• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?

ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?

ಬಾಲಿವುಡ್‌ನ ಯುವ ನಟಿ ಅನನ್ಯಾ ಪಾಂಡೆ ತಮ್ಮ ಅದ್ಭುತ ನಟನೆಯಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್‌ ಹಾಗೂ ಸ್ಟೈಲಿಶ್ ಲುಕ್‌ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅನನ್ಯಾ ಧರಿಸಿದ್ದ ಕೋಟ್ಯಂತರ ರೂ. ಮೌಲ್ಯದ ಐಷಾರಮಿ ಕೈಗಡಿಯಾರದ ಬೆಲೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಸದ್ಯ ಈ ಕುರಿತ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

Written ByKrishna NK
Published: Oct 25, 2026, 04:43 PM IST|Updated: Oct 25, 2026, 04:44 PM IST
joinshare
ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?
Image Credit: Ananya Pandey watch

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್: ಕೇಂದ್ರ ಸಚಿವ ಕುಮಾರಸ್ವಾಮಿ ಹೊಸ ಬಾಂಬ್‌

ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್: ಕೇಂದ್ರ ಸಚಿವ ಕುಮಾರಸ್ವಾಮಿ ಹೊಸ ಬಾಂಬ್‌

2

ಪ್ರತಿದಿನ ತಲೆಗೆ ಸ್ನಾನ ಮಾಡುವುದು ಒಳ್ಳೆಯದೇ? ಇದರಿಂದ ಶೀತ ಬರುತ್ತದೆ ಎಂಬುದು ನಿಜವೇ?

3

ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳೇ ನಮ್ಮ ಸಮಾಜದ ಅಡಿಪಾಯ : ಸಿಎಂ

4

ಅಂಬಾನಿ ಹತ್ತಿರವೂ ಇಲ್ಲ ಇಷ್ಟೊಂದು ದುಬಾರಿ ವಾಚ್‌..! ಅನನ್ಯ ಪಾಂಡೆ ಕೈ ಗಡಿಯಾರದ ಬೆಲೆ ಗೊತ್ತೆ?

5

ತಾಂಡವ್‌ಗೆ ಕಿಚ್ಚನ ಚಪ್ಪಾಳೆ ಸಿಗಲು ಈ 3 ಕಾರಣಗಳೇನು? ಸುದೀಪ್ ಹೇಳಿದ ಮಾತುಗಳಿವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ananya Pandey watch : ಅಂಬಾನಿ ಕುಟುಂಬದ ಐಷಾರಾಮಿತನ ಮತ್ತು ಅವರ ದುಬಾರಿ ಉಡುಪುಗಳು, ವಾಚ್‌ಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುತ್ತವೆ. ಅನಂತ್ ಅಂಬಾನಿ ಸೇರಿದಂತೆ ಪ್ರತಿಯೊಬ್ಬರೂ ಧರಿಸುವ ಕೋಟ್ಯಂತರ ರೂ. ಬೆಲೆಯ ವಾಚ್‌ಗಳು ಎಲ್ಲರ ಹುಬ್ಬೇರಿಸುವಂತೆ ಮಾಡುತ್ತವೆ. ಆದರೆ, ಈಗ ಇಂತಹದ್ದೇ ಒಂದು ಐಷಾರಮಿ ಕೈಗಡಿಯಾರದ ಮೂಲಕ ಯುವ ನಟಿ ಅನನ್ಯಾ ಪಾಂಡೆ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಬಾಲಿವುಡ್‌ನ ಸ್ಟೈಲಿಶ್ ನಟಿ ಅನನ್ಯಾ ಪಾಂಡೆ ಸದ್ಯ ಬರೋಬ್ಬರಿ 1.32 ಕೋಟಿ ರೂ. ಮೌಲ್ಯದ ವಜ್ರದ ಕೈಗಡಿಯಾರವನ್ನು ಧರಿಸಿ ಸುದ್ದಿಯಲ್ಲಿದ್ದಾರೆ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ಅತ್ಯಾಕರ್ಷಕ ಗೌನ್‌ನಲ್ಲಿ ಮಿಂಚಿರುವ ಅನನ್ಯಾ ಪಾಂಡೆ, ತಮ್ಮ ಈ ಹೊಸ ಲುಕ್‌ಗೆ ತಕ್ಕಂತೆ ಅತ್ಯಂತ ದುಬಾರಿ ವಾಚ್‌ ಧರಿಸಿ ಕಂಗೊಳಿಸಿದ್ದಾರೆ.

