• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ವಿಲ್ಲಾದಲ್ಲಿ ಸೀಕ್ರೆಟ್ ಟ್ರೇನಿಂಗ್, 40-50 ಲಕ್ಷ ಡೀಲ್ : KPSC ನೇಮಕಾತಿ ಹಗರಣದ ಸ್ಫೋಟಕ ಮಾಹಿತಿ

ವಿಲ್ಲಾದಲ್ಲಿ ಸೀಕ್ರೆಟ್ ಟ್ರೇನಿಂಗ್, 40-50 ಲಕ್ಷ ಡೀಲ್ : KPSC ನೇಮಕಾತಿ ಹಗರಣದ ಸ್ಫೋಟಕ ಮಾಹಿತಿ

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಇಡಿ ತನಿಖೆ ವೇಳೆ ಹಲವು ಅಂಶಗಳು ಪತ್ತೆಯಾಗಿವೆ. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅಭ್ಯರ್ಥಿಗಳನ್ನ ನೇರವಾಗಿ ಸಂಪರ್ಕಿಸಿ ಹಣ ಪಡೆದಿರುವುದು ಇ.ಡಿ. ತನಿಖೆಯಲ್ಲಿ ಬಹಿರಂಗವಾಗಿದ್ದು, ಇಡಿ ಅಧಿಕೃತ ಮಾಧ್ಯಮ ಪ್ರಕಟಣೆ ಸಹ ರಿಲೀಸ್ ಮಾಡಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Oct 08, 2026, 05:08 PM IST|Updated: Oct 08, 2026, 05:10 PM IST
joinshare
ವಿಲ್ಲಾದಲ್ಲಿ ಸೀಕ್ರೆಟ್ ಟ್ರೇನಿಂಗ್, 40-50 ಲಕ್ಷ ಡೀಲ್ : KPSC ನೇಮಕಾತಿ ಹಗರಣದ ಸ್ಫೋಟಕ ಮಾಹಿತಿ
Image Credit: KPSC Veterinary Officer Recruitment

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

2

ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

3

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

4

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ.. ನವದುರ್ಗೆಯರ ಪ್ರತಿಷ್ಠಾಪನೆ, ಆರಾಧನೆ, ನೃತ್ಯ- ಸಂಗೀತ ವೈಭವ

5

7000mAh ಬ್ಯಾಟರಿ, 120Hz ಡಿಸ್‌ಪ್ಲೇ; ಕೇವಲ ₹15,999ಕ್ಕೆ OnePlus ಸ್ಮಾರ್ಟ್‌ಫೋನ್‌!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ‌ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನ ಬಂಧಿಸಿ 13 ದಿನಗಳ ಕಾಲ ವಶಕ್ಕೆ ಪಡೆದಿರುವ ಇ.ಡಿ ನೇಮಕಾತಿ ಹಿಂದೆ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸ್ತಿದೆ. ಈ ನಡುವೆ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇ.ಡಿ ಆರೋಪಿಗಳ ಬಂಧನಕ್ಕೆ ಕಾರಣ ಮತ್ತು ನಡೆದ ಅಕ್ರಮಗಳ ಬಗ್ಗೆ ಉಲ್ಲೇಖ ಮಾಡಿದೆ.

ಪರೀಕ್ಷೆ ಹಿಂದಿನ ದಿನವೇ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮುಖಾಂತರ 80 ಪ್ರಶ್ನೆಗಳ ಜೊತೆ ಉತ್ತರಗಳನ್ನ ಆಭ್ಯರ್ಥಿಗಳೊಂದಿಗೆ ಹಂಚಿಕೊಂಡು ಅಭ್ಯರ್ಥಿಗಳಿಂದ ಹಣ ಪಡೆದಿರುವುದು ತನಿಖೆ ವೇಳೆ ಗೊತ್ತಾಗಿದೆ. ಬಗೆದಷ್ಟು ಆಳವೆಂಬಂತೆ ನೇಮಕಾತಿ ಅಕ್ರಮವನ್ನ ಒಂದೊಂದಾಗಿ ಇ.ಡಿ. ಕಳಚುತ್ತಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಅಕ್ರಮದಲ್ಲಿ ಶಿವಶಂಕರಪ್ಪ ಹಾಗೂ ಗೀತಾ ಅವರು ಅಕ್ರಮದಲ್ಲಿ ಶಾಮೀಲಾಗಿರುವ ಹೇಳಿಕೆ ನೀಡಿದ್ದರು.

