Actor Dhanveer ನಟ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಾರ್ ನಿಲ್ತಿಲ್ಲ. ಮತ್ತೊಂದು ಕಡೆ ಸಚಿವ ಜಮೀರ್ ಅಭಿಮಾನಿಗಳು ಧನ್ವೀರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ನಡುವೆ ಇಬ್ಬರಿಗೂ ಐಟಿ, ಇಡಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ನಟ ಝೈದ್ ವಿರುದ್ಧ ನಾಲಿಗೆ ಹರಿಬಿಟ್ಟ ಧನ್ವೀರ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಪುತ್ರ, ನಟ ಝೈದ್ ಖಾನ್ ವಿರುದ್ಧ ವೈರಲ್ ಆಗಿರುವ ಹಿನ್ನೆಲೆ, ಜಮೀರ್ ಅಹ್ಮದ್ ಅಭಿಮಾನಿಗಳು ಮತ್ತು ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಂ. ವಿನಾಯಕ್ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಧನ್ವೀರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಯಿತು.ಇನ್ನು ಧನ್ವೀರ್ ನ ದರ್ಶನ್ ಫ್ಯಾನ್ ಪೇಜ್ ಫಾಲೊವರ್ಸ್ ನಿಂದ ರಿಮೂವ್ ಮಾಡಲಾಗಿದೆ. ಹೀಗಾಗಿ ಭಾವನಾತ್ಮಕ ಪೋಸ್ಟ್ ಮಾಡಿರುವ ಧನ್ವೀರ್ , ನನ್ನ ಕೆಲವ್ರು ತೆಗಳಬಹುದು. ಆದ್ರೆ ನನ್ನ ಮತ್ತು ದರ್ಶನ್ ಸಂಬಂಧ ಹೃದಯದ ಸಂಬಂಧ ನಾನು ಅದನ್ನ ಹೊರಗೆ ಹೇಳಬೇಕಿಲ್ಲ ಅಂತಾ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಮತ್ತೊಂದು ಕಡೆ, ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಬ್ಬರ ನಡುವೆ ನಡೆದಿದೆ ಎನ್ನಲಾದ 10 ಕೋಟಿ ರೂಪಾಯಿ ನಗದು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ವಕೀಲ ಪ್ರಶಾಂತ್ ಮೆಥಲ್ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಹಣದ ಮೂಲ ಮತ್ತು ವ್ಯವಹಾರದ ಕಾನೂನುಬದ್ಧತೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಇಬ್ಬರಿಗೂ ಹೊಸ ತಲೆನೋವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮುಂದೆ ಇನ್ನೂ ದೊಡ್ಡ ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ ಹೇಳಬಹುದು.