• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್‌ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!

ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್‌ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮಂಜುಗೆ ಲಿಖಿತ್ ನೀಡಿದ ಅಚ್ಚರಿಯ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.. ಈ ಕುರಿತ ಒಂದು ವರದಿ ಇಲ್ಲಿದೆ..

Written ByKrishna NK
Published: Oct 12, 2026, 03:55 PM IST|Updated: Oct 12, 2026, 04:03 PM IST
joinshare
ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್‌ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!
Image Credit: Bigg Boss mahakavi manja

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸ್ಟಿಂಗ್ ಆಪರೇಷನ್: ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ- ಮುಖ್ಯಮಂತ್ರಿ ಡಿಕೆಶಿಗೆ HDK ತಿರುಗೇಟು

ಸ್ಟಿಂಗ್ ಆಪರೇಷನ್: ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ- ಮುಖ್ಯಮಂತ್ರಿ ಡಿಕೆಶಿಗೆ HDK ತಿರುಗೇಟು

2

ಸಚಿನ್‌ ಮಗಳು ಸಾರಾ ತೆಂಡೂಲ್ಕರ್ ಗಳಿಕೆ ಎಷ್ಟು ಗೊತ್ತಾ? 29ನೇ ವಯಸ್ಸಿನಲ್ಲಿ ಕೋಟಿಗಳ ಒಡತಿ

3

ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್‌ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!

4

ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಕುದುರೆ ರೇಸ್ ಹುಚ್ಚಾಟ.!

5

ಬಿಪಿ ಕಡಿಮೆ ಮಾಡಲು ದಾಳಿಂಬೆ ಬೆಸ್ಟ್‌ನಾ? ಬೀಟ್‌ರೂಟ್‌ ಬೆಸ್ಟ್‌ನಾ? ಯಾವುದು ಹೆಚ್ಚು ಪರಿಣಾಮಕಾರಿ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss  Mahakavi Manja : ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಇತ್ತೀಚೆಗೆ ಹೊರಬಂದಿರುವ ಸ್ಪರ್ಧಿ ಮಂಜುನಾಥ್ (ಮಾಡ್ರನ್ ಮಹಾಕವಿ ಮಂಜು) ಅವರು ತಮ್ಮ ಹುಟ್ಟುಹಬ್ಬವನ್ನು ತೀರಾ ಸರಳವಾಗಿ ಆದರೆ ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಶೋನಿಂದ ಹೊರಬರುತ್ತಿದ್ದಂತೆ ಅವರಿಗೆ ಸ್ನೇಹಿತರಿಂದ ಮರೆಯಲಾಗದ ಸರ್ಪ್ರೈಸ್ ಸಿಕ್ಕಿದೆ. ಕೆಲ ವಾರಗಳ ಹಿಂದೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ಲಿಖಿತ್ ಅವರು ಮಂಜು ಹುಟ್ಟುಹಬ್ಬಕ್ಕೆ ಸಖತ್ ಪ್ಲಾನ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುವ ಯೋಚನೆಯೇ ಮಂಜುಗೆ ಇರಲಿಲ್ಲ, ಆದರೆ ಲಿಖಿತ್ ರಸ್ತೆಯ ಬದಿಯಲ್ಲೇ ಕೇಕ್ ತರಿಸಿ, ಮಂಜುಗೆ ಟೋಪಿ ಹಾಕಿ ಫುಲ್ ಜೋಶ್‌ನಲ್ಲಿ ಸೆಲೆಬ್ರೇಷನ್ ಮಾಡಿಸಿದ್ದಾರೆ. ಇಬ್ಬರೂ ಖುಷಿಯಿಂದ ಕೇಕ್ ತಿನಿಸಿಕೊಂಡು ತಮ್ಮ ಸಂತೋಷ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

 

 

 

 

View this post on Instagram

 

 

 

 

 

 

 

 

 

 

 

A post shared by DADDY (@likithgondi7)

 ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರೂ ತುಂಬಾನೇ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಕಷ್ಟ ಬಂದಾಗ ಒಬ್ಬರಿಗೊಬ್ಬರು ಸರಿಯಾಗಿ ಸಪೋರ್ಟ್ ಮಾಡಿಕೊಳ್ಳುತ್ತಿದ್ದರು. ಈಗ ಶೋನಿಂದ ಹೊರಬಂದ ಮೇಲೂ ಅದೇ ಸ್ನೇಹವನ್ನು ಮುಂದುವರಿಸಿರುವುದು ನೋಡುವುದಕ್ಕೆ ತುಂಬಾ ಖುಷಿ ಕೊಡುತ್ತದೆ. ಅಭಿಮಾನಿಗಳು ಕೂಡ ಇವರ ಫ್ರೆಂಡ್‌ಶಿಪ್ ನೋಡಿ ಸಖತ್ ಇಷ್ಟಪಟ್ಟಿದ್ದಾರೆ, ಇಂಟರ್ನೆಟ್‌ನಲ್ಲಿ ಬರ್ತ್‌ಡೇ ವಿಷಸ್ ಹರಿದುಬರುತ್ತಿದೆ.

ಒಟ್ಟಾರೆಯಾಗಿ, ಅವಾಚ್ಯ ಪದ ಬಳಕೆ ಮತ್ತು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಂಜು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದಾಗಲೂ ಲಿಖಿತ್‌ ಮಂಜು ಅವರನ್ನು ಬೆಂಬಲಿಸಿದ್ದರು. ಈಗಲೂ ಕೇಕ್‌ ಕಟ್‌ ಮಾಡಿಸಿ ಗೆಳೆಯನ ಹುಟ್ಟು ಹಬ್ಬ ಆಚರಿಸಿದ್ದು, ಇಬ್ಬರ ಗೆಳೆತನಕ್ಕೆ ಸಾಕ್ಷಿಯಾಗಿದೆ.. ಮುಂದೆಯೂ ಈ ಸಂಬಂಧ ಹೀಗೆ ಇರಲಿ ಅಂತೀದಾರೆ ನೆಟ್ಟಿಗರು..

Add Zee News as a Preferred Source
TAGS:
Bigg Boss Kannada Season 13