• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಎಲೆಕ್ಟ್ರಾನಿಕ್ಸ್‌ ಸಿಟಿ ಬಸಾಪುರ ಬಳಿ ಭೀಕರ ಹಿಟ್ ಅಂಡ್ ರನ್: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಎಲೆಕ್ಟ್ರಾನಿಕ್ಸ್‌ ಸಿಟಿ ಬಸಾಪುರ ಬಳಿ ಭೀಕರ ಹಿಟ್ ಅಂಡ್ ರನ್: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಿಟ್ ಅಂಡ್ ರನ್‌ಗೆ ಬೈಕ್ ಸವಾರ ಗಂಭೀರ, ಸೈಕಲ್ ಸವಾರನ ಕಾಲೇ ಕಟ್, ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಮೂರು ದಿನವಾದರೂ ಸಿಗದ ಆರೋಪಿ!

Written ByYashaswini V
Published: Oct 27, 2026, 04:15 PM IST|Updated: Oct 27, 2026, 04:16 PM IST
joinshare
ಎಲೆಕ್ಟ್ರಾನಿಕ್ಸ್‌ ಸಿಟಿ ಬಸಾಪುರ ಬಳಿ ಭೀಕರ ಹಿಟ್ ಅಂಡ್ ರನ್: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ರೈತರಿಗೆ ಶುಭ ಸುದ್ದಿ.. ಇಂದು ಬ್ಯಾಂಕ್ ಖಾತೆಗಳಿಗೆ 2 ಸಾವಿರ ಜಮಾ PM Kisan ಹಣದ ಕುರಿತು ಪ್ರಮುಖ ಘೋಷಣೆ!

ರೈತರಿಗೆ ಶುಭ ಸುದ್ದಿ.. ಇಂದು ಬ್ಯಾಂಕ್ ಖಾತೆಗಳಿಗೆ 2 ಸಾವಿರ ಜಮಾ PM Kisan ಹಣದ ಕುರಿತು ಪ್ರಮುಖ ಘೋಷಣೆ!

2

ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಮಸ್ಕಿ ನಂಟು? ಅಸ್ಸಾಂ ಮೂಲದ ಯುವಕನಿದ್ದ ಸ್ಥಳಗಳಲ್ಲಿ ಪೊಲೀಸರಿಂದ ಪಂಚನಾಮೆ

3

ಮುನಿಯಪ್ಪ ಮನೆಗೆ ಹೋದರೆ ಒಂದು ಲೋಟ ನೀರು ಕೊಡಲ್ಲ: ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ!

4

‘ದೇವೇಗೌಡರ ಕುಟುಂಬ ಮುಗಿಸಲು ₹600 ಕೋಟಿ ಡೀಲ್ ಕೊಡಲು ನಮಗೆ ತಿಕ್ಕಲು ಹಿಡಿದಿದೆಯಾ?’: ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

