SOCIAL MEDIA

Newsletter

PARTNER SITES
Select Language Select State

ರೋಗಿಗಳಿಗೆ ಗೂಡ್‌ ನ್ಯೂಸ್‌ : ಇನ್ಮುಂದೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರದರ್ಶನ ಕಡ್ಡಾಯ

ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ ಹಾಗೂ ಗೊಂದಲಗಳಿಗೆ ಬ್ರೇಕ್ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮುಖ ಚಿಕಿತ್ಸೆಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ರೋಗಿಗಳಿಗೆ ಆರ್ಥಿಕ ನೆರವು ಹಾಗೂ ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Written By Krishna NK
Published: Oct 22, 2026, 06:32 PM IST | Updated: Oct 22, 2026, 06:39 PM IST
Image Credit: Kannada News
Join

ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅಂದರೆ ಸಾಕು, ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಮೊದಲು ಕಾಡುವುದು ಬಿಲ್ ಟೆನ್ಷನ್.. ಯಾವ ಕಾಯಿಲೆಗೆ ಎಷ್ಟು ಖರ್ಚಾಗುತ್ತೋ, ಬೆಡ್ ಹಾಗೂ ದಿನನಿತ್ಯದ ಚಾರ್ಜ್ ಎಷ್ಟೋ.. ಔಷಧಿಗಳು, ಪರೀಕ್ಷೆಗಳು ಮತ್ತು ಇಂಜೆಕ್ಷನ್‌ಗಳ ಬಿಲ್ ಸೇರಿದಂತೆ ಒಟ್ಟು ಮೊತ್ತ ಎಷ್ಟು ಬರಬಹುದು ಎಂಬ ನೂರಾರು ಗೊಂದಲಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುತ್ತವೆ. ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಲು ಮತ್ತು ರೋಗಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇನ್ಮುಂದೆ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮುಖ ಚಿಕಿತ್ಸೆಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸ್ಪಷ್ಟ ದರಪಟ್ಟಿ ಮತ್ತು ಬಣ್ಣಗಳ ಹೈಲೈಟ್
ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಕಣ್ಣಿಗೆ ಕಾಣುವಂತೆ, ಸೂಕ್ತ ಸ್ಥಳದಲ್ಲಿ ಈ ದರಪಟ್ಟಿಯನ್ನು ಪ್ರದರ್ಶಿಸಬೇಕು. ವಿಶೇಷವಾಗಿ, ಪ್ರಮುಖ ಚಿಕಿತ್ಸೆಗಳ ದರಗಳನ್ನು ವಿಭಿನ್ನ ಬಣ್ಣಗಳಲ್ಲಿ ಹೈಲೈಟ್ ಮಾಡಬೇಕು. ಆಸ್ಪತ್ರೆಯ ದಾಖಲೆಗಳು ಅಥವಾ ಲೆಡ್ಜರ್‌ನಲ್ಲೂ ಕೂಡ ಎಲ್ಲಾ ಚಿಕಿತ್ಸಾ ಶುಲ್ಕಗಳ ವಿವರಗಳನ್ನು ತಪ್ಪದೆ ನಮೂದಿಸಬೇಕಾಗುತ್ತದೆ. ಒಟ್ಟಾರೆಯಾಗಿ, ದರಗಳ ಮಾಹಿತಿಯು ಅತ್ಯಂತ ಸ್ಪಷ್ಟವಾಗಿರಬೇಕು ಮತ್ತು ಸಾಮಾನ್ಯ ರೋಗಿಗಳು ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂಬ ನಿಯಮ ರೂಪಿಸಲಾಗಿದೆ.

ಚಿಕಿತ್ಸೆಗೂ ಮುನ್ನವೇ ವೆಚ್ಚದ ಸ್ಪಷ್ಟತೆ
ಯಾವುದೇ ರೋಗಿಯು ಆಸ್ಪತ್ರೆಗೆ ದಾಖಲಾದಾಗ ಅಥವಾ ಚಿಕಿತ್ಸೆ ಪಡೆದುಕೊಳ್ಳುವ ಮುನ್ನವೇ ಅಂದೇ ವೆಚ್ಚದ ಸಂಪೂರ್ಣ ಮಾಹಿತಿ ಸಿಕ್ಕರೆ, ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ತುಂಬಾ ಅನುಕೂಲವಾಗುತ್ತದೆ. ಚಿಕಿತ್ಸೆ ಮುಗಿದ ಬಳಿಕ ಕೊನೆಯಲ್ಲಿ ಬರುವ ಆಘಾತಕಾರಿ ಬಿಲ್ ಕಂಡು ಕಂಗಾಲಾಗುವುದನ್ನು ಇದು ತಪ್ಪಿಸುತ್ತದೆ. ಬಿಲ್ ಪಾವತಿ ಮಾಡುವ ವೇಳೆ ಯಾವುದೇ ಅನಿರೀಕ್ಷಿತ ಆರ್ಥಿಕ ಹೊರೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.

ದರದ ಬೋರ್ಡ್‌ ಹಾಕಿದ್ರೆ ಎಲ್ಲಾ ಸರಿ ಹೋಗುತ್ತಾ?
ಆಸ್ಪತ್ರೆಯ ಗೋಡೆಗಳ ಮೇಲೆ ಅಥವಾ ನೋಟಿಸ್ ಬೋರ್ಡ್‌ನಲ್ಲಿ ದರಪಟ್ಟಿ ಹಾಕಿದಾಕ್ಷಣಕ್ಕೆ ಎಲ್ಲವೂ ಸರಿಹೋಯಿತು ಎಂದರ್ಥವಲ್ಲ. ದರಪಟ್ಟಿಯಲ್ಲಿ ನಮೂದಿಸಿರುವ ಅಚ್ಚುಕಟ್ಟಾದ ದರದಂತೆಯೇ ಅಂತಿಮ ಬಿಲ್ ಮಾಡಲಾಗುತ್ತಿದೆಯಾ? ಅಥವಾ ರೋಗಿಗಳಿಗೆ ಗೊತ್ತಿಲ್ಲದೆ ಹೆಚ್ಚುವರಿ ಶುಲ್ಕಗಳು ಬಿಲ್‌ನಲ್ಲಿ ಸೇರಿಕೊಳ್ಳುತ್ತವೆಯಾ? ಒಂದು ವೇಳೆ ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ, ಅದಕ್ಕೆ ಸಂಬಂಧಪಟ್ಟವರಿಂದ ಸೂಕ್ತ ಸ್ಪಷ್ಟನೆ ಸಿಗುತ್ತದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುವುದು ಸಹಜ.

ಹಾಗಾಗಿ, ಕೇವಲ ನಿಯಮಗಳನ್ನು ಕಾಗದದಲ್ಲಿ ರೂಪಿಸುವುದು ಮಾತ್ರವಲ್ಲದೆ, ಆಸ್ಪತ್ರೆಗಳು ಇದನ್ನು ಸರಿಯಾಗಿ ಪಾಲಿಸುತ್ತಿವೆಯಾ ಎಂಬುದರ ಮೇಲೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಆಗ ಮಾತ್ರ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ನಿಜವಾದ ಅರ್ಥದಲ್ಲಿ ಕಡಿವಾಣ ಬೀಳಲು ಸಾಧ್ಯ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES