• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ

ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ

ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಶೋಧಕಾರ್ಯಾಚರಣೆ ನಡೆಸಲಾಗುತ್ತಿತ್ತು. ಟ್ರೆಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ವಿನಯ್ ಮೃತದೇಹ ಕೊನೆಗೂ ಪತ್ತೆಯಾಗಿದೆ.

Written ByBhimappa
Published: Oct 04, 2026, 10:43 AM IST|Updated: Oct 04, 2026, 10:49 AM IST
joinshare
ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ
Image Credit: Bengaluru_Halasuru

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ, 150- 160 ಜೊತೆ ಕೋಣಗಳು.. ಹೇಗಿದೆ ಸಿದ್ಧತೆ?

ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ, 150- 160 ಜೊತೆ ಕೋಣಗಳು.. ಹೇಗಿದೆ ಸಿದ್ಧತೆ?

2

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬೇಕಾ? ಊಟದ ಬಳಿಕ ಈ ಕೆಲಸ ಮಾಡಿದ್ರೆ ಸಾಕು!

3

ಪದವೀಧರರ ಸಮಸ್ಯೆಗಳಿಗೆ ಆದ್ಯತೆ; ಉದ್ಯೋಗ ಭರ್ತಿಗೆ ಕಾಂಗ್ರೆಸ್ ಬದ್ಧ: ಮೋಹನ ಲಿಂಬಿಕಾಯಿ

4

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಬರ್ತ್‌ಡೇಗೆ ಸಿಗಲಿದೆ ಸಿಹಿಸುದ್ದಿ, ಏನದು?

5

ಟ್ರೆಕ್ಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ಮಿಸ್ಸಿಂಗ್ ಕೇಸ್‌.. ಕೊನೆಗೂ ವಿನಯ್ ಮೃ*ತದೇಹ ಪತ್ತೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Anekal Jigani‌ Yallamanadoddi quarry: ಆನೇಕಲ್‌ನ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿ ಕ್ವಾರಿಯಲ್ಲಿ ಈಜಲು ಹೋಗಿ ಟೆಕ್ಕಿ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿನಯ್ ಮೃತದೇಹ ಪತ್ತೆ ಆಗಿದೆ. ಕಲ್ಲು ಕ್ವಾರಿಯ ನೀರಿನಲ್ಲಿ ಈಜಾಡಲು ಹೋಗಿ ವಿನಯ್‌ ನಾಪತ್ತೆ ಆಗಿದ್ದನು. ಇದರಿಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಶೋಧಕಾರ್ಯಾಚರಣೆ ನಡೆಸಲಾಗುತ್ತಿತ್ತು. ಟ್ರೆಕಿಂಗ್ ವೇಳೆ ಈಜಲು ಹೋಗಿದ್ದ ಟೆಕ್ಕಿ ವಿನಯ್ ಮೃತದೇಹ ಕೊನೆಗೂ ಪತ್ತೆಯಾಗಿದೆ. ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿ ಕ್ವಾರಿಯಲ್ಲಿ ಈಜಲು ಹೋಗಿದ್ದ 8 ಜನರ ಪೈಕಿ ವಿನಯ್‌ ಮಾತ್ರ ನೀರಿನಲ್ಲಿ ಮುಳುಗಿ ಜೀವ ಬಿಟ್ಟಿದ್ದನು. ಆದರೆ ನಿನ್ನೆ ಎಷ್ಟೇ ಹುಡುಕಾಡಿದರು ಮೃತದೇಹ ಪತ್ತೆ ಆಗಿರಲಿಲ್ಲ. ಕಲ್ಲು ಕ್ವಾರಿಯ ನೀರಿನಲ್ಲಿ ವಿನಯ್ ನಾಪತ್ತೆ ಆದ ಮೇಲೆ ಅಗ್ನಿಶಾಮಕ ದಳ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಕಳೆದ ಎರಡು ದಿನಗಳಿಂದ ಕಲ್ಲು ಕ್ವಾರಿಯ ನೀರಿನಲ್ಲಿ ಶೋಧಕಾರ್ಯ ಮಾಡಲಾಗುತ್ತಿತ್ತು.