5

ರ‍್ಯಾಪರ್ ಚಂದನ್ ಶೆಟ್ಟಿಯ ‘ಮೈಮಾಟ’ ಹಾಡಲ್ಲಿ ಬ್ರೇಕಪ್ ನೋವು.. ಇದು ಅವರ ರಿಯಲ್ ಲೈಫ್ ಕಥೆನಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕನೊಬ್ಬ ಭೀಕರ ಅಪಘಾತವೆಸಗಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿ ಬಳಿ ನಡೆದಿದೆ. ಫಾರ್ಚೂನರ್ ಕಾರಿನ ಅತಿವೇಗದ ಚಾಲನೆ ಅಟ್ಟಹಾಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರೆ, ಸೈಕಲ್ ಸವಾರನ ಕಾಲೇ ತುಂಡಾಗಿದೆ. ಅಪಘಾತದ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿಪರ್ಯಾಸ ಎಂದರೆ ಅಪಘಾತ ನಡೆದು ಮೂರು ದಿನ ಕಳೆದರೂ, ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್‌ ಹಾಗೂ ಸೈಕಲ್‌ ಸವಾರರ ಮೇಲೆ KA51MW8744 ನಂಬರ್‌ನ ಫಾರ್ಚೂನರ್ ಕಾರ್‌ ಬಂದು ಯಮರಾಜನಂತೆ ಎರಗಿ ಅಟ್ಟಹಾಸ ಮೆರೆದಿದೆ. ಕ್ಷಣಾರ್ಧದಲ್ಲಿ ನಡೆದ ಈ ಭೀಕರ ಅಪಘಾತಕ್ಕೆ ಇಬ್ಬರು ಸವಾರರ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಅಪಘಾತದ ಬಳಿಕ ಗಾಯಾಳುಗಳ ನೆರವಿಗೆ ಧಾವಿಸುವ ಬದಲು, ಕಾರನ್ನು ರಿವರ್ಸ್ ತೆಗೆದುಕೊಂಡು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಬಸಾಪುರ ಬಳಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಫಾರ್ಚೂನರ್ ಕಾರು ಬೈಕ್ ಹಾಗೂ ಸೈಕಲ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಫಾರ್ಚೂನರ್‌ ಕಾರ್‌ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ರಸ್ತೆಗೆ ಬಿದ್ದಿದ್ದು ಅವನ ಸ್ಥಿತಿ ಗಂಭೀರವಾಗಿದೆ. ಇತ್ತ ಸೈಕಲ್‌ ಸವಾರನ ಕಾಲೇ ಮುರಿದಿದೆ. ಇಡೀ ಘಟನೆಯ ಭೀಕರತೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಕಾರು ಚಾಲನೆ ಮಾಡುತ್ತಿದ್ದವನ ಕೈಯಲ್ಲಿ ಮದ್ಯದ ಬಾಟಲ್‌ ಇತ್ತು. ಡ್ರೈವರ್‌ ಕುಡಿದ ನಶೆಯಲ್ಲಿ ಇದ್ದದ್ದೇ ಈ ಅಪಘಾತಕ್ಕೆ ಕಾರಣ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಬಸಾಪುರ ಸಮೀಪ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಬೈಕ್‌ ಸವಾರನನ್ನು ಕೊಳ್ಳೇಗಾಲ ಮೂಲದ ಮೂರ್ತಿ ಎಂದು ಗುರುತಿಸಲಾಗಿದೆ. ಈ ಭೀಕರ ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಮೂರ್ತಿಯ ಸ್ನೇಹಿತರು ಕೂಡಲೇ ಆತನನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿಯೇ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ, ನಿಮ್ಹಾನ್ಸ್‌ನ ಐಸಿಯು ವಿಭಾಗದಲ್ಲಿ ಬೆಡ್‌ ಲಭ್ಯವಿಲ್ಲದ ಕಾರಣ ಅಲ್ಲಿ ಆತನನ್ನು ಅಡ್ಮಿಟ್‌ ಮಾಡಲು ಸಾಧ್ಯವಾಗಿಲ್ಲ. ಬಳಿಕ, ಬೈಕ್‌ ಸವಾರ ಮೂರ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನಿಗೆ ಚಿಕಿತ್ಸೆ ಮುಂದುವರೆದಿದೆ.

ಈ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಅಪಘಾತಕ್ಕೆ ಕಾರಣವಾದ ಫಾರ್ಚೂನರ್ ಕಾರಿನ ನಂಬರ್ ಪ್ಲೇಟ್ ವಿವರಗಳನ್ನೂ ಕೂಡ ಪೊಲೀಸರಿಗೆ ನೀಡಲಾಗಿದೆ. ಆದರೆ, ಈ ರಸ್ತೆ ಅಪಘಾತ ಸಂಭವಿಸಿ ಮೂರು ದಿನಗಳಾಗಿದ್ದರೂ ಕಾರಿನ ನಂಬರ್ ಕೂಡ ಪೊಲೀಸರಿಗೆ ನೀಡಿದ್ದರೂ ಸಹ ಇನ್ನೂ ಕೂಡ ಅಪಘಾತಕ್ಕೆ ಕಾರಣವಾದ ಕಾರ್‌ ಹಾಗೂ ಆ ಕಾರಿನ ಚಾಲಕನನ್ನು ಪೊಲೀಸರು ಇನ್ನೂ ಪತ್ತೆ ಹಚ್ಚದಿರುವುದು ಅಪಘಾತಕ್ಕೀಡಾದವರ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಅತಿ ವೇಗದ ಚಾಲನೆ, ಕುಡಿದು ಚಾಲನೆ ಮಾಡಿ ಕಾನೂನು ಉಲ್ಲಂಘಿಸಿ ಇಬ್ಬರು ವ್ಯಕ್ತಿಗಳ ಜೀವಕ್ಕೇ ಕುತ್ತು ತಂದ ಅಪಘಾತವೆಸಗಿದ ಚಾಲಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಗಾಯಾಳುಗಳ ಕುಟುಂಬಸ್ಥರ ಆಗ್ರಹವಾಗಿದೆ. ಸಿಸಿಟಿವಿ ದೃಶ್ಯಗಳು ಮತ್ತು ಲಭ್ಯವಿರುವ ವಾಹನದ ನೋಂದಣಿ ವಿವರಗಳ ಆಧಾರದಲ್ಲಿ ಪೊಲೀಸರು ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
 

Add Zee News as a Preferred Source
TAGS:
Accident