• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ವಿಜಯದಶಮಿ ದಿನ ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್ ವೈರಲ್‌.. ಜವಾಬ್ದಾರಿಯ ಬಗ್ಗೆ ಯಾರಿಗೆ ಕೌಂಟರ್ ?

ವಿಜಯದಶಮಿ ದಿನ ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್ ವೈರಲ್‌.. ಜವಾಬ್ದಾರಿಯ ಬಗ್ಗೆ ಯಾರಿಗೆ ಕೌಂಟರ್ ?

vijalakshmi post: Vijayalakshmi: ದರ್ಶನ್‌ ಜೊತೆಗಿನ ಫೋಟೋ ಹಾಕಿ ಜವಾಬ್ದಾರಿ ಬಗ್ಗೆ ವಿಜಯಲಕ್ಷ್ಮಿ ಹೀಗ್ಯಾಕೆ ಹೇಳಿದ್ರು ಅಂತಾ ತಿಳಿಯಲು ಈ ಸ್ಟೋರಿ ಓದಿ.

Written ByRamya. R. Gowda
Published: Oct 20, 2026, 04:53 PM IST|Updated: Oct 20, 2026, 05:01 PM IST
joinshare
ವಿಜಯದಶಮಿ ದಿನ ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್ ವೈರಲ್‌.. ಜವಾಬ್ದಾರಿಯ ಬಗ್ಗೆ ಯಾರಿಗೆ ಕೌಂಟರ್ ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಸಿಎಂ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಕೇಸ್‌ ಸ್ಲೋ..! ತನಿಖೆ ಮಂದಗತಿಗೆ ಕಾರಣವೇನು?

ಸಿಎಂ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಕೇಸ್‌ ಸ್ಲೋ..! ತನಿಖೆ ಮಂದಗತಿಗೆ ಕಾರಣವೇನು?

2

ಕೋಟಿ ಕೋಟಿ ಆಸ್ತಿ ಒಡೆಯ ಸಾವಿರ ರೂಪಾಯಿ ಬಾಡಿಗೆಗೆ ಕೊಲೆಯಾದ್ರ..! ವಕೀಲನ ಮರ್ಡರ್ ಕೇಸ್ ನಲ್ಲಿ ಅನುಮಾನ..!

3

Viral Video: ಬೀಚ್‌ನಲ್ಲಿ ರೀಲ್ಸ್‌ ಮತ್ತು ಸೆಲ್ಫಿ ಹುಚ್ಚು; ಮಗುವಿನ ಸುರಕ್ಷತೆಯನ್ನೇ ಮರೆತ ದಂಪತಿ!

4

ಡಯಾಬಿಟಿಸ್‌ ಇದ್ದವರು ಏನು ತಿನ್ನಬೇಕು? ಯಾವುದಕ್ಕೆ ಕಡಿವಾಣ ಹಾಕಬೇಕು? ಇಲ್ಲಿದೆ ಮಾಹಿತಿ

5

ವಿಜಯದಶಮಿ ದಿನ ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್ ವೈರಲ್‌.. ಜವಾಬ್ದಾರಿಯ ಬಗ್ಗೆ ಯಾರಿಗೆ ಕೌಂಟರ್ ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಇಂದು ನಾಡಿನಾದ್ಯಂತ ಆಯುಧಪೂಜೆ, ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಈ ಹಬ್ಬದ ಸಂದರ್ಭದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮಾಡಿರುವ ಒಂದು ಪೋಸ್ಟ್ ಈಗ ಗಮನ ಸೆಳೆಯುತ್ತಿದೆ. ದರ್ಶನ್ ಹೆಸರನ್ನು ಸ್ವಹಿತಕ್ಕೆ ಬಳಸಿಕೊಳ್ಳಬೇಡಿ, ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

 ಇತ್ತ ಚಾಮರಾಜನಗರದ ದಸರಾ ಸಂಭ್ರಮದಲ್ಲಿ ನಟ ಧನ್ವೀರ್ ಗೌಡ ಕೂಡ ದರ್ಶನ್ ಪರವಾಗಿ ಖಡಕ್ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮಿ ಪೋಸ್ಟ್‌ನಲ್ಲಿರುವ ಸಂದೇಶವೇನು? ಧನ್ವೀರ್ ಹೇಳಿದ್ದೇನು? ಈ ಸ್ಟೋರಿ ನೋಡಿ.

