• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /2011ರ ಘಟನೆ, 2023ರಲ್ಲಿ ಶೂಟಿಂಗ್ : ಸಿಸಿಬಿ "ಸ್ಟಿಂಗ್‌ ಆಪರೇಷನ್‌" ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್​ಚಿಟ್

2011ರ ಘಟನೆ, 2023ರಲ್ಲಿ ಶೂಟಿಂಗ್ : ಸಿಸಿಬಿ "ಸ್ಟಿಂಗ್‌ ಆಪರೇಷನ್‌" ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್​ಚಿಟ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದು ಎನ್ನಲಾದ 'ಸ್ಟಿಂಗ್ ಆಪರೇಷನ್' ವಿಡಿಯೋ ಪ್ರಕರಣ ಶುದ್ಧ ಸುಳ್ಳು ಎಂದು ಸಿಸಿಬಿ (CCB) ಸೈಬರ್ ಕ್ರೈಮ್ ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದು, ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್ ಚಿಟ್ ನೀಡಲಾಗಿದೆ.. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Oct 29, 2026, 05:45 PM IST|Updated: Oct 29, 2026, 05:46 PM IST
joinshare
2011ರ ಘಟನೆ, 2023ರಲ್ಲಿ ಶೂಟಿಂಗ್ : ಸಿಸಿಬಿ "ಸ್ಟಿಂಗ್‌ ಆಪರೇಷನ್‌" ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್​ಚಿಟ್
Image Credit: Siddaramaiah

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಹಾಲಿನ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಗ್ ಶಾಕ್ : ಹೋಟೆಲ್ ತಿಂಡಿ-ಕಾಫಿ ದರ ಹೆಚ್ಚಳ

ಹಾಲಿನ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಗ್ ಶಾಕ್ : ಹೋಟೆಲ್ ತಿಂಡಿ-ಕಾಫಿ ದರ ಹೆಚ್ಚಳ

2

2011ರ ಘಟನೆ, 2023ರಲ್ಲಿ ಶೂಟಿಂಗ್ : ಸಿಸಿಬಿ "ಸ್ಟಿಂಗ್‌ ಆಪರೇಷನ್‌" ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್​ಚಿಟ್

3

ಕಿಚನ್ ಸಿಂಕ್‌ನಲ್ಲಿ ನೀರು ನಿಲ್ಲುತ್ತಿದೆಯೇ? ಪ್ಲಂಬರ್ ಕರೆಯುವ ಮುನ್ನ ಈ ಟ್ರಿಕ್‌ ಟ್ರೈ ಮಾಡಿ!

4

ಜೈಲಿನಿಂದಲೇ ಧನ್ವೀರ್‌ ವಿರುದ್ಧ "ತಡೆಯಾಜ್ಞೆ ಅಸ್ತ್ರ" ಪ್ರಯೋಗಿಸಿದ ಡಿ ಬಾಸ್‌.! ಸಂಚಲನ ಸೃಷ್ಟಿಸಿದ ದರ್ಶನ್‌ ನಡೆ

5

ಕಬ್ಬಿನ ದರ ಏರಿಕೆಗಾಗಿ ಮಂಡ್ಯದಲ್ಲಿ ರೈತರ ರಣಕಹಳೆ.. ಮೈಶುಗರ್ ಸಕ್ಕರೆ ಗೋದಾಮಿಗೆ ಅನ್ನದಾತರ ಮುತ್ತಿಗೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಬಂಧಿಸಿದ್ದ ಎನ್ನಲಾದ 'ಸ್ಟಿಂಗ್ ಆಪರೇಷನ್' ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಸೈಬರ್ ಕ್ರೈಮ್ ಪೊಲೀಸರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಸೃಷ್ಟಿಸಲ್ಪಟ್ಟಿದ್ದು ಎಂದು ದೃಢಪಡಿಸಿರುವ ಪೊಲೀಸರು, ತನಿಖೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಕ್ಲೀನ್ ಚಿಟ್ ನೀಡಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಸಿಬಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಆ ವಿಡಿಯೋದಲ್ಲಿ ಬಿಂಬಿಸಲಾದ ಲೈಂಗಿಕ ದೌರ್ಜನ್ಯದ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ದುರುದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಕಥೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ತೋರಿಸಲಾಗಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳು ಅಥವಾ ಯಾರೂ ಕೂಡ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿಡಿಯೋ ಹಿಂದೆ ದೊಡ್ಡ ಸಂಚು 
ಈ ವಿಡಿಯೋ ಚಿತ್ರೀಕರಣ ಮಾಡಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ವಿಡಿಯೋದ ನೈಜತೆ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲು ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ.

