• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿಕೆ; ಕ್ವಿಂಟಾಲ್‌ಗೆ ₹79 ಸಾವಿರ!

ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿಕೆ; ಕ್ವಿಂಟಾಲ್‌ಗೆ ₹79 ಸಾವಿರ!

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಭಾರೀ ಏರಿಕೆಯಾಗಿದ್ದು, ಡಬ್ಬಿ ತಳಿಯ ಕ್ವಿಂಟಾಲ್‌ಗೆ ಗರಿಷ್ಠ ₹79 ಸಾವಿರ ದಾಖಲಾಗಿದೆ. ಕಡ್ಡಿ ತಳಿಗೆ ₹71 ಸಾವಿರದವರೆಗೆ ಬೆಲೆ ಸಿಕ್ಕಿದೆ. ದಾಖಲೆ ದರದಿಂದ ರೈತರಲ್ಲಿ ಸಂತಸ ಮೂಡಿದ್ದು, ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ನಿರೀಕ್ಷೆಯೂ ಹೆಚ್ಚಾಗಿದೆ.

Written ByPuttaraj K Alur
Published: Oct 04, 2026, 09:18 AM IST|Updated: Oct 04, 2026, 09:27 AM IST
joinshare
ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿಕೆ; ಕ್ವಿಂಟಾಲ್‌ಗೆ ₹79 ಸಾವಿರ!
Image Credit: Byadgi Chilli Price

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ

ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ

2

ಗೃಹ ಜ್ಯೋತಿ ನಡುವೆಯೂ ಕೋಟಿ ಕೋಟಿ ರೂಪಾಯಿಗಳ ಲಾಭದಲ್ಲಿರೋ BESCOM

3

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್? ಇನ್ಮುಂದೆ ಸಿಮ್ ಕಾರ್ಡ್ ಕಡ್ಡಾಯ!

4

ಡಿಸೆಂಬರ್‌ನಲ್ಲಿ ಜಿಪಂ-ತಾಪಂ ಚುನಾವಣೆ? ಗ್ರಾಮೀಣ ಅಖಾಡದಲ್ಲಿ ಟಿಕೆಟ್ ಫೈಟ್ ಶುರು!

5

ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿಕೆ; ಕ್ವಿಂಟಾಲ್‌ಗೆ ₹79 ಸಾವಿರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Byadgi Chilli Price: ರಾಜ್ಯದ ಪ್ರಮುಖ ಮೆಣಸಿನಕಾಯಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಭಾರೀ ಏರಿಕೆ ಕಂಡಿದೆ. ಡಬ್ಬಿ ತಳಿಯ ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ ಗರಿಷ್ಠ ₹79 ಸಾವಿರ ದರ ದಾಖಲಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ ಸುಮಾರು ₹40 ಸಾವಿರದಿಂದ ₹50 ಸಾವಿರದ ಆಸುಪಾಸಿನಲ್ಲಿ ಇದ್ದ ಹಿನ್ನೆಲೆಯಲ್ಲಿ, ಈ ಬಾರಿ ದಾಖಲಾಗಿರುವ ಬೆಲೆ ಏರಿಕೆ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ.

ಶನಿವಾರ ನಡೆದ ಟೆಂಡರ್‌ನಲ್ಲಿ ವಿವಿಧ ತಳಿಯ ಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆತಿದೆ. ಡಬ್ಬಿ ತಳಿಯ ಮೆಣಸಿನಕಾಯಿಗೆ ಕನಿಷ್ಠ ₹6,629, ಗರಿಷ್ಠ ₹79,000 ಹಾಗೂ ಸರಾಸರಿ ₹62,509 ದರ ದಾಖಲಾಗಿದೆ. ಇದೇ ವೇಳೆ ಕಡ್ಡಿ ತಳಿಯ ಮೆಣಸಿನಕಾಯಿಗೂ ಉತ್ತಮ ಬೆಲೆ ದೊರೆತಿದ್ದು, ಕ್ವಿಂಟಾಲ್‌ಗೆ ಕನಿಷ್ಠ ₹5,889, ಗರಿಷ್ಠ ₹71,000 ಹಾಗೂ ಸರಾಸರಿ ₹59,009 ದರದಲ್ಲಿ ವಹಿವಾಟು ನಡೆದಿದೆ.

