ಬೆಸ್ಕಾಂ ಬೆಂಗಳೂರು ಪವರ್ ಕಟ್: ನಾಳೆ (ಅಕ್ಟೋಬರ್ 31, ಶನಿವಾರ) ಸಿಲಿಕಾನ್ ಸಿಟಿ ಬೆಂಗಳೂರಿನ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸೂಚನೆ ನೀಡಿದೆ.
ಅಕ್ಟೋಬರ್ 31ರ ಶನಿವಾರ ಉಪಕೇಂದ್ರಗಳ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿರುವ ಬೆಸ್ಕಾಂ, ಸುಮಾರು 50 ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂದು ತಿಳಿಸಿದೆ.
ಬೆಂಗಳೂರಿನ 50 ಪ್ರದೇಶಗಳಲ್ಲಿ ಶನಿವಾರ ತಾತ್ಕಾಲಿಕವಾಗಿ ವಿದ್ಯುತ್ ಕಡಿತಗೊಳ್ಳಲಿದ್ದು, ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಹೀಗಾಗಿ ಈ ಪ್ರದೇಶಗಳ ನಿವಾಸಿಗಳು, ಅಂಗಡಿ-ಮುಂಗಟ್ಟುಗಳು, ಶಾಲೆಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಮುಂಚಿತವಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಯಾವ್ಯಾವ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ:
ಬನಶಂಕರಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಇನ್ನು ಸುಬ್ರಹ್ಮಣ್ಯಪುರ ಉಪಕೇಂದ್ರ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಬನಶಂಕರಿ ಉಪಕೇಂದ್ರದ ನಿರ್ವಹಣಾ ಕಾಮಗಾರಿಯಿಂದ ಕತ್ರಿಗುಪ್ಪೆ, ಕತ್ರಿಗುಪ್ಪೆ ವಾಟರ್ ಟ್ಯಾಂಕ್, ಸೀತಾ ಸರ್ಕಲ್, ಬ್ಯಾಂಕ್ ಕಾಲೋನಿ, ಬಾಲಾಜಿ ಲೇಔಟ್, ಐಟಿ ಲೇಔಟ್, ದ್ವಾರಕಾ ನಗರ, ವೀರಭದ್ರ ನಗರ, ಗಿರಿನಗರ, ಗಿರಿನಗರದ ವಿಎಚ್‌ಬಿಸಿ ಲೇಔಟ್, ಕತ್ರಿಗುಪ್ಪೆ ಮುಖ್ಯರಸ್ತೆ ಹಾಗೂ ಉತ್ತರಹಳ್ಳಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಇದಲ್ಲದೆ ಚರ್ಚ್ ರಸ್ತೆ, ಶಾಂತಿನಿಕೇತನ ಶಾಲೆ ಸುತ್ತಮುತ್ತಲಿನ ಪ್ರದೇಶ, ಹೇಮಾವತಿ ವಾಟರ್ ಸಪ್ಲೈ ರಸ್ತೆ, ಗುಂಡು ಮುನೇಶ್ವರ ದೇವಸ್ಥಾನ ರಸ್ತೆ, ರಾಜಾ ಗಾರ್ಡೇನಿಯಾ, ಪಾದುಕಾ ಮಂದಿರ ರಸ್ತೆ, ಜೆಎಚ್‌ಬಿಸಿ ಲೇಔಟ್, ಎಂ.ಎಸ್. ಕೃಷ್ಣ ಮಿಲ್, ನಾಗಪ್ಪ ಲೇಔಟ್, ಮೋಳೆ ಫ್ಯಾಕ್ಟರಿ ರಸ್ತೆ, ಹಿಂದೂಸ್ತಾನ್ ಗ್ರಾನೈಟ್ ರಸ್ತೆ, ಅಗರ್‌ಬತ್ತಿ ಫ್ಯಾಕ್ಟರಿ ರಸ್ತೆ, ಕೃಷ್ಣಪ್ಪ ಲೇಔಟ್, ಮಾರುತಿ ಲೇಔಟ್, ವಿಠ್ಠಲ್ ನಗರ ಮತ್ತು ಸಮೃದ್ಧಿ ಲೇಔಟ್‌ಗಳಲ್ಲೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿ ಮಧ್ಯಾಹ್ನ ವಿದ್ಯುತ್ ವ್ಯತ್ಯಯ:
ಸುಬ್ರಹ್ಮಣ್ಯಪುರ ಉಪಕೇಂದ್ರದ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಲೇಔಟ್, ಯಡ್ಲಾ ನಗರ, ವಸಂತಪುರ ಸ್ಲಂ, ಕನಕ ಲೇಔಟ್, ಮಾರಸಂದ್ರ, ರಾಮಚಂದ್ರಪ್ಪ ಲೇಔಟ್, ಭುವನೇಶ್ವರಿ ನಗರ ಕೆಎಸ್‌ಡಿಪಿ ಕ್ವಾರ್ಟರ್ಸ್, ಗುಬ್ಬಲಾಳ, ಸ್ಪ್ರಿಂಗ್ ಲೇಔಟ್, ಸ್ವಾಮಿ ಪಾಳ್ಯ ರಸ್ತೆ, ಉತ್ತರಹಳ್ಳಿ, ಪ್ರತ್ಯಂಗಿರಾ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.