ಜೈಲಿನಲ್ಲಿರುವ ನಟ ದರ್ಶನ್ ಸುತ್ತ ಮತ್ತೊಂದು ವಿವಾದ ಸದ್ದು ಮಾಡ್ತಿದೆ. ಒಂದು ಕಡೆ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಝೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಮತ್ತೊಂದೆಡೆ, ಆಪ್ತ ಧನ್ವೀರ್ ವಿಚಾರವಾಗಿ ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಹೇಳಿಕೆಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಅಷ್ಟಕ್ಕೂ ಧನ್ವೀರ್ ವಿಚಾರದಲ್ಲಿ ದರ್ಶನ್ ಹೇಳಿದ್ದೇನು? ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ ಬಳಿಕ ನಡೆದಿದ್ದೇನು? ಇಲ್ಲಿದೆ ಡಿಟೇಲ್ಸ್.
ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಅವರ ಜೊತೆ ನಟ ಝೈದ್ ಖಾನ್ ಕೂಡ ಜೈಲಿಗೆ ಭೇಟಿ ನೀಡಿದ್ದಾರೆ. ದರ್ಶನ್ ಅವರನ್ನು ಭೇಟಿಯಾದ ಬಳಿಕ ಇಬ್ಬರೂ ಜೈಲಿನಿಂದ ಹೊರಬಂದಿದ್ದಾರೆ. ಈ ವೇಳೆ ವಿಜಯಲಕ್ಷ್ಮಿ ಮಾಧ್ಯಮಗಳ ಜೊತೆ ಮಾತನಾಡದೆ ಅಲ್ಲಿಂದ ತೆರಳಿದ್ದಾರೆ. ಇನ್ನು ಝೈದ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.
ಧನ್ವೀರ್ ವಿಚಾರಕ್ಕೆ ದರ್ಶನ್ ಅಸಮಾಧಾನ?
ಇತ್ತ ದರ್ಶನ್ ಅವರ ಆಪ್ತ ಧನ್ವೀರ್ ವಿಚಾರವೂ ಈಗ ಚರ್ಚೆಗೆ ಬಂದಿದೆ. ದರ್ಶನ್ ಕುಟುಂಬಕ್ಕೆ ತಾವು ಸಹಾಯ ಮಾಡಿರುವುದಾಗಿ ಧನ್ವೀರ್ ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ದರ್ಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಟುಂಬದವರು ಅಥವಾ ದರ್ಶನ್ ಅವರೇ ಸಹಾಯ ಕೇಳಿದ್ದರೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ ಎಂದು ವರದಿಯಾಗಿದೆ.
ಸಹಾಯ ಮಾಡಿ ಹೇಳಿಕೊಳ್ಳುವುದು ಸರಿಯಲ್ಲ?
ತಾವೇ ಮುಂದೆ ಬಂದು ಸಹಾಯ ಮಾಡಿ, ಬಳಿಕ ಅದನ್ನು ಹೇಳಿಕೊಳ್ಳುವುದು ಸರಿಯಲ್ಲ ಎಂಬ ಅಸಮಾಧಾನ ದರ್ಶನ್ ಅವರಿಂದ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ದರ್ಶನ್ ಅವರ ಹೇಳಿಕೆಯ ನಿಖರತೆ ಹಾಗೂ ಎಚ್ಚರಿಕೆಯ ಕುರಿತ ಮಾಹಿತಿ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಹೀಗಾಗಿ ಈ ಬೆಳವಣಿಗೆಯ ಬಗ್ಗೆ ಅಧಿಕೃತ ಸ್ಪಷ್ಟನೆ ಮಹತ್ವದ್ದಾಗಿದೆ.
ಸದ್ಯ ದರ್ಶನ್ ಜೈಲಿನಲ್ಲಿರುವಾಗಲೇ ಅವರ ಆಪ್ತ ವಲಯದಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ವಿಜಯಲಕ್ಷ್ಮಿ ಅವರ ಜೈಲು ಭೇಟಿ, ಝೈದ್ ಖಾನ್ ಉಪಸ್ಥಿತಿ ಹಾಗೂ ಧನ್ವೀರ್ ವಿಚಾರವಾಗಿ ಕೇಳಿಬರುತ್ತಿರುವ ಚರ್ಚೆಗಳು ಮುಂದೇನು ತಿರುವು ಪಡೆದುಕೊಳ್ಳಲಿವೆ ಅನ್ನೋದನ್ನು ಕಾದುನೋಡಬೇಕಿದೆ.
ಇತ್ತ ನಟ ಝೈದ್ ವಿರುದ್ಧ ನಾಲಿಗೆ ಹರಿಬಿಟ್ಟ ಧನ್ವೀರ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಪುತ್ರ, ನಟ ಝೈದ್ ಖಾನ್ ವಿರುದ್ಧ ವೈರಲ್ ಆಗಿರುವ ಹಿನ್ನೆಲೆ, ಜಮೀರ್ ಅಹ್ಮದ್ ಅಭಿಮಾನಿಗಳು ಮತ್ತು ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಂ. ವಿನಾಯಕ್ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಧನ್ವೀರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಯಿತು.ಇನ್ನು ಧನ್ವೀರ್ ನ ದರ್ಶನ್ ಫ್ಯಾನ್ ಪೇಜ್ ಫಾಲೊವರ್ಸ್ ನಿಂದ ರಿಮೂವ್ ಮಾಡಲಾಗಿದೆ. ಹೀಗಾಗಿ ಭಾವನಾತ್ಮಕ ಪೋಸ್ಟ್ ಮಾಡಿರುವ ಧನ್ವೀರ್ , ನನ್ನ ಕೆಲವ್ರು ತೆಗಳಬಹುದು. ಆದ್ರೆ ನನ್ನ ಮತ್ತು ದರ್ಶನ್ ಸಂಬಂಧ ಹೃದಯದ ಸಂಬಂಧ ನಾನು ಅದನ್ನ ಹೊರಗೆ ಹೇಳಬೇಕಿಲ್ಲ ಅಂತಾ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಮತ್ತೊಂದು ಕಡೆ, ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಬ್ಬರ ನಡುವೆ ನಡೆದಿದೆ ಎನ್ನಲಾದ 10 ಕೋಟಿ ರೂಪಾಯಿ ನಗದು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ವಕೀಲ ಪ್ರಶಾಂತ್ ಮೆಥಲ್ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಹಣದ ಮೂಲ ಮತ್ತು ವ್ಯವಹಾರದ ಕಾನೂನುಬದ್ಧತೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಇಬ್ಬರಿಗೂ ಹೊಸ ತಲೆನೋವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ, ದರ್ಶನ್ ಜೈಲಿನಲ್ಲಿರುವಾಗಲೇ ಅವರ ಆಪ್ತ ವಲಯದಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ವಿಜಯಲಕ್ಷ್ಮಿ ಅವರ ಜೈಲು ಭೇಟಿ, ಝೈದ್ ಖಾನ್ ಉಪಸ್ಥಿತಿ ಹಾಗೂ ಧನ್ವೀರ್ ವಿಚಾರವಾಗಿ ಕೇಳಿಬರುತ್ತಿರುವ ಚರ್ಚೆಗಳು ಮುಂದೇನು ತಿರುವು ಪಡೆದುಕೊಳ್ಳಲಿವೆ ಅನ್ನೋದನ್ನು ಕಾದುನೋಡಬೇಕಿದೆ.