SOCIAL MEDIA

Newsletter

PARTNER SITES
Select Language Select State

ಹಾಲಿನ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಗ್ ಶಾಕ್ : ಹೋಟೆಲ್ ತಿಂಡಿ-ಕಾಫಿ ದರ ಹೆಚ್ಚಳ

ಹಾಲಿನ ದರ ದಿಢೀರ್ ಏರಿಕೆಯ ಬೆನ್ನಲ್ಲೇ, ಬೆಲೆ ಹೆಚ್ಚಳ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಇದರಿಂದಾಗಿ ಇನ್ಮುಂದೆ ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ತಿಂಡಿ-ತಿನಿಸುಗಳ ಸವಿಯುವ ಮುನ್ನ ಹೊಸ ದರ ಪಟ್ಟಿ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 29, 2026, 06:09 PM IST | Updated: Oct 29, 2026, 06:11 PM IST
Image Credit: Milk Price
Join

ಬೆಂಗಳೂರು: ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ ಏರಿಕೆಯ ಬಿಸಿ ಈಗ ನೇರವಾಗಿ ಸಾಮಾನ್ಯ ಜನರ ಜೇಬಿಗೆ ತಟ್ಟಿದೆ. ಹಾಲಿನ ದರದಲ್ಲಿ ಒಂದೇ ಸಮನೆ ಭಾರಿ ಏರಿಕೆಯಾಗಿರುವುದು ಹಾಗೂ ಅಕ್ಕಿ, ಗ್ಯಾಸ್ ಬೆಲೆ ಏರಿಕೆಯ ಪರಿಣಾಮವಾಗಿ ಬೆಂಗಳೂರಿನಲ್ಲಿ ಹೋಟೆಲ್ ತಿಂಡಿ ಹಾಗೂ ಕಾಫಿ-ಟೀ ಕುಡಿಯುವುದು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ.

ಹಾಲಿನ ದರ ಏರಿಕೆಯೇ ಪ್ರಮುಖ ಕಾರಣ
ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ಏಕಾಏಕಿ 8 ರೂಪಾಯಿಗಳಷ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಅತಿಯಾದ ಬೆಲೆ ಏರಿಕೆಯಿಂದಾಗಿ ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಹೋಟೆಲ್ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬೆಂಗಳೂರು ಹೋಟೆಲುಗಳ ಸಂಘ, ದರ ಏರಿಕೆಯ ಅನಿವಾರ್ಯತೆಯನ್ನು ಸ್ಪಷ್ಟಪಡಿಸಿದೆ.

ಹಾಲಿನ ಬೆಲೆಯನ್ನು ಕೇವಲ 2 ರಿಂದ 3 ರೂ.ಗಳಿಗೆ ಸೀಮಿತಗೊಳಿಸಿದ್ದರೆ ಹೋಟೆಲುಗಳಲ್ಲಿ ಕಾಫಿ, ಟೀ ಅಥವಾ ತಿಂಡಿ-ತಿನಿಸುಗಳ ಬೆಲೆ ಏರಿಸುವ ಅಗತ್ಯವಿರುತ್ತಿರಲಿಲ್ಲ. ಆದರೆ ಈಗ ಹಾಲಿನ ದರ ಮಾತ್ರವಲ್ಲದೆ, ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿ ಬೆಲೆಯೂ ಗಗನಕ್ಕೇರುತ್ತಿದೆ. ಇದರೊಂದಿಗೆ ಅಡುಗೆ ಗ್ಯಾಸ್ ಬೆಲೆಯೂ ಹೆಚ್ಚಾಗಿರುವುದರಿಂದ ಹೋಟೆಲ್ ಮಾಲೀಕರಿಗೆ ನಿರ್ವಹಣೆ ಕಷ್ಟಕರವಾಗಿದ್ದು, ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘ ತಿಳಿಸಿದೆ.

ಪೌಷ್ಟಿಕ ಆಹಾರಕ್ಕೂ ಕತ್ತರಿ
ನಮ್ಮ ಹೆಮ್ಮೆಯ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ದಿಢೀರ್ ಹೆಚ್ಚಳವಾಗಿರುವುದು ಬೆಳೆಯುವ ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಪೌಷ್ಟಿಕ ಆಹಾರವಾಗಿ ಹಾಲನ್ನು ನೆಚ್ಚಿಕೊಂಡಿರುವ ಜನಸಾಮಾನ್ಯರಿಗೆ ಬಹುದೊಡ್ಡ ಆಘಾತ ತಂದಿದೆ. ಆರೋಗ್ಯಕರ ಆಹಾರ ಸೇವಿಸಬೇಕಾದವರ ಮೇಲೂ ಇದು ಗಂಭೀರ ಪರಿಣಾಮ ಬೀಳಲಿದೆ.

ಸರ್ಕಾರವು ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ಹತೋಟಿಗೆ ತರುವುದರ ಜೊತೆಗೆ, ಹೈನುಗಾರಿಕೆ ಮಾಡುವ ರೈತರಿಗೆ ಸೂಕ್ತ ಪ್ರೋತ್ಸಾಹ ಧನ ನೀಡುವ ಮೂಲಕ ಹಾಲಿನ ಬೆಲೆ ಏರಿಕೆಯನ್ನು ಮಿತಗೊಳಿಸಬೇಕು. ಇಂತಹ ದೊಡ್ಡ ಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸರ್ಕಾರವು ಬಡ ಹಾಗೂ ಮಧ್ಯಮ ವರ್ಗದ ಜನಸಾಮಾನ್ಯರ ಕಷ್ಟ-ನಷ್ಟಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವುದು ಅತ್ಯಗತ್ಯ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹೋಟೆಲ್ ಮೆನುವಿನಲ್ಲಿ ಹೊಸ ದರಗಳ ಪಟ್ಟಿ ಹೀಗಿದೆ
ಕಾಫಿ / ಟೀ: ಹಳೆ ದರ 20 ರೂ. ➔ ಹೊಸ ದರ 24 ರೂ.
ಹಾರ್ಲಿಕ್ಸ್: ಹಳೆ ದರ 22 ರೂ. ➔ ಹೊಸ ದರ 25 ರೂ.
ಇಡ್ಲಿ (ಒಂದಕ್ಕೆ): ಹಳೆ ದರ 18 ರೂ. ➔ ಹೊಸ ದರ 22 ರೂ.
ದೋಸೆ: ಹಳೆ ದರ ಕನಿಷ್ಠ 40 ರೂ. ➔ ಹೊಸ ದರ ಗರಿಷ್ಠ 52 ರೂ.

ಒಟ್ಟಾರೆಯಾಗಿ, ಒಂದೆಡೆ ಹಾಲಿನ ದರ, ಮತ್ತೊಂದೆಡೆ ಅಕ್ಕಿ ಹಾಗೂ ಗ್ಯಾಸ್ ಬೆಲೆ ಏರಿಕೆಯ ಬಾಸುಂಡೆ ಜನಸಾಮಾನ್ಯರ ನೆಮ್ಮದಿಯನ್ನು ಕೆಡಿಸಿದ್ದು, ದಿನನಿತ್ಯದ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ಹೇಗೆ ಎಂಬ ಚಿಂತೆ ಎಲ್ಲರಲ್ಲೂ ಮೂಡಿದೆ. ಸರ್ಕಾರ ಮತ್ತು ಸಂಬಂಧಪಟ್ಟವರು ಇತ್ತ ಗಮನಹರಿಸಿ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES