SOCIAL MEDIA

Newsletter

PARTNER SITES
Select Language Select State

ಬಿಗ್ ಬಾಸ್ ಮನೆಗೆ ಹೋಗೋಕೆ ಲಕ್ಷ್ಮೀ ಗೌಡ ಖರ್ಚು ಮಾಡಿದ್ದೆಷ್ಟು? ಅವರ ಹಿನ್ನಲೆ ಏನು?

Lakshmi Gowda: ಬಿಗ್‌ಬಾಸ್‌ಗಾಗಿ ಲಕ್ಷ್ಮೀ ಗೌಡ ಎಷ್ಟು ಖರ್ಚು ಮಾಡಿದ್ದಾರೆ ಎಂದು ತಿಳಿಯಲು ಈ ಸ್ಟೋರಿ ಓದಿ.

Written By Ramya. R. Gowda
Published: Oct 27, 2026, 05:55 PM IST | Updated: Oct 27, 2026, 06:11 PM IST
Join

Lakshmi Gowda: ಬಿಗ್ ಬಾಸ್ ಮನೆಗೆ ಹೋಗಬೇಕು ಅಂದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು.. ಬ್ರಾಂಡೆಡ್ ಬಟ್ಟೆ, ದುಬಾರಿ ಶೂಸ್, ಮೇಕಪ್ ಅಂತ ದೊಡ್ಡ ತಯಾರಿಯೇ ಬೇಕು ಅನ್ನೋದು ಹಲವರ ಲೆಕ್ಕಾಚಾರ. ಆದ್ರೆ ಬಿಗ್ ಬಾಸ್ ಕನ್ನಡ ವೇದಿಕೆ ಏರಲು ಲಕ್ಷ್ಮೀ ಗೌಡ ಖರ್ಚು ಮಾಡಿದ್ದು ಕೇವಲ 50 ಸಾವಿರ ರೂಪಾಯಿ ಮಾತ್ರವಂತೆ! ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಹೋಗಿ ಬಂದರೂ ಐಟಿ ಕೆಲಸ ಬಿಟ್ಟಿಲ್ಲ. ತಮ್ಮ ಸಂಬಳ, ಕುಟುಂಬದ ಹಿನ್ನೆಲೆ ಹಾಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಆಗಬೇಕು ಅನ್ನೋದರ ಬಗ್ಗೆಯೂ ಲಕ್ಷ್ಮೀ ಗೌಡ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದ್ರೆ ಲಕ್ಷ್ಮೀ ಗೌಡ ಅವರ ಬ್ಯಾಕ್‌ಗ್ರೌಂಡ್ ಏನು? ಅವರ ಅಪ್ಪ ಏನು ಮಾಡ್ತಾರೆ? ಬನ್ನಿ, ನೋಡೋಣ ಈ ಸ್ಟೋರಿ.

ಬಿಗ್ ಬಾಸ್‌ಗಾಗಿ ಸ್ಟ್ರೀಟ್ ಶಾಪಿಂಗ್

ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಟ್ಟೆ, ಶೂಸ್ ಹಾಗೂ ಆಕ್ಸೆಸರೀಸ್ ಖರೀದಿಸುತ್ತಾರೆ ಅನ್ನೋ ಮಾತಿದೆ. ಆದ್ರೆ ಲಕ್ಷ್ಮೀ ಗೌಡ ವಿಚಾರದಲ್ಲಿ ಲೆಕ್ಕಾಚಾರವೇ ಬೇರೆ. 'ಅಗ್ನಿ ಪರೀಕ್ಷೆ' ಹಾಗೂ ಬಿಗ್ ಬಾಸ್ ಗ್ರ್ಯಾಂಡ್ ಲಾಂಚ್ ಎರಡನ್ನೂ ಸೇರಿಸಿ ಬಟ್ಟೆ, ಶೂಸ್ ಮತ್ತು ಆಕ್ಸೆಸರೀಸ್‌ಗಾಗಿ ಒಟ್ಟು 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಅದೂ ಯಾವುದೇ ದುಬಾರಿ ಬ್ರಾಂಡೆಡ್ ವಸ್ತುಗಳಲ್ಲ. ಸ್ಟ್ರೀಟ್ ಶಾಪಿಂಗ್ ಹಾಗೂ ಫ್ಯಾಕ್ಟರಿ ಔಟ್‌ಲೆಟ್‌ಗಳಲ್ಲಿ ಶಾಪಿಂಗ್ ಮಾಡಿ ಸರಳವಾಗಿಯೇ ತಯಾರಾಗಿದ್ದಾರಂತೆ.

 

ಐಟಿ ಕೆಲಸಕ್ಕೆ ಗುಡ್‌ಬೈ ಹೇಳಿಲ್ಲ.. ಕೆಲಸ ಮುಖ್ಯ
ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಐಟಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿರಬಹುದು ಅಂತ ನೀವು ಅಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ಲಕ್ಷ್ಮೀ ಗೌಡ ಇನ್ನೂ ತಮ್ಮ ಐಟಿ ಕೆಲಸವನ್ನು ಮುಂದುವರಿಸಿದ್ದಾರೆ. ಕೆಲಸಕ್ಕೆ ಸೇರಿ ಕೇವಲ ಒಂದೂವರೆ ವರ್ಷ ಆಗಿದ್ದು, ವಾರ್ಷಿಕ 4.5ರಿಂದ 5 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುತ್ತಿದ್ದಾರೆ. ಈ ವಾರ ಬ್ರೇಕ್ ತೆಗೆದುಕೊಂಡಿದ್ದು, ಮುಂದಿನ ವಾರದಿಂದ ಮತ್ತೆ ಆಫೀಸ್‌ಗೆ ಹಾಜರಾಗಲಿದ್ದಾರಂತೆ. ಎಂಟರ್‌ಟೈನ್‌ಮೆಂಟ್ ಕ್ಷೇತ್ರದಲ್ಲಿ ಸ್ಥಿರವಾದ ಅವಕಾಶಗಳು ಸಿಕ್ಕರೆ ಮಾತ್ರ ನೋಟಿಸ್ ಪೀರಿಯಡ್ ಮುಗಿಸಿ ಪೂರ್ಣ ಪ್ರಮಾಣದಲ್ಲಿ ನಟನೆಗೆ ಬರೋ ನಿರ್ಧಾರ ಮಾಡಿದ್ದಾರೆ.


ಲಕ್ಷ್ಮೀ ಹಿನ್ನಲೆ
ಲಕ್ಷ್ಮೀ ಗೌಡ ಅವರ ಕುಟುಂಬದ ಹಿನ್ನೆಲೆ ಕೂಡ ಕುತೂಹಲ ಮೂಡಿಸಿದೆ. ನಮ್ಮದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಅಂತ ಹೇಳಿಕೊಂಡಿರುವ ಅವರು, ತಮ್ಮ ತಂದೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ತಾಯಿ ಗೃಹಿಣಿ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ತಾವು ಯಾರ ಮೇಲೂ ಆರ್ಥಿಕವಾಗಿ ಅವಲಂಬಿತವಾಗಿಲ್ಲ, ತಮ್ಮ ಖರ್ಚುಗಳನ್ನು ತಾವೇ ನಿಭಾಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಬಂದರೂ ತಮ್ಮ ವೃತ್ತಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಲಕ್ಷ್ಮೀ ಗೌಡ ಆದ್ಯತೆ ನೀಡುತ್ತಿರುವುದು ವಿಶೇಷವಾಗಿದೆ.

ತಾಂಡವ್ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ?
ಇನ್ನು ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಆಗಬೇಕು ಅನ್ನೋ ಪ್ರಶ್ನೆಗೂ ಲಕ್ಷ್ಮೀ ಗೌಡ ಉತ್ತರಿಸಿದ್ದಾರೆ. ತಮ್ಮ ಪ್ರಕಾರ ತಾಂಡವ್ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ಇರಬೇಕು. ತಾಂಡವ್ ಗೆದ್ದರೆ ತಮಗಿಂತ ಹೆಚ್ಚು ಖುಷಿಪಡುವವರು ಯಾರೂ ಇರಲ್ಲ ಎಂದಿದ್ದಾರೆ. ಆದ್ರೆ ತಾಂಡವ್ ಭಾವನೆಗಳಿಗೆ ಹೆಚ್ಚು ಕಟ್ಟುಬೀಳುತ್ತಿದ್ದಾರೆ ಅನ್ನೋ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಸ್ನೇಹ ಮತ್ತು ಭಾವನೆಗಳನ್ನು ಬದಿಗಿಟ್ಟು ಆಟ ಆಡಿದರೆ ತಾಂಡವ್ ಗೆಲ್ಲಬಹುದು ಅನ್ನೋದು ಅವರ ಲೆಕ್ಕಾಚಾರ.

ಒಂದು ವೇಳೆ ತಾಂಡವ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡರೆ, ಹುಡುಗರ ಪೈಕಿ ಗಗನ್ ಹಾಗೂ ಹುಡುಗಿಯರ ಪೈಕಿ ಸೌಂದರ್ಯ ವಿನ್ನರ್ ಆಗುವ ಸಾಧ್ಯತೆ ಇದೆ ಎಂದು ಲಕ್ಷ್ಮೀ ಗೌಡ ಭವಿಷ್ಯ ನುಡಿದಿದ್ದಾರೆ.
ಒಟ್ನಲ್ಲಿ, ಬಿಗ್ ಬಾಸ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡದೇ ಕೇವಲ 50 ಸಾವಿರ ರೂಪಾಯಿಯಲ್ಲಿ ತಯಾರಿ ಮಾಡಿಕೊಂಡ ಲಕ್ಷ್ಮೀ ಗೌಡ, ಮತ್ತೊಂದೆಡೆ ಐಟಿ ಕೆಲಸವನ್ನೂ ಮುಂದುವರಿಸುತ್ತಿದ್ದಾರೆ. ಮಧ್ಯಮ ವರ್ಗದ ಹಿನ್ನೆಲೆ, ಸ್ವಾವಲಂಬಿ ಬದುಕು ಹಾಗೂ ತಾಂಡವ್ ಮೇಲಿನ ನಂಬಿಕೆ ಈಗ ಗಮನ ಸೆಳೆಯುತ್ತಿದೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರ ಪಾಲಾಗುತ್ತೆ ಅನ್ನೋದನ್ನ ಕಾದು ನೋಡಬೇಕು.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES