• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಮಂಜನ ಕ್ಯಾರೆಕ್ಟರ್‌ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಸಂಗೀತಾ..! ಏಕಾಏಕಿ ಹೀಗಾ ಅನ್ನೋದು..

ಮಂಜನ ಕ್ಯಾರೆಕ್ಟರ್‌ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಸಂಗೀತಾ..! ಏಕಾಏಕಿ ಹೀಗಾ ಅನ್ನೋದು..

ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿರುವ ಮಾಡ್ರನ್ ಮಹಾಕವಿ ಮಂಜು ಅವರ ಬಗ್ಗೆ ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಮಂಜು ಸಂಪೂರ್ಣ ಕೆಟ್ಟ ವ್ಯಕ್ತಿಯಲ್ಲ ಎಂದು ಸಮರ್ಥಿಸಿಕೊಂಡಿರುವ ಅವರು, ಅವರ ವರ್ತನೆ ಹಾಗೂ ಆಟದ ಹಿಂದಿನ ಕಾರಣಗಳನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Written ByKrishna NK
Published: Oct 12, 2026, 08:05 PM IST|Updated: Oct 12, 2026, 08:14 PM IST
joinshare
ಮಂಜನ ಕ್ಯಾರೆಕ್ಟರ್‌ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಸಂಗೀತಾ..! ಏಕಾಏಕಿ ಹೀಗಾ ಅನ್ನೋದು..
Image Credit: Bigg Boss Sangeetha Bhat

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
‘ನನಗೆ ಮಕ್ಕಳೇ ಬೇಡ, ನಾಯಿಮರಿಗಳೇ ನನ್ನ ಮಕ್ಕಳು’ ಎಂದ ಸ್ಯಾಂಡಲ್‌ವುಡ್‌ ಖ್ಯಾತ ನಟಿ!

‘ನನಗೆ ಮಕ್ಕಳೇ ಬೇಡ, ನಾಯಿಮರಿಗಳೇ ನನ್ನ ಮಕ್ಕಳು’ ಎಂದ ಸ್ಯಾಂಡಲ್‌ವುಡ್‌ ಖ್ಯಾತ ನಟಿ!

2

ಸಿಂಪತಿಗಾಗಿ ಹಳೆ ಬಟ್ಟೆ, 5 ಲಕ್ಷ ರೂ. ಏಲ್ಲಿ..? ಕುಮಾರಿ ನಿಜವಾದ ಮುಖ ತೆರೆದಿಟ್ಟ ಸ್ನೇಹಿತ

3

ಮಂಜನ ಕ್ಯಾರೆಕ್ಟರ್‌ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಸಂಗೀತಾ..! ಏಕಾಏಕಿ ಹೀಗಾ ಅನ್ನೋದು..

4

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ : ಒಂದೇ ದಿನದಲ್ಲಿ ಪಾತಾಳಕ್ಕೀಳಿದ ಬಂಗಾರದ ದರ

5

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಈ 5 ಪ್ರಮುಖ ನಿಲ್ದಾಣಗಳಿಗೆ ವಿಶೇಷ BMTC ಫೀಡರ್ ಬಸ್ ಸೇವೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Sangeetha Bhat on Manja :  ಬಿಗ್‌ಬಾಸ್ ಮನೆಯಿಂದ ತಮ್ಮ ನಡವಳಿಕೆ ಹಾಗೂ ಹುಟ್ಟುಹಬ್ಬದ ದಿನವೇ ಹೊರಬಂದಿರುವ ಮಾಡ್ರನ್ ಮಹಾಕವಿ ಮಂಜು ಬಗ್ಗೆ ನಟಿ ಸಂಗೀತಾ ಭಟ್ ಮಾತನಾಡಿದ್ದು, ಅವರು ಸಂಪೂರ್ಣ ಕೆಟ್ಟ ವ್ಯಕ್ತಿಯಲ್ಲ ಅಂತ ಹೊಗಳಿದ್ದಾರೆ, ಅಲ್ಲದೆ, ಮಂಜು ಅವರ ವ್ಯಕ್ತಿತ್ವ ಹಾಗೂ ಆಟದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಭದ್ರತೆಯ ಭಾವನೆ ಕಾರಣ
ಮಂಜು ಬಿಗ್‌ಬಾಸ್ ಮನೆಗೆ ಕಾಲಿಟ್ಟಾಗ ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟೀಸ್ ಎಂಬ ವಿಂಗಡಣೆ ಇದ್ದುದರಿಂದ ಅವರಿಗೆ ಗೊಂದಲ ಮತ್ತು ಅಭದ್ರತೆಯ ಭಾವನೆ ಕಾಡಿರಬಹುದು ಎಂದು ಸಂಗೀತಾ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ ಮತ್ತು ತಪ್ಪು ಮಾಡಿದವರಿಗೆ ಮತ್ತೊಂದು ಅವಕಾಶ ನೀಡಿ ಗಮನಿಸಬೇಕಿತ್ತು ಎಂದಿದ್ದಾರೆ.

ಭಾವನೆ ಹಾಗೂ ಅರಿವು ಇರುವ ವ್ಯಕ್ತಿ
ಮಂಜು ಕಂಪ್ಲೀಟ್ ಆಗಿ ಬ್ಯಾಡ್ ಸೈಡ್ ಅಲ್ಲ ಎಂದು ಹೇಳಿರುವ ಅವರು, ಒಬ್ಬ ವ್ಯಕ್ತಿ ಸಂಪೂರ್ಣ ಕೆಟ್ಟವರಾಗಿದ್ದರೆ ಅವರಿಗೆ ಯಾವುದೇ ಅರಿವು ಅಥವಾ ಭಾವನೆಗಳು ಇರುವುದಿಲ್ಲ ಎಂದಿದ್ದಾರೆ. ಆದರೆ ಮಂಜು ಬಳಿ ಆ ಎರಡೂ ಗುಣಗಳಿದ್ದವು ಎಂದು ತಾವು ವೈಯಕ್ತಿಕವಾಗಿ ಮಾತನಾಡುವಾಗ ಗಮನಿಸಿದ್ದಾಗಿ ತಿಳಿಸಿದ್ದಾರೆ.

ಗೌರವಯುತ ವರ್ತನೆ ಮತ್ತು ತಪ್ಪುಗಳ ಅರಿವು
ತಮಗೆ ಗೌರವ ನೀಡುವ ಸ್ಪರ್ಧಿಗಳ ಜೊತೆ ಮಂಜು ಎಂದಿಗೂ ಕೆಟ್ಟ ಪದಗಳನ್ನು ಬಳಸಿಲ್ಲ ಎಂದು ಸಂಗೀತಾ ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಸೂಚಿಸಿದ ಟಾಸ್ಕ್‌ಗಳ ಸಂದರ್ಭದಲ್ಲಿ ಹಾಗೂ ಉಸ್ತುವಾರಿಯಾದಾಗ ಅವರು ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಅಂತಿಮವಾಗಿ ಮನೆಯಿಂದ ಹೊರಬರುವಾಗ ತಾವೇನು ತಪ್ಪು ಮಾಡಿದ್ದೇವೆ ಎಂಬ ಅರಿವು ಅವರಿಗೆ ಮೂಡಿದೆ ಎಂದು ಹೇಳಿದ್ದಾರೆ.

Add Zee News as a Preferred Source
TAGS:
Bigg Boss Kannada Season 13