ಇನ್‌ಸ್ಟಾಗ್ರಾಮ್‌ ಐಡಿ ಮೂಲಕ 8 ಜನರ ಗ್ರೂಪ್ ಮಾಡಿಕೊಂಡು ಟ್ರೆಕ್ಕಿಂಗ್ ಬಂದಿದ್ದ ಯುವಕ- ಯುವತಿಯರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಈಜಾಡುವಾಗ ಯುವಕ-ಯುವತಿಯರ ಹುಚ್ಚಾಟ ಆಡಿದ್ದಾರೆ. ಕಲ್ಲು ಕ್ವಾರಿಯ ಮೇಲಿನಿಂದ ನೀರಿಗೆ ಡೈವ್ ಹೊಡೆದು ಮೋಜು- ಮಸ್ತಿ ಮಾಡಿದ್ದಾರೆ. ನೀರಿನಲ್ಲಿ ಎಲ್ಲರೂ ಈಜಾಡುವಾಗ ವಿನಯ್‌ ಕೂಡ ನೀರಿಗೆ ಇಳಿದು ಈಜಾಡಿದ್ದಾನೆ. ಆದರೆ ಈಜಾಡುತ್ತ ಮುಂದೆ ಹೋದಾಗ ಆಳವಾದ ನೀರಿನಲ್ಲಿ ಮುಳುಗಿ ವಿನಯ್‌ ಜೀವ ಬಿಟ್ಟಿದ್ದಾನೆ. ಆಂಧ್ರ ಪ್ರದೇಶ ಮೂಲದ ಟೆಕ್ಕಿ ವಿನಯ್ ಮೃತದೇಹ ನಿರಂತರ ಹುಡುಕಾಟದಿಂದ ಕೊನೆಗೂ ಪತ್ತೆಯಾಗಿದೆ. ಸದ್ಯ ಮೃತದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

ಘಟನೆಯ ಹಿನ್ನೆಲೆ, ಏನೇನು ಆಗಿತ್ತು?
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿಯ ಕಲ್ಲು ಕ್ವಾರಿಯ ನೀರು ಒಂದು ಕುಟುಂಬದ ಪಾಲಿಗೆ ಕಣ್ಣೀರಿನ ಕಡಲಾಗಿಸಿದೆ. ಟ್ರೆಕ್ಕಿಂಗ್ ಅಂತಾ ಬಂದಿದ್ದ 30 ವರ್ಷದ ಟೆಕ್ಕಿ ವಿನಯ್, ಈಜಾಡಲು ಹೋಗಿ ಕ್ವಾರಿ ನೀರಿನಲ್ಲಿ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶ ಮೂಲದ ವಿನಯ್, ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದನು. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್‌ ಗಾಂಧಿ ಜಯಂತಿ ರಜೆ ಜೊತೆಗೆ ವೀಕೆಂಡ್ ರಜೆ, ಹೀಗಾಗಿ ರಜೆಯನ್ನ ಎಂಜಾಯ್ ಮಾಡೋಕೆ ಎಂಟಕ್ಕೂ ಹೆಚ್ಚು ಜನರ ತಂಡ ಟ್ರೆಕ್ಕಿಂಗ್ ಪ್ಲಾನ್ ಮಾಡಿತ್ತು. ಇನ್‌ಸ್ಟಾಗ್ರಾಮ್‌ ಐಡಿ BLR Hikes ಗ್ರೂಪ್ ಮೂಲಕ ಪರಿಚಯವಾಗಿದ್ದ ಯುವಕ ಯುವತಿಯರು, ಒಟ್ಟಾಗಿ ಟ್ರೆಕ್ಕಿಂಗ್‌ಗೆ ಬಂದಿದ್ದರು.

ಮೋಜು ಮಸ್ತಿಯಲ್ಲಿ ತೇಲಾಡಿದೆ ಟ್ರೆಕ್ಕಿಂಗ್ ಗ್ಯಾಂಗ್
ಕೈಯಲ್ಲಿ ಮೊಬೈಲ್, ಮುಖದಲ್ಲಿ ನಗು, ಕ್ಯಾಮೆರಾದಲ್ಲಿ ಫೋಟೋ, ವಿಡಿಯೋ ಹೀಗೆ ಖುಷಿ ಖುಷಿಯಾಗಿ ಸಾಗ್ತಿತ್ತು ಟ್ರೆಕ್ಕಿಂಗ್. ಆದ್ರೆ ಸಂಜೆ ವೇಳೆಗೆ ಕಣ್ಣಿಗೆ ಬಿದ್ದಿದ್ದು ಕಲ್ಲು ಕ್ವಾರಿಯ ನೀರು. ಅಷ್ಟೇ, ಬೆಟ್ಟ ಹತ್ತೋದು, ಕಾಡಿನಲ್ಲಿ ಓಡಾಡೋದು ಬಿಟ್ಟು, ಇಡೀ ಗ್ಯಾಂಗ್ ನೀರಿನಾಟಕ್ಕೆ ಇಳಿದಿದೆ. ಕ್ವಾರಿಯ ಮೇಲಿಂದ ಒಬ್ಬರ ಹಿಂದೊಬ್ಬರು ನೀರಿಗೆ ಜಿಗಿದಿದ್ದಾರೆ. ಯುವತಿಯರೂ ಕೂಡಾ ಡೈವ್ ಹೊಡೆದು ಈಜಾಡಿದ್ದಾರೆ. ಮೋಜು ಮಸ್ತಿಯಲ್ಲಿ ತೇಲಾಡಿದೆ ಟ್ರೆಕ್ಕಿಂಗ್ ಗ್ಯಾಂಗ್, ಆದ್ರೆ ಇದೇ ಆಟ ಕೆಲವೇ ಕ್ಷಣಗಳಲ್ಲಿ ದುರಂತವಾಗಿ ಬದಲಾಗಿದೆ.

