• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಅ. 30ರಿಂದ ನ.1ರವರೆಗೆ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ!

ಅ. 30ರಿಂದ ನ.1ರವರೆಗೆ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ!

ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ ಮನೆಮಾಡಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಕಿರುತೆರೆಯ ತಾರೆಗಳ ಜೊತೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಸಮಾಗಮ ಪ್ರೇಕ್ಷಕರನ್ನು ರಂಜಿಸಲಿದೆ.

Written ByYashaswini V
Published: Oct 30, 2026, 01:49 PM IST|Updated: Oct 30, 2026, 01:53 PM IST
joinshare
ಅ. 30ರಿಂದ ನ.1ರವರೆಗೆ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್‌ ಪತನ: ಪೈಲಟ್‌ ಸೇರಿ 6 ಮಂದಿ ಸಾವು

ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್‌ ಪತನ: ಪೈಲಟ್‌ ಸೇರಿ 6 ಮಂದಿ ಸಾವು

2

ಜನಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್! ಹಾಲಿನ ದರ ಏರಿಕೆ ಬೆನ್ನಲ್ಲೇ ಟೀ, ಕಾಫಿ ಬೆಲೆ ಹೆಚ್ಚಳದ ಬಿಸಿ! ‌

3

ನಾಳೆ ಬೆಂಗಳೂರಿನ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

4

ಅ. 30ರಿಂದ ನ.1ರವರೆಗೆ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ!

5

ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ: ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ತುಟ್ಟಿಭತ್ಯೆ (DA) ಹೆಚ್ಚಳ!?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಮತ್ತೆ ಬಂದಿದೆ. ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಮೂರು ದಿನಗಳ ಕಾಲ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿದಿನ ಸಂಜೆ 5:30ರಿಂದ 6:30ರವರೆಗೆ ರೆಡ್ ಕಾರ್ಪೆಟ್ ಕಾರ್ಯಕ್ರಮ ನಡೆಯಲಿದ್ದು, ನಂತರ ಸಂಜೆ 6:30ರಿಂದ ರಾತ್ರಿ 10:30ರವರೆಗೆ ಕುಟುಂಬ ಅವಾರ್ಡ್ಸ್‌ನ ಸಂಭ್ರಮ ಕಿರುತೆರೆ ವೀಕ್ಷಕರನ್ನು ರಂಜಿಸಲಿದೆ. ಕನ್ನಡ ಕಿರುತೆರೆಯ ಜನಪ್ರಿಯ ಕಲಾವಿದರು ಮತ್ತು ಸ್ಯಾಂಡಲ್‌ವುಡ್‌ನ ತಾರೆಯರು ಒಂದೇ ವೇದಿಕೆಯಲ್ಲಿ ಸೇರಲಿದ್ದು, ಅದ್ಧೂರಿ ಕಾರ್ಯಕ್ರಮಗಳು, ಮನರಂಜನೆ ಮತ್ತು ಮನಮುಟ್ಟುವ ಕ್ಷಣಗಳು ವೀಕ್ಷಕರಿಗಾಗಿ ಕಾದಿವೆ.

ಜೀ ಕುಟುಂಬ ಅವಾರ್ಡ್ಸ್‌ನಲ್ಲಿ 80 ವಿಭಾಗಗಳಲ್ಲಿ ಪ್ರಶಸ್ತಿ:
ಈ ಬಾರಿಯ ಕುಟುಂಬ ಅವಾರ್ಡ್ಸ್‌ನಲ್ಲಿ ಸುಮಾರು 80 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ನೆಚ್ಚಿನ ನಟ, ನೆಚ್ಚಿನ ನಟಿ, ನೆಚ್ಚಿನ ಜೋಡಿ, ನೆಚ್ಚಿನ ಧಾರಾವಾಹಿ, ನೆಚ್ಚಿನ ರಿಯಾಲಿಟಿ ಶೋ ಮತ್ತು ನೆಚ್ಚಿನ ನಿರೂಪಕ ಸೇರಿದಂತೆ ಹಲವು ವಿಭಾಗಗಳಲ್ಲಿ ಕಲಾವಿದರು ಮತ್ತು ಕಾರ್ಯಕ್ರಮಗಳನ್ನು ಗುರುತಿಸಿ ಗೌರವಿಸಲಾಗುತ್ತದೆ. ಇದರ ಜೊತೆಗೆ, ತೆರೆಮರೆಯಲ್ಲಿ ಕೆಲಸ ಮಾಡುವ ತಂತ್ರಜ್ಞರ ಪರಿಶ್ರಮವನ್ನೂ ಗುರುತಿಸಲಾಗುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾನ್ಯ ಸಾಧಕರನ್ನೂ ಈ ವೇದಿಕೆಯಲ್ಲಿ ಗೌರವಿಸಲಾಗುತ್ತದೆ. ವಿಶೇಷ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ಹಲವು ಅಚ್ಚರಿಗಳ ಮೂಲಕ ಈ ಬಾರಿಯ ಕುಟುಂಬ ಅವಾರ್ಡ್ಸ್ ಮತ್ತಷ್ಟು ವಿಶೇಷವಾಗಲಿದೆ.

