• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗಲು ಈ 3 ಕಾರಣಗಳೇನು? ಸುದೀಪ್ ಹೇಳಿದ ಮಾತುಗಳಿವು!

ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗಲು ಈ 3 ಕಾರಣಗಳೇನು? ಸುದೀಪ್ ಹೇಳಿದ ಮಾತುಗಳಿವು!

What are the 3 reasons why Tandav received: ಬಿಗ್‌ಬಾಸ್ ಮನೆಯಲ್ಲಿ ಇಷ್ಟು ದಿನ ತಾಳ್ಮೆಯಿಂದಲೇ ಎಲ್ಲವನ್ನೂ ಸಹಿಸಿಕೊಂಡಿದ್ದ ತಾಂಡವ್ ರಾಮ್, ಈಗ ತಮ್ಮ ಆಟದ ಮೂಲಕವೇ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ.

Written ByRamya. R. Gowda
Published: Oct 25, 2026, 03:53 PM IST|Updated: Oct 25, 2026, 03:59 PM IST
joinshare
ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗಲು ಈ 3 ಕಾರಣಗಳೇನು? ಸುದೀಪ್ ಹೇಳಿದ ಮಾತುಗಳಿವು!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?

ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?

2

ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗಲು ಈ 3 ಕಾರಣಗಳೇನು? ಸುದೀಪ್ ಹೇಳಿದ ಮಾತುಗಳಿವು!

3

ಶಿವಮೊಗ್ಗ ಬ್ರೇಕಿಂಗ್: ಗಂಡನ ಮನೆಯವರ ಕಿರುಕುಳ ತಾಳದೇ ಗೃಹಿಣಿ ಸಾ*

4

ವರ್ಷಕ್ಕೆ 475 ಕೋಟಿ ಗಳಿಕೆ, 5000 ಕೋಟಿ ಆಸ್ತಿ... 100 ಕೋಟಿಗೂ ಅಧಿಕ ಸಂಭಾವನೆ ಪಡೆಯುವ ಸ್ಟಾರ್‌ ನಟ ಈತ!

5

ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ.. ಹನಗೇರಕಟ್ಟೆ ಬಳಿ ಟಾಟಾ ಏಸ್‌ ಉರುಳಿ ಹಲವರಿಗೆ ಗಾಯ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್‌ಬಾಸ್ ಮನೆಯಲ್ಲಿ ಇಷ್ಟು ದಿನ ತಾಳ್ಮೆಯಿಂದಲೇ ಎಲ್ಲವನ್ನೂ ಸಹಿಸಿಕೊಂಡಿದ್ದ ತಾಂಡವ್ ರಾಮ್, ಈಗ ತಮ್ಮ ಆಟದ ಮೂಲಕವೇ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ. ಸೋಮಾರಿ, ದಡ್ಡ ಕ್ಯಾಪ್ಟನ್, ಕೈಲಾಗದವನು ಎಂದೆಲ್ಲ ಟೀಕಿಸಿದವರೇ ಇದೀಗ ತಾಂಡವ್ ಆಟಕ್ಕೆ ಫಿದಾ ಆಗಿದ್ದಾರೆ. ಈ ವಾರದ ಟಾಸ್ಕ್‌ನಲ್ಲಿ ತಾಂಡವ್ ಹಾಕಿದ ಮಾಸ್ಟರ್ ಪ್ಲ್ಯಾನ್‌ಗೆ ಕಾವಲುಗಾರರೇ ಶಾಕ್ ಆಗಿದ್ದಾರೆ. ಇನ್ನು ತಾಂಡವ್ ಆಟಕ್ಕೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಹಾಗಾದ್ರೆ, ತಾಂಡವ್ ಆಟದಲ್ಲಿ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಬಿಗ್‌ಬಾಸ್ ಮನೆಯಲ್ಲಿ ತಾಂಡವ್ ರಾಮ್ ಅಂದ್ರೆ ಕೆಲವರಿಗೆ ಅಸಡ್ಡೆ, ಇನ್ನು ಕೆಲವರಿಗೆ ಟೀಕೆ. ಸಾಮರ್ಥ್ಯವಿದ್ದರೂ ತಮ್ಮ ತಾಳ್ಮೆ, ಸ್ನೇಹಿತರಿಗಾಗಿ ಮರುಗುವ ಗುಣದಿಂದಾಗಿ ಆಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರುತಿಸಿಕೊಳ್ಳಲು ತಾಂಡವ್‌ಗೆ ಸಾಧ್ಯವಾಗಿರಲಿಲ್ಲ. ಒಂದು ಬಾರಿ ಮನೆಯಿಂದ ಹೊರಗೆ ಹೋಗಿ ಮತ್ತೆ ವಾಪಸ್ ಬಂದಿದ್ದ ತಾಂಡವ್, ಈ ಬಾರಿ ಮಾತ್ರ ತಮ್ಮ ಆಟದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಈ ವಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ತಮ್ಮೊಳಗಿನ ನಾಯಕನನ್ನು ತೋರಿಸಿಕೊಟ್ಟಿದ್ದಾರೆ.