ಸೆಪ್ಟೆಂಬರ್‌ 2 ರಂದು ಸಂಜೆ ಸುಮಾರು 5.30ರ ಸಮಯಕ್ಕೆ ಈಜುತ್ತಿದ್ದ ವೇಳೆ ವಿನಯ್‌ಗೆ ನೀರಿನಲ್ಲಿ ಉಸಿರುಗಟ್ಟಿದೆ ಎನ್ನಲಾಗಿದೆ. ಗಾಬರಿಗೊಂಡ ಉಳಿದ ಸ್ನೇಹಿತರು ತಕ್ಷಣ ನೀರಿನಿಂದ ಮೇಲಕ್ಕೆ ಬಂದಿದ್ದಾರೆ. ವಿನಯ್ ಕೂಡಾ ಮೇಲೆ ಬರ್ತಾನೆ ಅಂತಾ ಕಾದಿದ್ದಾರೆ. ಆದ್ರೆ ಕೆಲ ಹೊತ್ತಾದ್ರೂ ವಿನಯ್ ಮಾತ್ರ ಮೇಲಕ್ಕೆ ಬರಲೇ ಇಲ್ಲ. ಸ್ನೇಹಿತರು ತಕ್ಷಣ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಮಗನಿಗಾಗಿ ಕುಟುಂಬಸ್ಥರ ಆಕ್ರಂದನ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ವಿನಯ್‌ಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ನಿನ್ನೆ ಇಡೀ ದಿನ ಹುಡುಕಾಟ ನಡೆಸಿದ್ರೂ ವಿನಯ್ ಮೃತದೇಹ ಪತ್ತೆ ಆಗಿರಲಿಲ್ಲ. ಇಂದು ಕೂಡಾ ಮತ್ತೆ ಶೋಧ ಕಾರ್ಯ ಮುಂದುವರೆಸಲಾಗಿತ್ತು. ಅದರಂತೆ ಮೃತದೇಹ ಪತ್ತೆ ಆಗಿದೆ. ಮೃತದೇಹ ಸಿಗುತ್ತಿದ್ದಂತೆ ಮಗನಿಗಾಗಿ ಕುಟುಂಬಸ್ಥರ ಆಕ್ರಂದನ ಹೇಳತೀರದು ಆಗಿದೆ. ಖುಷಿ ಖುಷಿಯಾಗಿ ಟ್ರೆಕ್ಕಿಂಗ್‌ಗೆ ಬಂದಿದ್ದ ಎಂಟು ಜನರ ತಂಡ, ಒಂದೇ ಒಂದು ಕ್ಷಣದಲ್ಲಿ ದುರಂತದ ಸುಳಿಗೆ ಸಿಲುಕಿದೆ. ಸ್ನೇಹಿತರ ಜೊತೆ ಕಳೆದ ಕೊನೆಯ ಕ್ಷಣಗಳೇ. ಈಗ ವಿನಯ್ ಕುಟುಂಬಕ್ಕೆ ಉಳಿದಿರುವ ನೆನಪು ಮಾತ್ರ. ಟ್ರೆಕ್ಕಿಂಗ್ ವೇಳೆ ಎಚ್ಚರಿಕೆ ಎಷ್ಟು ಮುಖ್ಯ ಅನ್ನೋದನ್ನ ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಅಪರಿಚಿತ ಕ್ವಾರಿಗಳು, ಆಳವಾದ ನೀರು, ಅರಿವಿಲ್ಲದೆ ನೀರಿಗಿಳಿಯುವುದು ಎಷ್ಟು ಅಪಾಯಕಾರಿ ಅನ್ನೋದಕ್ಕೆ ಈ ಘಟನೆ ಸಾಕ್ಷಿ.

Add Zee News as a Preferred Source
TAGS:
Kannada News