• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!

ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!

ಬೆಂಗಳೂರಿನಲ್ಲಿ ಎಸ್‌ಐಆರ್ (SIR) ವಿರುದ್ಧ ನಡೆದ ಪ್ರತಿಭಟನೆ ಈಗ ದೊಡ್ಡ ಮಟ್ಟದ ರಾಜಕೀಯ ಹಾಗೂ ಕಾನೂನು ಸಮರಕ್ಕೆ ದಾರಿಯಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುಟ್ಯೂಬರ್ ಧ್ರುವ್ ರಾಠಿ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪದಡಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 09, 2026, 07:03 PM IST|Updated: Oct 09, 2026, 07:06 PM IST
joinshare
ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!
Image Credit: Dhruv Rathee news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸ್ಟಿಂಗ್ ಆಪರೇಷನ್‌ಗಳ ಪಿತಾಮಹ ಯಾರು ಅಂತ ಎಲ್ಲರಿಗೂ ಗೊತ್ತು : ಬಿವೈವಿ ಕಿಡಿ

ಸ್ಟಿಂಗ್ ಆಪರೇಷನ್‌ಗಳ ಪಿತಾಮಹ ಯಾರು ಅಂತ ಎಲ್ಲರಿಗೂ ಗೊತ್ತು : ಬಿವೈವಿ ಕಿಡಿ

2

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ.10ರಿಂದ ಈ ಪ್ರಮುಖ ರಸ್ತೆಗಳು 20 ದಿನ ಬಂದ್‌!

3

ಯೂಟ್ಯೂಬರ್‌ ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು, ಮೋದಿ ನಿಂದನೆಗೆ FIR ಆಗ್ರಹ!

4

ನವೆಂಬರ್ 1ರಿಂದ GST ನಿಯಮಗಳಲ್ಲಿ ಬದಲಾವಣೆ! ನಿಮ್ಮ ಜೇಬಿಗೆ ಹೊಡೆತ ಬೀಳುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ

5

ಬರದ ಎಫೆಕ್ಟ್‌: ಬೀಗರೂಟ ಹಾಕಿದ್ರೆ ₹1 ಲಕ್ಷ ದಂಡ! ಊಟ ಮಾಡಿದ್ರೆ ₹50 ಸಾವಿರ ಫೈನ್‌?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರುದ್ಧ ಇತ್ತೀಚೆಗೆ ನಡೆದ ಬೃಹತ್ ಪ್ರತಿಭಟನೆ ಇದೀಗ ತೀವ್ರ ಸ್ವರೂಪದ ರಾಜಕೀಯ ಮತ್ತು ಕಾನೂನು ಸಮರಕ್ಕೆ ವೇದಿಕೆಯಾಗಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ನಟ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯು, ಹಲವು ಪ್ರಮುಖ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ತಲುಪುವಂತೆ ಮಾಡಿದೆ.

ಧ್ರುವ್ ರಾಠಿ ವಿರುದ್ಧ ಕೇಂದ್ರಕ್ಕೆ ದೂರು
ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದ ಪ್ರಸಿದ್ಧ ಯುಟ್ಯೂಬರ್ ಧ್ರುವ್ ರಾಠಿ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ವಿದೇಶಿ ಪ್ರಜೆಯಾಗಿ ಭಾರತದ ಆಂತರಿಕ ರಾಜಕೀಯ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸುವುದು ಕಾನೂನುಬಾಹಿರ ಎಂದು ಅವರು ಆರೋಪಿಸಿದ್ದಾರೆ.

ಭಾಸ್ಕರ್ ರಾವ್ ತಮ್ಮ ಪತ್ರದಲ್ಲಿ, ಧ್ರುವ್ ರಾಠಿ ಅವರು ಯಾವ ವೀಸಾ ಅಥವಾ OCI (Overseas Citizen of India) ಕಾರ್ಡ್ ಆಧಾರದ ಮೇಲೆ ಭಾರತದಲ್ಲಿ ನೆಲೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿದೇಶಿ ಪ್ರಜೆಯೊಬ್ಬರು ಭಾರತದ ನೆಲದಲ್ಲಿ ನಿಂತು ದೇಶದ ಚುನಾವಣಾ ಆಯೋಗ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುವುದು 'ವಿದೇಶಿಯರ ಕಾಯ್ದೆ 1946' (Foreigners Act, 1946) ಹಾಗೂ ವೀಸಾ ನಿಯಮಗಳ ನೇರ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಸಮಗ್ರ ಪರಿಶೀಲನೆ ನಡೆಸಿ, ವೀಸಾ ನಿಯಮ ಉಲ್ಲಂಘನೆ ಕಂಡುಬಂದರೆ ಅವರ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಅವಹೇಳನ: ಉಪ್ಪಾರಪೇಟೆ ಠಾಣೆಯಲ್ಲಿ ದೂರು
ಇನ್ನೊಂದೆಡೆ, ಇದೇ ಪ್ರತಿಭಟನೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನೆ ವೇಳೆ ಅಭಿಜೀತ್ ದೀಪ್ಕೆ ಎಂಬುವವರು ಪ್ರಧಾನಿಯವರನ್ನು 'ವೋಟ್ ಚೋರ್' ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಯುವ ಮೋರ್ಚಾದ ಪ್ರಮುಖ ನಿಯೋಗವು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡಿದೆ. ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ದೀಪಕ್ ಕುಮಾರ್, ಬೆಂಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಜಗದೀಶ್ ರಾಮಚಂದ್ರ, ಯತಿನ್ ವೆಂಕಟೇಶ್ ಹಾಗೂ ಪ್ರಮೋದ್ ಶ್ರೀನಿವಾಸ್ ಅವರನ್ನೊಳಗೊಂಡ ನಿಯೋಗವು ಈ ದೂರು ಸಲ್ಲಿಸಿದೆ. ಅಭಿಜಿತ್ ದೀಪ್ಕೆ ಹಾಗೂ ಇತರ ಪ್ರಮುಖರ ವಿರುದ್ಧ BNS ಸೆಕ್ಷನ್ 353(1)(b) ಮತ್ತು 197(1)(d) ಅಡಿಯಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ಪೊಲೀಸರನ್ನು ಆಗ್ರಹಿಸಿದೆ.

ಒಟ್ಟಿನಲ್ಲಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಒಂದೇ ಪ್ರತಿಭಟನೆಯು ಇದೀಗ ರಾಷ್ಟ್ರಮಟ್ಟದ ರಾಜಕೀಯ ಮತ್ತು ವೀಸಾ ನಿಯಮಗಳ ಚರ್ಚೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಈ ಕಾನೂನು ಸಮರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Kannada News