• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /"ಜಗತ್ತಿಗೆ ಅನ್ನ ಹಾಕುವ ರೈತ ನಿಮನ್ನ ಯಾಕ್‌ ಟಾರ್ಗೆಟ್ ಮಾಡ್ತಾನೆ?": ಜೋಶಿ ವಿರುದ್ಧ ಶಶಿಕಾಂತ್ ಗುರೂಜಿ ವಾಗ್ದಾಳಿ

"ಜಗತ್ತಿಗೆ ಅನ್ನ ಹಾಕುವ ರೈತ ನಿಮನ್ನ ಯಾಕ್‌ ಟಾರ್ಗೆಟ್ ಮಾಡ್ತಾನೆ?": ಜೋಶಿ ವಿರುದ್ಧ ಶಶಿಕಾಂತ್ ಗುರೂಜಿ ವಾಗ್ದಾಳಿ

"ನಾವು ಜಗತ್ತಿಗೆ ಅನ್ನ ಹಾಕುವ ಸಾಮಾನ್ಯ ಅನ್ನದಾತರು, ನಮ್ಮ ಹೋರಾಟವನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಶಬ್ದ ಬಳಕೆ ಮಾಡುವುದು ಸರಿಯಲ್ಲ" ಎಂದು ಯರಿಕೊಪ್ಪದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಶಶಿಕಾಂತ್ ಗುರೂಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written ByKrishna NK
Published: Oct 18, 2026, 04:01 PM IST|Updated: Oct 18, 2026, 04:06 PM IST
joinshare
"ಜಗತ್ತಿಗೆ ಅನ್ನ ಹಾಕುವ ರೈತ ನಿಮನ್ನ ಯಾಕ್‌ ಟಾರ್ಗೆಟ್ ಮಾಡ್ತಾನೆ?": ಜೋಶಿ ವಿರುದ್ಧ ಶಶಿಕಾಂತ್ ಗುರೂಜಿ ವಾಗ್ದಾಳಿ
Image Credit: Pralhad Joshi

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

2

ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

3

ತಿರುಮಲಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ಹಬ್ಬದ ರಜೆಗೆ ಈ ರೈಲುಗಳಲ್ಲಿ ಸೀಟು ಖಾಲಿ!

4

ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

5

ನೀವು ಬೆಳಿಗ್ಗೆ ಬಿಸಿನೀರು ಕುಡಿಯುತ್ತಿದ್ದೀರಾ? ಈ ತಪ್ಪುಗಳನ್ನು ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಧಾರವಾಡ: "ನಾವು ಜಗತ್ತಿಗೆ ಅನ್ನ ಹಾಕುವ ಸಾಮಾನ್ಯ ಅನ್ನದಾತರು, ನಮ್ಮ ಹೋರಾಟವನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಶಬ್ದ ಬಳಕೆ ಮಾಡುವುದು ಸರಿಯಲ್ಲ" ಎಂದು ಶಶಿಕಾಂತ್ ಗುರೂಜಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡದ ಯರಿಕೊಪ್ಪದಲ್ಲಿ ರೈತರ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, "ನೀವು ಕೇಂದ್ರದ ಹಿರಿಯ ಹಾಗೂ ಅನುಭವಿ ಮಂತ್ರಿಗಳು, ಮೂರ್ನಾಲ್ಕು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದೀರಿ. ಜಗತ್ತಿಗೆ ಅನ್ನ ಹಾಕುವ ನಿಜವಾದ ರೈತರ ಹೋರಾಟಕ್ಕೆ ಲಕ್ಷಾಂತರ ಜನರು, ವಿವಿಧ ಸಂಘಟನೆಗಳು, ವೈದ್ಯರು ಮತ್ತು ವಕೀಲರು ಸಾಥ್ ಕೊಟ್ಟಿದ್ದಾರೆ. ಇದು ಹೇಗೆ ಟಾರ್ಗೆಟ್ ಹೋರಾಟ ಆಗುತ್ತದೆ?" ಎಂದು ಪ್ರಶ್ನಿಸಿದರು.

"ನೀವೇನು ಬಂದು ನಮ್ಮೂರಿನ ಪಂಚಾಯತ್ ಚುನಾವಣೆಗೆ ನಿಲ್ಲುವವರಿದ್ದೀರಾ? ನನ್ನ ಮತವೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇಲ್ಲ, ಚಿಕ್ಕೋಡಿಯಲ್ಲಿ ಇದೆ. ಚೂನಪ್ಪ ಪೂಜಾರಿ ಅವರ ಮತವೂ ಚಿಕ್ಕೋಡಿಯಲ್ಲೇ ಇದೆ. ಹೀಗಿರುವಾಗ ರೈತರು ನಿಮಗೆ ಹೇಗೆ ಟಾರ್ಗೆಟ್ ಮಾಡಲು ಸಾಧ್ಯ?" ಎಂದು ಗುರೂಜಿ ಕಿಡಿಕಾರಿದರು.