ಈ ವಾರದ ಟಾಸ್ಕ್‌ನಲ್ಲಿ ಲೂಟಿಕೋರರ ಗುಂಪಿನ ನಾಯಕನಾಗಿದ್ದ ತಾಂಡವ್, ಅತ್ಯಂತ ಚಾಣಾಕ್ಷತನದಿಂದ ಆಟವಾಡಿದ್ದಾರೆ. ಕ್ರಿಯೇಟಿವ್ ಆಗಿ ಯೋಚಿಸಿ, ಸರಿಯಾದ ಯೋಜನೆ ರೂಪಿಸಿ, ತಂಡದ ಸದಸ್ಯರನ್ನು ಜೊತೆಯಲ್ಲಿ ಕೊಂಡೊಯ್ದಿದ್ದಾರೆ. ತಾಂಡವ್ ಹಾಕಿದ ಮಾಸ್ಟರ್ ಪ್ಲ್ಯಾನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿತ್ತೆಂದರೆ, ಕಿಚ್ಚ ಸುದೀಪ್ ವಿಡಿಯೋ ಮೂಲಕ ಆಟವನ್ನು ತೋರಿಸುವವರೆಗೂ ಹಲವು ಕಾವಲುಗಾರರಿಗೆ ಅದರ ಹಿಂದಿನ ತಂತ್ರವೇ ಅರ್ಥವಾಗಿರಲಿಲ್ಲ. ವಾರಾಂತ್ಯದಲ್ಲಿ ತಾಂಡವ್ ಆಟದ ಅಸಲಿ ರೂಪ ಕಂಡು ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.

ತಾಂಡವ್‌ಗೆ ಹೀರೋ ಪಟ್ಟ!

ಇಷ್ಟು ದಿನ ತಾಂಡವ್ ಅವರನ್ನು ಸೋಮಾರಿ, ದಡ್ಡ ಕ್ಯಾಪ್ಟನ್ ಎಂದು ಟೀಕಿಸಿದ್ದ ಗಾನವಿ ಕೂಡ ಈ ವಾರದ ಆಟ ನೋಡಿ ಮೆಚ್ಚಿಕೊಂಡಿದ್ದಾರೆ. ತಾಂಡವ್ ಅವರನ್ನು ಹೀರೋ ಎಂದು ಕರೆದಿರುವುದು ಅವರ ಆಟಕ್ಕೆ ಸಿಕ್ಕ ದೊಡ್ಡ ಮನ್ನಣೆ. ಇಷ್ಟು ದಿನ ತಮ್ಮ ಸಾಮರ್ಥ್ಯವನ್ನು ಗುರುತಿಸದವರ ಮುಂದೆ ತಾಂಡವ್ ತಮ್ಮ ಆಟದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಮಾತಿಗಿಂತ ಆಟವೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.