ಈ ಮಾಹಿತಿ ಆಧರಿಸಿ ಸೆ.6 ರಂದು ದಾಳಿ ನಡೆಸಿ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವ ಬಗ್ಗೆ ತಿಳಿದುಬಂದಿದೆ ಎಂದು ಇ.ಡಿ. ತಿಳಿಸಿದೆ. 400 ಪಶುವೈದ್ಯಾಧಿಕಾರಿಗಳ ಪರೀಕ್ಷೆಗಾಗಿ ಜ.8ರಂದು ಕೆಪಿಎಸ್ಸಿ ಪರೀಕ್ಷೆ ನಡೆಸಿತ್ತು. ಜ.7ರಂದು ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಜೊತೆ ಶಿವಶಂಕರಪ್ಪ ಹಾಗೂ ಗೀತಾ ಸಂಪರ್ಕದಲ್ಲಿದ್ದರು. ಗ್ಯಾನೇಂದ್ರ, 80 ಪ್ರಶ್ನೆಗಳ ಉತ್ತರಗಳನ್ನ ಇಬ್ಬರೊಂದಿಗೆ ಹಂಚಿಕೊಂಡಿದ್ದರು. ಇದನ್ನ ದುರ್ಬಳಕೆ ಮಾಡಿಕೊಂಡ ಗೀತಾ, ಅಭ್ಯರ್ಥಿಯೊಬ್ಬರಿಂದ 40 ಲಕ್ಷಕ್ಕೆ ಡೀಲ್ ಕುದುರಿಸಿ 20 ಲಕ್ಷ ಮುಂಗಡವಾಗಿ ಪಡೆದುಕೊಂಡಿದ್ದರು.

ಇದೇ ರೀತಿ ಶಿವಶಂಕರಪ್ಪ ಅವರು ಸಂಪರ್ಕದಲ್ಲಿದ್ದ ಓರ್ವ ಅಭ್ಯರ್ಥಿಯೊಂದಿಗೆ 20 ಲಕ್ಷಕ್ಕೆ ಮಾತುಕತೆ ನಡೆಸಿ ಮುಂಗಡವಾಗಿ 10 ಲಕ್ಷ ಪಡೆದುಕೊಂಡಿದ್ದರು. ಅಂತಿಮ ನೇಮಕಾತಿ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ಆರು ಅಭ್ಯರ್ಥಿಗಳು ಹಣ ನೀಡಿರುವುದು ಗೊತ್ತಾಗಿದೆ ಎಂದು ಇಡಿ ತಿಳಿಸಿದೆ. ಇನ್ನು ಇಡಿ ಉಲ್ಲೇಖಿಸಿರುವ ಆರು ಜನ ವಿನುತಾ ಮಲ್ಲಪ್ಪ ಹಿತ್ತಲಮನಿ, ನಂದೀಶ್, ಸೂಗುರೇಶ್, ತೇಜಸ್, ನವೀನ್ ಕುಮಾರ್, ಕಿರಣ್ ಕುಮಾರ್ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ..

ಪರೀಕ್ಷೆ ಬಳಿಕ 1:3 ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನ ದುರುಪಯೋಗಪಡಿಸಿಕೊಂಡು ಹಣ ಪಡೆಯಲಾಗಿದೆ. ಮುಖ್ಯ ಪರೀಕ್ಷೆ ಒಂದು ದಿನ ಮುನ್ನವೇ 10 ಆಭ್ಯರ್ಥಿಗಳನ್ನ ನಗರದ ಹೊರವಲಯದ ವಿಲ್ಲಾ ಕರೆದುಕೊಂಡು 80 ಪ್ರಶ್ನೆಗಳಿಗೆ ಸರಿ ಉತ್ತರಗಳನ್ನ ನೀಡಿ ತರಬೇತಿ ನೀಡಲಾಗಿತ್ತು. ಗ್ಯಾನೇಂದ್ರನ ನೀಡಿದ್ದ ಉತ್ತರಗಳನ್ನ ಮಧ್ಯವರ್ತಿ ಬಸವರಾಜ್ ಕನ್ನಾಳೆ ಪಡೆದು ಅಭ್ಯರ್ಥಿಗಳನ್ನ ಸಂಪರ್ಕಿಸಿದ್ದ. ಆಭ್ಯರ್ಥಿಗಳಿಂದ ತಲಾ 40ರಿಂದ 50 ಲಕ್ಷದವರೆಗೆ ಹಣ ಪಡೆದಿದ್ದಾರೆ ಅಲ್ಲದೇ ಈ‌ ಹಿಂದೆ ಇ.ಡಿ ನಡೆಸಿದ ರೇಡ್ ವೇಳೆ 80 ಲಕ್ಷ ಮೊತ್ತದ ಸಹಿ ಮಾಡಲಾದ ಖಾಲಿ ಚೆಕ್ ಗಳು ಹಾಗೂ ಪ್ರಾಮಿಸರಿ ನೋಟ್ ಪತ್ತೆಯಾಗಿತ್ತು..

ಅಭ್ಯರ್ಥಿಗಳ 1:3 ಅರ್ಹತಾ ಪಟ್ಟಿ ಪ್ರಕಟಿಸುವಾಗ ಅಭ್ಯರ್ಥಿಗಳ ವೈಯಕ್ತಿಕ ಅಂಕ ಬಹಿರಂಗಪಡಿಸುವುದಿಲ್ಲ. ಆದಾಗ್ಯೂ ಕೆಪಿಎಸ್ಸಿ ಸದಸ್ಯರು ಅರ್ಹತಾ ಪಟ್ಟಿಯನ್ನ ಪಟ್ಟಿಯ ಮಾಹಿತಿ ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳ ಸಂಪರ್ಕಿಸಿ ಹಣ ನೀಡಿದರೆ ಅಂತಿಮ ಆಯ್ಕೆ ಖಚಿತಪಡಿಸುವುದಾಗಿ ಭರವಸೆ ನೀಡುತ್ತಿದ್ದರು. ಇದಕ್ಕಾಗಿ ಅಭ್ಯರ್ಥಿಗಳಿಂದ 10 ಲಕ್ಷದಿಂದ ₹50 ಲಕ್ಷದವರೆಗೆ ಲಂಚ ಪಡೆದಿದ್ದರು ಎಂದು ಇ.ಡಿ. ಪ್ರಕಟಣೆಯಲ್ಲಿ ಬಹಿರಂಗವಾಗಿದೆ..

ಒಟ್ಟಾರೆ ಎರಡು ಸ್ತರದಲ್ಲಿ ಕೆಪಿಎಸ್‌ಸಿ ಯಲ್ಲಿ ಅಕ್ರಮ ನಡೆದಿರೋದು ಬಹಿರಂಗವಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ಪ್ರಭಾವದ ಮೂಲಕ ಒಂದರು ರೀತಿಯಾದರೆ, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಸಂಪರ್ಕ ಇನ್ನೊಂದು ರೀತಿಯಾಗಿದೆ. ಸದ್ಯ ಆರೋಪಿಗಳನ್ನ ಕಸ್ಟಡಿಗೆ ಪಡೆದಿರೋ ಇಡಿ ಹೆಚ್ಚಿನ ತನಿಖೆ ನಡೆಸ್ತಿದ್ದು ಇನ್ನೂ ಏನೆಲ್ಲಾ ಮಾಹಿತಿಗಳು ಹೊರಬೀಳಲಿವೆ ಕಾದು ನೋಡಬೇಕಿದೆ.

Add Zee News as a Preferred Source
TAGS:
Kannada News