ಈ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವತಃ ನಟಿಯೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಸ್ಟೈಲಿಶ್ ಲುಕ್ ಮತ್ತು ಗಡಿಯಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ನಟಿ ಅನನ್ಯಾ ಪಾಂಡೆ ಧರಿಸಿರುವ ಈ ಐಷಾರಮಿ ಗಡಿಯಾರವು ಸಾಮಾನ್ಯವಾದುದಲ್ಲ. ಇದು ಖ್ಯಾತ ಬ್ರ್ಯಾಂಡ್‌ನ 'ಪಿಯಾಗೆಟ್ ಲೈಮ್‌ಲೈಟ್ ಗಾಲಾ ಪ್ರೆಷಿಯಸ್ ಎಡಿಷನ್' (ರೆಫ್. G0A47183) ವಾಚ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಅಂದಾಜು ಬೆಲೆ ಬರೋಬ್ಬರಿ 1.32 ಕೋಟಿ ರೂ.ಗಳು. ಈ ಗಡಿಯಾರವು ಅತ್ಯುತ್ತಮ ಕರಕುಶಲತೆ ಮತ್ತು ರತ್ನಗಳ ಅಂದವಾದ ಸಂಗಮವಾಗಿದೆ.

ಈ ಗಡಿಯಾರವು 32 ಎಂಎಂ ಕೇಸ್ ಹಾಗೂ 18 ಕ್ಯಾರೆಟ್ ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದೆ. ಇದರ ತಯಾರಿಕೆಯಲ್ಲಿ ಬ್ರೈಟ್ ಕಟ್ ಹೊಂದಿರುವ 20 ಅದ್ಭುತ ವಜ್ರಗಳನ್ನು ಬಳಸಲಾಗಿದೆ. ಇಷ್ಟೇ ಅಲ್ಲದೆ, 4.01 ಕ್ಯಾರೆಟ್‌ಗಳ 22 ವಿವಿಧ ಕಟ್ ರತ್ನಗಳನ್ನು ಇದರ ಅಂದವನ್ನು ಹೆಚ್ಚಿಸಲು ಬಳಸಲಾಗಿದೆ. ಚಿನ್ನ ಮತ್ತು ವಜ್ರಗಳ ಅತಿಯಾದ ಬಳಕೆಯಿಂದಾಗಿ ಇದು ಅತ್ಯಂತ ದುಬಾರಿಯಾಗಿದೆ. ವಿಶೇಷವೆಂದರೆ, ಇದು ಕಸ್ಟಮೈಸ್ ಮಾಡಲಾದ (Customized) ಗಡಿಯಾರವಾಗಿದೆ. ಅಂದರೆ ಖರೀದಿದಾರರ ವೈಯಕ್ತಿಕ ಅಭಿರುಚಿ ಮತ್ತು ಶೈಲಿಗೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಿ ತಯಾರಿಸಲಾಗುತ್ತದೆ.

ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ವಾಚ್‌ಗಳನ್ನು ಧರಿಸುವುದು ಹೊಸ ವಿಷಯವೇನಲ್ಲ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಟ-ನಟಿಯರು ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಬ್ರ್ಯಾಂಡ್‌ಗಳ ವಾಚ್‌ಗಳನ್ನು ಕಲೆಕ್ಷನ್ ಮಾಡಿದ್ದಾರೆ ಮತ್ತು ಆಗಾಗ್ಗೆ ಸಾರ್ವಜನಿಕವಾಗಿ ಧರಿಸಿ ಕಾಣಿಸಿಕೊಳ್ಳುತ್ತಾರೆ. ಈಗ ಈ ಸಾಲಿಗೆ ಯುವ ನಟಿ ಅನನ್ಯಾ ಪಾಂಡೆ ಕೂಡ ಸೇರಿಕೊಂಡಿದ್ದಾರೆ.

2019ರಲ್ಲಿ ಬಿಡುಗಡೆಯಾದ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಅನನ್ಯಾ ಪಾಂಡೆ, ತಮ್ಮ ಮೊದಲ ಚಿತ್ರಕ್ಕೇ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಯನ್ನು ಪಡೆದುಕೊಂಡರು. ಬಳಿಕ 'ಡ್ರೀಮ್ ಗರ್ಲ್ 2' ಸೇರಿದಂತೆ ಹಲವು ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸದ್ಯ ಸಿನಿಮಾಗಳ ಜೊತೆಗೆ ತಮ್ಮ ಅದ್ಭುತ ಫ್ಯಾಷನ್ ಸೆನ್ಸ್ ಹಾಗೂ ಕೋಟಿ ಮೌಲ್ಯದ ವಾಚ್‌ನಿಂದಾಗಿ ಅನನ್ಯಾ ಪಾಂಡೆ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿ ಬದಲಾಗಿದ್ದಾರೆ.

Add Zee News as a Preferred Source
TAGS:
Cinema