ಈ ಬಾರಿಯ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರಾದ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಸಂಜಿತ್ ಹೆಗ್ಡೆ, ತಾರಾ ಅನುರಾಧಾ, ಸುಧಾರಾಣಿ, ಶರಣ್, ನಿಶ್ವಿಕಾ ನಾಯ್ಡು, ಅಮೂಲ್ಯ, ಆಶಿಕಾ ರಂಗನಾಥ್, ಅಮೃತ ಅಯ್ಯಂಗಾರ್, ಲವ್ಲೀ ಸ್ಟಾರ್ ಪ್ರೇಮ್, ಚಿಕ್ಕಣ್ಣ, ವಿಜಯ ಪ್ರಕಾಶ್, ಅರ್ಜುನ್ ಜನ್ಯ, ಮೇಘನಾ ರಾಜ್ ಸರ್ಜಾ, ಅದಿತಿ ಪ್ರಭುದೇವ, ಟಿ.ಏನ್ ಸೀತಾರಾಮ್, ಪ್ರಕಾಶ್ ಬೆಳವಾಡಿ, ಖುಷ್ಬೂ, ಡಾಲಿ ಧನಂಜಯ್, ರೋರಿಂಗ್ ಸ್ಟಾರ್ ಮುರಳಿ, ತರುಣ್ ಸುಧೀರ್, ಸೋನಲ್ ಮೊಂತೆರೊ, ರೀಷ್ಮಾ ನಾಣಯ್ಯ ಮತ್ತು ವಿಜಯ ರಾಘವೇಂದ್ರ, ಡಾರ್ಲಿಂಗ್ ಕೃಷ್ಣ , ಅಜಯ್ ರಾವ್, ಬೃಂದಾ ಆಚಾರ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆಯ ತಾರೆಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದೆ.

ಜೀ ಕನ್ನಡ ವಿಶೇಷ ಕ್ಯಾಂಟರ್ ಅಭಿಯಾನ:
ಕುಟುಂಬ ಅವಾರ್ಡ್ಸ್‌ನ ಸಂಭ್ರಮವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವ ಉದ್ದೇಶದಿಂದ ಜೀ ಕನ್ನಡ ವಿಶೇಷ ಕ್ಯಾಂಟರ್ ಅಭಿಯಾನವನ್ನೂ ನಡೆಸಿದೆ. ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಿದ ಈ ಕ್ಯಾಂಟರ್, ವೀಕ್ಷಕರನ್ನು ನೆಚ್ಚಿನ ಕಲಾವಿದರು ಮತ್ತು ವಿಭಾಗಗಳಿಗೆ ಮತ ಹಾಕುವಂತೆ ಪ್ರೋತ್ಸಾಹಿಸಿತು. ಈ ಮೂಲಕ ರಾಜ್ಯದ ವಿವಿಧ ಭಾಗಗಳ ಜನರು ತಮ್ಮ ನೆಚ್ಚಿನ ಕಲಾವಿದರಿಗೆ ಬೆಂಬಲ ನೀಡುವ ಅವಕಾಶ ಪಡೆದರು. ವೀಕ್ಷಕರನ್ನೂ ಈ ಸಂಭ್ರಮದ ಭಾಗವಾಗಿಸುವ ಮೂಲಕ ಜೀ ಕನ್ನಡ ಮತ್ತು ಅದರ ಪ್ರೇಕ್ಷಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ಇದಾಗಿದೆ.

ಜನಪ್ರಿಯ ನಿರೂಪಕರಾದ ಅಕುಲ್ ಬಾಲಾಜಿ, ಅನುಶ್ರೀ, ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ಈ ಮೂರು ದಿನಗಳ ಸಂಭ್ರಮಕ್ಕೆ ನಿರೂಪಣೆ ಮಾಡಲಿದ್ದಾರೆ. ತಮ್ಮದೇ ಶೈಲಿಯ ಮಾತು, ಹಾಸ್ಯ ಮತ್ತು ಚಟುವಟಿಕೆಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜೀ ಕನ್ನಡ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು, “ಜೀ ಕನ್ನಡಕ್ಕೆ ವೀಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲವೇ ನಮ್ಮ ದೊಡ್ಡ ಶಕ್ತಿ. ನಮ್ಮ ಕಾರ್ಯಕ್ರಮಗಳು ಮತ್ತು ಕಲಾವಿದರನ್ನು ತಮ್ಮ ಮನೆಯವರಂತೆ ಪ್ರೀತಿಸುವ ವೀಕ್ಷಕರಿಗಾಗಿ ಕುಟುಂಬ ಅವಾರ್ಡ್ಸ್‌ ಅನ್ನು ಪ್ರತಿವರ್ಷ ಇನ್ನಷ್ಟು ವಿಶೇಷವಾಗಿ ರೂಪಿಸಲು ಪ್ರಯತ್ನಿಸುತ್ತೇವೆ. ಇದು ಕೇವಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಲ್ಲ; ವೀಕ್ಷಕರ ಮನಗೆದ್ದ ಕಲಾವಿದರು, ಅವರ ಪರಿಶ್ರಮ ಮತ್ತು ಕನ್ನಡ ಮನರಂಜನಾ ಲೋಕದ ಸಾಧನೆಯನ್ನು ಸಂಭ್ರಮಿಸುವ ವೇದಿಕೆ. ಈ ಬಾರಿಯೂ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರು ಮತ್ತು ಕಿರುತೆರೆಯ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಲಿದ್ದು, ಮೂರು ದಿನಗಳ ಕಾಲ ವೀಕ್ಷಕರಿಗೆ ಅದ್ಧೂರಿ ಮನರಂಜನೆ ನೀಡಲಿದ್ದೇವೆ. ವೀಕ್ಷಕರು ಇದೇ ಪ್ರೀತಿ ಮತ್ತು ಬೆಂಬಲವನ್ನು ಮುಂದುವರಿಸಲಿ ಎಂಬುದು ನಮ್ಮ ಆಶಯ,” ಎಂದರು.

ಕನ್ನಡ ಕಿರುತೆರೆಯ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಯಕ್ರಮಗಳ ಸಾಧನೆಯನ್ನು ಗುರುತಿಸುವುದರ ಜೊತೆಗೆ, ವೀಕ್ಷಕರು ಹಾಗೂ ವಾಹಿನಿಯ ನಡುವಿನ ಬಾಂಧವ್ಯವನ್ನು ಸಂಭ್ರಮಿಸುವ ವೇದಿಕೆಯೇ ಜೀ ಕನ್ನಡ ಕುಟುಂಬ ಅವಾರ್ಡ್ಸ್. ವರ್ಷವಿಡೀ ವೀಕ್ಷಕರನ್ನು ರಂಜಿಸಿದ ನೆಚ್ಚಿನ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಈ ಕಾರ್ಯಕ್ರಮದ ಮೂಲಕ ಸಿಗಲಿದೆ.

ಜೀ ಕನ್ನಡ ಕುಟುಂಬ ಅವಾರ್ಡ್ಸ್ 2026ರ ಅದ್ಧೂರಿ ಸಂಭ್ರಮವನ್ನು ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪ್ರತಿದಿನ ಸಂಜೆ 6:30ರಿಂದ ರಾತ್ರಿ 10:30ರವರೆಗೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಿ.
 

Add Zee News as a Preferred Source
TAGS:
TV
Sandalwood
Cinema