SOCIAL MEDIA

Newsletter

PARTNER SITES
Select Language Select State

ಇತಿಹಾಸ ಸೃಷ್ಟಿಸಿದ ಪೋರ್ಟೊ ರಿಕೊ ಸುಂದರಿ: 2026ರ ‘ಮಿಸ್ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡ 7 ವರ್ಷದ ಮಗುವಿನ ತಾಯಿ

2026ರ ಪ್ರತಿಷ್ಠಿತ ‘ಮಿಸ್ ಯೂನಿವರ್ಸ್’ ಕಿರೀಟವನ್ನು ಪೋರ್ಟೊ ರಿಕೊ ದೇಶದ 27 ವರ್ಷದ ಜೆನ್ನಿಫರ್ ಬ್ಯಾರೆಟೊ ಮುಡಿಗೇರಿಸಿಕೊಂಡಿದ್ದು, ಈ ಪಟ್ಟ ಗೆದ್ದ ಮೊದಲ ತಾಯಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.

Written By Chetana Devarmani
Published: Nov 25, 2026, 16:39 IST | Updated: Nov 25, 2026, 16:42 IST
Join

ನವದೆಹಲಿ: ಜಾಗತಿಕ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆ! 2026ರ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪೋರ್ಟೊ ರಿಕೊ ದೇಶದ ಜೆನ್ನಿಫರ್ ಬ್ಯಾರೆಟೊ (Jennifer Barreto) ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮಿಸ್ ಯೂನಿವರ್ಸ್ ಪಟ್ಟ ಗೆದ್ದ ಮೊದಲ ತಾಯಿ ಎಂಬ ಹೆಗ್ಗಳಿಕೆಗೆ 27 ವರ್ಷದ ಜೆನ್ನಿಫರ್ ಪಾತ್ರರಾಗಿದ್ದಾರೆ.

ಅಂತಿಮ ಸುತ್ತಿನ ಭರ್ಜರಿ ಪೈಪೋಟಿಯಲ್ಲಿ ಡೊಮಿನಿಕನ್ ರಿಪಬ್ಲಿಕ್ ಸುಂದರಿ ಮೊದಲ ರನ್ನರ್-ಅಪ್ ಆದ್ರೆ, ವೆನೆಜುವೆಲಾ ಸುಂದರಿ ಎರಡನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ್ರು. ಇನ್ನು ಫಿಲಿಪೈನ್ಸ್ ಮತ್ತು ನ್ಯೂಜಿಲೆಂಡ್ ದೇಶದ ಸ್ಪರ್ಧಿಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಫಲಿತಾಂಶ ಹೊರಬಿದ್ದ ತಕ್ಷಣ ಮಿಸ್ ಯೂನಿವರ್ಸ್ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಸಂಭ್ರಮದ ವಿಡಿಯೋ ಶೇರ್ ಮಾಡಲಾಗಿದ್ದು, ಹೊಸ ರಾಣಿ, ಹೊಸ ಯುಗ! ಪೋರ್ಟೊ ರಿಕೊಗೆ ಕಿರೀಟ ತಂದುಕೊಟ್ಟ ನಮ್ಮ ಹೊಸ ಮಿಸ್ ಯೂನಿವರ್ಸ್ ಜೆನ್ನಿಫರ್ ಬ್ಯಾರೆಟೊ ಅವರಿಗೆ ಅಭಿನಂದನೆಗಳು ಅಂತ ಬರೆದುಕೊಳ್ಳಲಾಗಿದೆ.

ಯಾರು ಈ ಜೆನ್ನಿಫರ್ ಬ್ಯಾರೆಟೊ?

ಮದುವೆಯಾಗಿ ಮಕ್ಕಳಾದ್ಮೇಲೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸೋದು ಕಷ್ಟ ಅನ್ನೋ ಹಳೆಯ ಕಲ್ಪನೆಗಳನ್ನೆಲ್ಲಾ ಜೆನ್ನಿಫರ್ ಬ್ರೇಕ್ ಮಾಡಿದ್ದಾರೆ. ಇವರ ಜೀವನ ಮತ್ತು ಸಾಧನೆಯ ಪ್ರಮುಖ ಸಂಗತಿಗಳು ಇಲ್ಲಿವೆ ನೋಡಿ:

7 ವರ್ಷದ ಮುದ್ದಾದ ಮಗಳ ತಾಯಿ & ಡಬಲ್ ಮಾಸ್ಟರ್ಸ್ ಪದವೀಧರೆ:

27 ವರ್ಷದ ಜೆನ್ನಿಫರ್ ಅವರಿಗೆ ಮದುವೆಯಾಗಿದ್ದು, ಪೆನೆಲೋಪ್ ಅನ್ನೋ 7 ವರ್ಷದ ಮಗಳಿದ್ದಾಳೆ. ಇವರು ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲ, ಓದಿನಲ್ಲೂ ಸಖತ್ ಮುಂದಿದ್ದಾರೆ. ಸೈಕಾಲಜಿ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್  ವಿಷಯಗಳಲ್ಲಿ ಎರಡು ಮಾಸ್ಟರ್ಸ್ ಡಿಗ್ರಿ ಪಡೆದಿದ್ದಾರೆ.

ಅಷ್ಟೇ ಅಲ್ಲದೇ ಹೋಲಾ  ಮ್ಯಾಗಜೀನ್ ವರದಿ ಪ್ರಕಾರ, ಜೆನ್ನಿಫರ್ ಅವರು ಅಮೆರಿಕದ ರಕ್ಷಣಾ ಇಲಾಖೆಯ ಸೇನಾ ವಿಭಾಗದಲ್ಲಿ ಪ್ರಿವೆನ್ಷನ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡ್ತಿದ್ದಾರೆ. ಸಮಾಜದಲ್ಲಿ ಕೆಟ್ಟ ಅಭ್ಯಾಸಗಳು ಮತ್ತು ಹಾನಿಕಾರಕ ನಡವಳಿಕೆಗಳನ್ನು ತಡೆಗಟ್ಟಿ, ಒಳ್ಳೆಯ ಮತ್ತು ಆರೋಗ್ಯಕರ ಸಮಾಜ ಕಟ್ಟುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸೋದೇ ಇವರ ಮುಖ್ಯ ಕೆಲಸ.

ವಾಲಿಬಾಲ್ ಆಟ ಮತ್ತು ಸಮಾಜ ಸೇವೆ:

ಕೆಲಸ ಮತ್ತು ಮಗಳ ಜವಾಬ್ದಾರಿಗಳ ನಡುವೆಯೂ ಜೆನ್ನಿಫರ್ ತಮ್ಮಿಷ್ಟದ ಹವ್ಯಾಸಗಳಿಗೆ ಟೈಮ್ ಕೊಡ್ತಾರೆ. ಅವರಿಗೆ ಪುಸ್ತಕ ಓದೋದು ಮತ್ತು ವಾಲಿಬಾಲ್ ಆಡೋದು ಅಂದ್ರೆ ತುಂಬಾ ಇಷ್ಟ. ಇದರ ಜೊತೆಗೆ ಪೋರ್ಟೊ ರಿಕೊದಾದ್ಯಂತ ಅನೇಕ ಸಮಾಜ ಸೇವಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜೆನ್ನಿಫರ್ ಅವರು 'ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್ ಆಫ್ ಪೋರ್ಟೊ ರಿಕೊ' ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮಧುಮೇಹಕ್ಕೆ ತುತ್ತಾದ ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯ ತುಂಬೋದು, ಜೊತೆಗೆ ಈ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇವರು ಮಾಡ್ತಿದ್ದಾರೆ.

ಸಾಮಾನ್ಯವಾಗಿ ಅನೇಕರು ಸೌಂದರ್ಯ ಸ್ಪರ್ಧೆಗಳನ್ನು ಸಿನಿಮಾ ಅಥವಾ ಮಾಡೆಲಿಂಗ್ ಜಗತ್ತಿಗೆ ಎಂಟ್ರಿ ಕೊಡುವ ಮೆಟ್ಟಿಲು ಅಂತ ನೋಡ್ತಾರೆ. ಆದ್ರೆ ಜೆನ್ನಿಫರ್ ಹಾಗಲ್ಲ. ತಮ್ಮ ಸಮಾಜ ಸೇವಾ ಕೆಲಸಗಳನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸಲು ಮತ್ತು ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು 'ಮಿಸ್ ಯೂನಿವರ್ಸ್' ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಒಬ್ಬ ತಾಯಿಯಾಗಿ, ವೃತ್ತಿಪರ ಮಹಿಳೆಯಾಗಿ ಮತ್ತು ಈಗ ವಿಶ್ವ ಸುಂದರಿಯಾಗಿ ಗೆದ್ದು ಬೀಗಿರುವ ಜೆನ್ನಿಫರ್ ಬ್ಯಾರೆಟೊ, ಇಡೀ ಜಗತ್ತಿನ ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES