‘ರಾಮಾಯಣ’ ನಿರ್ಮಾಪಕಗೆ ಐಟಿ ಶಾಕ್..! ಪ್ರೈಮ್ ಫೋಕಸ್ ಕಚೇರಿ, ಮನೆ ಮೇಲೆ ದಾಳಿ; ಶೇರು ಮೌಲ್ಯ 8% ಕುಸಿತ
IT Raid on Ramyana producer: ಬಹುಕೋಟಿ ಬಜೆಟ್‌ನ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’... ಚಿತ್ರದ ಶೂಟಿಂಗ್‌ಗಿಂತ ಈಗ ನಿರ್ಮಾಪಕರ ಮೇಲಿನ ಐಟಿ ದಾಳಿಯೇ ಭಾರೀ ಸುದ್ದಿಯಾಗಿದೆ.
ಬಹುಕೋಟಿ ಬಜೆಟ್‌ನ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’... ಚಿತ್ರದ ಶೂಟಿಂಗ್‌ಗಿಂತ ಈಗ ನಿರ್ಮಾಪಕರ ಮೇಲಿನ ಐಟಿ ದಾಳಿಯೇ ಭಾರೀ ಸುದ್ದಿಯಾಗಿದೆ.
‘ರಾಮಾಯಣ’ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ವಿದೇಶಿ ಹಣಕಾಸು ವಹಿವಾಟಿನ ತನಿಖೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗ್ತಿದೆ. ದಾಳಿ ಸುದ್ದಿ ಹೊರಬೀಳುತ್ತಿದ್ದಂತೆ ಸಂಸ್ಥೆಯ ಶೇರು ಮೌಲ್ಯವೂ ಶೇಕಡಾ 8ರಷ್ಟು ಕುಸಿದಿದೆ.
‘ರಾಮಾಯಣ’ ಸಿನಿಮಾ ನಿರ್ಮಾಪಕರಿಗೆ ಹೊಸ ಸಂಕಷ್ಟ..! ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಸನ್ನಿ ಡಿಯೋಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಆದ್ರೆ ಇದೇ ವೇಳೆ ಸಿನಿಮಾ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಮುಂಬೈನ ಕಚೇರಿ, ಮನೆಯಲ್ಲಿ ಶೋಧ..!
ಪ್ರೈಮ್ ಫೋಕಸ್ ಸಂಸ್ಥೆಯ ಮುಖ್ಯಸ್ಥ ನಮಿತ್ ಮಲ್ಹೋತ್ರಾ ಅವರ ಕಚೇರಿ ಹಾಗೂ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳು ಕೆಲವು ದಾಖಲೆಗಳು ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗ್ತಿದೆ.
ವಿದೇಶಿ ಹಣಕಾಸು ವಹಿವಾಟಿನ ಮೇಲೆ ಕಣ್ಣು..!
ವಿದೇಶಿ ಕಂಪನಿಗಳ ಮೂಲಕ ನಡೆದಿರುವ ಕೆಲವು ಹಣಕಾಸು ವಹಿವಾಟುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.ರಾಮಾಯಣ’ ಸಿನಿಮಾ ನಿರ್ಮಾಣಕ್ಕೆ ಭಾರೀ ಪ್ರಮಾಣದ ಹಣ ಹೂಡಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ವಹಿವಾಟುಗಳ ಕುರಿತೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಆದ್ರೆ ಈ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಐಟಿ ದಾಳಿ ಬೆನ್ನಲ್ಲೇ ಶೇರು ಮೌಲ್ಯ ಕುಸಿತ..!
ದಾಳಿ ಸುದ್ದಿ ಹೊರಬರುತ್ತಿದ್ದಂತೆ ಪ್ರೈಮ್ ಫೋಕಸ್ ಸಂಸ್ಥೆಯ ಶೇರು ಮೌಲ್ಯದಲ್ಲಿ ಏಕಾಏಕಿ ಕುಸಿತ ಕಂಡಿದೆ.ಸಂಸ್ಥೆಯ ಶೇರು ದರ ಸುಮಾರು 8%ರಷ್ಟು ಕುಸಿದಿದ್ದು, ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ.
ಭಾರತದ ದುಬಾರಿ ಸಿನಿಮಾಗಳ ಪಟ್ಟಿಯಲ್ಲಿ ‘ರಾಮಾಯಣ’..!
ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲೊಂದು ಎನ್ನಲಾಗ್ತಿದೆ.ಸಿನಿಮಾದ ನಿರ್ಮಾಣ, VFX ಹಾಗೂ ಪ್ರಚಾರಕ್ಕಾಗಿ ಭಾರೀ ಮೊತ್ತದ ಹಣ ಖರ್ಚಾಗುತ್ತಿದೆ.
ವಿದೇಶಿ ಹಣಕಾಸು ವಹಿವಾಟುಗಳೂ ನಡೆದಿರುವ ಹಿನ್ನೆಲೆಯಲ್ಲಿ ಇದೀಗ ಐಟಿ ಇಲಾಖೆಯ ತನಿಖೆ ಕುತೂಹಲ ಮೂಡಿಸಿದೆ.
ಯಶ್, ರಣಬೀರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್..!
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಬಹುನಿರೀಕ್ಷಿತ ಸಿನಿಮಾ ಸುತ್ತ ಇದೀಗ ಐಟಿ ದಾಳಿಯ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸದ್ಯ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ಶೋಧ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ. ಆದ್ರೆ ಈ ದಾಳಿ ಕುರಿತು ಐಟಿ ಇಲಾಖೆ ಅಥವಾ ಪ್ರೈಮ್ ಫೋಕಸ್ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಂದಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹಣಕಾಸು ವಹಿವಾಟಿನ ಸಂಪೂರ್ಣ ಚಿತ್ರಣ ಹೊರಬರುವ ಸಾಧ್ಯತೆಯಿದೆ. ಹೀಗಾಗಿ ‘ರಾಮಾಯಣ’ ಸಿನಿಮಾದ ನಿರ್ಮಾಪಕರಿಗೆ ಎದುರಾಗಿರುವ ಈ ಐಟಿ ಸಂಕಷ್ಟ ಮುಂದೆ ಯಾವ ತಿರುವು ಪಡೆಯಲಿದೆ ಅನ್ನೋದು ಸದ್ಯದ ಕುತೂಹಲವಾಗಿದೆ.