• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸಿಂಪತಿಗಾಗಿ ಹಳೆ ಬಟ್ಟೆ, 5 ಲಕ್ಷ ರೂ. ಏಲ್ಲಿ..? ಕುಮಾರಿ ನಿಜವಾದ ಮುಖ ತೆರೆದಿಟ್ಟ ಸ್ನೇಹಿತ

ಸಿಂಪತಿಗಾಗಿ ಹಳೆ ಬಟ್ಟೆ, 5 ಲಕ್ಷ ರೂ. ಏಲ್ಲಿ..? ಕುಮಾರಿ ನಿಜವಾದ ಮುಖ ತೆರೆದಿಟ್ಟ ಸ್ನೇಹಿತ

ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿರುವ ಕುಮಾರಿ ಧರಿಸಿದ್ದ ಬಟ್ಟೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹಾಗೂ ನೆಗೆಟಿವ್ ಟ್ರೋಲ್‌ಗಳು ಹರಿದಾಡುತ್ತಿವೆ. ಆಡಿಷನ್‌ನಿಂದ ಹಿಡಿದು ಬಿಗ್ ಬಾಸ್ ಮನೆಗೆ ಬರುವವರೆಗೂ ಅವರು ಒಂದೇ ಬಟ್ಟೆಯನ್ನು ಧರಿಸಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.. ಇದರ ನಡುವೆ ಅವರ, ಸ್ನೇಹಿತ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿವೆ....

Written ByKrishna NK
Published: Oct 12, 2026, 08:52 PM IST|Updated: Oct 12, 2026, 08:54 PM IST
joinshare
ಸಿಂಪತಿಗಾಗಿ ಹಳೆ ಬಟ್ಟೆ, 5 ಲಕ್ಷ ರೂ. ಏಲ್ಲಿ..? ಕುಮಾರಿ ನಿಜವಾದ ಮುಖ ತೆರೆದಿಟ್ಟ ಸ್ನೇಹಿತ
Image Credit: Bigg Boss Kumari

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್

ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್

2

ಬಿಗ್‌ ಬಾಸ್‌ನಿಂದ ಹೊರಬಂದರೂ ಬುದ್ಧಿ ಕಲಿಯದ ಮಂಜ! ಮತ್ತೆ ಅಸಭ್ಯ ಪದ ಬಳಕೆ, ನಿರ್ದೇಶಕ ನಂದಕಿಶೋರ್ ಬೇಸರ

3

ಈ ತಿಂಗಳಿನಿಂದ ಸರ್ಕಾರಿ ನೌಕರರ ಕನಿಷ್ಟ ಮೂಲ ವೇತನ ₹18000 ದಿಂದ 69,000ಕ್ಕೆ ಏರಿಕೆ!?

4

ಐಶ್ವರ್ಯಾ ಪಿಸ್ಸೆ ಡಿವೋರ್ಸ್ ಘೋಷಣೆ : ಟ್ರೋಲರ್ಸ್‌, ವದಂತಿ ಹಬ್ಬಿಸುವವರಿಗೆ ನಟಿ ಖಡಕ್‌ ಎಚ್ಚರಿಕೆ

5

ಕನ್ನಡದ ಈ ಖ್ಯಾತ ನಟಿ ಒಂದೊಮ್ಮೆ ಶಾರುಖ್‌ ಖಾನ್‌ಗೆ ಡ್ಯಾನ್ಸ್‌ ಟೀಚರ್‌ ಆಗಿದ್ರಂತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kumari : ಹಳ್ಳಿ ಹುಡುಗಿ ಅಂತಾನೇ ಖ್ಯಾತಿ ಪಡೆದಿರುವ ಕುಮಾರಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್‌ಗಳು ಹರಿದಾಡ್ತಿವೆ. ಆಡಿಷನ್‌ನಿಂದ ಹಿಡಿದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವವರೆಗೆ ಕುಮಾರಿ ಒಂದೇ ಬಟ್ಟೆಯನ್ನು ಧರಿಸಿಕೊಂಡು ಬಂದು, ಜನರ ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಟ್ರೋಲ್‌ಗಳಿಗೆ ಆಕೆಯ ಆಪ್ತ ಸ್ನೇಹಿತ ಜಯಪ್ರಕಾಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಕುಮಾರಿ ಒಂದೇ ಬಟ್ಟೆ ಧರಿಸಲು ಕಾರಣವೇನು? 
ಈ ಬಗ್ಗೆ ಮಾತನಾಡಿದ ಜಯಪ್ರಕಾಶ್ ಗೌಡ, "ನಾನು ಆಡಿಷನ್‌ಗೆ ಹೋದಾಗ ಕರಾವಳಿ ಡ್ರೆಸ್ ಕೋಡ್ ಆದ ಇದೇ ಕೇಸರಿ ಶಾಲು ಮತ್ತು ಪಂಚೆ ಧರಿಸಿದ್ದೆ. ಆದರೆ ಅಲ್ಲಿನ ಸಿಬ್ಬಂದಿ ಅದನ್ನು ತೆಗೆಸಿ, ಪ್ಯಾಂಟ್-ಶರ್ಟ್ ಧರಿಸಿ ಆಡಿಷನ್ ಕೊಡಲು ಹೇಳಿದ್ದರು. ₹100 ಕೋಟಿ ಬಜೆಟ್ ಶೋಗೆ ಅಂದಮೇಲೆ ಅದರದೇ ಆದ ರೂಲ್ಸ್ ಇರುತ್ತವೆ. ಜನಸಾಮಾನ್ಯರ ವಿಡಿಯೋ ಸೆಲೆಕ್ಟ್ ಆದ್ಮೇಲೆ, ಗ್ರೂಪ್ ಡಿಸ್ಕಶನ್ ಹಾಗೂ 'ಅಗ್ನಿ ಪರೀಕ್ಷೆ' ಸಂದರ್ಭದಲ್ಲಿ ಬಿಗ್ ಬಾಸ್ ಸಿಬ್ಬಂದಿಯೇ ಕುಮಾರಿಗೆ ಈ ಡ್ರೆಸ್ ಧರಿಸಿಕೊಂಡು ಬರುವಂತೆ ಸೂಚಿಸಿದ್ದರು. ಹಾಗಾಗಿ ಆಕೆ ಅದೇ ಬಟ್ಟೆ ಹಾಕಿಕೊಂಡು ಬಂದಿದ್ದಾಳೆ ಹೊರತು ಸಿಂಪತಿಗಾಗಿ ಅಲ್ಲ" ಎಂದಿದ್ದಾರೆ.

5 ಲಕ್ಷ ರೂಪಾಯಿ ಸಹಾಯಧನದ ಸತ್ಯಾಂಶವೇನು?
'ಅಗ್ನಿ ಪರೀಕ್ಷೆ' ಕಾರ್ಯಕ್ರಮದ ವೇಳೆ ಅನಾರೋಗ್ಯದಿಂದ ಕುಮಾರಿ ಹೊರನಡೆಯಬೇಕಾದ ಸಂದರ್ಭ ಬಂದಾಗ, ಪ್ರಾಯೋಜಕ ಸಂಸ್ಥೆಯಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಮಾಲೀಕರು ₹5 ಲಕ್ಷ ನಗದು ಹಾಗೂ ಓದು ಮುಗಿದ ಮೇಲೆ ಕೆಲಸ ನೀಡುವುದಾಗಿ ವೇದಿಕೆಯಲ್ಲೇ ಘೋಷಿಸಿದ್ದರು. ಆದರೆ, ಈವರೆಗೆ ಆ ಹಣದಲ್ಲಿ ಒಂದು ರೂಪಾಯಿಯೂ ಕುಮಾರಿ ಖಾತೆಗೆ ಬಂದಿಲ್ಲ ಎಂದು ಜಯಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಇಂದಿಗೂ ವೀಕೆಂಡ್‌ನಲ್ಲಿ ಕೆಲಸಕ್ಕೆ ಹೋಗ್ತಾಳೆ ಕುಮಾರಿ
"ಕುಮಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಇದ್ದರೂ, ಆಕೆ ಒಂದೇ ಒಂದು ಪ್ರಮೋಷನ್ ವಿಡಿಯೋ ಕೂಡ ಮಾಡಿಲ್ಲ. ಆಕೆಯ ಬಳಿ ಹಣವಿಲ್ಲದ ಕಾರಣ, ಈಗಲೂ ಕಾಲೇಜು ಇಲ್ಲದ ವೀಕೆಂಡ್ ದಿನಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ ಎಂದಿದ್ದಾರೆ.. ಅಲ್ಲದೆ, ಕುಮಾರಿ ಪರ ಮಾತನಾಡಲು ಯಾವುದೇ ಪಿಆರ್ ಟೀಮ್ ಇಲ್ಲದ ಕಾರಣ, ತಾವೇ ಮುಂದೆ ನಿಂತು ಸ್ಪಷ್ಟನೆ ನೀಡುತ್ತಿರುವುದಾಗಿ ಜಯಪ್ರಕಾಶ್ ತಿಳಿಸಿದ್ದಾರೆ.

Add Zee News as a Preferred Source
TAGS:
Kannada News