ರಾಜಕೀಯ ಮತ್ತು ಜಾತಿ-ಧರ್ಮವನ್ನು ಬದಿಗಿಟ್ಟು ಇಂದು ರೈತ ಬೀದಿಯಲ್ಲಿ ಕುಳಿತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ ಅವರು, "ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಬದ್ಧವಾಗಿ ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಎಂಎಸ್ಪಿ ಜಾರಿಗೆ ತಂದು ಕೊಟ್ಟರೆ ಜೋಶಿ ಅವರೇ, ನೀವು ಯಾವ ಜಿಲ್ಲೆಗೆ ಹೋದರೂ ನಾವು ಸ್ವಾಗತಿಸುತ್ತೇವೆ. ನಿಮ್ಮನ್ನು ವಿರೋಧಿಸಲು ಅಥವಾ ಖರ್ಚು ಮಾಡಲು ನಮ್ಮ ಬಳಿ ಯಾವುದೇ ಪಗಾರವಿಲ್ಲ" ಎಂದರು.

ಮುಂದುವರಿದು ಮಾತನಾಡುತ್ತಾ, "ಸಿದ್ದಾರೂಡರ ಪುಣ್ಯಭೂಮಿಯಲ್ಲಿ ನೀವು ರಾಜಕಾರಣ ಮಾಡುತ್ತಿದ್ದೀರಿ. ನಾವು ಯಾರ ವಿರೋಧಿಗಳೂ ಅಲ್ಲ, ನಮ್ಮ ಹೋರಾಟ ದೀನದಲಿತರು, ರೈತರು ಹಾಗೂ ವಿದ್ಯಾರ್ಥಿಗಳ ಪರವಾಗಿದೆ. ಸಿಎಂ ಅವರೇ ನಮ್ಮ ಹೋರಾಟದ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ. SAP ದರ 1000 ರೂ. ಮತ್ತು ಕಬ್ಬಿನ ಕಾರ್ಖಾನೆ ಮಾಲೀಕರಿಂದ 500 ರೂ. ಸಿಗಬೇಕು ಎಂದು ಆಗ್ರಹಿಸಿದ್ದೇವೆ" ಎಂದರು.

"ಸನ್ಮಾನ್ಯ ಜೋಶಿ ಅವರೇ, ನಿಮಗೆ ಬಹಿರಂಗವಾಗಿ ವಿನಂತಿ ಮಾಡುತ್ತೇನೆ, ಕೂಡಲೇ 'ಟಾರ್ಗೆಟ್' ಎನ್ನುವ ಪದವನ್ನು ವಾಪಸ್ ಪಡೆದುಕೊಳ್ಳಿ. ರಾಜ್ಯದ ಗೌರವಾನ್ವಿತ ಸಕ್ಕರೆ, ಆಹಾರ ಸಚಿವರಾಗಿದ್ದೀರಿ ಎಂದೇ ನಾವು ನಿಮ್ಮ ಬಳಿ ಬರುತ್ತಿದ್ದೇವೆ. ಸಂವಿಧಾನ ನಮಗೆ ಮಾತನಾಡುವ ಹಕ್ಕು ಕೊಟ್ಟಿದೆ, ಹೀಗಾಗಿ ಎಲ್ಲೆಡೆ ಮಾತನಾಡುತ್ತೇವೆ. ನಾಡಿಗೆ ಅನ್ನ ಹಾಕುವ ರೈತರನ್ನು ಬೀದಿಗೆ ಕೂರಿಸಬೇಡಿ, ಪಾಪ ಅಂಟುತ್ತದೆ. ರೈತರ ಜೊತೆ ಮುಕ್ತವಾಗಿ ಮಾತಾಡಿ ಸಮಸ್ಯೆ ಬಗೆಹರಿಸಿದರೆ ನಿಮಗೆ ಅಭಿನಂದನೆ ತಿಳಿಸುತ್ತೇವೆ" ಎಂದು ಶಶಿಕಾಂತ್ ಗುರೂಜಿ ಎಚ್ಚರಿಕೆ ನೀಡಿದ್ದಾರೆ.

Add Zee News as a Preferred Source
TAGS:
Kannada News