ತಾಂಡವ್ ಆಟಕ್ಕೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಾಂಡವ್‌ಗೆ ಕಿಚ್ಚನ ಚಪ್ಪಾಳೆ ನೀಡುತ್ತಿರುವುದಾಗಿ ಹೇಳಿದ್ದಾರೆ.ಮೊದಲನೆಯದಾಗಿ, ಸ್ನೇಹಿತರಿಗಾಗಿ ಯಾವ ಸಂದರ್ಭದಲ್ಲಿಯೂ ನಿಂತುಕೊಳ್ಳುವ ತಾಂಡವ್ ಅವರ ಗುಣವನ್ನು ಸುದೀಪ್ ಪ್ರಶಂಸಿಸಿದ್ದಾರೆ. ಎದುರಿನಿಂದ ಅದೇ ಸ್ನೇಹ ಸಿಗದಿದ್ದರೂ ತಮ್ಮ ಗೆಳೆಯರನ್ನು ಕೈಬಿಡದ ಅವರ ವ್ಯಕ್ತಿತ್ವದಲ್ಲಿ ಮನುಷ್ಯತ್ವ ಕಾಣುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎರಡನೆಯದಾಗಿ, ಅವಮಾನ ಮತ್ತು ಟೀಕೆಗಳನ್ನು ಮೌನವಾಗಿ ಸ್ವೀಕರಿಸುವ ತಾಂಡವ್ ಅವರ ರೀತಿಯನ್ನು ಸುದೀಪ್ ಶ್ಲಾಘಿಸಿದ್ದಾರೆ. ನಾಮಿನೇಷನ್, ಎಲಿಮಿನೇಷನ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ತಮ್ಮ ಬಗ್ಗೆ ಟೀಕೆಗಳು ಕೇಳಿಬಂದರೂ ಅದನ್ನು ತಾಳ್ಮೆಯಿಂದ ಎದುರಿಸಿದ್ದಾರೆ. ಈ ವಾರದ ಟಾಸ್ಕ್‌ನಲ್ಲೂ ತಮ್ಮ ಆಟದ ಬಗ್ಗೆ ಇತರರು ಏನು ಹೇಳುತ್ತಾರೆ ಎಂಬುದಕ್ಕಿಂತ ಅಂತಿಮ ಫಲಿತಾಂಶದ ಮೇಲೆ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ.ಮೂರನೆಯದಾಗಿ, ಈ ವಾರ ತಾಂಡವ್ ತೋರಿಸಿದ ಅದ್ಭುತ ಆಟ ಮತ್ತು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ರೀತಿಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸ್ಪರ್ಧಿಗಳ ಟೀಕೆ, ಮತ್ತೊಂದೆಡೆ ತಮ್ಮ ಸಾಮರ್ಥ್ಯದ ಬಗ್ಗೆ ಕೇಳಿಬಂದ ಅವಮಾನಕಾರಿ ಮಾತುಗಳು. ಈ ಎಲ್ಲದರ ನಡುವೆಯೂ ತಾಂಡವ್ ತಾಳ್ಮೆ ಕಳೆದುಕೊಳ್ಳದೆ ಆಟದ ಮೇಲೆ ಗಮನ ಹರಿಸಿದ್ದಾರೆ. ‘ಡಬ್ಬ’, ‘ಕೈಲಾಗದವನು’, ‘ಅನರ್ಹ’ ಎಂಬ ಮಾತುಗಳನ್ನು ಕೇಳಿದ್ದ ತಾಂಡವ್‌ಗೆ ಇದೀಗ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸುದೀಪ್ ಅವರ ಮೆಚ್ಚುಗೆಯ ಮಾತುಗಳನ್ನು ಕೇಳಿ ತಾಂಡವ್ ಭಾವುಕರಾಗಿದ್ದಾರೆ.


ಒಟ್ಟಿನಲ್ಲಿ, ಬಿಗ್‌ಬಾಸ್ ಮನೆಯಲ್ಲಿ ತಾಂಡವ್ ರಾಮ್ ಅವರ ಆಟಕ್ಕೆ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಪರ್ಧಿ ಈಗ ತಮ್ಮ ತಂತ್ರ, ತಾಳ್ಮೆ ಮತ್ತು ನಾಯಕತ್ವದ ಮೂಲಕ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ್ದಾರೆ. ಟೀಕಿಸಿದವರೇ ಮೆಚ್ಚುವಂತೆ ಆಟವಾಡಿರುವ ತಾಂಡವ್, ಮುಂದಿನ ವಾರಗಳಲ್ಲೂ ಇದೇ ಆಟ ಮುಂದುವರಿಸುತ್ತಾರಾ? ಬಿಗ್‌ಬಾಸ್ ಮನೆಯ ಮುಂದಿನ ಆಟದಲ್ಲಿ ತಾಂಡವ್ ಯಾವ ಹೊಸ ತಂತ್ರ ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

 

Add Zee News as a Preferred Source
TAGS:
Bigg Boss Kannada Season 13