಶ್ನೆಗಳಿಗೆ ಬಹಿರಂಗ ಉತ್ತರ ನೀಡುವಂತೆ ಸಚಿವ ಕೃಷ್ಣ ಭೈರೇಗೌಡರಿಗೆ ಆಗ್ರಹಿಸಿದ್ದಾರೆ.

* ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ದೀರ್ಘಕಾಲದಿಂದ ನಿಲ್ಲಿಸಿರುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಸೇರಿದಂತೆ ಹಲವು ಕಾರ್ಯಗಳನ್ನು ಸಚಿವರು ಕೈಗೊಂಡಿರುವುದನ್ನು ಪತ್ರದಲ್ಲಿ ಉಲ್ಲೇಖ
* ಒಂದೆಡೆ ಸ್ವಚ್ಛ ರಾಜಕಾರಣದ ಹೇಳಿಕೆ, ಮತ್ತೊಂದೆಡೆ ಟೆಂಡರ್ ಕಡತಗಳ ವಿಳಂಬ ಮತ್ತು ಕಮಿಷನ್ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹ
* 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಕಡತಗಳು ಎರಡು ತಿಂಗಳಿಂದ ಬಾಕಿ ಉಳಿದಿರುವುದಕ್ಕೆ ಕಾರಣ ತಿಳಿಸುವಂತೆ ಒತ್ತಾಯ
* ಕಮಿಷನ್ ಆರೋಪಗಳ ಬಗ್ಗೆ ತನಿಖೆ ಅಥವಾ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಚಿವರ ನಿಲುವು ಏನು ಎಂದು ಪ್ರಶ್ನೆ
* ಈ ಎಲ್ಲ ಆರೋಪಗಳು ಮತ್ತು ಪ್ರಶ್ನೆಗಳಿಗೆ ಕೃಷ್ಣ ಭೈರೇಗೌಡರು ಕೂಡಲೇ ಬಹಿರಂಗ ಉತ್ತರ ನೀಡಬೇಕೆಂದು ರಮೇಶ್ ಎನ್.ಆರ್. ಆಗ್ರಹಿಸಿದ್ದಾರೆ. 

Add Zee News as a Preferred Source
TAGS:
Karnataka Politics
Krishna Byre Gowda
BJP
Kannada News