ಅಚ್ಚರಿಯ ಸಂಗತಿಯೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಒಂದು ಘಟನೆಗೆ ಸಂಬಂಧಿಸಿದ ಈ ವಿಡಿಯೋವನ್ನು ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜನರನ್ನು ತಪ್ಪುದಾರಿಗೆಳೆಯಲು ಮತ್ತು ತಮ್ಮ ಸ್ವಾರ್ಥ ರಾಜಕೀಯ ಉದ್ದೇಶ ಸಾಧಿಸಲು ಈ ವಿಡಿಯೋವನ್ನು ಕೃತಕವಾಗಿ ಸೃಷ್ಟಿಸಿ, ಬೇಕಂತಲೇ ತಿರುಚಲಾಗಿದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.

ದೆಹಲಿ ಲಿಂಕ್ ಹಾಗೂ ವಿಪಿಎನ್ (VPN) ಬಳಕೆ ಪತ್ತೆ
2023ರಲ್ಲಿ ವಿಡಿಯೋ ರೆಕಾರ್ಡ್ ಆದಾಗಿನಿಂದ 2026ರ ಸೆಪ್ಟೆಂಬರ್-ಅಕ್ಟೋಬರ್ ವರೆಗೆ ಈ ವಿಡಿಯೋ ಯಾರ್ಯಾರ ಕೈ ಸೇರಿತು, ಅಂತಿಮವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದವರವರೆಗೆ ಇದು ಹೇಗೆ ತಲುಪಿತು ಎಂಬ ಸಂಪೂರ್ಣ ಡಿಜಿಟಲ್ ಹಾದಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಲು ಅನಾಮಧೇಯ ಖಾತೆಗಳನ್ನು ಬಳಸಲಾಗಿದೆ. ತಮ್ಮ ಗುರುತು ಮತ್ತು ಸ್ಥಳ ಯಾರಿಗೂ ಸಿಗದಂತೆ ತಡೆಯಲು ವಿಪಿಎನ್ (VPN), ನಕಲಿ ಐಪಿ ವಿಳಾಸಗಳು ಹಾಗೂ ಸುಧಾರಿತ ಡಿಜಿಟಲ್ ತಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿರುವ ಸುಳಿವಿನ ಪ್ರಕಾರ, ಈ ಕೃತ್ಯ ಎಸೆದ ಆರೋಪಿ ಫ್ರೀಲಾನ್ಸ್ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದು, ನವದೆಹಲಿಯಲ್ಲಿರುವ ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೊತೆ ಈತನಿಗೆ ನಂಟಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

ರಾಜ್ಯದಲ್ಲಿ ಜವಾಬ್ದಾರಿಯುತ ಉನ್ನತ ಸ್ಥಾನದಲ್ಲಿರುವ ನಾಯಕರ ಘನತೆ ಮತ್ತು ವಿಶ್ವಾಸಾರ್ಹತೆಗೆ ಮಸಿ ಬಳಿಯುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ, ರಾಜಕೀಯವಾಗಿ ವಿವಾದ ಸೃಷ್ಟಿಸುವ ಮತ್ತು ಗೊಂದಲ ಮೂಡಿಸುವ ದುರುದ್ದೇಶದಿಂದಲೇ ಈ ವಿಡಿಯೋವನ್ನು ವ್ಯವಸ್ಥಿತವಾಗಿ ವೈರಲ್ ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟ ಸುಳಿವುಗಳು ಸಿಕ್ಕಿವೆ ಎಂದು ಸಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಿನಲ್ಲಿ, ಈ ನಕಲಿ ವಿಡಿಯೋ ಜಾಲದ ಹಿಂದಿರುವವರ ಮುಖವಾಡ ಕಳಚಲು ಸಿಸಿಬಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

Add Zee News as a Preferred Source
TAGS:
Siddaramaiah