ವಿಜಯಲಕ್ಷ್ಮಿ ದರ್ಶನ್ ಪೋಸ್ಟ್
ಹಬ್ಬದ ಸಂಭ್ರಮದ ನಡುವೆ ವಿಜಯಲಕ್ಷ್ಮಿ ದರ್ಶನ್ ಅವರ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಪತಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯದಶಮಿಯ ಶುಭಾಶಯ ಕೋರಿರುವ ವಿಜಯಲಕ್ಷ್ಮಿ, ತಮ್ಮ ಮಾತುಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಪೋಸ್ಟ್‌ನಲ್ಲಿ ಏನಿದೆ?
“ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವಿನ ಚರ್ಚೆಗಳ ಮಧ್ಯೆ ವಿಜಯಲಕ್ಷ್ಮಿ ಹಂಚಿಕೊಂಡಿರುವ ಈ ಸಂದೇಶ ಕುತೂಹಲ ಮೂಡಿಸಿದೆ. ಇನ್ನು ಫೋಟೋದಲ್ಲಿ ವಿಜಯಲಕ್ಷ್ಮಿ ಕೆಂಪು ಬಣ್ಣದ ಸಲ್ವಾರ್ ಧರಿಸಿ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಬಿಳಿ ಪ್ಯಾಂಟ್ ಹಾಗೂ ಗ್ರೇ ಬಣ್ಣದ ಶರ್ಟ್ ಧರಿಸಿದ್ದು, ಪತ್ನಿಯ ಹೆಗಲ ಮೇಲೆ ಕೈ ಹಾಕಿರುವ ಫೋಟೋ ಗಮನ ಸೆಳೆಯುತ್ತಿದೆ.

ಇತ್ತ ಚಾಮರಾಜನಗರದ ದಸರಾ ಸಂಭ್ರಮದಲ್ಲೂ ಡಿ ಬಾಸ್ ಹೆಸರು ಮೊಳಗಿದೆ. ನಟ ದರ್ಶನ್ ಅಭಿಮಾನಿಗಳು ಜೋರಾಗಿ ಘೋಷಣೆ ಕೂಗಿದ್ದು, ಅಭಿಮಾನಿಗಳ ಉತ್ಸಾಹದ ನಡುವೆ ವೇದಿಕೆ ಮೇಲೆ ಮಾತನಾಡಿದ ನಟ ಧನ್ವೀರ್ ಗೌಡ, ದರ್ಶನ್‌ಗೆ ಬೆಂಬಲ ಸೂಚಿಸಿದ್ದಾರೆ. “ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ” ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಚಾಮರಾಜನಗರದ ಬಗ್ಗೆ ಮಾತನಾಡುತ್ತಾ, “ನಂಗೆ ಮಾದಪ್ಪನ ಬೆಟ್ಟ ಅಂದ್ರೆ ತುಂಬಾ ಇಷ್ಟ” ಎಂದು ತಮ್ಮ ಅಭಿಮಾನವನ್ನೂ ವ್ಯಕ್ತಪಡಿಸಿದ್ದಾರೆ.

ದರ್ಶನ್ ವಿರೋಧಿಗಳಿಗೆ ಧನ್ವೀರ್ ಟಾಂಗ್
ಇನ್ನು ದರ್ಶನ್ ವಿಚಾರವಾಗಿ ಮಾತನಾಡಿದ ಧನ್ವೀರ್ ಗೌಡ, ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. “ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಅವರನ್ನು ಏನು ಮಾಡಲಿಕ್ಕೆ ಆಗಲ್ಲ” ಎಂದು ಹೇಳುವ ಮೂಲಕ ದರ್ಶನ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ, “ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬಂದೇ ಬರ್ತಾರೆ. ನಿಮ್ಮ ಪ್ರೀತಿ, ಆಶೀರ್ವಾದ, ಬೆಂಬಲ ಅವರ ಮೇಲೆ ಸದಾ ಹೀಗೆ ಇರಲಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಧನ್ವೀರ್ ಅವರ ಈ ಮಾತುಗಳ ಬೆನ್ನಲ್ಲೇ ಅಭಿಮಾನಿಗಳು ಮತ್ತಷ್ಟು ಜೋರಾಗಿ “ಡಿ ಬಾಸ್.. ಡಿ ಬಾಸ್..” ಎಂದು ಘೋಷಣೆ ಕೂಗಿದ್ದಾರೆ.

ಒಂದೆಡೆ ವಿಜಯದಶಮಿಯ ಶುಭಾಶಯದ ಜೊತೆಗೆ ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿರುವ ಸಂದೇಶ, ಮತ್ತೊಂದೆಡೆ ಚಾಮರಾಜನಗರದಲ್ಲಿ ಧನ್ವೀರ್ ಗೌಡ ನೀಡಿರುವ ಹೇಳಿಕೆ. ಹಬ್ಬದ ಸಂಭ್ರಮದ ನಡುವೆಯೂ ದರ್ಶನ್ ವಿಚಾರವೇ ಅಭಿಮಾನಿಗಳ ಚರ್ಚೆಯ ಕೇಂದ್ರಬಿಂದುವಾಗಿದೆ. ವಿಜಯಲಕ್ಷ್ಮಿ ಅವರ ಮಾತುಗಳು ಮತ್ತು ಧನ್ವೀರ್ ಗೌಡ ಅವರ ಹೇಳಿಕೆ ಈಗ ಅಭಿಮಾನಿಗಳ ಗಮನ ಸೆಳೆದಿವೆ.
 

Add Zee News as a Preferred Source
TAGS:
Sandalwood