• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದೈವಿಕ ಚಿನ್ನದ ಆಸೆ.. ಕೋಟಿ ಕೋಟಿ ಎಗರಿಸಿದ ಐನಾತಿ : ಬಂಗಾರದ ಆಸೆಗೆ ಬಿದ್ದವರ ಸ್ಥಿತಿ ಏನಾಯ್ತು ನೋಡಿ.!

ದೈವಿಕ ಚಿನ್ನದ ಆಸೆ.. ಕೋಟಿ ಕೋಟಿ ಎಗರಿಸಿದ ಐನಾತಿ : ಬಂಗಾರದ ಆಸೆಗೆ ಬಿದ್ದವರ ಸ್ಥಿತಿ ಏನಾಯ್ತು ನೋಡಿ.!

ಅಧುನಿಕತೆ, ತಂತ್ರಜ್ಞಾನದ ಅಭಿವೃದ್ಧಿಯ ನಡುವೆ ಇಂದಿಗೂ ಮೂಡನಂಬಿಕೆ, ಬಣ್ಣದ ಮಾತಿಗೆ ಬಲಿಯಾಗುವ ಜನರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಅದಕ್ಕೆ ತಾಜಾ ಉದಾರಣೆ ಈ ಸ್ಟೋರಿ.. ಆರೋಗ್ಯ ಸಮಸ್ಯೆ ಗುಣಪಡಿಸುವ ನೆಪದಲ್ಲಿ ಕುಟುಂಬದ ನಂಬಿಕೆ ಗಳಿಸಿ, ದೈವಿಕ ಕೃಪೆಯ ಚಿನ್ನ ನೀಡುವ ಆಸೆ ತೋರಿಸಿ ₹1.3 ಕೋಟಿ ಹಣ ವಂಚಿಸಿ ಪರಾರಿಯಾಗಿರುವ ನಕಲಿ ವೈದ್ಯನ ರೋಚಕ ವಂಚನೆಯ ವರದಿ ಇಲ್ಲಿದೆ.

Written ByKrishna NK
Published: Oct 09, 2026, 06:13 PM IST|Updated: Oct 09, 2026, 06:17 PM IST
joinshare
ದೈವಿಕ ಚಿನ್ನದ ಆಸೆ.. ಕೋಟಿ ಕೋಟಿ ಎಗರಿಸಿದ ಐನಾತಿ : ಬಂಗಾರದ ಆಸೆಗೆ ಬಿದ್ದವರ ಸ್ಥಿತಿ ಏನಾಯ್ತು ನೋಡಿ.!
Image Credit: Crime News Kannada

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!

ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!

2

ನವೆಂಬರ್ 1ರಿಂದ GST ನಿಯಮಗಳಲ್ಲಿ ಬದಲಾವಣೆ! ನಿಮ್ಮ ಜೇಬಿಗೆ ಹೊಡೆತ ಬೀಳುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ

3

ಬರದ ಎಫೆಕ್ಟ್‌: ಬೀಗರೂಟ ಹಾಕಿದ್ರೆ ₹1 ಲಕ್ಷ ದಂಡ! ಊಟ ಮಾಡಿದ್ರೆ ₹50 ಸಾವಿರ ಫೈನ್‌?

4

ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದೇ? ಗರ್ಭಿಣಿಯರು, ಮಧುಮೇಹಿಗಳು ಈ ಎಚ್ಚರಿಕೆ ತಪ್ಪಿಸಬೇಡಿ!

5

ದೈವಿಕ ಚಿನ್ನದ ಆಸೆ.. ಕೋಟಿ ಕೋಟಿ ಎಗರಿಸಿದ ಐನಾತಿ : ಬಂಗಾರದ ಆಸೆಗೆ ಬಿದ್ದವರ ಸ್ಥಿತಿ ಏನಾಯ್ತು ನೋಡಿ.!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಆ ಮನೆಯಲ್ಲಿ ಮಾವ ಹಾಗೂ ಸೊಸೆಗೆ ಆರೋಗ್ಯ ಸಮಸ್ಯೆ ಇತ್ತು. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ತಾನೂ ವೈದ್ಯ ಎಂದು ಹೇಳಿಕೊಂಡು ಔಷಧಿ ಕೊಟ್ಟಿದ್ದ. ಅದೃಷ್ಟ ಎಂಬತೆ ಮಾವ, ಸೊಸೆಯ ಕಾಯಿಲೆ ವಾಸಿಯಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆ ಐನಾತಿ ನಕಲಿ ವೈದ್ಯ ನಂಬಿಕೆ ದ್ರೋಹ ಮಾಡಿ ಕೋಟಿಗಟ್ಟಲೇ ಉಂಡೇನಾಮ ಹಾಕಿ ಎಸ್ಕೇಪ್ ಆಗಿದ್ದಾನೆ. ಹಾಗಾದ್ರೆ ವಂಚನೆ ಮಾಡಲು ಆ ನಕಲಿ ವೈದ್ಯ ಮಾಡಿದ್ದ ಪ್ಲಾನ್ ಏನು..? ಇಂಟ್ರೆಸ್ಟಿಂಗ್‌ ವರದಿ ಇಲ್ಲಿದೆ..

ನಂಬಿಕೆಯಿಂದ ಹತ್ತಿರವಾದವನೇ ಕೊನೆಗೆ ಕೋಟಿ ಕೋಟಿ ರೂಪಾಯಿಗೆ ನಾಮ ಹಾಕಿದ್ದಾನೆ. ಬೆಂಗಳೂರಿನಲ್ಲಿ ಆಚಾರಿ ಕೆಲಸ ಮಾಡಿಕೊಂಡಿರುವ 55 ವರ್ಷದ ಸೆಲ್ವರಾಜ್ ಆಚಾರಿಗೆ ಮಹಾ ವಂಚನೆಯಾಗಿದೆ. ತೆಲಂಗಾಣ ಮೂಲದ ಭೂತಂ ಲಿಂಗಯ್ಯ ತನ್ನನ್ನು ಆಯುರ್ವೇದ ವೈದ್ಯ ಎಂದು ಪರಿಚಯಿಸಿಕೊಂಡಿದ್ದ. ಆರಂಭದಲ್ಲಿ ಸೆಲ್ವರಾಜ್ ಸೊಸೆಗೆ ಅಸ್ತಮಾ ಕಾಯಿಲೆಗೆ ಔಷಧ ನೀಡಿದ್ದ. ಬಳಿಕ ಸೆಲ್ವರಾಜ್‌ಗೆ ಕಾಡುತ್ತಿದ್ದ ಬೆನ್ನುನೋವು ಮತ್ತು ಮಂಡಿನೋವಿಗೂ ಔಷಧ ನೀಡಿದ್ದ. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಕಾಯಿಲೆ ವಾಸಿಯಾಗಿತ್ತು. ಹೀಗೆ ಕುಟುಂಬದ ವಿಶ್ವಾಸ ಗಳಿಸಿಕೊಂಡಿದ್ದ ಆರೋಪಿ, ನಂತರ ದೈವಿಕ ಕೃಪೆಯಿಂದ ದೊರೆತ ಚಿನ್ನದ ಆಸೆ ತೋರಿಸಿ ವಂಚನೆಯ ಜಾಲ ಬೀಸಿದ್ದಾನೆ.

ಯೆಸ್.. ತನ್ನ ಬಳಿ ಸುಮಾರು ಐದು ಕೆಜಿ ದೈವಿಕ ಕೃಪೆಯ ಚಿನ್ನವಿದೆ ಎಂದು ಭೂತಂ ಲಿಂಗಯ್ಯ ಹೇಳಿದ್ದ. ಈ ಚಿನ್ನವನ್ನು ಖರೀದಿಸಿದರೆ ಸಂಪತ್ತು ಹೆಚ್ಚಾಗುತ್ತದೆ, ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಸೆಲ್ವರಾಜ್ ರನ್ನು ನಂಬಿಸಿದ್ದ. ಆರಂಭದಲ್ಲಿ ಒಂದು ಗ್ರಾಂ ಚಿನ್ನದ ಚೂರನ್ನು ನೀಡಿದ್ದ. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನ ಎಂಬುದು ತಿಳಿದುಬಂದಿತ್ತು. ಬಳಿಕ ಚಿನ್ನವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು, ಈ ವಿಚಾರವನ್ನು ಮನೆಯವರಿಗೂ ಹೇಳಬಾರದು ಎಂದು ಷರತ್ತು ವಿಧಿಸಿದ್ದ. ಈ ಮಾತುಗಳನ್ನು ನಂಬಿದ ಸೆಲ್ವರಾಜ್ ಐದು ಕೆಜಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಯಿಂದ ಹಂತಹಂತವಾಗಿ ಹಣ ನೀಡಲು ಆರಂಭಿಸಿದ್ದರು.

ಹೀಗೆ ಕಳೆದ ಎರಡೂವರೆ ವರ್ಷಗಳಿಂದ ಹಂತಹಂತವಾಗಿ ಬರೋಬ್ಬರಿ 1.3 ಕೋಟಿ ರೂಪಾಯಿ ಹಣವನ್ನು ಸೆಲ್ವರಾಜ್ ರಿಂದ ಭೂತಂ ಲಿಂಗಯ್ಯಂ ಪಡೆದಿದ್ದಾನೆ. ವಂಚಕನನ್ನ ನಂಬಿ ಹಣ ಹೊಂದಿಸಲು ಸೆಲ್ವರಾಜ್ ಜಮೀನನ್ನು ಮಾರಾಟ ಮಾಡಿದ್ದಲ್ಲದೆ, ಕುಟುಂಬದ ಚಿನ್ನಾಭರಣಗಳನ್ನೂ ಮಾರಾಟ ಮಾಡಿ ಹಣ ನೀಡಿದ್ದರು. ಇತ್ತೀಚೆಗೆ ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ತೆರಳಿದ ಭೂತಂ ಲಿಂಗಯ್ಯ ಮತ್ತೆ ವಾಪಸ್ ಬಂದಿಲ್ಲ. ಕರೆ ಮಾಡಿದಾಗ ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ತಾನು ಮೋಸ ಹೋಗಿರುವುದು ಅರಿತ ಸೆಲ್ವರಾಜ್ ಪೊಲೀಸರ ಮೊರೆ ಹೋಗಿದ್ದಾರೆ.

ಇನ್ನೂ ಸೆಲ್ವರಾಜ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅದೆನೇ ಹೇಳಿ... ಹೆಚ್ಚಿನ ಚಿನ್ನದ ಆಸೆಗೆ ವಂಚಕನ ಮಾತು ನಂಬಿದ ಸೆಲ್ವರಾಜ್ ಮೈತುಂಬಾ ಸಾಲ ಮಾಡಿಕೊಂಡು ಕೋಟಿಗಟ್ಟಲೇ ಕಳೆದುಕೊಂಡಿದ್ದು ವಿಪರ್ಯಾಸವೆ ಸರಿ..

Add Zee News as a Preferred Source
TAGS:
Crime