9,402 ಚೀಲ ಮೆಣಸಿನಕಾಯಿ ನೋಂದಣಿ

ಶನಿವಾರದ ಟೆಂಡರ್‌ನಲ್ಲಿ ಒಟ್ಟು 9,402 ಚೀಲ ಮೆಣಸಿನಕಾಯಿಯನ್ನ ಮಾರಾಟಕ್ಕಾಗಿ ನೋಂದಣಿ ಮಾಡಲಾಗಿತ್ತು. ಬ್ಯಾಡಗಿ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ಮೆಣಸಿನಕಾಯಿ ಆವಕವಾಗುತ್ತಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತಿರುವುದು ರೈತರ ಗಮನ ಸೆಳೆದಿದೆ. ಡಬ್ಬಿ ಹಾಗೂ ಕಡ್ಡಿ ತಳಿಗಳ ಜೊತೆಗೆ ಗುಂಟೂರು ತಳಿಯ ಮೆಣಸಿನಕಾಯಿಯೂ ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿದೆ. ಗುಣಮಟ್ಟ, ಬಣ್ಣ, ತೇವಾಂಶ ಹಾಗೂ ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ವಿವಿಧ ಲಾಟ್‌ಗಳಿಗೆ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.

ರೈತರಲ್ಲಿ ಹೆಚ್ಚಿದ ನಿರೀಕ್ಷೆ

ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಾಲ್‌ಗೆ ₹40 ಸಾವಿರದಿಂದ ₹50 ಸಾವಿರದ ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದ ಮೆಣಸಿನಕಾಯಿ, ಇದೀಗ ಗರಿಷ್ಠ ₹79 ಸಾವಿರದವರೆಗೆ ತಲುಪಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಉತ್ತಮ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮುಂದಿನ ಬೆಳೆಗಾಗಿ ರೈತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಅಲ್ಪ ಪ್ರಮಾಣದ ನೀರಿನ ಲಭ್ಯತೆಯಲ್ಲಿಯೂ ಮೆಣಸಿನಕಾಯಿ ಬಿತ್ತನೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇದೇ ರೀತಿಯ ಉತ್ತಮ ದರ ಮುಂದುವರಿದರೆ ಬೆಳೆಗಾರರಿಗೆ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆಯಿದೆ.

ಮುಂದಿನ ದಿನಗಳಲ್ಲಿ ದರ ಹೇಗಿರಲಿದೆ?

ಮೆಣಸಿನಕಾಯಿ ದರದಲ್ಲಿ ಕಂಡುಬಂದಿರುವ ಈ ಏರಿಕೆ ರೈತರಲ್ಲಿ ಸಂತಸ ಮೂಡಿಸಿರುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಬೆಲೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲವನ್ನೂ ಹೆಚ್ಚಿಸಿದೆ. ಸದ್ಯದ ಉತ್ತಮ ದರ ಮುಂದುವರಿದರೆ ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಮತ್ತು ಆವಕ ಪ್ರಮಾಣದಲ್ಲಿ ಬದಲಾವಣೆ ಕಾಣುವ ಸಾಧ್ಯತೆಯಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಬೇಡಿಕೆ, ಪೂರೈಕೆ, ಗುಣಮಟ್ಟ, ಹವಾಮಾನ ಹಾಗೂ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಸಾಧ್ಯತೆ ಇರುವುದರಿಂದ, ಪ್ರಸ್ತುತ ದಾಖಲಾಗಿರುವ ಗರಿಷ್ಠ ದರ ಮುಂದೆಯೂ ಇದೇ ರೀತಿ ಮುಂದುವರಿಯುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಒಟ್ನಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ ₹79 ಸಾವಿರದವರೆಗೆ ದರ ಸಿಕ್ಕಿರುವುದು ಈ ಹಂಗಾಮಿನ ಪ್ರಮುಖ ಬೆಳವಣಿಗೆಯಾಗಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿರುವ ರೈತರು ಮುಂದಿನ ಬೆಳೆ ಹಾಗೂ ಮಾರುಕಟ್ಟೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.

Add Zee News as a Preferred Source
TAGS:
Kannada News